newsfirstkannada.com

‘ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೋತರೆ..’ ರೋಹಿತ್ ಶರ್ಮಾ ವಿರುದ್ಧ ಶಾಕಿಂಗ್ ಹೇಳಿಕೆ ಕೊಟ್ಟ ಗಂಗೂಲಿ

Share :

Published June 29, 2024 at 2:10pm

Update June 29, 2024 at 2:16pm

    ಟಿ-20 ವಿಶ್ವಕಪ್​​ನಲ್ಲಿ ಇಂದು ರಾತ್ರಿ ಹೈವೋಲ್ಟೇಜ್ ಪಂದ್ಯ

    ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಕಾದು ಕೂತಿದ್ದಾರೆ

    ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಜಿದ್ದಾಜಿದ್ದಿನ ಫೈಟ್

ಟೀಂ ಇಂಡಿಯಾ ಎರಡನೇ ಬಾರಿಗೆ T20 ವಿಶ್ವ ಚಾಂಪಿಯನ್ ಆಗುವ ಅಂಚಿನಲ್ಲಿದೆ. ಬಾರ್ಬಡೋಸ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

ಗಂಗೂಲಿ ಹೇಳಿದ್ದೇನು..?
6 ತಿಂಗಳ ಹಿಂದೆ ODI ವಿಶ್ವಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‌ಗಳ ಸೋಲಿನಿಂದ ಭಾರತ ನಿರಾಸೆ ಅನುಭವಿಸಿತ್ತು. ಇದೀಗ ಟೀಂ ಇಂಡಿಯಾ ಟಿ20 ವಿಶ್ವಕಪ್​​ನಲ್ಲೂ ಫೈನಲ್ ತಲುಪಿದ್ದು, ಪ್ರಶಸ್ತಿಗಾಗಿ ಜಿದ್ದಾಜಿದ್ದಿನ ಹೋರಾಟ ನಡೆಸಲಿದೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ:ಫೈನಲ್​​ನಲ್ಲಿ ರೋಹಿತ್ ಶರ್ಮಾ ಜೊತೆ ಈ ಆಟಗಾರನೇ ಓಪನಿಂಗ್ ಬರಬೇಕು -ಗಂಗೂಲಿ ಅಚ್ಚರಿಯ ಹೇಳಿಕೆ

ಈ ಬಾರಿ ಟೀಂ ಇಂಡಿಯಾ ಖಂಡಿತವಾಗಿಯೂ ಟ್ರೋಫಿ ಎತ್ತಿ ಹಿಡಿಯಲಿದೆ. ಒಂದು ವೇಳೆ ಕೆಲವೇ ತಿಂಗಳುಗಳ ಅಂತರದಲ್ಲಿ ಭಾರತ ಫೈನಲ್​​ನಲ್ಲಿ ಸೋತರೆ ರೋಹಿತ್ ಶರ್ಮಾ ಬಾರ್ಬಡೋಸ್​ನಲ್ಲಿರುವ ಸಮುದ್ರಕ್ಕೆ ಜಿಗಿಯುತ್ತಾರೆ ಎಂದು ತಮಾಷೆಯಾಗಿ ಹೇಳಿದ್ದಾರೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ 6-7 ತಿಂಗಳೊಳಗೆ ಎರಡನೇ ವಿಶ್ವಕಪ್ ಫೈನಲ್ ಎದುರಿಸುತ್ತಿದೆ. ಇಲ್ಲಿಯೂ ಸೋಲನ್ನು ಎದುರಿಸುತ್ತದೆ ಎಂದು ಭಾವಿಸಲು ಸಾಧ್ಯವಿಲ್ಲ. ಒಂದು ವೇಳೆ 7 ತಿಂಗಳೊಳಗೆ ಎರಡೆರಡು ಫೈನಲ್ ಪಂದ್ಯ ಎದುರಿಸಿ ಸೋತರೆ ನನ್ನ ಪ್ರಕಾರ ಅಲ್ಲಿರುವ ಸಮುದ್ರಕ್ಕೆ ಜಿಗಿಯುತ್ತಾರೆ ಎಂದಿದ್ದಾರೆ. ರೋಹಿತ್ ಶರ್ಮಾರ ಕ್ಯಾಪ್ಟನ್ಸಿಯನ್ನು ಶ್ಲಾಘಿಸಿರುವ ಗಂಗೂಲಿ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಉತ್ತಮ ಇನ್ನಿಂಗ್ಸ್ ಆಡಿದ್ದನ್ನು ಸ್ಮರಿಸಿದ್ದಾರೆ.

ಇದನ್ನೂ ಓದಿ:ವಿಶ್ವಕಪ್ ಗೆದ್ದ ತಂಡಕ್ಕೆ ಎಷ್ಟು ಕೋಟಿ ಬಹುಮಾನ ಸಿಗುತ್ತೆ.. ರನ್ನರ್​​ ಅಪ್​​ಗೂ ಇದೆ ಬಂಪರ್ ಲಾಟರಿ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೋತರೆ..’ ರೋಹಿತ್ ಶರ್ಮಾ ವಿರುದ್ಧ ಶಾಕಿಂಗ್ ಹೇಳಿಕೆ ಕೊಟ್ಟ ಗಂಗೂಲಿ

https://newsfirstlive.com/wp-content/uploads/2024/06/GANGULY-2.jpg

Load More