newsfirstkannada.com

RCB ಫ್ಯಾನ್ಸ್​ಗೆ ಗುಡ್​ನ್ಯೂಸ್​.. ಬೆಂಗಳೂರು ಫ್ರಾಂಚೈಸಿಯಿಂದ ಕಾರ್ತಿಕ್​​ಗೆ ಮಹತ್ವದ ಜವಾಬ್ದಾರಿ, ಏನದು?

Share :

Published July 1, 2024 at 11:52am

    ಆರ್​ಸಿಬಿ ತಂಡದ ಬ್ಯಾಟರ್, ವಿಕೆಟ್ ಕೀಪರ್ ಆಗಿದ್ದ DK

    ತಂಡದ ಆಟಗಾರನನ್ನ ಬಿಟ್ಟು ಕೊಡದ ಬೆಂಗಳೂರು ಫ್ರಾಂಚೈಸಿ

    2024ರ IPL​​ ವೇಳೆ ನಿವೃತ್ತಿ ಘೋಷಣೆ ಮಾಡಿದ್ದ ಕಾರ್ತಿಕ್

ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿರುವ ದಿನೇಶ್‌ ಕಾರ್ತಿಕ್‌ ಅವರಿಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪ್ರಾಂಚೈಸಿ ದೊಡ್ಡ ಜವಾಬ್ದಾರಿ ನೀಡಿದೆ. 2025ರ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ನೂತನ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ದಿನೇಶ್‌ ಕಾರ್ತಿಕ್‌ ಅವರು ಕಾರ್ಯನಿರ್ವಹಿಸಲಿದ್ದಾರೆ.

ಇದನ್ನೂ ಓದಿ: ಕಾಲೇಜು ಮುಂಭಾಗ ಸ್ಕಿಡ್ ಆಗಿ ಬಿದ್ದ ಬೈಕ್.. ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವು, ಯುವಕ ಗಂಭೀರ

ಈ ಬಗ್ಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪ್ರಾಂಚೈಸಿ ತನ್ನ ಅಧಿಕೃತ ಎಕ್ಸ್​​ನಲ್ಲಿ​ ಪೋಸ್ಟ್ ಮಾಡಿ ಮಾಹಿತಿ ನೀಡಿದೆ. ಆರ್​ಸಿಬಿ ತಂಡಕ್ಕೆ ಹೊಸ ಅವತಾರದಲ್ಲಿ ಮತ್ತೆ ದಿನೇಶ್ ಕಾರ್ತಿಕ್ ಅವರು ಆಗಮಿಸಲಿದ್ದಾರೆ. ಮುಂದಿನ ಐಪಿಎಲ್​​ನಲ್ಲಿ ತಂಡದ ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ಆಗಿ ಡಿ.ಕೆ. ಕೆಲಸ ಮಾಡಲಿದ್ದಾರೆ. ವ್ಯಕ್ತಿ ಕ್ರಿಕೆಟ್‌ನಿಂದ ದೂರ ಹೋಗಬಹುದು, ಆದರೆ ವ್ಯಕ್ತಿಯಿಂದ ಕ್ರಿಕೆಟ್‌ ದೂರ ಹೋಗಲಾರದು. ಆರ್‌ಸಿಬಿ ಫ್ಯಾನ್ಸ್​ ನಿಮ್ಮ ಪ್ರೀತಿಯ ಮಳೆ ಸುರಿಯಲಿ ಎಂದು ಫ್ರಾಂಚೈಸಿ ತಿಸಿಳಿಸಿದೆ.

ಇದನ್ನೂ ಓದಿ: 25ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಸಾರಿಗೆ ಬಸ್​ ಪಲ್ಟಿ.. ಡ್ರೈವರ್ ಸೇರಿ ಮೂವರು ಗಂಭೀರ; ಆಕ್ಸಿಡೆಂಟ್ ಆಗಿದ್ದೇಗೆ?

2024ರ ಐಪಿಎಲ್​​​ನೊಂದಿಗೆ ವಿದಾಯ ಹೇಳಿದ್ದ ದಿನೇಶ್ ಕಾರ್ತಿಕ್ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತೆ ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಆಟಗಾರನಾಗಿ ಅಲ್ಲ. ಬದಲಾಗಿ ಬ್ಯಾಟಿಂಗ್ ಕೋಚ್ ಆಗಿ. ಇಷ್ಟು ದಿನ ಕೀಪಿಂಗ್, ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ಡಿ.ಕೆ ಇನ್ಮುಂದೆ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಬೆಂಗಳೂರು ತಂಡದಲ್ಲಿ ಕಟ್ಟಲಿದ್ದಾರೆ ಎನ್ನುವುದಂತೂ ದೃಢವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB ಫ್ಯಾನ್ಸ್​ಗೆ ಗುಡ್​ನ್ಯೂಸ್​.. ಬೆಂಗಳೂರು ಫ್ರಾಂಚೈಸಿಯಿಂದ ಕಾರ್ತಿಕ್​​ಗೆ ಮಹತ್ವದ ಜವಾಬ್ದಾರಿ, ಏನದು?

https://newsfirstlive.com/wp-content/uploads/2024/07/DINESH_KARTIKA.jpg

Load More