newsfirstkannada.com

ಸಿಲಿಕಾನ್​ ಸಿಟಿಯಲ್ಲಿ ಡೆಂಘೀಗೆ ಮೊದಲ ಬಲಿ.. 11 ವರ್ಷದ ಬಾಲಕ ಸಾವು

Share :

Published July 6, 2024 at 10:44am

    ಬೆಂಗಳೂರಿನಲ್ಲಿ ಹೆಚ್ಚಿದ ಡೆಂಘೀ, ನಗರವಾಸಿಗಳಲ್ಲಿ ಆತಂಕ

    ಡೆಂಘೀ ತಡೆಯಲು ನಾವು ಯಾವ ಕ್ರಮ ತೆಗೆದುಕೊಳ್ಳಬೇಕು?

    ಕೆಲ ದಿನಗಳಿಂದ ಡೆಂಘೀಯಿಂದ ಬಳಲುತ್ತಿದ್ದ ಬಾಲಕ ಸಾವು

ಬೆಂಗಳೂರು: ರಾಜ್ಯದೆಲ್ಲೆಡೆ ಡೆಂಘೀ ಸೋಂಕು ಹೆಚ್ಚಾಗುತ್ತಿದ್ದು ಸರ್ಕಾರ ಕೂಡ ಈ ಕುರಿತು ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಸಿಲಿಕಾನ್​ ಸಿಟಿಯಲ್ಲೂ ಡೆಂಘೀ ತಾಂಡವಾಡುತ್ತಿದ್ದು ಸದ್ಯ ಇದೀಗ ಈ ಮಾರಕ ಸೋಂಕಿಗೆ 11 ವರ್ಷದ ಬಾಲಕನೋರ್ವ ಬಲಿಯಾಗಿದ್ದಾನೆ.

ಇದನ್ನೂ ಓದಿ: ವರುಣಾರ್ಭಟಕ್ಕೆ ಬೆಚ್ಚಿಬಿದ್ದ ಕರಾವಳಿ, ಮಲೆನಾಡು! ರೆಡ್​ ಅಲರ್ಟ್.. ಈ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ

ಬೆಂಗಳೂರಲ್ಲಿ ಡೆಂಘೀಗೆ ಮೊದಲ ಸಾವಾಗಿದ್ದು ಅಂಜನಾಪುರದ ಗಗನ್ (11) ಸಾವನ್ನಪ್ಪಿದ ಬಾಲಕ. ಜಂಬೂಸವಾರಿ ದಿಣ್ಣೆಯ ಚೈತನ್ಯ ಟೆಕ್ನೋ ಶಾಲೆಯಲ್ಲಿ ಓದುತ್ತಿದ್ದ ಗಗನ್ ಕೆಲ ದಿನಗಳಿಂದ ಡೆಂಘೀ ಜ್ವರದಿಂದ ಬಳಲುತ್ತಿದ್ದ. ಈ ಹಿನ್ನೆಲೆಯಲ್ಲಿ ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ ತಡರಾತ್ರಿ ಆಸ್ಪತ್ರೆಯಲ್ಲೇ ಅಸುನೀಗಿದ್ದಾನೆ.

ಡೆಂಘೀ ತಡೆಗೆ ಕ್ರಮಗಳು!

  • ಗಲೀಜು ನೀರಿನಲ್ಲಿ ಡೆಂಘೀ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ
  • ಸೊಳ್ಳೆ ನಿಯಂತ್ರಣಕ್ಕೆ ಸ್ವಚ್ಛತೆ ಕಾಪಾಡೋದು ಅತೀ ಮುಖ್ಯ
  • ಮನೆ ಸುತ್ತ, ಟೆರೇಸ್ ಮೇಲೆ ನೀರು ನಿಲ್ಲದಂತೆ ಎಚ್ಚರವಹಿಸಬೇಕು
  • ನೀರು ಶೇಖರಣೆಯಾಗುವ ಪ್ರದೇಶವಿದ್ರೆ ಅಲ್ಲಿ ಶುಚಿಗೊಳಿಸಬೇಕು
  • ಮನೆಯ ಸುತ್ತಲಿನ ಪರಿಸರವನ್ನ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು
  • ಮಕ್ಕಳ ಸುರಕ್ಷತೆಗೆ ಸೊಳ್ಳೆ ಪರದೆಯಡಿ ಮಲಗಿಸುವುದು ಒಳ್ಳೆಯದು
  • 3 ದಿನ ನಿರಂತರ ಜ್ವರ, ಮೈಕೈ ನೋವಿದ್ರೆ ವೈದ್ಯರಿಗೆ ತೋರಿಸಬೇಕು
  • ತಲೆ ನೋವು ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ
  • ಶುದ್ಧ, ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಒಳ್ಳೆಯದು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಲಿಕಾನ್​ ಸಿಟಿಯಲ್ಲಿ ಡೆಂಘೀಗೆ ಮೊದಲ ಬಲಿ.. 11 ವರ್ಷದ ಬಾಲಕ ಸಾವು

https://newsfirstlive.com/wp-content/uploads/2024/07/BNG_CHILD_DEAD.jpg

Load More