ದ್ರೋಣಾಚಾರ್ಯ ರಾಹುಲ್ ದ್ರಾವಿಡ್ ಸೆಳೆಯಲು ಹೇಗಿದೆ ಕಸರತ್ತು?
ಐಪಿಎಲ್ನ 4 ತಂಡಗಳಿಂದ ರಾಹುಲ್ ದ್ರಾವಿಡ್ಗಾಗಿ ಬಿಗ್ ಫೈಟ್
RCB ಮಾಜಿ ನಾಯಕ ತನ್ನ ತವರಿನ ತಂಡದ ಕೋಚ್ ಆಗುತ್ತಾರಾ?
ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದೆದ್ದೇ ಗೆದ್ದಿದ್ದು, ನಿರ್ಗಮಿತ ಹೆಡ್ಕೋಚ್ ರಾಹುಲ್ ದ್ರಾವಿಡ್ಗೆ ಫುಲ್ ಡಿಮ್ಯಾಂಡ್ ಬಂದಿದೆ. ಐತಿಹಾಸಿಕ ಟ್ರೋಫಿ ಗೆಲ್ಲಿಸಿಕೊಟ್ಟ ಬೆನ್ನಲ್ಲೆ ದಿ ವಾಲ್ ಐಪಿಎಲ್ನತ್ತ ಕಣ್ಣಾಯಿಸಿದ್ದು, ಚಾಂಪಿಯನ್ ಕೋಚ್ ಸೆಳೆಯಲು ಫ್ರಾಂಚೈಸಿಗಳು ಮುಗಿಬಿದ್ದಿವೆ.
IPLಗೆ ಟೀಮ್ ಇಂಡಿಯಾ ನಿರ್ಗಮಿತ ಕೋಚ್ ದ್ರಾವಿಡ್ ಎಂಟ್ರಿ..?
ವಿದೇಶಿ ಕೋಚ್ಗಳಿಂದ ಮಾತ್ರ ಟೀಮ್ ಇಂಡಿಯಾ ಐಸಿಸಿ ಟ್ರೋಫಿ ಗೆಲ್ಲುತ್ತೆ ಅನ್ನೋ ಮಾತಿತ್ತು. ಆದ್ರೀಗ ಆ ಮಾತನ್ನ ನಿರ್ಗಮಿತ ಹೆಡ್ಕೋಚ್ ರಾಹುಲ್ ದ್ರಾವಿಡ್ ಸುಳ್ಳಾಗಿಸಿದ್ದಾರೆ. ಓರ್ವ ದೇಶಿ ಕೂಡ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಬಹುದು ಅನ್ನೋದನ್ನ ಟಿ20 ವಿಶ್ವಕಪ್ ಗೆಲ್ಲಿಸಿ ತೋರಿಸಿಕೊಟ್ಟಿದ್ದಾರೆ. 17 ವರ್ಷಗಳ ಕಪ್ ಬರ ನೀಗಿಸಿ, ಭಾರತದ ಕೀರ್ತಿಯನ್ನ ಪತಾಕೆಯನ್ನ ಜಗದಗಲಕ್ಕೆ ಪಸರಿಸಿದ ಚಾಂಪಿಯನ್ ಕ್ಯಾಪ್ಟನ್ ರಾಹುಲ್ ದ್ರಾವಿಡ್ ಅವರಿಗೆ ಇನ್ನಿಲ್ಲದ ಡಿಮ್ಯಾಂಡ್ ಬಂದಿದೆ.
ಇದನ್ನೂ ಓದಿ: ದರ್ಶನ್ ಜೈಲು ಸೇರಿದಕ್ಕೆ ನೋವಲ್ಲಿರೋ ಡೈನಾಮಿಕ್ ಫ್ಯಾಮಿಲಿ.. ದಾಸನ ಪರ ಬ್ಯಾಟ್ ಬೀಸ್ತಿರೋ ಸ್ಯಾಂಡಲ್ವುಡ್
ಭಾರತಕ್ಕೆ ಟ್ರೋಫಿ ಗೆಲ್ಲಿಸಿ ಹೆಡ್ಕೋಚ್ ಹುದ್ದೆಗೆ ಗುಡ್ಬೈ ಹೇಳಿದ ದ್ರಾವಿಡ್ ಐಪಿಎಲ್ನತ್ತ ಚಿತ್ತ ಹರಿಸಿದ್ದಾರೆ. ದಿ ವಾಲ್ ಟೀಮ್ ಇಂಡಿಯಾ ಹೆಡ್ಕೋಚ್ ಆಗಿ ಸಕ್ಸಸ್ ಕಂಡ ಬೆನ್ನಲ್ಲೇ ಕಲರ್ಫುಲ್ ಟೂರ್ನಿಗೆ ಎಂಟ್ರಿಕೊಡಲಿದ್ದಾರೆ ಎಂದು ವರದಿಯಾಗಿದೆ. ಇದು ಗೊತ್ತಾದ ಬೆನ್ನಲ್ಲೆ ಈ 4 ಫ್ರಾಂಚೈಸಿಗಳು ದ್ರಾವಿಡ್ರನ್ನ ಸೆಳೆಯಲು ತೆರೆಮರೆಯಲ್ಲೆ ಕಸರತ್ತು ಆರಂಭಿಸಿವೆ.
ಮರಳಿ ರಾಜಸ್ಥಾನ ಕೋಚ್ ಆಗ್ತಾರಾ ದ್ರಾವಿಡ್..?
ಪಂದ್ಯಾವಳಿಯಲ್ಲಿ ಒಮ್ಮೆ ಟ್ರೋಫಿ ಗೆದ್ದಿರೋ ರಾಜಸ್ಥಾನ ತಂಡಕ್ಕೆ 16 ವರ್ಷಗಳಿಂದ ಕಪ್ ದೂರವಾಗಿದೆ. ಮತ್ತೊಮ್ಮೆ ಎತ್ತಿ ಹಿಡಿಯಲು ಚಾಂಪಿಯನ್ ಕ್ಯಾಪ್ಟನ್ ದ್ರಾವಿಡ್ರನ್ನ ಫ್ರಾಂಚೈಸಿಗೆ ಸೆಳೆಯಲು ಚಿಂತನೆ ನಡೆಸಿದೆ. ಕುಮಾರ್ ಸಂಗಕ್ಕರ ಏಕಕಾಲಕ್ಕೆ ಹೆಡ್ಕೋಚ್ ಜೊತೆ ಡೈರೆಕ್ಟರ್ ಆಫ್ ಕ್ರಿಕೆಟ್ ರೋಲ್ ನಿಭಾಯಿಸ್ತಿದ್ದಾರೆ. ಈ ಪೈಕಿ ಒಂದನ್ನ ದ್ರಾವಿಡ್ಗೆ ವಹಿಸಲು ಫ್ರಾಂಚೈಸಿ ಚಿಂತಿಸ್ತಿದೆ. ಈ ಹಿಂದೆ ದ್ರಾವಿಡ್ ರಾಜಸ್ಥಾನ ತಂಡ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದು, ಫ್ರಾಂಚೈಸಿ ಜೊತೆ ಉತ್ತಮ ಒಡನಾಟವಿದೆ. ಹೀಗಾಗಿ ದ್ರಾವಿಡ್ ರಾಜಸ್ಥಾನ ಸೇರುವ ಅವಕಾಶ ಹೆಚ್ಚಿದೆ ಎಂದು ಹೇಳಲಾಗ್ತಿದೆ.
ತವರಿನ ತಂಡದ ಕೋಚ್ ಹುದ್ದೆಗೇರ್ತಾರಾ ಮಾಜಿ ನಾಯಕ..?
ಆ್ಯಂಡಿ ಫ್ಲವರ್ ಆರ್ಸಿಬಿ ತಂಡದ ಹೆಡ್ಕೋಚ್ ಆದ್ರು ಆರ್ಸಿಬಿ ಹಣೆಬರಹ ಮಾತ್ರ ಬದಲಾಗ್ಲಿಲ್ಲ. ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಕೂಡ ವೈಫಲ್ಯ ಕಂಡಿದ್ದಾರೆ. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಆರ್ಸಿಬಿ ಮೇಜರ್ ಸರ್ಜರಿ ನಡೆಸ್ತಿದೆ ಎಂದು ಹೇಳಲಾಗ್ತಿದೆ. ಹಾಗೊಂದು ವೇಳೆ ಮಾಡಿದ್ದೆ ಆದ್ರೆ ಚಾಂಪಿಯನ್ ಕ್ಯಾಪ್ಟನ್ ದ್ರಾವಿಡ್ಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಆರ್ಸಿಬಿ ಮಾಜಿ ನಾಯಕನಾಗಿರೋ ದ್ರಾವಿಡ್, ತವರಿನ ತಂಡ ಸೇರ್ಪಡೆಗೊಂಡ್ರೆ 2025 ರಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಬಹುದು.
ಮೆಂಟರ್ ಹುದ್ದೆ ಖಾಲಿ..ಕೆಕೆಆರ್ ಪಾಲಾಗ್ತಾರಾ ದಿ ವಾಲ್ ?
ರಾಜಸ್ಥಾನ ಬಿಟ್ರೆ ಹಾಲಿ ಚಾಂಪಿಯನ್ ಕೆಕೆಆರ್ ಕೂಡ ರಾಹುಲ್ ದ್ರಾವಿಡ್ ಮೇಲೆ ಕಣ್ಣಿಟ್ಟಿದೆ. ಯಾಕಂದ್ರೆ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಟೀಮ್ ಇಂಡಿಯಾದ ನೂತನ ಕೋಚ್ ಆಗುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ಗಂಭೀರ್ ಹುದ್ದೆ ತೊರೆದ್ರೆ ಆ ಸ್ಥಾನಕ್ಕೆ ದ್ರಾವಿಡ್ರನ್ನ ನೇಮಿಸಲು ಕೆಕೆಆರ್ ಫ್ರಾಂಚೈಸಿ ಚಿಂತಿಸ್ತಿದೆ.
ಇದನ್ನೂ ಓದಿ: ಒಂದೇ ಶಾಲೆಯ ಹತ್ತಾರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ.. ಕಿರಾತಕ ಯಾರನ್ನ ಟಾರ್ಗೆಟ್ ಮಾಡ್ತಿದ್ದ?
ದ್ರಾವಿಡ್ ಮನವೊಲಿಸಿ ಡೆಲ್ಲಿಗೆ ಸೇರಿಸಿಕೊಳ್ತಾರಾ ಗಂಗೂಲಿ..?
ಇನ್ನು ಕೆಕೆಆರ್, ಆರ್ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳಷ್ಟೇ ಅಲ್ಲ, ಡೆಲ್ಲಿ ಕ್ಯಾಪಿಟಲ್ಸ್ ಕೂಡ ದ್ರಾವಿಡ್ ಮೇಲೆ ಕಣ್ಣಿಟ್ಟಿದೆ. ಡೆಲ್ಲಿ ಕಳೆದ 4 ಸೀಸನ್ಗಳಿಂದ ಫ್ಲೇಆಫ್ ಪ್ರವೇಶಿಸಿಲ್ಲ. ಹೆಡ್ಕೋಚ್ ರಿಕಿ ಪಾಂಟಿಂಗ್ ಮ್ಯಾನೇಜ್ಮೆಂಟ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸದ್ಯ ಸೌರವ್ ಗಂಗೂಲಿ ಡೆಲ್ಲಿಗೆ ಡೈರೆಕ್ಟರ್ ಆಫ್ ಕ್ರಿಕೆಟ್ ಆಗಿದ್ದು, ದ್ರಾವಿಡ್ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಮನವೊಲಿಸುವಲ್ಲಿ ಸಕ್ಸಸ್ ಆದ್ರೆ ಡೆಲ್ಲಿ ತಂಡದಲ್ಲಿ ದ್ರಾವಿಡ್ ದರ್ಬಾರ್ ಶುರುವಾಗಲಿದೆ.
ಇದನ್ನೂ ಓದಿ: ಜೀವಂತ ಹಾವನ್ನೇ ತಿಂದ ಡಕಾಯಿತ.. ಸುಲಿಗೆ, ಲೂಟಿ ಮಾಡ್ತಿದ್ದವನಿಂದ ಭಯಾನಕ ಕೃತ್ಯ
ಫೈನಲಿ ಆರಂಭದಲ್ಲೆ ಹೇಳಿದಂತೆ ಟಿ20 ವಿಶ್ವಕಪ್ ಗೆಲ್ಲಿಸಿದ ಬಳಿಕ ರಾಹುಲ್ ದ್ರಾವಿಡ್ಗೆ ಐಪಿಎಲ್ ಕೋಚ್ ಆಗಲು ಫುಲ್ ಡಿಮ್ಯಾಂಡ್ ಬಂದಿದೆ. ಆದ್ರೆ ಚಾಂಪಿಯನ್ ಕೋಚ್ ಫ್ರಾಂಚೈಸಿಗಳ ಪ್ರೊಪೊಸಲ್ ಅನ್ನ ಒಪ್ಪಿಕೊಳ್ತಾರಾ ? ಇಲ್ಲ ತಿರಸ್ಕರಿಸಿ ಸುಮ್ಮನಾಗ್ತಾರಾ ಅನ್ನೋದನ್ನ ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ