newsfirstkannada.com

ಇಂದು ವಿಶ್ವ ಜನಸಂಖ್ಯಾ ದಿನಾಚರಣೆ.. 35ನೇ ವರ್ಷಕ್ಕೆ  10ನೇ ಮಗುವಿಗೆ ಜನ್ಮ ನೀಡಿದ ತಾಯಿ!

Share :

Published July 11, 2024 at 12:56pm

Update July 11, 2024 at 1:05pm

    13ನೇ ವರ್ಷ ವಯಸ್ಸಿರುವಾಗ ಮೊದಲ ಮಗು ಜನನ

    ಸದ್ಯ ಮೊದಲ ಮಗಳಿಗೆ 22 ವರ್ಷ.. ತಾಯಿಗೆ 35 ವರ್ಷ

    10ನೇ ಮಗುವಿಗೆ ಜನ್ಮ ನೀಡಿದ ಬುಡಕಟ್ಟು ಜನಾಂಗದ ಮಹಿಳೆ

ಇಂದು ವಿಶ್ವ ಜನಸಂಖ್ಯಾ ದಿನಾಚರಣೆ ವಿಶೇಷ. ಆದರೆ ಈ ವಿಶೇಷ ದಿನದಂದು 35 ವರ್ಷದ ತಾಯಿಯೊಬ್ಬಳು 10ನೇ ಮಗುವಿಗೆ ಜನ್ಮ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಜುಗ್ತಿ ಬಾಯಿ ಎಂಬ ಬೈಗಾ ಬುಡಕಟ್ಟು ಜನಾಂಗದ ಮಹಿಳೆ 10ನೇ ಮಗುವಿನ ಜನ್ಮ ನೀಡಿದ್ದಾಳೆ. ಆದರೆ ಅಚ್ಚರಿ ಸಂಗತಿ ಏನೆಂದರೆ ಜುಗ್ತಿ ಬಾಯಿ ಅವರ ಮೊದಲ ಮಗಳಿಗೆ 22 ವರ್ಷ ವಯಸ್ಸಾಗಿದ್ದು, ಆಕೆಗೆ 13ನೇ ವರ್ಷ ವಯಸ್ಸಿರುವಾಗ ಮೊದಲ ಮಗಳು ಜನಿಸಿದಳಂತೆ.

ಇದನ್ನೂ ಓದಿ: ಗೂಡ್ಸ್ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ನಜ್ಜುಗುಜ್ಜಾದ ಕಾರು.. ಮೂವರು ಸಾವು

ಮೊಹಗಾಂವ್​ ನಿವಾಸಿ ಅಕ್ಲು ಸಿಂಗ್​ ಮರಾವಿ ಅವರ ಪತ್ನಿ ಜುಗ್ತಿ ಬಾಯಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರ ಕುಟುಂಬ ಬಿರ್ಸಾ ಆಸ್ಪತ್ರೆಗೆ ಸಾಗಿಸಿದರು. ಆದರೆ ಅಲ್ಲಿಂದ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು.

ಇದನ್ನೂ ಓದಿ: ಇದೆಂಥಾ ದುರ್ಗತಿ! ಒಂದೇ ದಿನ 7 ಜನ ಸಾವು.. ಈ ಊರಲ್ಲಿ ಅಂತ್ಯಕ್ರಿಯೆ ಮಾಡಲು ಸ್ಮಶಾನವೇ ಇಲ್ಲ

ಕೊನೆಗೆ ಜಿಲ್ಲಾ ಆಸ್ಪತ್ರೆಯ ವೈದ್ಯೆ ಅರ್ಚನಾ ಲಿಲ್ಹರೆ ಆಕೆಗೆ ಆಪರೇಷನ್​ ಮಾಡಿ ಹೆರಿಗೆ ಮಾಡಿಸಿದ್ದಾರೆ. ಜುಗ್ತಿ ಬಾಯಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ವಿಶ್ವ ಜನಸಂಖ್ಯಾ ದಿನಾಚರಣೆ.. 35ನೇ ವರ್ಷಕ್ಕೆ  10ನೇ ಮಗುವಿಗೆ ಜನ್ಮ ನೀಡಿದ ತಾಯಿ!

https://newsfirstlive.com/wp-content/uploads/2024/07/madhya-pradesh.jpg

Load More