newsfirstkannada.com

ಗಂಭೀರ್ ಕೋಚ್ ಆದ ಬೆನ್ನಲ್ಲೇ ಟೆನ್ಷನ್ ಟೆನ್ಷನ್.. ಆತಂಕ ಹುಟ್ಟಿಸಿದ ಆ ಮೂರು ಘಟನೆಗಳು..!

Share :

Published July 11, 2024 at 1:32pm

    ಟೀಮ್​ ಇಂಡಿಯಾ​ ಕೋಚ್​ ಆಗಿ ಗಂಭೀರ್​ ನೇಮಕ

    ಡ್ರೆಸ್ಸಿಂಗ್​ ರೂಮ್​ನಲ್ಲಿ ಗುಂಪುಗಾರಿಕೆ ಶುರುವಾಗುತ್ತಾ?

    ಕೊಹ್ಲಿ-ಗಂಭೀರ್​ ಬಾಂಧವ್ಯದ ಮೇಲೆ ಎಲ್ಲರ ಕಣ್ಣು

ಗಂಭೀರ್​​ ಕೋಚ್​ ಹುದ್ದೆಗೇರ್ತಿದ್ದಂತೆ ಕ್ರಿಕೆಟ್​ ವಲಯದಲ್ಲಿ ಹೊಸ ಚರ್ಚೆ ಶುರುವಾಗಿದೆ. ವಿರಾಟ್​ ಕೊಹ್ಲಿ, ಗೌತಮ್​ ಗಂಭೀರ್​ ನಡುವಿನ ಬಾಂಧವ್ಯ ಹೇಗಿರುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಹೆಚ್ಚಾಗ್ತಿದೆ. ಅಹಂಕಾರ, ಇನ್​​ಸೆಕ್ಯುರಿಟಿಯಿಂದಾಗಿ ಡ್ರೆಸ್ಸಿಂಗ್​ ರೂಮ್​ನಲ್ಲಿ ಗುಂಪುಗಾರಿಕೆ ಶುರುವಾಗುತ್ತಾ ಅನ್ನೋ ಆತಂಕ ಶುರುವಾಗಿದೆ. ಇದಕ್ಕೆಲ್ಲಾ ಕಾರಣ ಆ 3 ಘಟನೆಗಳು.

ರಾಹುಲ್​ ದ್ರಾವಿಡ್​ ಉತ್ತರಾಧಿಕಾರಿಯಾಗಿ ಗೌತಮ್​​ ಗಂಭೀರ್​ ಟೀಮ್​ ಇಂಡಿಯಾ ಕೋಚ್ ಹುದ್ದೆಗೇರಿದ್ದಾಗಿದೆ. ಹೆಡ್​ ಮಾಸ್ಟರ್​ ಹುದ್ದೆ ಅಲಂಕರಿಸಿರೋ ಗಂಭೀರ್​ ಕಠಿಣ ಹಾದಿಯಲ್ಲಿ ಸಾಗಬೇಕಿದೆ. 4 ಐಸಿಸಿ ಟ್ರೋಫಿ ಗೆಲ್ಲೋ ಟಫ್​ ಟಾಸ್ಕ್ ಜೊತೆಗೆ ತಂಡದಲ್ಲಿ ಇಗೋ ಮತ್ತು ಇನ್​ಸೆಕ್ಯುರಿಟಿಯನ್ನ ಹೇಗೆ ಹ್ಯಾಂಡೆಲ್​ ಮಾಡ್ತಾರೆ ಅನ್ನೋ ದೊಡ್ಡ ಪ್ರಶ್ನೆ ಎದುರಾಗಿದೆ. ದ್ರಾವಿಡ್​ ಅವಧಿಯಲ್ಲಿ ಟೀಮ್​ ಇಂಡಿಯಾ ಡ್ರೆಸ್ಸಿಂಗ್​ ರೂಮ್​ ವಾತಾವರಣ ಅದ್ಭುತವಾಗಿತ್ತು. ಅದನ್ನೇ ಮುಂದುವರೆಸಿಕೊಂಡು ಹೋಗುವ ಸವಾಲು ಗಂಭೀರ್​ ಮುಂದಿದೆ.

ಇದನ್ನೂ ಓದಿ:ಹಾರ್ದಿಕ್ ಪಾಂಡ್ಯ With.. ಭಾರೀ ಸಂಚಲನ ಮೂಡಿಸಿದ ಸುಂದರಿ..!

ಟೀಮ್​ ಇಂಡಿಯಾ ಹೆಡ್​ ಕೋಚ್​ ಗೌತಮ್​ ಗಂಭೀರ್ ಯಾವತ್ತಿಂದ ಚಾರ್ಜ್​ ತೆಗೆದುಕೊಳ್ತಾರೆ ಅನ್ನೋದಕ್ಕಿಂತ, ಗೌತಮ್​ ಗಂಭೀರ್​-ವಿರಾಟ್​ ಕೊಹ್ಲಿ ನಡುವೆ ಹೊಂದಾಣಿಕೆ ಹೇಗಿರುತ್ತೆ ಅನ್ನೋ ಚರ್ಚೆ ಕ್ರಿಕೆಟ್​ ಲೋಕದಲ್ಲಿ ಜೋರಾಗಿದೆ. ಡ್ರೆಸ್ಸಿಂಗ್​​ ರೂಮ್​ನಲ್ಲಿ ಸ್ವಲ್ಪ ಯಡವಟ್ಟಾದ್ರು, ಡ್ರೆಸ್ಸಿಂಗ್​ ರೂಮ್​ ವಾತಾವರಣವೇ ಹಾಳಾಗಲಿದೆ. ಜೂನಿಯರ್ಸ್​​, ಸೀನಿಯರ್ಸ್​ ಎನ್ನದೆ ಒಗ್ಗಟ್ಟಿನ ಸಂದೇಶ ಸಾರ್ತಿರೋ ಟೀಮ್​ ಇಂಡಿಯಾ ಇಬ್ಭಾಗವಾಗಲಿದೆ. ಗುಂಪುಗಾರಿಕೆಗೆ ನಾಂದಿ ಹಾಡುವ ಸಾಧ್ಯತೆ ಇದೆ. ಇಷ್ಟೆಲ್ಲಾ ಟೆನ್ಶನ್​ ಹುಟ್ಟಿಗೆ ಕಾರಣ ಆ 3 ಘಟನೆಗಳು.

ಆನ್​ಫೀಲ್ಡ್​ನಲ್ಲೇ ಇಬ್ಬರ ನಡುವೆ ಬಿಗ್ ಫೈಟ್
IPL 6ನೇ ಸೀಸನ್​ನ ವೇಳೆ ಕೆಕೆಆರ್ ಕ್ಯಾಪ್ಟನ್ ಆಗಿದ್ದ ಗಂಭೀರ್, RCB ವಿರುದ್ಧದ ಪಂದ್ಯದಲ್ಲಿ ಔಟಾಗಿ ಹೋಗ್ತಿದ್ದ ಕೊಹ್ಲಿಯನ್ನ ಕೆಣಕಿದ್ರು. ಇದ್ರಿಂದ ಕೊಹ್ಲಿ ಕೆಂಡವಾದ್ರು. ಆನ್​​ಫೀಲ್ಡ್​ನಲ್ಲೇ ಇಬ್ಬರ ನಡುವೆ ಫುಲ್ ವಾರ್ ನಡೀತು. ಬಿಟ್ಟರೆ ಒಬ್ಬರನ್ನೊಬ್ಬರು ಹೊಡೆದಾಡಿಕೊಂಡೆ ಬಿಡ್ತಿದ್ರು.

ಇಬ್ಬರ ನಡುವೆ ಮತ್ತೆ ಕಿರಿಕ್​..!
2023ರ ಐಪಿಎಲ್ ಟೂರ್ನಿಯ ವೇಳೆ ಆನ್​ಫೀಲ್ಡ್​ನಲ್ಲಿ ಕೊಹ್ಲಿ ಮತ್ತು ನವೀನ್ ಉಲ್ ಹಕ್ ನಡುವೆ ವಾರ್​ ನಡೆದಿತ್ತು. ಇಡೀ ವಿಶ್ವವೇ ಆ ಘಟನೆಯನ್ನ ಕಣ್ಣಾರೆ ನೋಡಿತ್ತು. ಇದು ಇಷ್ಟಕ್ಕೆ ನಿಲ್ಲಲಿಲ್ಲ. ಪಂದ್ಯ ಮುಗಿದ ನಂತ್ರ ಹ್ಯಾಂಡ್​ ಶೇಕ್ ವೇಳೆ, ವಿರಾಟ್ ಮತ್ತು ನವೀನ್ ನಡುವೆ ಮತ್ತೆ ಜಗಳ ಶುರುವಾಗುತ್ತೆ. ಆಗ ಇಬ್ಬರ ಜಗಳದ ನಡುವೆ ಲಕ್ನೋ ತಂಡದ ಮೆಂಟರ್ ಗೌತಮ್ ಗಂಭೀರ್ ಎಂಟ್ರಿ ಕೊಡ್ತಾರೆ. ಗಂಭೀರ್ ಯಾವಾಗ ಎಂಟ್ರಿ ಆದರೋ ಕಿರಿಕ್ ಮತ್ತಷ್ಟು ಜೋರಾಗಿ ನಡೀತು. ಕೊಹ್ಲಿ – ಗಂಭೀರ್​ ಇಬ್ಬರೂ ಹಾವು ಮುಂಗಸಿಯಂತೆ ಒಬ್ಬರನ್ನೊಬ್ಬರು ಬೈದಾಡಿಕೊಂಡಿದ್ರು.

ಇದನ್ನೂ ಓದಿ:ಗೌತಮ್ ಗಂಭೀರ್​​ಗೆ ಬಿಗ್ ಶಾಕ್​.. ಮುಖ್ಯ ಕೋಚ್​ ಇಟ್ಟಿದ್ದ ದೊಡ್ಡ ಬೇಡಿಕೆ ತಿರಸ್ಕರಿಸಿದ ಬಿಸಿಸಿಐ

ಚಿನ್ನಸ್ವಾಮಿ ಫ್ಯಾನ್ಸ್​ಗೆ ಗಂಭೀರ್​ ಸನ್ನೆ, ಕೊಹ್ಲಿ ಕೆಂಡ
ನವೀನ್​ ಉಲ್​ ಹಕ್​ vs ಕೊಹ್ಲಿ ನಡುವಿನ ಜಗಳಕ್ಕೆ ಮೂಲ ಕಾರಣವಾಗಿದ್ದು ಲಕ್ನೋ ಮತ್ತು ಆರ್​​ಸಿಬಿ ನಡುವೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಪಂದ್ಯ. ಅಂದು ಬೆಂಗಳೂರಿನಲ್ಲಿ ಆರ್​ಸಿಬಿ ತಂಡವನ್ನ ಸೋಲಿಸಿದಾಗ ಗಂಭೀರ್, ಅಭಿಮಾನಿಗಳತ್ತ ಬಾಯ್ಮುಚ್ಚಿ ಎಂಬಂತೆ ಸನ್ನೆ ಮಾಡಿದ್ರು. ಕೊಹ್ಲಿಗೆ ಸಹಿಸಲಾಗಿರಲಿಲ್ಲ. ಹೀಗಾಗಿ ಬಳಿಕ ಲಕ್ನೋನಲ್ಲಿ ಎಲ್​ಎಸ್​​ಜಿ ತಂಡವನ್ನು ಮಣಿಸಿದಾಗ ಕೊಹ್ಲಿ, ಅದೇ ಸ್ಟೈಲ್​ನಲ್ಲಿ ಗಂಭೀರ್​ಗೆ ತಿರುಗೇಟು ನೀಡಿದ್ರು.

ಈ ಮೂರು ಕಿತ್ತಾಟಗಳೇ ಸದ್ಯ ಕೊಹ್ಲಿ – ಗಂಭೀರ್​ ಭಾಂದವ್ಯ ಹೇಗಿರುತ್ತೆ ಅನ್ನೋ ಪ್ರಶ್ನೆ ಹುಟ್ಟಿಸಿವೆ. ಕಳೆದ ಐಪಿಎಲ್​ ಟೂರ್ನಿ ವೇಳೆ ಇಬ್ಬರ ನಡುವೆ ಏನೂ ನಡೆದೇ ಇಲ್ಲವೆಂಬಂತೆ ಇಬ್ಬರೂ ನಡೆದುಕೊಂಡಿದ್ದಾರೆ. ಈ ಸೀಸನ್​​​​​​​ನ ಕೆಕೆಆರ್​​​-ಆರ್​ಸಿಬಿ ನಡುವಿನ ಮೊದಲ ಪಂದ್ಯದಲ್ಲಿ ಗೌತಿ, ಕೊಹ್ಲಿಯನ್ನ ಹಗ್​ ಮಾಡಿದ್ದೇ ಸೆನ್ಸೇಷನ್​ ಸೃಷ್ಟಿಸಿತ್ತು. ಆ ಬಳಿಕ 2ನೇ ಬಾರಿ ಮುಖಾಮುಖಿಯಾದಾಗ ಕೊಲ್ಕತ್ತಾ ಮೈದಾನದಲ್ಲಿ ಆತ್ಮೀಯ ಮಾತುಕತೆ ನಡೆಸಿ ಗಮನ ಸೆಳೆದಿದ್ರು.

ಇಗೋ ಸಮಸ್ಯೆ
ಐಪಿಎಲ್​ನಲ್ಲಿ ಇಬ್ಬರೂ ಒಂದಾದಂತೆ ಕಂಡರೂ ಈ ಡೆಲ್ಲಿ ಬಾಯ್ಸ್​ಗೆ ತೀವ್ರವಾದ ಇಗೋ ಸಮಸ್ಯೆ ಇದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ವಿಶ್ವಕಪ್​ ಗೆದ್ದ ಬೆನ್ನಲ್ಲೇ ಕೊಹ್ಲಿ ಟಿ20ಗೆ ಗುಡ್​ ಬೈ ಹೇಳಿದ್ದೂ ಕೂಡ ಗಂಭೀರ್​ ಎಂಟ್ರಿಯ ಕಾರಣಕ್ಕೆ ಅನ್ನೋ ಮಾತುಗಳೂ ಕೇಳಿ ಬರ್ತಿವೆ. ಇದೀಗ ಇಗೋ ಹಾಗೂ ಇನ್​ಸೆಕ್ಯುರಿಟಿಯ ಪ್ರಶ್ನೆ ಆರಂಭದಲ್ಲೇ ಹುಟ್ಟಿದೆ. ಹೀಗಾಗಿ ಮುಂದೆ ಕೊಹ್ಲಿ -ಗಂಭೀರ್​​ ಭಾಂದವ್ಯ ಹೇಗಿರುತ್ತೆ ಅನ್ನೋದು ತೀವ್ರವಾದ ಕುತೂಹಲ ಹುಟ್ಟಿಸಿದೆ.

ಇದನ್ನೂ ಓದಿ:ಹೃದಯ ವಿದ್ರಾವಕ ಘಟನೆ.. ಅಪ್ಪ, ಮಗ ಕೈ ಕೈ ಹಿಡ್ಕೊಂಡು ರೈಲಿಗೆ ತಲೆಕೊಟ್ಟು ದಾರುಣ ಸಾವು -ವಿಡಿಯೋ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಗಂಭೀರ್ ಕೋಚ್ ಆದ ಬೆನ್ನಲ್ಲೇ ಟೆನ್ಷನ್ ಟೆನ್ಷನ್.. ಆತಂಕ ಹುಟ್ಟಿಸಿದ ಆ ಮೂರು ಘಟನೆಗಳು..!

https://newsfirstlive.com/wp-content/uploads/2024/06/Gambhir_Kohli_1.jpg

Load More