newsfirstkannada.com

VIDEO: ಅಪರ್ಣಾ ಅವರ ಸೊಗಸಾದ ನಿರೂಪಣೆ ಮೆಲುಕು ಹಾಕಿದ ಕನ್ನಡಿಗರು; ಭಾವಪೂರ್ಣ ಕಂಬನಿ

Share :

Published July 11, 2024 at 11:27pm

    ನಿರೂಪಕಿ ಅಪರ್ಣಾ ಅವರ ನಿಧನಕ್ಕೆ ನಾಡಿನ ಗಣ್ಯರಿಂದ ಕಂಬನಿ

    ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಿದ್ದರು

    ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಗೆ ದುರಂತ ಸಾವು

ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಅವರು ನಿಧನರಾಗಿರೋ ಸುದ್ದಿ ಇಡೀ ಕರುನಾಡಿಗೆ ಬರಸಿಡಿಲಿನಂತೆ ಬಡಿದಿದೆ. ಅಚ್ಚ ಕನ್ನಡದಲ್ಲಿ ಅಪರ್ಣಾ ಅವರು ಸೊಗಸಾದ ನಿರೂಪಣೆ ಮಾಡುತ್ತಿದ್ದರೆ ಎಂಥವರು ಮೂಕ ವಿಸ್ಮಿತರಾಗಿ ನೋಡುವಂತ ಭಾಷಾ ಶೈಲಿ ಅವರಲ್ಲಿತ್ತು.

ಅಪರ್ಣಾ ಅವರ ನಿಧನಕ್ಕೆ ನಾಡಿನ ಹಲವಾರು ಗಣ್ಯರು ತಮ್ಮ ಸಂತಾಪ ಸೂಚಿಸುತ್ತಿದ್ದಾರೆ. ಅಪರ್ಣಾ ಅವರ ಸೊಗಸಾದ ಕನ್ನಡ ಭಾಷೆ, ನಿರೂಪಣೆಯ ಶೈಲಿಯನ್ನು ಸ್ಮರಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಅಪ್ಪಟ ಕನ್ನಡದ ಪ್ರತಿಭೆ.. ಕನ್ನಡಿಗರ ಹೃದಯ ತುಂಬಿದ್ದ ಭಾಷಾ ಪ್ರೇಮಿ ಅಪರ್ಣಾ ನಿಧನ; ಆಗಿದ್ದೇನು? 

ಸಿಎಂ ಸಿದ್ದರಾಮಯ್ಯನವರು ಅಪರ್ಣಾ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು, ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ.

ಮೃತ ಅಪರ್ಣಾಳ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಅಪರ್ಣಾ ಅವರ ಸೊಗಸಾದ ನಿರೂಪಣೆ ಮೆಲುಕು ಹಾಕಿದ ಕನ್ನಡಿಗರು; ಭಾವಪೂರ್ಣ ಕಂಬನಿ

https://newsfirstlive.com/wp-content/uploads/2024/07/Aparna-Death.jpg

Load More