newsfirstkannada.com

ಮಿಂಚಿ ಮರೆಯಾದ ಅಪರ್ಣಾ.. ಕಂಬನಿ ಮಿಡಿದ ಗಣ್ಯರು.. ಅಪರೂಪದ ನಿರೂಪಕಿ ಬಗ್ಗೆ ಏನಂದ್ರು..?

Share :

Published July 12, 2024 at 7:50am

Update July 12, 2024 at 11:40am

    ಮಾತು ನಿಲ್ಲಿಸಿದ ಕರುನಾಡು ಕಂಡ ಅಪರೂಪದ ನಿರೂಪಕಿ

    ನಿರೂಪಕಿಯಾಗಿ, ನಟಿಯಾಗಿ ಮಿಂಚಿ ಮರೆಯಾದ ಅಪರ್ಣಾ

    ಅಪರ್ಣಾ ನಿಧನದ ಬಗ್ಗೆ ಗಣ್ಯಾತಿಗಣ್ಯರು ಸಂತಾಪ

ಕಳೆದ ಮೂರ್ನಾಲ್ಕು ದಶಕಗಳಿಂದ ಕನ್ನಡ ಮನಸ್ಸುಗಳಿಗೆ ತಮ್ಮ ನಿರೂಪಣೆಯಿಂದಲೇ ಮೋಡಿ ಮಾಡಿದ್ದ ಅಪರ್ಣಾ ಅವರ ನಿಧನದ ಸುದ್ದಿಯು ಆಘಾತವನ್ನು ಉಂಟುಮಾಡಿದೆ. ಅಪರ್ಣಾ ನಿಧನದ ಬಗ್ಗೆ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ.

ಆಂಗ್ಲ ಭಾಷೆ ಬಳಸದೇ ಅಚ್ಚ ಕನ್ನಡದಲ್ಲಿ ನಿರೂಪಣೆ ಮಾಡ್ತಾ.. ಅಚ್ಚ ಕನ್ನಡದಲ್ಲೇ ಮಾತನಾಡುತ್ತಾ ಭಾಷಾಭಿಮಾನ ಮೆರೆಯುತ್ತಾ.. ಮಜಾ ಟಾಕೀಸ್​ನಲ್ಲಿ ನಕ್ಕು ನಗಿಸಿ.. ಬಿಗ್​ ಬಾಸ್​​ನಲ್ಲಿ ಭಾಗಿಯಾಗಿ ಜನರನ್ನ ಮನರಂಜಿಸಿ.. ಚಂದನವನದ ಚಂದದ ಮಾತುಗಾರ್ತಿ.. ಕನ್ನಡ ದೂರದರ್ಶನದಲ್ಲಿ ಮಿಂಚಿ.. ರೇಡಿಯೋ ಜಾಕಿಯಾಗಿಯೂ ಕೆಲಸ ಮಾಡಿದ್ದ ಕನ್ನಡನಾಡು ಕಂಡ ಅಪರೂಪದ ನಿರೂಪಕಿ, ನಟಿ ಅಪರ್ಣಾ ವಿಧಿವಶರಾಗಿದ್ದಾರೆ.

‘ಅಪರ್ಣಾ ಸಾವು.. ನೋವು ತಂದಿದೆ’
ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ. ಮೃತ ಅಪರ್ಣಾ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ- ಸಿದ್ದರಾಮಯ್ಯ, ಮುಖ್ಯಮಂತ್ರಿ

ಇದನ್ನೂ ಓದಿ:ವೈದ್ಯರ ಗಡುವು ಮೀರಿ ಅಪರ್ಣಾ ಬದುಕಿದ್ದೇ ಚಮತ್ಕಾರ.. ಕೊನೆಗಾಲದಲ್ಲಿ ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ..

ಕನ್ನಡಿಗರ ಮನ ಗೆದ್ದಿದ್ದ ನಿರೂಪಕಿ
ಸ್ಪಷ್ಟ ಕನ್ನಡದ ಮೂಲಕ ನಿರೂಪಣೆ ಮಾಡಿ ಕನ್ನಡಿಗರ ಮನ ಗೆದ್ದ, ಖ್ಯಾತ ನಿರೂಪಕಿ, ನಟಿ ಶ್ರೀಮತಿ ಅಪರ್ಣ ಅವರ ಸಾವಿನಿಂದ ಮನಸ್ಸಿಗೆ ಅಪಾರ ನೋವುಂಟಾಗಿದೆ. ಅವರ ನಿಧನವು ಕಲಾ ಲೋಕಕ್ಕೆ ತುಂಬಲಾರದ ನಷ್ಟ. ನಿರೂಪಕಿಯಾಗಿ, ನಟಿಯಾಗಿ ದಶಕಗಳಿಂದ ದುಡಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ಹಾಗೂ ಸ್ನೇಹಿತರಿಗೆ ನನ್ನ ಸಾಂತ್ವನಗಳು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

ಕನ್ನಡ ನಾಡು ಒಬ್ಬ ಸಜ್ಜನಿಕೆಯ ನಿರೂಪಕಿಯನ್ನು ಕಳೆದುಕೊಂಡಂತಾಗಿದೆ ಅಂತಾ ಮಾಜಿ ಸಿಎಂ, ಹಾಲಿ ಸಂಸದ ಬಸವರಾಜ್​ ಬೊಮ್ಮಾಯಿ ಪೋಸ್ಟ್​ ಮಾಡಿದ್ದಾರೆ. ಇನ್ನೂ ವಿರೋಧ ಪಕ್ಷದ ನಾಯಕ ಆರ್​.ಅಶೋಕ್​.. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಮ್ಮ ಟ್ವಿಟರ್​ ಖಾತೆಯಲ್ಲಿ ಸಂತಾಪವನ್ನ ಸೂಚಿಸಿದ್ದಾರೆ.

ನ್ಯೂಸ್​ ಫಸ್ಟ್​ ಜೊತೆ ಖ್ಯಾತ ನಿರ್ದೇಶಕ ಟಿ.ಎನ್​ ಸೀತಾರಾಮ್​ ಮಾತನಾಡಿ ಅಪರ್ಣಾ ಕೆಲಸದ ಬಗ್ಗೆ ಕೆಲ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಬಸ್ ನಿಲ್ದಾಣಕ್ಕೆ ಹೋದರೆ, ಏರ್​ಪೋರ್ಟ್​ಗೆ ಹೋದರೆ, ಮೆಟ್ರೋ ನಿಲ್ದಾಣಕ್ಕೆ ಹೋದರೆ, ರೈಲ್ವೇ ನಿಲ್ದಾಣಕ್ಕೆ ಹೋದರೆ.. ಎಲ್ಲಿ ಹೋದರೂ ಅವರ ಕನ್ನಡದ ಧ್ವನಿ ಇರುತ್ತಿತ್ತು. ಅವರು ಕನ್ನಡದ ಮೇಲೆ ಪ್ರೀತಿ ಬರುವ ಹಾಗೆ ಮಾಡುವವರು. ಅಯ್ಯೋ ಇದು ನಮ್ಮ ಕನ್ನಡ ಅನ್ನೋ ರೀತಿ ಮಾಡೋರು. ಅದು ಕೇವಲ ಮೆಕಾನಿಕ್ ಆಗಿ ಅಲ್ಲ. ಅನೇಕ ಕಲಾವಿದರೂ ಕೂಡ ಕನ್ನಡದ ಬಗ್ಗೆ ಪ್ರೀತಿ ಹುಟ್ಟಿಸಿದ್ದಾರೆ. ಅಂತವರಲ್ಲಿ ಅಪರ್ಣ ಕೂಡ ಒಬ್ಬರು. ಆದರೆ ಅವರು ಚಿಕ್ಕ ವಯಸ್ಸಿನಲ್ಲಿಯೇ ಹೋಗಿ ಬಿಡ್ತಾರೆ. ತುಂಬಾ ನೋವಿನ ವಿಚಾರ ಎಂದು ಟಿ.ಎನ್.ಸೀತಾರಾಮ್ ಭಾವುಕರಾಗಿದ್ದಾರೆ.

ಇದನ್ನೂ ಓದಿ:ಮೌನಕ್ಕೆ ಜಾರಿತು ಅಕ್ಷರಗಳಿಗೂ ಭಾವ ತುಂಬುತ್ತಿದ್ದ ದನಿ.. ಅಪರ್ಣಾ ಅವರ 7 ಅಪೂರ್ವ ದಾಖಲೆಗಳು.. ಇಲ್ಲಿವೆ

ಅವರ ಕನ್ನಡವನ್ನು ಕೇಳೋಕೆ ನಮ್ಮ ಕಿವಿಗಳು ತುಂಬಾ ಪುಣ್ಯ ಮಾಡಿದ್ವು. ತುಂಬಾ ಚೆನ್ನಾಗಿ ಕನ್ನಡವನ್ನು ಮಾತನಾಡೋರು. ಅವರ ಕನ್ನಡ ಕೇಳೋಕೆ ನನಗೆ ತುಂಬಾ ಖುಷಿ ಆಗುತ್ತಿತ್ತು. ಸ್ವೀಟ್ ವಾಯ್ಸ್​ ಅವರದ್ದಾಗಿತ್ತು. ಮತನಾಡುವ ಶೈಲಿ ಕೂಡ ಚೆನ್ನಾಗಿ ಇರುತ್ತಿತ್ತು ಎಂದು ಹಿರಿಯ ನಟಿ ಗಿರಿಜಾ ಲೋಕೇಶ್ ನೆನಪಿಸಿಕೊಂಡಿದ್ದಾರೆ.

ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ.. ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ.

ಇದನ್ನೂ ಓದಿ:ಗಂಭೀರ್ ಕೋಚ್ ಆದ ಬೆನ್ನಲ್ಲೇ ಟೆನ್ಷನ್ ಟೆನ್ಷನ್.. ಆತಂಕ ಹುಟ್ಟಿಸಿದ ಆ ಮೂರು ಘಟನೆಗಳು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಿಂಚಿ ಮರೆಯಾದ ಅಪರ್ಣಾ.. ಕಂಬನಿ ಮಿಡಿದ ಗಣ್ಯರು.. ಅಪರೂಪದ ನಿರೂಪಕಿ ಬಗ್ಗೆ ಏನಂದ್ರು..?

https://newsfirstlive.com/wp-content/uploads/2024/07/APARNA-4.jpg

Load More