newsfirstkannada.com

ಬೆಳ್ಳಂಬೆಳಗ್ಗೆ ನದಿಗೆ ಬಿದ್ದ ಏಂಜೆಲ್​​ ಮತ್ತು ಗಣಪತಿ ಡಿಲಕ್ಸ್​ ಬಸ್.. 65 ಮಂದಿ ನಾಪತ್ತೆ!

Share :

Published July 12, 2024 at 10:47am

Update July 12, 2024 at 10:48am

    ಭೂಕುಸಿತದಿಂದ ನದಿಗೆ ಬಿದ್ದ ಎರಡು ಬಸ್​ಗಳು

    ಒಂದು ಬಸ್​ನಲ್ಲಿ 24 ಮತ್ತೊಂದು ಬಸ್​ನಲ್ಲಿ 41 ಜನರಿದ್ದರು

    ಬಸ್​ ನದಿಗೆ ಬೀಳುತ್ತಿದ್ದಂತೆಯೇ ಹಾರಿ ಪ್ರಾಣ ಉಳಿಸಿಕೊಂಡ ಮೂವರು

ಭೂ ಕುಸಿತದಿಂದ ಎರಡು ಬಸ್​ಗಳು ನದಿಯಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ. ಬಸ್​ನಲ್ಲಿದ್ದ ಸುಮಾರು 65 ಜನರು ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ.

ನೇಪಾಳದ ಚಿತ್ವಾನ್​ ಜಿಲ್ಲೆಯ ನಾರಾಯಣ್​​-ಮುಗ್ಲಿಂಗ್​​ ರಸ್ತೆಯ ಸಿಮಲ್ವಾಲ್​ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ತ್ರಿಶೂಲಿ ನದಿಯಲ್ಲಿ ಎರಡು ಬಸ್​ಗಳು ಕೊಚ್ಚಿ ಹೋಗಿವೆ. ಪರಿಣಾಮ ಬಸ್​ನಲ್ಲಿದ್ದ ಸುಮಾರು 65 ಮಂದಿ ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ತಗ್ಗಿದ ಮಳೆ.. ಇಳಿಕೆ ಕಂಡ ಒಳ ಹರಿವು! ಇಂದು KRS ಡ್ಯಾಂನ ನೀರಿನ ಮಟ್ಟ ಎಷ್ಟಿದೆ?

ಪ್ರಯಾಣಿಕರನ್ನು ಕಠ್ಮಂಡುವಿಗೆ ಕರೆದೊಯ್ಯುತ್ತಿದ್ದ ಏಂಜೆಲ್​​ ಮತ್ತು ಗಣಪತಿ ಡಿಲಕ್ಸ್​ ಬಸ್​​ ಮುಂಜಾನೆ ಭೂಕುಸಿತದಿಂದ ನದಿ ನೀರಿನಲ್ಲಿ ಕೊಚ್ಚಿ ಹೋಗಿದೆ. ಬೆಳಗ್ಗೆ 3:30ರ ಸುಮಾರಿಗೆ ಈ ಘಟನೆ ನಡೆದಿದೆ. ಒಂದು ಬಸ್​ನಲ್ಲಿ 24 ಜನರು ಮತ್ತೊಂದು ಬಸ್​ನಲ್ಲಿ 41 ಜನರು ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಇಂದು ವಿಶ್ವ ಕಬಾಬ್​ ದಿನ! ತಿನ್ನೋ ಮುಂಚೆ ಇತಿಹಾಸ ಮತ್ತು ವಿಶೇಷತೆ ತಿಳಿದುಕೊಳ್ಳಿ.. ಪ್ಲೀಸ್​​

ಗಣಪತಿ ಬಸ್​ನಲ್ಲಿದ್ದ ಮೂವರು ಪ್ರಯಾಣಿಕರು ಬಸ್​​ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಸದ್ಯ 65 ಜನರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಳ್ಳಂಬೆಳಗ್ಗೆ ನದಿಗೆ ಬಿದ್ದ ಏಂಜೆಲ್​​ ಮತ್ತು ಗಣಪತಿ ಡಿಲಕ್ಸ್​ ಬಸ್.. 65 ಮಂದಿ ನಾಪತ್ತೆ!

https://newsfirstlive.com/wp-content/uploads/2024/07/Nepal.jpg

Load More