newsfirstkannada.com

ಅಪರ್ಣಾ ಬಲಿ ಪಡೆದ ಶ್ವಾಸಕೋಶ ಕ್ಯಾನ್ಸರ್​.. ಶೇ.50 ರಷ್ಟು ಧೂಮಪಾನ ಮಾಡದವ್ರಿಗೆ ಕಾಡ್ತಿದೆ ಈ ಮಾರಕ ಕಾಯಿಲೆ..!

Share :

Published July 12, 2024 at 1:11pm

Update July 12, 2024 at 1:12pm

    17 ಲಕ್ಷ ಸಾವುಗಳಿಗೆ ಶ್ವಾಸಕೋಶ ಕ್ಯಾನ್ಸರ್​​​ ಕಾರಣವಾಗಿವೆ

    ಭಾರತದಲ್ಲಿ ವರ್ಷಕ್ಕೆ 72,510 ಪ್ರಕರಣಗಳು ಬೆಳಕಿಗೆ ಬಂದಿವೆ

    ಧೂಮಪಾನ ಮಾಡದಿದ್ರೂ ಶ್ವಾಸಕೋಶದ ಕ್ಯಾನ್ಸರ್​ ಹೇಗೆ ಬರುತ್ತೆ?

ಕ್ಯಾನ್ಯರ್​​ ಮಾರಕ ಕಾಯಿಲೆಗಳಲ್ಲಿ ಒಂದು. ಅದೆಷ್ಟೋ ಜನರು ಈ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಪ್ರಾರಂಭದ ಹಂತದಲ್ಲೇ ಕಾಯಿಲೆ ಬಗ್ಗೆ ತಿಳಿದು ಚಿಕಿತ್ಸೆ ಪಡೆದು ಹುಷಾರಾದವರು ಇದ್ದಾರೆ. ಆದರೆ ಸರಿಯಾದ ಚಿಕಿತ್ಸೆ ಸಿಕ್ಕರೆ ಎಂಥವರು ಕೂಡ ಈ ಕಾಯಿಲೆಯಿಂದ ಹೊರಬರಬಹುದಾಗಿದೆ.

ಕ್ಯಾನ್ಸರ್​ಗಳಲ್ಲಿ ನಾನಾ ವಿಧಗಳಿವೆ. ಅದರಲ್ಲೊಂದು ಶ್ವಾಸಕೋಶದ ಕ್ಯಾನ್ಸರ್​​. ಅಚ್ಚರಿ ಸಂಗತಿ ಎಂದರೆ ಧೂಮಪಾನ ಮಾಡಿದರೆ ಕ್ಯಾನ್ಸರ್​​ ಬರುತ್ತದೆ ಎಂಬುದು ಬಹುತೇಕರಿಗೆ ತಿಳಿದಿದೆ. ಆದರೀಗ ವೈದ್ಯಲೋಕ ಶ್ವಾಸಕೋಶದ ಕ್ಯಾನ್ಸರ್​ನಲ್ಲಿ ತುತ್ತಾತ ಶೇ.50 ರಷ್ಟು ಮಂದಿ ಧೂಮಪಾನ ಮಾಡದವರು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ನೆನಪು ನನ್ನ ಕೊನೆಯ ಉಸಿರಿನವರೆಗೂ ಶಾಶ್ವತ.. ಅಕ್ಕ ಅಪರ್ಣಾರನ್ನು ಕಳೆದುಕೊಂಡು ಶ್ವೇತಾ ಚೆಂಗಪ್ಪ ಭಾವುಕ

ಮುಂಬೈ ಟಾಟಾ ಮೆಮೋರಿಯಲ್​ ಸೆಂಟರ್​​ನ ವೈದ್ಯರ ತಂಡ ಪ್ರಕಟಿಸಿದಂತೆ, ಲಂಗ್​ ಕ್ಯಾನ್ಸರ್​ 3ನೇ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್​​ ಆಗಿ ಪತ್ತೆಯಾಗಿದೆ. 2020ರಲ್ಲಿ ಸುಮಾರು 18.5 ಲಕ್ಷ ಹೊಸ ಪ್ರಕರಣಗಳು (7.8%) ಪತ್ತೆಯಾಗಿವೆ. ಇದರಿಂದಾಗಿ 16.6 ಲಕ್ಷ ಅಥವಾ 10.9% ಸಾವುಗಳಿಗೆ ಕಾರಣವಾಗುತ್ತದೆ. ಇನ್ನು ಜಾಗತಿಕ ಅಂಕಿ ಅಂಶಗಳಿಗೆ ಅನುಗುಣವಾಗಿ 22 ಲಕ್ಷ ಪ್ರಕರಣಗಳು ಬೆಳಕಿಗೆ ಬಂದಿವೆ (11.6%). 17 ಲಕ್ಷ ಸಾವುಗಳಿಗೆ ಶ್ವಾಸಕೋಶ ಕ್ಯಾನ್ಸರ್​​​ ಕಾರಣವಾಗಿವೆ. ಭಾರತದಲ್ಲಿ ವರ್ಷಕ್ಕೆ 72,510 ಪ್ರಕರಣಗಳು (5.8%) ಮತ್ತು 66,279 ಸಾವುಗಳು (7.8%) ಸಂಭವಿಸಿವೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ನದಿಗೆ ಬಿದ್ದ ಏಂಜೆಲ್​​ ಮತ್ತು ಗಣಪತಿ ಡಿಲಕ್ಸ್​ ಬಸ್.. 65 ಮಂದಿ ನಾಪತ್ತೆ!

ಟಾಟಾ ಮೆಡಿಕಲ್​ ಸೆಂಟರ್​ನ ವೈದ್ಯಕೀಯ ಆಂಕೊಲಾಜಿ ವಿಭಾಗದ ಡಾ ಕುಮಾರ್​ ಪ್ರಭಾಶ್​​ ಹೇಳಿದಂತೆ ‘‘ಶ್ವಾಸಕೋಶದ ಕ್ಯಾನ್ಸರ್​ಗೆ ಒಳಗಾದ ಶೇ.50 ರಷ್ಟು ಮಂದಿ ಧೂಮಪಾನಿಗಳಲ್ಲ’’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಿಂಚಿ ಮರೆಯಾದ ಅಪರ್ಣಾ.. ಕಂಬನಿ ಮಿಡಿದ ಗಣ್ಯರು.. ಅಪರೂಪದ ನಿರೂಪಕಿ ಬಗ್ಗೆ ಏನಂದ್ರು..?

ವಾಯುಮಾಲಿನ್ಯವು ಶ್ವಾಸಕೋಶ ಕ್ಯಾನ್ಸರ್​ಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ. ಧೂಮಪಾನ ಮಾಡದಿರುವವರು ಇದಕ್ಕೆ ತುತ್ತಾಗುತ್ತಾರೆ. ಕಲ್ನಾರಿನ, ಕ್ರೋಮಿಯಂ, ಕ್ಯಾಡಿಯಂ, ಆರ್ಸೆನಿಕ್​ ಮತ್ತು ಕಲ್ಲಿದ್ದಲು, ಮನೆಯ ಹೊಗೆ ಇವೆಲ್ಲವು ಶ್ವಾಸಕೋಶ ಕ್ಯಾನರ್​ಗೆ ಕಾರಣವಾಗಿವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಶ್ವಾಸಕೋಶ ಕ್ಯಾನ್ಸರ್​​​​ ಪ್ರಮಾಣ ಕಡಿಮೆಯಾಗುತ್ತಿದ್ದು, ಭಾರತದಲ್ಲಿ ಇದರ ಪ್ರಮಾಣ ಏರಿಕೆಯಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪರ್ಣಾ ಬಲಿ ಪಡೆದ ಶ್ವಾಸಕೋಶ ಕ್ಯಾನ್ಸರ್​.. ಶೇ.50 ರಷ್ಟು ಧೂಮಪಾನ ಮಾಡದವ್ರಿಗೆ ಕಾಡ್ತಿದೆ ಈ ಮಾರಕ ಕಾಯಿಲೆ..!

https://newsfirstlive.com/wp-content/uploads/2024/07/Aparna-6.jpg

Load More