newsfirstkannada.com

ಟೀಮ್ ಇಂಡಿಯಾ ಪಾಕ್ ಪ್ರವಾಸ ಮಾಡುತ್ತಾ.. ಇಲ್ಲ, ಚಾಂಪಿಯನ್ಸ್ ಟ್ರೋಫಿಯಿಂದಲೇ ಹಿಂದೆ ಸರಿಯುತ್ತಾ?

Share :

Published July 13, 2024 at 11:12am

    ಟೀಮ್ ಇಂಡಿಯಾ ಹಿಂದೆ ಸರಿದರೆ ಯಾವ ತಂಡಕ್ಕೆ ಲಕ್ ಒಲಿಯುತ್ತೆ?

    ರೋಹಿತ್ ಪಡೆ ಪಾಕ್​ಗೆ ಹೋಗಬೇಕಾದ್ರೆ ಇವರ ಅನುಮತಿ ಬೇಕೇಬೇಕು

    ಬಿಸಿಸಿಐ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳಿಸದಿರಲು ಮುಖ್ಯ ಕಾರಣ?

ಐಸಿಸಿ ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಇದೀಗ ಕ್ರಿಕೆಟ್ ಅಭಿಮಾನಿಗಳ ಚಿತ್ತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮೇಲೆ ನೆಟ್ಟಿದೆ. ಪಾಕ್​ನಲ್ಲಿ ನಡೆಯಲಿರುವ ಐಸಿಸಿ ಟೂರ್ನಿಗೆ ಟೀಮ್ ಇಂಡಿಯಾ ತೆರಳುತ್ತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ವಿಚಾರವಾಗಿ ಪಿಸಿಬಿ ಹಾಗೂ ಬಿಸಿಸಿಐ ನಡುವೆ ತಿಕ್ಕಾಟ ಶುರುವಾಗಿದ್ದು, ಅಂತಿಮವಾಗಿ ಏನ್ ಆಗುತ್ತೆ ಅನ್ನೋದು ಭಾರೀ ಕುತೂಹಲ ಹುಟ್ಟಿಹಾಕಿದೆ.

ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ ED ಕಸ್ಟಡಿಗೆ.. 13 ಮಂದಿ ಅರೆಸ್ಟ್​, ಎಲ್ಲಿದ್ದಾರೆ ಇನ್ನೂ 8 ಆರೋಪಿಗಳು..?

ಮಾರ್ಚ್ 3, 2009.. ವಿಶ್ವ ಕ್ರಿಕೆಟ್ ಪಾಲಿಗೆ ಕರಾಳ ದಿನ. ಲಾಹೋರ್​ನ 2ನೇ ಟೆಸ್ಟ್​ನ 3ನೇ ದಿನ ಸ್ಟೇಡಿಯಂನತ್ತ ಲಂಕಾ ಆಟಗಾರರ ಬಸ್ ತೆರಳಿತ್ತು. ಗೆಲುವಿನ ಕನವರಿಕೆಯಲ್ಲೇ ಲಂಕಾ ಆಟಗಾರರು ನಗುನಗುತ್ತಾ ಕುಳಿತಿದ್ದರು. ನೋಡ ನೋಡುತ್ತಿದ್ದಂತೆ ಗುಂಡಿನ ಮಳೆ ಸುರಿದಿತ್ತು. 12 ಮಂದಿ ಬಂದೂಕು ದಾರಿಗಳು, ಬಸ್​ ಮೇಲೆ ಗುಂಡಿನ ದಾಳಿ ನಡೆಸಿದರು. ತೀವ್ರ ಗುಂಡಿನ ದಾಳಿಯಲ್ಲಿ ಲಂಕಾ ಆಟಗಾರರು ಬದುಕುಳಿದಿದ್ದೇ ಹೆಚ್ಚು.

ಇದನ್ನೂ ಓದಿ: ಜುಲೈ 15 ರಿಂದ ಮಳೆಗಾಲದ ಅಧಿವೇಶನ.. ಸರ್ಕಾರದ ವಿರುದ್ಧ ದೋಸ್ತಿಗಳಿಗೆ ಸಿಕ್ಕಿದೆ ಡಬಲ್​ ಅಸ್ತ್ರ!

ಇದೇ ರಣಭಯಾನಕ ಪಾಕ್​​ನಲ್ಲೇ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೊಂಡಿದೆ. ಲಾಹೋರ್​​​ನಲ್ಲೇ ಟೀಮ್ ಇಂಡಿಯಾದ ಶೆಡ್ಯೂಲ್ ಫಿಕ್ಸ್​ ಆಗಿದೆ. ಇಂಥ ಉಗ್ರತಾಣಕ್ಕೆ ಟೀಮ್ ಇಂಡಿಯಾ ಪ್ರಯಾಣಿಸಬೇಕಾ..? ಬೇಡ್ವಾ ಎಂಬ ಚರ್ಚೆಗಳಿಗೆ ನಾಂದಿಯಾಡಿದೆ. ಇದೇ ವಿಚಾರವಾಗಿ ಬಿಸಿಸಿಐ ಹಾಗೂ ಪಾಕ್ ಕ್ರಿಕೆಟ್​​ ಬೋರ್ಡ್​ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗಿ ಮಾರ್ಪಟ್ಟಿದೆ.

ಪಾಕ್​​​ಗೆ ತೆರಳಲ್ಲ ಟೀಮ್ ಇಂಡಿಯಾ ಆಟಗಾರರು..!

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ಆಯೋಜನೆ ಮಾಡಲಾಗ್ತಿದೆ. ಈಗಾಗಲೇ ವೇಳಾಪಟ್ಟಿಯನ್ನ ಪ್ರಕಟಿಸಿದೆ. ಈ ಬೆನ್ನಲ್ಲೇ ಬಿಸಿಸಿಐ ಹಾಗೂ ಪಿಸಿಬಿ ನಡುವಿನ ವಾಗ್ವಾದ ತಾರಕ್ಕೇರಿದೆ. ಆಟಗಾರರನ್ನು ಪಾಕ್​​​ ಕಳುಹಿಸದಿರಲು ಬಿಸಿಸಿಐ ಪಟ್ಟು ಹಿಡಿದಿದೆ. ಇದಕ್ಕೆ ಬಿಸಿಸಿಐ, ಸೆಕ್ಯೂರಿಟಿ ಸೇರಿದಂತೆ ನಾನಾ ಕಾರಣಗಳನ್ನೇ ಮುಂದಿಟ್ಟಿದೆ. ಬಿಸಿಸಿಐನ ಈ ನಿರ್ಧಾರಕ್ಕೆ ಪಾಕ್​ ಕೆಂಡಕಾರಿದೆ.

ಇದನ್ನೂ ಓದಿ: ಅನಂತ್ ಅಂಬಾನಿ-ರಾಧಿಕಾ ವಿವಾಹ ಸಂಭ್ರಮ.. ಮದುವೆಯಲ್ಲಿ ಗಣ್ಯರು ಭಾಗಿ.. ಯಶ್ ಸೇರಿ ಯಾರೆಲ್ಲ ಇದ್ದಾರೆ..?

ಅಷ್ಟೇ ಅಲ್ಲ, ಭಾರತದ ಟೆನಿಸ್, ಬ್ಯಾಡ್ಮಿಂಟನ್, ಕಬ್ಬಡಿ ಸೇರಿದಂತೆ ಇತರೆ ಅಥ್ಲೆಟಿಕ್​​​ಗಳು ಪಾಕ್​ ಪ್ರವಾಸ ಮಾಡಿದ್ದಾರೆ. ಕ್ರಿಕೆಟಿಗರು ಬಂದ್ರೆ, ಏನಾಗುತ್ತೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ರಾಜೀವ್ ಶುಕ್ಲಾ, ಕೇಂದ್ರ ಸರ್ಕಾರದ ಒಪ್ಪಿಗೆಯೇ ಅಂತಿಮ ಎಂದಿದ್ದಾರೆ. ಆ ಮೂಲಕ ಪಾಕ್​ ಆಸೆಗೆ ಪರೋಕ್ಷ ತಣ್ಣೀರು ಎರಚಿದ್ದಾರೆ. ಆದ್ರೆ, ಇದಕ್ಕೆ ಕೇಂದ್ರದ ಒಪ್ಪಿಗೆ ನಿಜಕ್ಕೂ ಡೌಟೇ ಆಗಿದೆ.

ಪಾಕ್​ಗೆ ಯಾಕೆ ಟೀಮ್ ಇಂಡಿಯಾ ತೆರಳಲ್ಲ..?

ಬಿಸಿಸಿಐ ಅಧಿಕಾರಿಗಳಿಗೆ ಟೀಮ್ ಇಂಡಿಯಾ ಆಟಗಾರರು ಪಾಕ್, ಪ್ರವಾಸಕ್ಕೆ ಕಳುಹಿಸಲು ಇಷ್ಟ ಇಲ್ಲ. ಮತ್ತೊಂದೆಡೆ ಪಾಕ್​​ ಗಡಿಭಾಗದಲ್ಲಿನ ಭಯೋತ್ಪಾದನೆ ನಿಲ್ಲಿಸುವವರೆಗೂ 2 ರಾಷ್ಟ್ರಗಳ ಕ್ರಿಕೆಟ್‌ ಸರಣಿ ಸಾಧ್ಯವಿಲ್ಲ ಎಂಬ ಸಂದೇಶ ಈ ಹಿಂದೆಯೇ ಕೇಂದ್ರ ಸರ್ಕಾರ ಸೂಚಿಸಿದೆ. ಹೀಗಾಗಿ ಕೇಂದ್ರ ಸರ್ಕಾರದ ಒಪ್ಪಿಗೆ ಇಲ್ಲದೆ ಟೀಮ್ ಇಂಡಿಯಾ ಪಾಕ್ ಪ್ರವಾಸಕ್ಕೆ ತೆರಳುವುದು ಅಸಾಧ್ಯವೇ ಆಗಿದೆ.

1993- ಮುಂಬೈ ಸೀರಿಯಲ್ ಬ್ಲಾಸ್ಟ್

1993ರಲ್ಲಿ ಮುಂಬೈ ಸೀರಿಯಲ್ ಬ್ಲಾಸ್ಟ್​ ನಡೆದಿತ್ತು. ಆ ನಂತರ 1997ರ ಪಾಕ್​ನಲ್ಲಿ ಏಕದಿನ ಸರಣಿಯನ್ನಾಡಿದ ಭಾರತ, 1999ರ ವಿಶ್ವಕಪ್​ ಸೆಮಿಫೈನಲ್​ನ ಪಂದ್ಯವನ್ನು ಬೆಂಗಳೂರಿನಲ್ಲಿ ಆಡಿತ್ತು. 2001ರ ಪಾರ್ಲಿಮೆಂಟ್ ಅಟ್ಯಾಕ್ ಬಳಿಕವೂ 2004ರಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿಗಾಗಿ ಪಾಕ್ ಪ್ರವಾಸ ಕೈಗೊಂಡಿದ್ದ ಭಾರತ, 2006 ಮುಂಬೈ ಟ್ರೈನ್ ಅಟ್ಯಾಕ್​​ನ ಬಳಿಕವೂ 2007ರಲ್ಲಿ ಪಾಕ್, ಭಾರತ ಪ್ರವಾಸ ಕೈಗೊಂಡಿತ್ತು. 2008ರ ಮುಂಬೈ ದಾಳಿ ಬಳಿಕ ಸಂಪೂರ್ಣ ದ್ವಿಪಕ್ಷೀಯ ಪ್ರವಾಸಕ್ಕೆ ಬ್ರೇಕ್​ ಹಾಕಿತ್ತು. ಈ ಬಳಿಕ ಐಸಿಸಿ ಟೂರ್ನಿಗಳಲ್ಲಷ್ಟೇ ಇಂಡೋ- ಪಾಕ್ ಮುಖಾಮುಖಿಯಾಗ್ತಿತ್ತು. ಐಸಿಸಿ ಟೂರ್ನಿ ಪಾಕ್​ನಲ್ಲೇ ಆಯೋಜನೆಗೊಂಡಿದ್ದು, ಪಾಕ್​ ತೆರಳುವಿಕೆ ಅನುಮಾನವಾಗಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ MUDA ಜತೆ ವಾಲ್ಮೀಕಿ ಹಗರಣದ ಸಂಕಷ್ಟ.. ಪ್ರಕರಣದ ಅಸಲಿ ರಹಸ್ಯಗಳೇನು?

ಹೈಬ್ರಿಡ್ ಮಾದರಿ ನಿರಾಕರಿಸುತ್ತಾ ಪಾಕ್ ಕ್ರಿಕೆಟ್ ಬೋರ್ಡ್..?

2023ರ ಏಷ್ಯಾಕಪ್​​​ ಪಾಕ್​ನಲ್ಲೇ ಆಯೋಜನೆಗೊಂಡಿತ್ತು. ಆದ್ರೆ, ಇದಕ್ಕೆ ನೋ ಎಂದಿದ್ದ ಬಿಸಿಸಿಐ, ಹೈಬ್ರಿಡ್ ಮಾದರಿ ನಡೆಸಲು ಒತ್ತಾಯಿಸಿತ್ತು. ಈ ಕಾರಣಕ್ಕಾಗಿಯೇ ಪಾಕ್, ಭಾರತದ ಪಂದ್ಯಗಳನ್ನಿ ಶ್ರೀಲಂಕಾದಲ್ಲಿ ಆಯೋಜಿಸಿತ್ತು. ಈಗ ಇದೇ ಮಾದರಿಗೆ ಬಿಸಿಸಿಐ ಡಿಮ್ಯಾಂಡ್ ಮಾಡ್ತಿದೆ. ಆದ್ರೆ, ಟೀಮ್ ಇಂಡಿಯಾ ಪ್ರವಾಸವನ್ನು ಸಾಧ್ಯವಾಗಿಸಲು ಶತ ಪ್ರಯತ್ನ ನಡೆಸ್ತಿರುವ ಪಾಕ್​, ಭಾರತ ಸೆಮಿಫೈನಲ್ ಅಥವಾ ಫೈನಲ್ ತಲುಪಿದ್ರೆ, ಲಾಹೋರ್​ನಲ್ಲೇ ಆಯೋಜಿಸಲು ಮುಂದಾಗಿದೆ. ಆದ್ರೆ, ಇದಕ್ಕೆ ಬಿಸಿಸಿಐ ಒಪ್ಪಿಗೆ ನೀಡುವುದು ಅನುಮಾನವಾಗಿದ್ದು, ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯಲಿದೆ.

ಭಾರತ ಹಿಂದೆ ಸರಿದ್ರೆ ಯಾರಿಗೆ ಸಿಗುತ್ತೆ ಚಾನ್ಸ್​..?

ಹೈಬ್ರಿಡ್ ಮಾದರಿ ಟೂರ್ನಿ ಆಯೋಜಿಸಲು ಪಾಕ್ ನಿರಾಕರಿಸುತ್ತಿದೆ. ಅಕಸ್ಮಾತ್ ಇದೇ ನಡೆದ್ರೆ, ಚಾಂಪಿಯನ್ಸ್ ಟ್ರೋಫಿಯಿಂದ ಟೀಮ್ ಇಂಡಿಯಾ ಹಿಂದೆ ಸರಿಯಲಿದೆ. ಈ ವೇಳೆ ಶ್ರೀಲಂಕಾಗೆ ಚಾಂಪಿಯನ್ಸ್​ ಟ್ರೋಫಿಯಲ್ಲಿ ಆಡುವ ಚಾನ್ಸ್ ಸಿಗುತ್ತೆ. 2023ರ ಏಕದಿನ ವಿಶ್ವಕಪ್​ನ ಪಾಯಿಂಟ್​ ಟೇಬಲ್​ನಲ್ಲಿ ಮೊದಲ 8 ತಂಡಗಳಿಗೆ ಚಾಂಪಿಯನ್ಸ್ ಟ್ರೋಫಿ ಆಡೋ ಅವಕಾಶ ಇದೆ. ಹೀಗಾಗಿ 9ನೇ ಸ್ಥಾನದಲ್ಲಿದ್ದ ಶ್ರೀಲಂಕಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಅರ್ಹತೆ ಗಿಟ್ಟಿಸಲಿದೆ. ಚಾಂಪಿಯನ್ಸ್ ಟ್ರೋಫಿ ಬಿಸಿಸಿಐ ಆ್ಯಂಡ್ ಪಾಕ್ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದ್ದು, ಈ ವಿವಾದದಲ್ಲಿ ಯಾರ ಕೈ ಮೇಲಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್ ಇಂಡಿಯಾ ಪಾಕ್ ಪ್ರವಾಸ ಮಾಡುತ್ತಾ.. ಇಲ್ಲ, ಚಾಂಪಿಯನ್ಸ್ ಟ್ರೋಫಿಯಿಂದಲೇ ಹಿಂದೆ ಸರಿಯುತ್ತಾ?

https://newsfirstlive.com/wp-content/uploads/2024/07/IND_VS_PAK.jpg

Load More