newsfirstkannada.com

ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸಿಹಿ ಸುದ್ದಿ! ಶೀಘ್ರದಲ್ಲೇ ಬರಲಿದೆ ಈ ವೈಶಿಷ್ಟ್ಯ.. ಏನದು?

Share :

Published July 13, 2024 at 4:32pm

Update July 13, 2024 at 4:46pm

    ವಾಟ್ಸ್​​ಆ್ಯಪ್​ ಬಳಸುತ್ತಿದ್ದೀರಾ? ಹಾಗಿದ್ರೆ ಈ ಸ್ಟೋರಿ ಓದಿ

    ಮೆಟಾ ಒಡೆತನದ ವಾಟ್ಸ್​ಆ್ಯಪ್​ ಪರಿಚಯಿಸುತ್ತಿದೆ ಹೊಸ ವೈಶಿಷ್ಟ್ಯ

    ಇನ್ಮುಂದೆ ಭಾಷೆ ಬಾರದಿದ್ರೆ, ಓದಲು ಆಗದಿದ್ರೆ ಟೆನ್ಶನ್​ ಬೇಡ

ವಾಟ್ಸ್​ಆ್ಯಪ್​​ ಬಳಸುತ್ತಿದ್ದೀರಾ?. ಹಾಗಿದ್ರೆ ನಿಮಗೊಂದು ಖುಷಿಯ ಸಂಗತಿ ಇಲ್ಲಿದೆ. ಮೆಟಾ ಒಡೆತನದ ವಾಟ್ಸ್​ಆ್ಯಪ್​​ ಸದಾ ಒಂದಲ್ಲಾ ಒಂದು ಫೀಚರ್ಸ್​ ಪರಿಚಯಿಸುತ್ತಲೇ ಇರುತ್ತದೆ. ಅದರಂತೆಯೇ ಇದೀಗ ಬಳಕೆದಾರರಿಗೆ ಸಂತಸ ನೀಡುವ ಹೊಸ ಫೀಚರ್ಸನ್ನು ಶೀಘ್ರದಲ್ಲೇ ಪರಿಚಯಿಸಲಿದೆಯಂತೆ. ಹಾಗಿದ್ರೆ ಆ ನ್ಯೂ ಫೀಚರ್​ ಏನದು?. ಈ ಸ್ಟೋರಿ ಓದಿ.

ವಾಟ್ಸ್​ಆ್ಯಪ್​ ವಿವಿಧ ಭಾಷೆಗಳನ್ನು ಸುಲಭವಾಗಿ ಭಾಷಾಂತರಿಸುವ ಅತ್ಯಾಧುನಿಕ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಇಂಗ್ಲಿಷ್​​, ರಷ್ಯಾ, ಸ್ಪ್ಯಾನಿಷ್​, ಹಿಂದಿ, ಪೋರ್ಚುಗೀಸ್​ ಸೇರಿದಂತೆ ಅನೇಕ ಭಾಷೆಯನ್ನು ಟ್ರಾನ್ಸ್​ಲೇಟ್​ ಮಾಡುವ ವೈಶಿಷ್ಟ್ಯವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಅದಕ್ಕಾಗಿ ವಾಟ್ಸ್​ಆ್ಯಪ್​ ಬಳಕೆದಾರರು ಭಾಷಾ ಪ್ಯಾಕ್​​ ಅನ್ನು ಡೌನ್​ಲೋಡ್​ ಮಾಡಬೇಕಿದೆ.

ಇದನ್ನೂ ಓದಿ: ನಂಬಿದ್ರೆ ನಂಬಿ.. ಸತ್ತವರನ್ನು ಬದುಕಿಸುತ್ತಂತೆ ಈ ಕಂಪನಿ!

ಪ್ರಾರಂಭದಲ್ಲಿ ಭಾರತೀಯ ಬಳಕೆದಾರರಿಗೆ ಇಂಗ್ಲಿಷ್​, ಹಿಂದಿ ಭಾಷೆಗಳನ್ನು ಭಾಷಾಂತರಿಸುವ ಆಯ್ಕೆ ಸಿಗಲಿದೆ. ಆದರೆ ಭವಿಷ್ಯದಲ್ಲಿ ಸ್ಥಳೀಯ ಭಾಷೆಗಳನ್ನು ವ್ಯಾಟ್ಸ್​​ಆ್ಯಪ್​ ಅನ್ನು ಸೇರಲಿದೆ ಎನ್ನಲಾಗುತ್ತಿದೆ. ಅಪ್ಲಿಕೇಶನ್​ ಬಳಸುತ್ತಿರುವಾಗಲೇ ಸಂದೇಶಗಳನ್ನು ಭಾಷಾಂತರಿಸಲು ಇದು ಅನುವು ಮಾಡಿಕೊಡುತ್ತದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಇದ್ದಕ್ಕಿದ್ದಂತೆಯೇ ಕುಸಿದ 2 ಅಂತಸ್ತಿನ ಶಾಲೆ.. 22 ಸಾವು, 132 ವಿದ್ಯಾರ್ಥಿಗಳ ರಕ್ಷಣೆ

ಪ್ರಸ್ತುತ ನೂತನ ಫೀಚರ್​ ಆ್ಯಂಡ್ರಾಯ್ಡ್​​ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದೆ. ನವೀಕರಣ ಆವೃತ್ತಿ 2.24.15.8ನಲ್ಲಿ ಮಾತ್ರ ಕಂಡುಬರುತ್ತದೆ. ಸದ್ಯದಲ್ಲೇ ಹೊಸ ಫೀಚರ್​ ಎಲ್ಲರಿಗೂ ಸಿಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸಿಹಿ ಸುದ್ದಿ! ಶೀಘ್ರದಲ್ಲೇ ಬರಲಿದೆ ಈ ವೈಶಿಷ್ಟ್ಯ.. ಏನದು?

https://newsfirstlive.com/wp-content/uploads/2024/04/whatsapp-3.jpg

Load More