newsfirstkannada.com

ಪಾಕ್ ಸೋಲಿಸಿ WCL ಕಪ್​​ಗೆ ಮುತ್ತಿಟ್ಟ ಭಾರತ.. ಯುವಿ ನೇತೃತ್ವದ ಇಂಡಿಯಾ ಚಾಂಪಿಯನ್ಸ್​ಗೆ ಭರ್ಜರಿ ಗೆಲುವು..!

Share :

Published July 14, 2024 at 8:18am

    ವರ್ಲ್ಡ್​ ಚಾಂಪಿಯನ್ಸ್ ಆಫ್ ಲೆಜೆಂಡ್ಸ್​-2024 ಫೈನಲ್

    ಫೈನಲ್ ಪಂದ್ಯದಲ್ಲಿ ಭಾರತಕ್ಕೆ 6 ವಿಕೆಟ್​ಗಳ ಭರ್ಜರಿ ಗೆಲುವು

    ಭಾರತ ಚಾಂಪಿಯನ್ಸ್​-ಪಾಕಿಸ್ತಾನ ಚಾಂಪಿಯನ್ಸ್ ನಡುವೆ ಫೈನಲ್

World Championship of Legends-2024 ಫೈನಲ್ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ಚಾಂಪಿಯನ್ಸ್​ ತಂಡವನ್ನು ಯುವರಾಜ್ ಸಿಂಗ್ ನೇತೃತ್ವದ ಇಂಡಿಯಾ ಚಾಂಪಿಯನ್ಸ್ ಬಗ್ಗು ಬಡಿದು ಕಪ್​​ಗೆ ಮುತ್ತಿಟ್ಟಿದೆ.

ಫೈನಲ್​​ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಐದು ವಿಕೆಟ್​ಗಳ ಗೆಲುವು ದಾಖಲಿಸಿದೆ. ಟಾಸ್​ ಗೆದ್ದು ಯೂನಿಸ್​ ಖಾನ್ ಪಡೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಶೋಯೆಬ್ ಮಲಿಕ್ ಅವರ 41 ರನ್​ಗಳ ಕಾಣಿಕೆಯೊಂದಿಗೆ ಪಾಕಿಸ್ತಾನ ನಿಗಧಿತ 20 ಓವರ್​ನಲ್ಲಿ 6 ವಿಕೆಟ್​ ಕಳೆದುಕೊಂಡು 156 ರನ್​ಗಳಿಸಿತ್ತು.

ಇದನ್ನೂ ಓದಿ:ಚಿನ್ನ ಖರೀದಿಸಲು ಸುವರ್ಣಾವಕಾಶ ಬಂದರೂ ಅಚ್ಚರಿ ಇಲ್ಲ.. ಕೇಂದ್ರದಿಂದ ಮಹತ್ವದ ನಿರ್ಧಾರ ಸಾಧ್ಯತೆ

ಭಾರತದ ಪರ ಅನಿರೀತ್ ಸಿಂಗ್ ಮೂರು ವಿಕೆಟ್ ಪಡೆದು ಮಿಂಚಿದರು. ಅದೇ ರೀತಿ ವಿನಯ್ ಕುಮಾರ್, ನೇಗಿ, ಇರ್ಫಾನ್ ಪಠಾಣ್ ತಲಾ ಒಂದು ವಿಕೆಟ್ ಪಡೆದರು. 157 ರನ್​ಗಳ ಗುರಿ ಬೆನ್ನು ಹತ್ತಿದ್ದ ಟೀಂ ಇಂಡಿಯಾದಲ್ಲಿ ಅಂಬಟಿ ರಾಯುಡು ಸ್ಫೋಟಕ ಬ್ಯಾಟಿಂಗ್ ನಡೆಸಿದರು. 30 ಬಾಲ್​ನಲ್ಲಿ 50 ರನ್​ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಕೊನೆಯಲ್ಲಿ ಬಂದ ಯೂಸುಫ್ ಪಠಾಣ್ 16 ಬಾಲ್​ನಲ್ಲಿ 30 ರನ್​ಗಳಿಸಿದರು.

ಭಾರತದ ಪರ ಗುರುಕೀರತ್ ಸಿಂಗ್ 34, ರಾಬಿನ್ ಉತ್ತಪ್ಪ 10, ಯುವರಾಜ್ ಸಿಂಗ್ 15 (ಅಜೆಯ), ಇರ್ಫಾನ್ ಪಠಾಣ್ 5 (ಅಜಯ) ರನ್​ಗಳಿಸಿದರು. ಈ ಮೂಲಕ ಭಾರತ ಚಾಂಪಿಯನ್ಸ್ ತಂಡವು 19.1 ಓವರ್​ನಲ್ಲಿ ನಿಗಧಿತ ಗುರಿಯನ್ನು ಮುಟ್ಟುವಲ್ಲಿ ಯಶಸ್ವಿ ಆಯಿತು.

ಇದನ್ನೂ ಓದಿ:ಮುಂದಿನ ನಿಲ್ದಾಣ.. ಅಪರ್ಣಾ ಬಳಿಕ ಮೆಟ್ರೋದ ಹೊಸ ಮಾರ್ಗಗಳಿಗೆ ಧ್ವನಿ ಯಾರದ್ದು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಪಾಕ್ ಸೋಲಿಸಿ WCL ಕಪ್​​ಗೆ ಮುತ್ತಿಟ್ಟ ಭಾರತ.. ಯುವಿ ನೇತೃತ್ವದ ಇಂಡಿಯಾ ಚಾಂಪಿಯನ್ಸ್​ಗೆ ಭರ್ಜರಿ ಗೆಲುವು..!

https://newsfirstlive.com/wp-content/uploads/2024/07/YUVARAJ-SING-1.jpg

Load More