newsfirstkannada.com

ಧೋನಿ, ರೋಹಿತ್ ನೆನಪಿಸಿದ ಗಿಲ್ ನಡೆ.. ಸರಣಿ ಗೆದ್ದ ನಂತರ ಸಂಭ್ರಮಿಸಲು ನಾಯಕ ಕಪ್ ನೀಡಿದ್ದು ಯಾರ ಕೈಗೆ..?

Share :

Published July 15, 2024 at 10:22am

    ಜಿಂಬಾಬ್ವೆ ವಿರುದ್ಧ ಸರಣಿ ಗೆದ್ದ ಭಾರತ ತಂಡ

    ಕೈಕೊಟ್ಟ ಟಾಪ್ ಆರ್ಡರ್ಸ್​.. ಕೈಹಿಡಿದ ಸ್ಯಾಮ್ಸನ್​​..!

    4 ವಿಕೆಟ್​ ಪಡೆದು ಮುಖೇಶ್ ಕುಮಾರ್​​ ಶೈನಿಂಗ್

ಜಿಂಬಾಬ್ವೆ ನಾಡಲ್ಲಿ ಯಂಗ್ ಇಂಡಿಯಾ ಕಮಾಲ್ ಮಾಡಿದೆ. ಅನಾನುಭವಿ ತಂಡ ಮುನ್ನಡೆಸಿದ ಶುಭ್​ಮನ್ ಗಿಲ್​​​ ಸರಣಿ ಗೆಲ್ಲಿಸಿಕೊಟ್ಟು ಸೈ ಅನ್ನಿಸಿಕೊಂಡಿದ್ದಾರೆ. ಭಾರತದ ಅದ್ಭುತ​ ಆಟಕ್ಕೆ ಜಿಂಬಾಬ್ವೆ ಅಂತಿಮ ಟಿ20 ಪಂದ್ಯದಲ್ಲೂ ತಲೆಬಾಗ್ತು.

ಹರಾರೆ ಸ್ಪೋರ್ಟ್ಸ್ ಕ್ಲಬ್​​ ಮೈದಾನದಲ್ಲಿ ಟೀಮ್ ಇಂಡಿಯಾ​​ದ ಟಾಪ್​ ಆರ್ಡರ್ ಬ್ಯಾಟ್ಸ್​​ಮನ್​ಗಳು ಪೆವಿಲಿಯನ್ ಪರೇಡ್ ನಡೆಸ್ತಿದ್ರು. ಬ್ಯಾಟಿಂಗ್​ ಸುನಾಮಿ ಸೃಷ್ಟಿಸುವ ಯಂಗ್ ಬ್ಯಾಟರ್ಸ್​ ಜಿಂಬಾಬ್ವೆಯ ಎಫೆಕ್ಟಿವ್​​​​ ಸ್ಪೆಲ್​ ಮುಂದೆ ಸಂಪೂರ್ಣ ಮಂಡಿಯೂರಿದ್ರು.
ಅಂತಿಮ ಹಾಗೂ ಕೊನೆ ಟಿ20 ಪಂದ್ಯದಲ್ಲಿ ಮೊದಲು ಇನ್ನಿಂಗ್ಸ್ ಆರಂಭಿಸಿದ ಇಂಡಿಯನ್ ಬ್ಯಾಟರ್ಸ್​ ಫ್ಲಾಪ್ ಶೋನಿಂದ ಹೆಚ್ಚು ಸುದ್ದಿಯಾದ್ರು. ಟೂರ್ನಿಯುದ್ಧಕ್ಕೂ ರನ್​ ಕೊಳ್ಳೆ ಹೊಡೆದಿದ್ದ ಬಲಿಷ್ಠ ಅಗ್ರ ಕ್ರಮಾಂಕದ ಬ್ಯಾಟ್ಸ್​​ಮನ್​ಗಳು ನಿನ್ನೆ ಮಾತ್ರ ತಂಡವನ್ನ ನಡುನೀರಲ್ಲಿ ಕೈಬಿಟ್ರು.

ಇದನ್ನೂ ಓದಿ:ಅನಂತ್ ಅಂಬಾನಿ ಮದುವೆ ಕಾರ್ಯಕ್ರಮದಲ್ಲಿ ಇಬ್ಬರು ವ್ಯಕ್ತಿಗಳು ಅರೆಸ್ಟ್​.. ಕೆಲವರು ಹೀಗೂ ಇದ್ದಾರಾ..?

ಮೊದಲ ನಾಲ್ಕು ಪಂದ್ಯಗಳಲ್ಲಿ ಭಾರತಕ್ಕೆ ಕೈಹಿಡಿದಿದ್ದೇ ಟಾಪ್ ಆರ್ಡರ್ ಬ್ಯಾಟ್ಸ್​​ಮನ್​ಗಳು. ನಿನ್ನೆ ಮಾತ್ರ ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​​​​ಗಳು ಟಾಪ್​​ ಪರ್ಫಾಮೆನ್ಸ್​​ ನೀಡೋದನ್ನ ಮರೆತು ಬಿಟ್ರು. ಜೈಸ್ವಾಲ್​ 12, ಕ್ಯಾಪ್ಟನ್ ಶುಭ್​ಮನ್ ಗಿಲ್​​​ 13 ಹಾಗೂ ಡಿಸ್ಟ್ರಕ್ಟಿವ್​ ಅಭಿಷೇಕ್ ಶರ್ಮಾ ಆಟ ಜಸ್ಟ್​ 14 ರನ್​ಗೆ ಸ್ಟಾಪ್​ ಆಯ್ತು.

ಜಿಂಬಾಬ್ವೆ ಹರೋಹರ..!
40 ರನ್​ಗೆ 3 ವಿಕೆಟ್ ಕಳೆದುಕೊಂಡ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಾದಾಗ ಸಂಜು ಸ್ಯಾಮ್ಸನ್​​ ತಮ್ಮ​​ ಪವರ್​​ ತೋರಿಸಿದ್ರು. ಜಿಂಬಾಬ್ವೆ ಬೌಲರ್​ಗಳನ್ನ ಹೆಡೆಮುರಿ ಕಟ್ಟಿದ ಸ್ಯಾಮ್ಸನ್​ ಸ್ಫೋಟಕ ಅರ್ಧಶತಕ ಗಳಿಸಿ ಶೈನ್ ಆದರು. 4ನೇ ವಿಕೆಟ್​ಗೆ ಸ್ಯಾಮ್ಸನ್ ಹಾಗೂ ರಿಯಾಗ್ ಪರಾಗ್ ಕೂಡಿಕೊಂಡು ಬಿರುಸಿನ 65 ರನ್​ಗಳ ಜೊತೆಯಾಟವಾಡಿ ತಂಡವನ್ನ ಮೇಲಕ್ಕೆತ್ತಿದ್ರು. ಈ ಭಲೇ ಜೋಡಿಯನ್ನ ಮೌತ ಬೇರ್ಪಡಿಸಿದ್ರು. ಉತ್ತಮವಾಗಿ ಆಡ್ತಿದ್ದ ಪರಾಗ್​ 22 ರನ್ ಗಳಿಸಿದ್ರೆ, ವೆಲ್ ಸೆಟಲ್ಡ್​​ ಸ್ಯಾಮ್ಸನ್​​ ಇವರ ಹಿಂದೇನೆ ನಿರ್ಗಮಿಸಿದ್ರು. ನಂತರದ ಬಂದ ಸ್ಪಿನ್​ ಬೀಸ್ಟ್​ ಶಿವಂ ದುಬೆ 26 ಹಾಗೂ ರಿಂಕು ಸಿಂಗ್​​ 11 ರನ್ ಗಳಿಸಿ ಅಬ್ಬರಿಸಿದ್ರು. ಪರಿಣಾಮ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 167 ರನ್ ಕಲೆ ಹಾಕ್ತು.

ಇದನ್ನೂ ಓದಿ:ಸೊಸೆಯ ವಿದಾಯಿ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ಶ್ರೀಮಂತ ಮುಕೇಶ್ ಅಂಬಾನಿ.. ವಿಡಿಯೋ

ಮುಖೇಶ್ ಕುಮಾರ್​​​ ಬೆಂಕಿ ದಾಳಿಗೆ ಜಿಂಬಾಬ್ವೆ ತತ್ತರ
ಕಾಂಪಿಟೇಟಿವ್​ ಸ್ಕೋರ್ ಬೆನ್ನಟ್ಟಿದ ಜಿಂಬಾಬ್ವೆ ತಂಡ ಮತ್ತೆ ಬ್ಯಾಟಿಂಗ್​ ಫೇಲ್ಯೂರ್ ಕಾಣ್ತು. ಮುಖೇಶ್​​ ಕುಮಾರ್​​ ಬೆಂಕಿ ಎಸೆತಗಳಿಗೆ ಜಿಂಬಾಬ್ವೆ ಬ್ಯಾಟರ್ಸ್​ ಹೆಸರಿಲ್ಲದೇ ಪೆವಿಲಿಯನ್ ಸೇರಿಕೊಂಡ್ರು. ಡಿಯೋನ್ ಮೈಯರ್ಸ್​ 34 ರನ್ ಗಳಿಸಿದ್ದು ಬಿಟ್ರೆ ಯಾವೊಬ್ಬ ಬ್ಯಾಟರ್ ಕೂಡ ಕಮಾಲ್ ಮಾಡ್ಲಿಲ್ಲ. ಅಂತಿಮವಾಗಿ ಜಿಂಬಾಬ್ವೆ ತಂಡ 125 ರನ್​ಗಳಿಗೆ ಸರ್ವಪತನ ಕಾಣ್ತು. ಮುಖೇಶ್ ಕುಮಾರ್​​​ 4 ವಿಕೆಟ್ ಪಡೆದು ಮಿಂಚಿದ್ರು. ಭರ್ಜರಿ 42 ರನ್​ಗಳಿಂದ ಗೆದ್ದ ಭಾರತ ತಂಡ 4-1 ಸರಣಿ ಗೆದ್ದು ಬೀಗಿತು. ಕ್ಯಾಪ್ಟನ್ ಗಿಲ್ ಮೊದಲ ಟಾಸ್ಕ್​​ನಲ್ಲಿ ಮೆರಿಟ್​​​​​​ನಲ್ಲಿ ಪಾಸಾಗಿ ಸೈ ಅನ್ನಿಸಿಕೊಂಡ್ರು.

ಇದನ್ನೂ ಓದಿ:‘ತಪ್ಪಾಗಿದ್ದರೆ ಕ್ಷಮಿಸಿ ಬಿಡಿ..’ ಕೈಮುಗಿದ ನೀತಾ ಅಂಬಾನಿ.. ಮದುವೆಯಲ್ಲಿ ಆಗಿದ್ದೇನು..?

https://twitter.com/rythmdivine14/status/1812503280112599117

ಸರಣಿಯನ್ನು ಗೆದ್ದು ಕಪ್​ ಸ್ವೀಕರಿಸಿದ ನಂತರ ಗಿಲ್, ತಮ್ಮ ನಡೆಯಿಂದ ಸುದ್ದಿಯಾದರು. ಕಪ್ ಹಿಡಿದು ತಂಡದ ಬಳಿ ಬಂದ ಗಿಲ್, ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಅಭಿಷೇಕ್ ಶರ್ಮಾ, ರಿಯಾನ್ ಪರಾಗ್ ಹಾಗೂ ಖಲೀಲ್ ಅಹ್ಮದ್​​ಗೆ ಕಪ್​ ನೀಡಿ ಸಂಭ್ರಮಿಸಲು ನೀಡಿದರು. ಯಂಗ್​ಸ್ಟರ್​ಗಳು ಹೆಚ್ಚು ಸಂಭ್ರಮಿಸಲು, ಇನ್ನಷ್ಟು ಆಡುವ ಹುಮ್ಮಸ್ಸು ಬರಲಿ ಎಂದು ಧೋನಿ, ರೋಹಿತ್ ಈ ಕೆಲಸವನ್ನು ಮಾಡುತ್ತಿದ್ದರು. ಈ ಸಂಪ್ರದಾಯವನ್ನು ಗಿಲ್ ಕೂಡ ಮುಂದುವರಿಸಿದ್ದಾರೆ.

ಇದನ್ನೂ ಓದಿ:ಹೆಚ್ಚಿದ ಗೌರವ.. ಸ್ಥಳೀಯ ಆರ್ಥಿಕತೆಗೆ ಬಲ.. ಮುಖೇಶ್​ ಅಂಬಾನಿ ಪುತ್ರನ ಮದ್ವೆಯಿಂದ ಯಾರಿಗೆ, ಹೇಗೆ ಲಾಭ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಧೋನಿ, ರೋಹಿತ್ ನೆನಪಿಸಿದ ಗಿಲ್ ನಡೆ.. ಸರಣಿ ಗೆದ್ದ ನಂತರ ಸಂಭ್ರಮಿಸಲು ನಾಯಕ ಕಪ್ ನೀಡಿದ್ದು ಯಾರ ಕೈಗೆ..?

https://newsfirstlive.com/wp-content/uploads/2024/07/GILL-3.jpg

Load More