newsfirstkannada.com

ಧೋನಿ, ಸಚಿನ್ ಎಲ್ಲರೂ ಬಂದಿದ್ದರು.. ಅಂಬಾನಿ ಪುತ್ರನ ಮದುವೆಗೆ ಬಾರದೆ ಕೊಹ್ಲಿ ಹೋಗಿದ್ದೆಲ್ಲಿಗೆ..?

Share :

Published July 15, 2024 at 11:33am

Update July 15, 2024 at 12:15pm

    ಸಾಮಾನ್ಯರಲ್ಲಿ ಸಾಮಾನ್ಯನಾದ ಕಿಂಗ್ ವಿರಾಟ್​ ಕೊಹ್ಲಿ..!

    ಅದ್ಧೂರಿ ವಿವಾಹ ಬಿಟ್ಟು ದೇವರ ಧ್ಯಾನದಲ್ಲಿ ಕೊಹ್ಲಿ ಮಗ್ನ

    ನೀಮ್​ ಕರೋಲಿ ಬಾಬಾಗೂ ಇವ್ರಿಗೂ ಇರೋ ನಂಟೇನು?

ಇಡೀ ಭಾರತೀಯ ಕ್ರಿಕೆಟ್​ ಲೋಕವೇ ವಿಶ್ವದ ಅದ್ಧೂರಿ ವಿವಾಹ ಸಮಾರಂಭದಲ್ಲಿ ಬ್ಯುಸಿಯಾಗಿತ್ತು. ಸಚಿನ್​, ಧೋನಿಯಿಂದ ಹಿಡಿದು ಟೀಮ್​ ಇಂಡಿಯಾದ ಸೂಪರ್​ ಸ್ಟಾರ್​ಗಳೆಲ್ಲಾ ಈ ಕಲ್ಯಾಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಕಿಂಗ್​ ಕೊಹ್ಲಿ ಮಾತ್ರ ಇಲ್ಲಿ ಕಾಣಿಸಲಿಲ್ಲ. ಅದ್ಧೂರಿ ವಿವಾಹವನ್ನ ಬಿಟ್ಟು ಸಾಮಾನ್ಯರಲ್ಲಿ ಸಾಮಾನ್ಯನಾಗಿ ಕೀರ್ತನೆ ಕೇಳೋಕೆ ವಿರಾಟ್​ ಕೊಹ್ಲಿ ತೆರಳಿದ್ದರು.

ದೇವರ ಧ್ಯಾನದಲ್ಲಿ ಕೊಹ್ಲಿ ಮಗ್ನ..!
ಭಾರತೀಯ ಕ್ರಿಕೆಟ್​ ಕಂಡ ಸೂಪರ್​ ಸ್ಟಾರ್​​ಗಳೆಲ್ಲಾ ಅಂಬಾನಿ ಪುತ್ರನ ಅದ್ಧೂರಿ ವಿವಾಹದಲ್ಲಿ ಮಸ್ತಿ ಮಾಡಿದ್ರೆ, ವಿರಾಟ್​ ಕೊಹ್ಲಿ ದೇವರ ಧ್ಯಾನದಲ್ಲಿ ಮಗ್ನರಾಗಿದ್ರು. ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಲಂಡನ್​ನ ಯುನಿಯನ್​ ಚಾಪೆಲ್​ನಲ್ಲಿ ನಡೆದ ಕೀರ್ತನೆ ಕಾರ್ಯಕ್ರಮದಲ್ಲಿ ಕೊಹ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ:ಧೋನಿ, ರೋಹಿತ್ ನೆನಪಿಸಿದ ಗಿಲ್ ನಡೆ.. ಸರಣಿ ಗೆದ್ದ ನಂತರ ಸಂಭ್ರಮಿಸಲು ನಾಯಕ ಕಪ್ ನೀಡಿದ್ದು ಯಾರ ಕೈಗೆ..?

ಬಾರ್ಬಡೋಸ್​ನಲ್ಲಿ ವಿಶ್ವಕಪ್​ ಗೆದ್ದ ಬಳಿಕ ಬಂದು ವಿಜಯೋತ್ಸವ ಕಾರ್ಯಕ್ರಮದಲ್ಲಿ ವಿರಾಟ್​ ಕೊಹ್ಲಿ ಭಾಗಿಯಾಗಿದ್ರು. ಬಳಿಕ ಮರುದಿನವೇ ಲಂಡನ್​ಗೆ​ ಹಾರಿದ್ರು. ಪತ್ನಿ, ಮಕ್ಕಳೊಂದಿಗೆ ವಿರಾಟ್​ ವಿಶ್ರಾಂತಿ ದಿನ ಕಳೆಯುತ್ತಿದ್ದಾರೆ. ಇದ್ರ ನಡುವೆ ಕೃಷ್ಣದಾಸ್​ ನಡೆಸಿಕೊಡೋ ಕೀರ್ತನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕೃಷ್ಣನ ಕೀರ್ತನೆಗಳನ್ನ ಆಲಿಸಿ ಆಧ್ಯಾತ್ಮಿಕ ಲೋಕದಲ್ಲಿ ಮೈ ಮರೆತಿದ್ದಾರೆ.

ಕೃಷ್ಣದಾಸ್​ ಕೀರ್ತನೆ ಮಿಸ್​​ ಮಾಡಲ್ಲ
ಇದು ಮೊದಲ ಬಾರಿಯಲ್ಲ. ಈ ಹಿಂದೆ 2023ರಲ್ಲೂ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಒಟ್ಟಾಗಿ ಕೃಷ್ಣದಾಸ್​ ನಡೆಸಿಕೊಡೋ ಕೀರ್ತನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಲಂಡನ್​ನಲ್ಲಿ ನಡೆದ ಕಾರ್ಯಕ್ರಮಕ್ಕೆ ಸಾಮಾನ್ಯರಂತೆ ತೆರಳಿ ದೇವರ ಧ್ಯಾನ ಮಾಡಿದ್ರು. ಈ ಕೃಷ್ಣ ದಾಸ್ ಅಮೆರಿಕಾ ಮೂಲದ ಕೀರ್ತನೆಕಾರ. ಕೃಷ್ಣನ ಪರಮ ಭಕ್ತ. ಕೃಷ್ಣ ಕೀರ್ತನೆಗಳ ಕಾರ್ಯಕ್ರಮ ದಿನವೂ ಒಂದಲ್ಲ ಒಂದು ಕಡೆ ನಡೆಸಿಕೊಡ್ತಾರೆ. ಹಲವು ದೇಶಗಳಲ್ಲಿ ಪ್ರಖ್ಯಾತಿ ಹೊಂದಿರುವ ಇವ್ರ ಶೋಗೆ, ಸಾವಿರಾರು ಭಕ್ತರು ಜಮಾಯಿಸಿಸ್ತಾರೆ. ಇವ್ರ ಒಂದು ಕಾರ್ಯಕ್ರಮದ ಒಂದು ಟಿಕೆಟ್​ನ ಬೆಲೆ 10 ಸಾವಿರಕ್ಕೂ ಹೆಚ್ಚಿದೆ. ಕೀರ್ತನೆಯ ಜೊತೆಗೆ ಈವರೆಗೆ 17ಕ್ಕೂ ಹೆಚ್ಚು ಅಲ್ಭಮ್​​ಗಳನ್ನ ಕೂಡ ರಿಲೀಸ್​ ಮಾಡಿದ್ದಾರೆ.

ಇದನ್ನೂ ಓದಿ:ಅನಂತ್ ಅಂಬಾನಿ ಮದುವೆ ಕಾರ್ಯಕ್ರಮದಲ್ಲಿ ಇಬ್ಬರು ವ್ಯಕ್ತಿಗಳು ಅರೆಸ್ಟ್​.. ಕೆಲವರು ಹೀಗೂ ಇದ್ದಾರಾ..?

ಇಬ್ಬರೂ ನೀಮ್​ ಕರೋಲಿ ಬಾಬಾರ ಮಹಾನ್​ ಭಕ್ತರು
ಕೃಷ್ಣದಾಸ್​ರ ಮೂಲ ಹೆಸರು ರಾಮ್​ ದಾಸ್​ ಎಂದು. ನೀಮ್​ ಕರೋಲಿ ಬಾಬಾರ ಪರಮ ಭಕ್ತರು. ಇನ್​ಫ್ಯಾಕ್ಟ್​ ಇವ್ರಿಗೆ ಕೃಷ್ಣದಾಸ್​ ಎಂದು ಹೆಸರಿಟ್ಟಿದ್ದು ಕೂಡ ನೀಮ್​ ಕರೋಲಿ ಬಾಬಾ ಅವ್ರೆ. ಕಳೆದ ಕೆಲ ವರ್ಷಗಳಿಂದ ವಿರಾಟ್​ ಕೊಹ್ಲಿ ಕೂಡ ನೀಮ್ ಕರೋಲಿ ಬಾಬಾರ ಪರಮ ಭಕ್ತರಾಗಿದ್ದಾರೆ. ಕೊಹ್ಲಿ​ ಮೊಬೈಲ್​ನ ವಾಲ್​ಪೆಪರ್​ನ ಫೋಟೋ ಕೂಡ ಅವ್ರದ್ದೇ. ನೀಮ್ ಕರೋಲಿ ಬಾಬಾರನ್ನು ಕೊಹ್ಲಿ ಆರಾಧಿಸಲು ಆರಂಭಿಸಿದ ಮೇಲೆಯೇ ಈ ಕೃಷ್ಣದಾಸ್​ ಪರಿಚಯವಾಗಿದ್ದು. ಅಲ್ಲಿಂದ ಈವರೆಗೆ ಕೊಹ್ಲಿ ಬಿಡುವಿದ್ದಾಗ ಕಾರ್ಯಕ್ರಮಕ್ಕೆ ಮಿಸ್​ ಮಾಡದೇ ಹೋಗ್ತಾರೆ.

ನಾನು ನಿಮಗೆ ಪೂಜೆ-ಪುನಸ್ಕಾರ ಮಾಡುವವನ ತರ ಕಾಣ್ತೀನಾ.? ಕೊಹ್ಲಿ ಪ್ರೆಸ್​ಮೀಟ್​ನಲ್ಲಿ ಈ ಪ್ರಶ್ನೆ ಕೇಳಿದ ದಿನವೊಂದಿತ್ತು. ಅದೇ ಕೊಹ್ಲಿ ಈಗ ಮೇಲಿಂದ ಮೇಲೆ ಟೆಂಪಲ್​ ರನ್​ ಮಾಡ್ತಾರೆ. ಕೀರ್ತನೆ, ಸತ್ಸಂಗ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಿದ್ದಾರೆ. ಈ ಬದಲಾವಣೆಯಿಂದ ಏನು ಲಾಭ ಅಗಿದ್ಯೋ ಇಲ್ವೋ ಗೊತ್ತಿಲ್ಲ.. ಕೊಹ್ಲಿ ಸಾಕಷ್ಟು ನೆಮ್ಮದಿಯಿಂದ ಇದ್ದಂತೆ ಕಾಣ್ತಿರೋದಂತೂ ಸತ್ಯ.

ಇದನ್ನೂ ಓದಿ:ಸೊಸೆಯ ವಿದಾಯಿ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ಶ್ರೀಮಂತ ಮುಕೇಶ್ ಅಂಬಾನಿ.. ವಿಡಿಯೋ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಧೋನಿ, ಸಚಿನ್ ಎಲ್ಲರೂ ಬಂದಿದ್ದರು.. ಅಂಬಾನಿ ಪುತ್ರನ ಮದುವೆಗೆ ಬಾರದೆ ಕೊಹ್ಲಿ ಹೋಗಿದ್ದೆಲ್ಲಿಗೆ..?

https://newsfirstlive.com/wp-content/uploads/2024/07/VIRAT-KOHLI-17.jpg

Load More