newsfirstkannada.com

ಆರ್​ಸಿಬಿಯಲ್ಲಿ ಸ್ಟಾರ್ ಆಟಗಾರರಿಗೆ ಮಾತ್ರ ಬೆಲೆ, ನಮಗೆ ಕಿಮ್ಮತ್ತೇ ಇರಲಿಲ್ಲ- RCB ಮಾಜಿ ಪ್ಲೇಯರ್ ಆಕ್ರೋಶ

Share :

Published July 16, 2024 at 9:18am

    ‘ತಂಡದಲ್ಲಿ ಒಂದು ಸಂಸ್ಕೃತಿ ಇರಲಿಲ್ಲ, ಅದ್ಕೆ ಕಪ್ ಗೆದ್ದಿಲ್ಲ’

    ನಾನೂ ತಂಡದ ಭಾಗವಾಗಿದ್ದೆ, ನಮ್ಮನ್ನು ನೋಡ್ತಿದ್ದ ರೀತಿಯೇ ಬೇರೆ

    ಆರ್​ಸಿಬಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಆಟಗಾರ ಯಾರು?

ಟೀಂ ಇಂಡಿಯಾದ ಮಾಜಿ ವಿಕೆಟ್‌ಕೀಪರ್ ಅಂಡ್ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ ಆರ್​ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಹರಿಹಾಯ್ದಿದ್ದಾರೆ. ತಂಡದಲ್ಲಿ ಸ್ಟಾರ್ ಆಟಗಾರರಿಗೆ ಮಾತ್ರ ಗೌರವ ಸಿಗುತ್ತದೆ. ಇತರೆ ಆಟಗಾರರಿಗೆ ವಿಶೇಷ ಗಮನ ನೀಡುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಇದೇ ಕಾರಣಕ್ಕೆ ಆರ್​​ಸಿಬಿ ಇನ್ನೂ ಕಪ್ ಗೆದ್ದಿಲ್ಲ. ಒಂದೇ ಒಂದು ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ನಾನು ತಂಡದ ಭಾಗವಾಗಿದ್ದಾಗ ಅಲ್ಲಿ ಟೀಂ ಸಂಸ್ಕೃತಿ ಇರಲಿಲ್ಲ. ಈ ಎಲ್ಲ ಕಾರಣಗಳಿಂದ ತಂಡಕ್ಕೆ ಇಲ್ಲಿಯವರೆಗೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ನಾನು RCBಗಾಗಿ ಆಡಿದ್ದೇನೆ. ನಾನಿದ್ದಾಗ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್​ಗೆ ಸಿಗುತ್ತಿದ್ದ ಪ್ರಾಶಸ್ತ್ಯ ಬೇರೆ ಯಾರಿಗೂ ಸಿಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಕೊಚ್ಚಿ ಹೋದ ಯುವಕ.. 2 ದಿನದ ಮಳೆಗೆ 8 ಸಾವು.. ವರುಣದೇವ ಕರುಣೆ ತೋರು ಅಂತಿದ್ದಾರೆ ಜನ..!

RCB ಇಲ್ಲಿಯವರೆಗೆ ಒಂದೇ ಒಂದು IPL ಟ್ರೋಫಿಯನ್ನು ಗೆದ್ದಿಲ್ಲ. ಆದರೆ ಆರ್​​ಸಿಬಿ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದೆ. ಐಪಿಎಲ್ 2024 ರಲ್ಲಿ ಆರ್​ಸಿಬಿ ಸೂಪರ್-4 ಹಂತಕ್ಕೆ ತಲುಪಿತ್ತು. ಹೀನಾಯ ಸೋಲುಗಳನ್ನು ಕಂಡಿದ್ದ ಆರ್​ಸಿಬಿ ಮುಂದೆ ಸತತ 6 ಪಂದ್ಯಗಳನ್ನು ಗೆದ್ದು ಸೂಪರ್-4ಕ್ಕೆ ಆಗಮಿಸಿತ್ತು. ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು.

ಇದನ್ನೂ ಓದಿ:ದೇಗುಲದ ದ್ವಾರ ಬಾಗಿಲಲ್ಲೇ ಪ್ರಾಣಬಿಟ್ಟ ಮಹಿಳೆ; ಸಾವಿಗೆ ಕಾರಣ ಒಂದು ಮಂಗ..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆರ್​ಸಿಬಿಯಲ್ಲಿ ಸ್ಟಾರ್ ಆಟಗಾರರಿಗೆ ಮಾತ್ರ ಬೆಲೆ, ನಮಗೆ ಕಿಮ್ಮತ್ತೇ ಇರಲಿಲ್ಲ- RCB ಮಾಜಿ ಪ್ಲೇಯರ್ ಆಕ್ರೋಶ

https://newsfirstlive.com/wp-content/uploads/2024/07/RCB-54.jpg

Load More