newsfirstkannada.com

ಕೊನೆಯ 2 ಓವರ್​ನಲ್ಲಿ 61 ರನ್​ ಬೇಕಿತ್ತು.. 8 ಸಿಕ್ಸರ್​, 2 ಬೌಂಡರಿ ಬಾರಿಸಿ ಪಂದ್ಯ ಗೆಲ್ಲಿಸಿಕೊಟ್ಟ ಸ್ಟಾರ್..! Video

Share :

Published July 16, 2024 at 11:12am

Update July 16, 2024 at 11:14am

    ಈ ಕ್ರಿಕೆಟ್​​ನಲ್ಲಿ ಏನಾಗುತ್ತದೆ..? ಅಸಾಧ್ಯವಾದ ದಾಖಲೆಗಳು

    ಒಂದು ಬಾಲ್ ಬಾಕಿ ಇರುವಾಗಲೇ ಗೆಲುವಿನ ಸಿಂಚನ

    ಈ ರೋಚಕ ಕ್ರಿಕೆಟ್ ಪಂದ್ಯದಲ್ಲಿ ಸೋತು, ಗೆದ್ದ ತಂಡ ಯಾವುದು?

ಈ ಕ್ರಿಕೆಟ್​​ನಲ್ಲಿ ಏನಾಗುತ್ತದೆ..? ಸದ್ಯ ಯಾರಿಗೂ ಗೊತ್ತಾಗ್ತಿಲ್ಲ. ನೀವು ನಂಬಲು ಸಾಧ್ಯವೇ ಇಲ್ಲದ ಐತಿಹಾಸಿಕ ದಾಖಲೆಗಳು ಸಂಭವಿಸುತ್ತಿವೆ. ಅಚ್ಚರಿ, ರೋಚಕ, ರಣ ರೋಚಕ ಪಂದ್ಯವೊಂದರಲ್ಲಿ ತಂಡವೊಂದು 2 ಓವರ್​ನಲ್ಲಿ 61 ರನ್​ ಬೇಕಾಗಿದ್ದಾಗ ಒಂದು ಬಾಲ್ ಬಾಕಿ ಇರುವಾಗಲೇ ಗೆಲುವಿಗೆ ಮುತ್ತಿಟ್ಟಿದೆ!

ಯುರೋಪಿಯನ್ ಕ್ರಿಕೆಟ್‌ನ T10 ಪಂದ್ಯಾವಳಿಯಲ್ಲಿ ಈ ಸಾಧನೆ ಸಂಭವಿಸಿದೆ. ಆಸ್ಟ್ರಿಯಾ (Austria) ತಂಡವು 11 ಎಸೆತಗಳಲ್ಲಿ 61 ರನ್ ಗಳಿಸುವ ಮೂಲಕ ರೊಮೇನಿಯಾ (Romania) ವಿರುದ್ಧ ಗೆದ್ದು ಬೀಗಿದೆ. ಪಂದ್ಯವನ್ನು ಬಹುತೇಕ ಸೋತಿದ್ದ ಆಸ್ಟ್ರಿಯಾ, ಅಸಾಧ್ಯವಾದುದ್ದನ್ನು ಸಾಧಿಸಿ ತೋರಿಸಿದೆ.

ಇದನ್ನೂ ಓದಿ:ಭಾರೀ ಗುಡ್ಡ ಕುಸಿತ.. ಅಂಕೋಲದಲ್ಲಿ ಒಂದೇ ಕುಟುಂಬದ ಐವರು ಸಿಲುಕಿರುವ ಶಂಕೆ..

ಮೊದಲು ಬ್ಯಾಟ್ ಮಾಡಿದ್ದ ರೊಮೇನಿಯಾ 10 ಓವರ್‌ಗಳಲ್ಲಿ 168 ರನ್‌ ಕಲೆ ಹಾಕಿತ್ತು. ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಆರ್ಯನ್ ಮೊಹಮ್ಮದ್ 104* ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಈ ಗುರಿಯನ್ನು ಬೆನ್ನು ಹತ್ತಿದ್ದ ಆಸ್ಟ್ರಿಯಾ ಸೋಲಿನ ದವಡೆಗೆ ಸಿಲುಕಿತ್ತು. 8 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 107 ರನ್‌ ಕಲೆ ಹಾಕಿತ್ತು. ಆಗ ತಂಡದ ಗೆಲುವಿಗೆ ಕೊನೆಯ 2 ಓವರ್‌ಗಳಲ್ಲಿ 30.5 ರನ್ ರೇಟ್‌ನಲ್ಲಿ 61 ರನ್‌ಗಳ ಅಗತ್ಯ ಇತ್ತು.

ಬ್ಯಾಟರ್​ ಆಕಿಬ್ ಇಕ್ಬಾಲ್ 9 ಎಸೆತಗಳಲ್ಲಿ 22 ರನ್ ಗಳಿಸಿ ಆಡ್ತಿದ್ದರು. ಕೊನೆಯ ಎರಡು ಓವರ್​ನಲ್ಲಿ ಬ್ಯಾಟ್ ಬೀಸಲು ಆರಂಭಿಸಿದ ಇಕ್ಬಾಲ್.. 8 ಸಿಕ್ಸರ್​, ಎರಡು ಬೌಂಡರಿ ಬಾರಿಸಿ ತಂಡವನ್ನು ಗೆಲ್ಲಿಸಿಕೊಟ್ಟರು. 9ನೇ ಓವರ್​ನಲ್ಲಿ ಇಬ್ಬರು ಬ್ಯಾಟ್ಸಮನ್ 41 ರನ್​ಗಳಿಸಿದ್ದರು. (1 5Wd 6 4 6 7nb 0 7nb 1Wd 4). ಕೊನೆಯ ಓವರ್​​ನಲ್ಲಿ 20 ರನ್​ಗಳ ಅಗತ್ಯ ಇತ್ತು. 4 ಸಿಕ್ಸರ್​​ ಹಾಗೂ ಒಂದು ಸಿಂಗಲ್ ರನ್​ ಬಂದಿತು. ಈ ಮೂಲಕ ಇಕ್ಬಾಲ್ ಅವರ ಸ್ಕೋರ್ 19 ಎಸೆತಗಳಲ್ಲಿ 72 (ಅಜಯ) ರನ್ ಆಯಿತು. ಆಸ್ಟ್ರಿಯಾ 7 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

ಇದನ್ನೂ ಓದಿ: ಆರ್​ಸಿಬಿಯಲ್ಲಿ ಸ್ಟಾರ್ ಆಟಗಾರರಿಗೆ ಮಾತ್ರ ಬೆಲೆ, ನಮಗೆ ಕಿಮ್ಮತ್ತೇ ಇರಲಿಲ್ಲ- RCB ಮಾಜಿ ಪ್ಲೇಯರ್ ಆಕ್ರೋಶ

ಟಿ20 ಪಂದ್ಯಗಳು ಶುರುವಾದ ಮೇಲೆ ಕಾಲಕ್ಕೆ ತಕ್ಕಂತೆ ಕ್ರಿಕೆಟ್ ಬದಲಾಗುತ್ತಿದೆ. ನೀವು ನಂಬಲು ಸಾಧ್ಯವಾಗದ ರೋಚಕ ಕ್ಷಣಗಳು ಕ್ರಿಕೆಟ್​ನಲ್ಲಿ ಸಂಭವಿಸುತ್ತಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಬ್ಯಾಟ್ಸ್‌ಮನ್‌ಗಳು ಕಠಿಣ ಬ್ಯಾಟಿಂಗ್‌ಗೆ ಆದ್ಯತೆ ನೀಡ್ತಿದ್ದಾರೆ.

ಇದನ್ನೂ ಓದಿ:ರೋಹಿತ್, ರಾಹುಲ್​ರನ್ನೇ ಸೈಡಿಗೆ ನಿಲ್ಲಿಸಿದ ಜೈಸ್ವಾಲ್.. ಈ ಯಂಗ್​​ಗನ್​​ನ​​​ ಸ್ಪೆಷಲ್ಲೇ ಬೇರೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊನೆಯ 2 ಓವರ್​ನಲ್ಲಿ 61 ರನ್​ ಬೇಕಿತ್ತು.. 8 ಸಿಕ್ಸರ್​, 2 ಬೌಂಡರಿ ಬಾರಿಸಿ ಪಂದ್ಯ ಗೆಲ್ಲಿಸಿಕೊಟ್ಟ ಸ್ಟಾರ್..! Video

https://newsfirstlive.com/wp-content/uploads/2024/07/austria-vs-romania-1.jpg

Load More