newsfirstkannada.com

‘ಸ್ವಲ್ಪದ್ರಲ್ಲೇ ನನ್ನ ಸಾವು ತಪ್ಪಿತು..’ 7 ಮಂದಿ ಬಲಿ ಪಡೆದ ಗುಡ್ಡ ಕುಸಿತದ ಭಯಾನಕ ಕ್ಷಣ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ

Share :

Published July 16, 2024 at 1:45pm

    ‘ಕಾರು ರಿವರ್ಸ್​ ಬರುತ್ತಿತ್ತು, ನಾನು ಏನು ಮಾಡಿದೆ ಅಂದರೆ..’

    ‘ಒಂದು ಟೀ ಅಂಗಡಿ ಇತ್ತು, ಟೀ ಅಂಗಡಿಯಲ್ಲಿ 4 ಜನರಿದ್ದರು’

    ‘ಕಾರು, ಟೀ ಅಂಗಡಿ, ಸುಮಾರು ಒಂಬತ್ತು ಜನ ಮಣ್ಣ ಪಾಲು’

ಕಾರವಾರ: ಅಂಕೋಲಾ ತಾಲೂಕಿನ ಶಿರೂರು ಬಳಿ ಸಂಭವಿಸಿದ ಗುಡ್ಡ ಕುಸಿತ ಪ್ರಕರಣದಲ್ಲಿ 7 ಮಂದಿ ಸಾವನ್ನಪ್ಪಿರೋದು ದೃಢವಾಗಿದೆ. ಇನ್ನು ಇಬ್ಬರು ಮಣ್ಣಿನಡಿ ಸಿಲುಕಿದ್ದಾರೆ ಎನ್ನಲಾಗುತ್ತಿದ್ದು, ಸಾವು ನೋವಿನ ಆತಂಕ ಎದುರಾಗಿದೆ.

ದುರಂತದಿಂದ ಕೆಲವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ದುರ್ಘಟನೆಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿ ರಾಜು ಅನ್ನೋರು ಮಾತನಾಡಿ.. ಕಾರಿನಲ್ಲಿ ಒಂದು ಕುಟುಂಬ ಹೋಗುತಿತ್ತು. ಅವರು ಸಡನ್ ಆಗಿ ಕಾರ್ ನಿಲ್ಲಿಸಿ ನಿಧಾನಕ್ಕೆ ಹಿಂದೆ ತೆಗೆದುಕೊಳ್ಳುತ್ತಿದ್ದರು. ನಾನು ಹಿಂದಿನ ಗಾಡಿಯಲ್ಲಿದ್ದೆ. ಕೂಡಲೇ ನಾನು ವಾಹನದಿಂದ ಇಳಿದು, ನೋಡುತ್ತ ನಿಂತೆ.

ಇದನ್ನೂ: ಲಂಕಾ ವಿರುದ್ಧದ ODI ಪಂದ್ಯ ನಾನು ಆಡಲ್ಲ -ಗಂಭೀರ್​​ಗೆ ಬಿಗ್ ಶಾಕ್ ಕೊಟ್ಟ ಪಾಂಡ್ಯ.. ಆಗಿದ್ದೇನು..

ಗುಡ್ಡ ಕುಸಿಯುತ್ತಿತ್ತು. ನಂತರ ನಾನು ಜೀವ ಉಳಿಸಿಕೊಳ್ಳಲು ಸಡನ್ ಆಗಿ ಬೇರೆ ಕಡೆ ಹಾರಿದೆ. ಸ್ವಲ್ಪದ್ರಲ್ಲೇ ನನ್ನ ಸಾವು ತಪ್ಪಿತ್ತು. ಇಲ್ಲಿ ಒಂದು ಟೀ ಅಂಗಡಿ ಇತ್ತು. ಟಿ ಅಂಗಡಿಯಲ್ಲಿ ನಾಲ್ಕು ಜನ ಇದ್ದರು. ಗ್ಯಾಸ್ ಟ್ಯಾಂಕರ ಕೂಡ ಇಲ್ಲೇ ನಿಲ್ಲಿಸಿದ್ದರು. ಗ್ಯಾಸ್ ಟ್ಯಾಂಕರ್ ನದಿಗೆ ಬಿದ್ದಿದೆ. ಕಾರು ಮತ್ತು ಟೀ ಅಂಗಡಿ ಹಾಗೂ ಸುಮಾರು ಒಂಬತ್ತು ಜನ ಮಣ್ಣ ಪಾಲಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.

ಈ ದುರ್ಘಟನೆಯಲ್ಲಿ 9ಕ್ಕೂ ಹೆಚ್ಚು ಮಂದಿ ಗುಡ್ಡದ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಒಂದೇ ಕುಟಂಬದ ಐವರು ಮಣ್ಣಿನಡಿ ಸಿಲುಕಿದ್ದಾರೆ ಎನ್ನಲಾಗಿದೆ. ಲಕ್ಷ್ಮಣ ನಾಯ್ಕ (47), ಶಾಂತಿ ನಾಯ್ಕ (36), ರೋಶನ್ (11), ಅವಂತಿಕಾ (6), ಜಗನ್ನಾಥ (55) ಅನ್ನೋರು ಮಣ್ಣಿನಡಿ ಸಿಲುಕಿದ್ದಾರೆ. ಇವರಲ್ಲಿ ಯಾರೆಲ್ಲ ಮೃತಪಟ್ಟಿದ್ದಾರೆ ಅನ್ನೋದ್ರ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ. ನಿರಂತರ ಮಳೆಯಿಂದಾಗಿ ಹೆದ್ದಾರಿ ಪಕ್ಕದ ಗುಡ್ಡ ಸಡಿಲಗೊಂಡಿತ್ತು. ಗಂಗಾವಳಿ ನದಿಗೆ ಹೊಂದಿಕೊಂಡಿರುವ ಶಿರೂರು ಪ್ರದೇಶ ಇದಾಗಿದೆ. ಗುಡ್ಡ ಕುಸಿತದಿಂದ ರಾಷ್ಟ್ರೀಯ ಹೆದ್ದಾರಿ 66ರ ಅಂಕೋಲಾ-ಕುಮಟಾ ನಡುವೆ ಸಂಚಾರ ಬಂದ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಸ್ವಲ್ಪದ್ರಲ್ಲೇ ನನ್ನ ಸಾವು ತಪ್ಪಿತು..’ 7 ಮಂದಿ ಬಲಿ ಪಡೆದ ಗುಡ್ಡ ಕುಸಿತದ ಭಯಾನಕ ಕ್ಷಣ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ

https://newsfirstlive.com/wp-content/uploads/2024/07/KWR-LANDSLIDE.jpg

Load More