newsfirstkannada.com

ಮಕ್ಕಳ ಮದುವೆ ಮಾಡುವಾಗ ಇಬ್ಬರ ಮಧ್ಯೆ ಲವ್​​.. ವಧುವಿನ ತಾಯಿ ಜತೆ ವರನ ತಂದೆ ಜೂಟ್..​!

Share :

Published July 17, 2024 at 6:21am

    ವರನ ಅಪ್ಪನಿಗೆ 10 ಮಕ್ಕಳು, ಮದುವೆ ಹೆಣ್ಣಿನ ಅಮ್ಮನಿಗೆ 6 ಮಕ್ಕಳು

    ಹೆಣ್ಣಿನ ತಾಯಿಗೆ, ಗಂಡಿನ ತಂದೆಗೆ ಪ್ರೇಮಾಂಕುರವಾಗಿದ್ದು ಹೇಗೆ?

    ಓಡಿ ಹೋದ ಮಹಿಳೆಯ ಗಂಡ ಏನೆಂದು ಪ್ರಕರಣ ದಾಖಲಿಸಿದ್ದಾರೆ?

ಲಕ್ನೋ: ಎಲ್ಲರು ಆಶ್ಚರ್ಯ ಪಡುವಂತಹ ಸಂಗತಿಯೊಂದು ನಡೆದಿದ್ದು ಮದುವೆ ಆಗಬೇಕಿದ್ದ ಗಂಡಿನ ತಂದೆ ಹಾಗೂ ಹೆಣ್ಣಿನ ತಾಯಿ ನಡುವೆ ಪ್ರೇಮಾಂಕುರವಾಗಿ ಮನೆ ಬಿಟ್ಟು ಓಡಿ ಹೋಗಿದ್ದಾರೆ. ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಟ್ರೈನಿ IAS ಪೂಜಾ ಖೇಡ್ಕರ್​ ಕೇಸ್‌ಗೆ ಹೊಸ ಟ್ವಿಸ್ಟ್; ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿಯಿಂದ ಮಹತ್ವದ ಆದೇಶ

ಮದುವೆ ಗಂಡಿನ ತಂದೆ ಶಕೀಲ್​ಗೆ 10 ಮಕ್ಕಳಿದ್ದು ಅತ್ತ ವಧುವಿನ ತಾಯಿ (35 ವರ್ಷಗಳು)ಗೆ 6 ಮಕ್ಕಳಿವೆ. ಎರಡು ತಿಂಗಳ ಹಿಂದೆ ಈ ಎರಡು ಕುಟುಂಬದ ನಡುವೆ ಮಕ್ಕಳ ಮದುವೆ ಬಗ್ಗೆ ಚರ್ಚೆ ನಡೆದು ನಿಶ್ಚಿತಾರ್ಥ ಮಾಡಿ ಮುಗಿಸಿದ್ದರು. ಅದರಂತೆ ಮದುವೆ ದಿನಾಂಕವನ್ನು ನಿಗದಿ ಮಾಡಿದ್ದರು. ಜುಲೈ 17 ಅಂದರೆ ಇಂದು ಮದುವೆಯಾಗಬೇಕಿತ್ತು. ಆದರೆ ಎರಡು ತಿಂಗಳಿಂದಲೂ ಮದುವೆ ನೆಪದಲ್ಲಿ ಇಬ್ಬರು ಪರಸ್ಪರ ಮೊಬೈಲ್​ನಲ್ಲಿ ಮಾತನಾಡುತ್ತಾ ಭೇಟಿ ಕೂಡ ಆಗಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿ ಮಕ್ಕಳ ಮದುವೆ ಬಗ್ಗೆ ಚಿಂತಿಸದೇ ಓಡಿ ಹೋಗಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಕ್ಷ್‌ ನಿರ್ಮಾಣದಲ್ಲಿ ಹೊಸ ಧಾರಾವಾಹಿ.. ಎಂಟ್ರಿಯಾಗ್ತಿದೆ ದೃಷ್ಟಿಬೊಟ್ಟು ಸೀರಿಯಲ್, ಹೀರೋ ಯಾರು?

ದಿನಾಂಕ ನಿಗದಿಯಂತೆ ಇಂದು ಮಕ್ಕಳ ಮದುವೆಯಾಗಬೇಕಿತ್ತು. ಇದಕ್ಕೂ ಮೊದಲೇ ವರನ ತಂದೆ ಹಾಗೂ ವಧುವಿನ ತಾಯಿ ಇಬ್ಬರು ಮನೆ ಬಿಟ್ಟು ಓಡಿ ಹೋಗಿದ್ದು ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ. ಸದ್ಯ ಈ ವಿಷ್ಯ ಗೊತ್ತಾಗುತ್ತಿದ್ದಂತೆ ಆ ಮಹಿಳೆ ಗಂಡ ಶಾಕ್ ಆಗಿದ್ದಾರೆ. ಈ ಸಂಬಂಧ ಪೊಲೀಸ್​ ಠಾಣೆ ಮೆಟ್ಟಿಲೇರಿರುವ ಹೆಣ್ಣಿನ ತಂದೆ, ನನ್ನ ಹೆಂಡತಿಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಕೊತ್ವಾಲಿ ಗಂಜ್ದುಂದ್ವಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪೊಲೀಸರು ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಕ್ಕಳ ಮದುವೆ ಮಾಡುವಾಗ ಇಬ್ಬರ ಮಧ್ಯೆ ಲವ್​​.. ವಧುವಿನ ತಾಯಿ ಜತೆ ವರನ ತಂದೆ ಜೂಟ್..​!

https://newsfirstlive.com/wp-content/uploads/2024/07/UP_LOVE.jpg

Load More