newsfirstkannada.com

ಆಳ ಸಮುದ್ರದಲ್ಲಿ ಅನಾಹುತ.. ತೈಲ ಟ್ಯಾಂಕರ್​ ಮುಳುಗಿ 13 ಭಾರತೀಯರು ಸೇರಿ 16 ಮಂದಿ ನಾಪತ್ತೆ

Share :

Published July 17, 2024 at 9:17am

    ತೈಲ ಟ್ಯಾಂಕರ್ ಯೆಮೆನ್​​​ನ ಏಡನ್ ಬಂದರ್​ನಿಂದ ಹೊರಟಿತ್ತು

    ರಕ್ಷಣಾ ಕಾರ್ಯ ಶುರುವಾಗಿದೆ, ತೈಲ ಸೋರಿಕೆ ಭೀತಿ ಇದೆ

    2007ರಲ್ಲಿ ನಿರ್ಮಾಣವಾಗಿದ್ದ 117 ಮೀಟರ್ ಉದ್ದದ ಟ್ಯಾಂಕರ್

ಓಮನ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಹಡಗು ಮುಳುಗಿದ್ದು 13 ಭಾರತೀಯರು ಸೇರಿ ಒಟ್ಟು 16 ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ತೈಲ ಟ್ಯಾಂಕರ್ ಯೆಮೆನ್​​​ನ ಏಡನ್ ಬಂದರ್​ನಿಂದ ಹೊರಟಿತ್ತು.

ಸದ್ಯ ನೀರಿನಲ್ಲಿ ಮುಳಗಿದವರನ್ನು ರಕ್ಷಣೆ ಮಾಡಲು ಶೋಧಕಾರ್ಯ ನಡೆಯುತ್ತಿದೆ. ಟ್ಯಾಂಕರ್ ಹಡಗಿನಲ್ಲಿ 13 ಬಾರತೀಯ ಸಿಬ್ಬಂದಿ ಹಾಗೂ ಮೂವರು ಶ್ರೀಲಂಕಾದವರು ಇದ್ದರು. ಓಮನ್ ಬಂದರು ಡುಕ್ಮ್​ ಬಳಿಯ ಆಗ್ನೇಯಕ್ಕೆ 25 ನಾಟಿಕಲ್ ಮೈಲು ದೂರ ಹೋಗುತ್ತಿದ್ದಂತೆಯೇ ಹಡಗು ಮುಳುಗಿದೆ ಎಂಬ ವರದಿ ಇದೆ. ಓಮನ್ ನೃಋತ್ಯದ ಕರಾವಳಿಯಲ್ಲಿರುವ ಡುಕ್ಮ್​​ ಬಂದರು ದೇಶದ ಪ್ರಮುಖ ತೈಲ ಮತ್ತು ಅನಿಲ ಗಣಿಗಾರಿಕೆ ಯೋಜನೆಗಳ ಪ್ರಮುಖ ಕೇಂದ್ರವಾಗಿದೆ.

ಇದನ್ನೂ ಓದಿ:ಡೆಲ್ಲಿ ಕ್ಯಾಪಿಟಲ್ಸ್​​ಗೆ ಬಿಗ್ ಶಾಕ್ ಕೊಟ್ಟ ಪಂತ್.. ತಂಡ ತೊರೆಯಲು ನಿರ್ಧಾರ.. ಆಗಿದ್ದೇನು..?

ಎಲ್​​ಎಸ್​ಇಜಿ ಶಿಪ್ಪಿಂಗ್ ಡೇಟಾ ಪ್ರಕಾರ.. ಟ್ಯಾಂಕರ್​ ಯೆಮೆನ್​​​ ಏಡನ್ ಬಂದರ್​ನಿಂದ ಹೊರಟಿತ್ತು. ತೈಲ ಟ್ಯಾಂಕರ್​ ತಲೆ ಕೆಳಗಾಗಿ ನೀರಿನಲ್ಲಿ ಮುಳಗಿದೆ. ಮುಳುಗಿರುವ ಹಡಗು ಹಾಗೆಯೇ ಇದೆಯೇ ಅಥವಾ ತೈಲ ಸೋರಿಕೆ ಆಗುತ್ತಿದೆಯೇ ಅನ್ನೋದು ಇನ್ನು ಖಚಿತವಾಗಿಲ್ಲ. 2007ರಲ್ಲಿ ನಿರ್ಮಿಸಲಾದ 117 ಮೀಟರ್​ ಉದ್ದದ ತೈಲ ಉತ್ಪನ್ನ ಟ್ಯಾಂಕರ್ ಅದಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ:ಇನ್ನೂ ಎಷ್ಟು ದಿನ ಭಯಂಕರ ಮಳೆ ಸುರಿಯಲಿದೆ? ಕರಾವಳಿ ಜನರ ಆತಂಕ ಹೆಚ್ಚಿಸಿದ ಹವಾಮಾನ ವರದಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಳ ಸಮುದ್ರದಲ್ಲಿ ಅನಾಹುತ.. ತೈಲ ಟ್ಯಾಂಕರ್​ ಮುಳುಗಿ 13 ಭಾರತೀಯರು ಸೇರಿ 16 ಮಂದಿ ನಾಪತ್ತೆ

https://newsfirstlive.com/wp-content/uploads/2024/07/OIL-TANKER.jpg

Load More