newsfirstkannada.com

‘ಕ್ಯಾಪ್ಟನ್​ ಆಗೋ ಅರ್ಹತೆ ಇಲ್ಲ, ಹೇಗೆ ಮಾಡಬೇಕಂತನೂ ಗೊತ್ತಿಲ್ಲ’.. ಶುಭ್​ಮನ್​ ಗಿಲ್​ ಬಗ್ಗೆ ಸ್ಫೋಟಕ ಹೇಳಿಕೆ

Share :

Published July 17, 2024 at 1:20pm

    ಟಿ20 ಕ್ರಿಕೆಟ್​ನಲ್ಲಿ ಶುಭ್​ಮನ್​​ ಗಿಲ್​ ಅಟ್ಟರ್ ಫ್ಲಾಫ್​ ಪರ್ಫಾಮೆನ್ಸ್​

    ಶುಭ್​ಮನ್​ ಗಿಲ್​ ಬೆನ್ನಿಗೆ ನಿಂತಿದ್ರಾ ಕನ್ನಡಿಗ ರಾಹುಲ್ ದ್ರಾವಿಡ್?

    ಟೀಮ್ ಇಂಡಿಯಾದಲ್ಲಿ ಯಾವ್ಯಾವ ಪ್ಲೇಯರ್​ಗೆ ಅನ್ಯಾಯ ಆಗಿದೆ?

ಶುಭ್​ಮನ್ ಗಿಲ್ ನಾಯಕತ್ವಕ್ಕೆ ಅರ್ಹರಲ್ವಾ, ದ್ರಾವಿಡ್​ರ ಫೇವರಿಟಿಸಮ್​ನಿಂದಲೇ ಗಿಲ್​ಗೆ ಕ್ಯಾಪ್ಟನ್ಸಿ ಪಟ್ಟ ಸಿಕ್ತಾ..? ಋತುರಾಜ್​​ಗೆ ಅನ್ಯಾಯವಾಯ್ತಾ ಎಂಬ ಚರ್ಚೆ ಕ್ರಿಕೆಟ್ ಪಡೆಸಾಲೆಯಲ್ಲಿ ನಡೆಯುತ್ತಿದೆ. ಇದಕ್ಕೆಲ್ಲ ಕಾರಣ ಮಾಜಿ ಕ್ರಿಕೆಟರ್​ನ ಆ ಒಂದು ಹೇಳಿಕೆ.

ಇದನ್ನೂ ಓದಿ: ಫಾಲ್ಸ್​ನಲ್ಲಿ ಮುಗ್ಗರಿಸಿ ಬಿದ್ದಿದ್ದ ದೀಪಿಕಾ ದಾಸ್.. ಇನ್​ಸ್ಟಾ ವಿಡಿಯೋ ಕುರಿತು ಬ್ಯೂಟಿ ಹೇಳಿದ್ದೇನು?

ಶುಭ್​​ಮನ್ ಗಿಲ್ ನಾಯಕ್ವದ ಟೀಮ್ ಇಂಡಿಯಾ, ಜಿಂಬಾಬ್ವೆ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನ ಗೆದ್ದು ಬೀಗಿದೆ. 4-1ರ ಅಂತರದಲ್ಲಿ ಸರಣಿಯನ್ನ ಕೈವಶ ಮಾಡಿಕೊಂಡಿದೆ. ಆದ್ರೆ, ಶುಭ್​ಮನ್​ ಗಿಲ್ ನಾಯಕತ್ವದ ಬಗ್ಗೆ ಟೀಕೆಗಳ ಜೊತೆ ಪ್ರಶ್ನೆಗಳು ಉದ್ಬವವಾಗಿದೆ. ಅಷ್ಟೇ ಅಲ್ಲ, ಈ ಬಗ್ಗೆ ಮಾತನಾಡಿರುವ ಅಮಿತ್ ಮಿಶ್ರಾ, ಶುಭ್​ಮನ್ ನಾಯಕತ್ವದ ಬಗ್ಗೆ ಟೀಕಿಸಿದ್ದಾರೆ.

ಇದನ್ನೂ ಓದಿ: ಟ್ರೈನಿ IAS ಪೂಜಾ ಖೇಡ್ಕರ್​ ಕೇಸ್‌ಗೆ ಹೊಸ ಟ್ವಿಸ್ಟ್; ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿಯಿಂದ ಮಹತ್ವದ ಆದೇಶ 

ನಾನು ಶುಭ್​​ಮನ್​​ ಗಿಲ್​ರನ್ನ ನಾಯಕನನ್ನಾಗಿ ಮಾಡುವುದಿಲ್ಲ. ಏಕೆಂದರೆ ನಾನು ಗಿಲ್ ನಾಯಕತ್ವ ಐಪಿಎಲ್‌ನಲ್ಲಿ ನೋಡಿದ್ದೇನೆ. ಆತನಿಗೆ ನಾಯಕತ್ವ ಹೇಗೆ ಮಾಡಬೇಕೆಂದು ತಿಳಿದಿಲ್ಲ. ನಾಯಕತ್ವದ ಐಡಿಯಾ ಕೂಡ ಇಲ್ಲ. ಆತ ಟೀಮ್ ಇಂಡಿಯಾ ಭಾಗವಾಗಿದ್ದಾರೆ ಎಂದು ನಾಯಕತ್ವ ನೀಡಬಾರದು.

ಅಮಿತ್ ಮಿಶ್ರಾ, ಕ್ರಿಕೆಟರ್

ಶುಭ್​ಮನ್ ಗಿಲ್ ನಾಯಕತ್ವದ ಬಗ್ಗೆ ಚಕಾರ ಎತ್ತಿರುವ ಅಮಿತ್ ಮಿಶ್ರಾ, ಬದಲಾಗಿ ಯಾರಿಗೆ ನಾಯಕತ್ವ ನೀಡಿದ್ದರೆ ಉತ್ತಮ ಎಂಬ ಉತ್ತರವನ್ನು ಸಂದರ್ಶನದಲ್ಲಿ ನೀಡಿದ್ದಾರೆ.

ಗಿಲ್​​ ಬದಲಿಗೆ ರುತುರಾಜ್​ಗೆ ನೀಡಬೇಕಿತ್ತಾ ನಾಯಕತ್ವಾ..?

ಸದ್ಯ ಶುಭ್​​ಮನ್ ಗಿಲ್ ನಾಯಕತ್ವದ ಬಗ್ಗೆ ಟೀಕಿಸಿರುವ ಅಮಿತ್ ಮಿಶ್ರಾ, ಪರೋಕ್ಷ ರುತುರಾಜ್​​ಗೆ ನಾಯಕತ್ವ ನೀಡಬೇಕಿತ್ತು ಎಂದು ಬ್ಯಾಟ್ ಬೀಸಿದ್ದಾರೆ. ಇದಕ್ಕೆ ತಮ್ಮದೇ ಆದ ಕಾರಣಗಳನ್ನು ಇಟ್ಟಿರುವ ಮಿಶ್ರಾ, ರುತುರಾಜ್ ಗಾಯಕ್ವಾಡ್ ಉತ್ತಮ ಆಯ್ಕೆ ಎಂದಿದ್ದಾರೆ.

ನಾನು ಶುಭ್​ಮನ್ ಗಿಲ್​​ ವಿರೋಧಿ ಅಲ್ಲ. ನನಗೆ ಆತನೂ ಇಷ್ಟ. ಆದರೆ ಅತ್ಯುತ್ತಮ ಆಟಗಾರ ರುತುರಾಜ್ ಗಾಯಕ್ವಾಡ್. ಯಾಕಂದ್ರೆ, ಯಾವುದೇ ಪರಿಸ್ಥಿತಿಯಲ್ಲಿ ರನ್ ಗಳಿಸಬಲ್ಲ ಸಾಮರ್ಥ್ಯ ಇದೆ. ಚೆನ್ನೈ ಹಾಗೂ ಏಷ್ಯನ್ ಗೇಮ್ಸ್​​​​ನಲ್ಲಿ ನಾಯಕನಾಗಿ ರನ್ ಗಳಿಸಿದ್ದಾರೆ. ಹೀಗಾಗಿ ನಾಯಕನಾಗಿ ಒನ್ ಆ್ಯಂಡ್ ಒನ್ಲಿ ಆಪ್ಷನ್. ಬೇಡ ಎನಿಸಿದರೆ, ತಂಡದಲ್ಲಿ ಬೇರೆ ಆಟಗಾರರು ಇದ್ದರು. ಟಿ20 ವಿಶ್ವಕಪ್​ ತಂಡದಲ್ಲಿದ್ದ ಯಶಸ್ವಿ ಜೈಸ್ವಾಲ್ ಇದ್ದರು. ನನ್ನ ಪ್ರಕಾರ ಕಂಪ್ಲೀಟ್ ಪ್ಲೇಯರ್. ಟಿ20, ಟೆಸ್ಟ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ. ಉತ್ತಮ ಟೆಕ್ನಿಕ್ ಹೊಂದಿದ್ದ. ಟೀಮ್​​ನಲ್ಲಿ ಶಾಂತ ರೀತಿಯ ವಾತಾವರಣ ನಿರ್ಮಿಸುವ ಆಟಗಾರ ನಾಯಕನಾಗುವುದು ಬಹುಮುಖ್ಯ.

ಅಮಿತ್ ಮಿಶ್ರಾ, ಕ್ರಿಕೆಟರ್​

ನಾಯಕನಾಗಬೇಕಿದ್ದ ರುತುರಾಜ್​ಗೆ ಅಡ್ಡಗಾಲು ಹಾಕಿದ್ರಾ..?

ಅಮಿತ್ ಮಿಶ್ರಾ ಹೇಳಿಕೆಯ ಬೆನ್ನಲ್ಲೇ ಇಂಥದ್ದೊಂದು ಚರ್ಚೆ ಜೋರಾಗಿದೆ. ಅದರಲ್ಲೂ ಏಷ್ಯಾನ್ ಗೇಮ್ಸ್​ನಲ್ಲಿ ನಾಯಕನಾಗಿ ಟೀಮ್ ಇಂಡಿಯಾವನ್ನ ಮುನ್ನಡೆಸಿದ್ದ ರುತುರಾಜ್, ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ರು. ಈ ಹೊರತಾಗಿ ಗಾಯಕ್ವಾಡ್​​ಗೆ ಪಟ್ಟ ಕಟ್ಟಲಿಲ್ಲ ಯಾಕೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಚಾನ್ಸ್​ ಸಿಕ್ಕಿದ್ದು ಅಪರೂಪಕ್ಕೊಮ್ಮೆ.

ಜಿಂಬಾಬ್ವೆ ಸರಣಿಯಲ್ಲಿ ಅದ್ಭುತ ಪ್ರದರ್ಶನ ಹೊರತಾಗಿ ಬೆಂಚ್ ಕಾಯಿಸಿದ ಬಗ್ಗೆಯೂ ಫ್ಯಾನ್ಸ್​ ಕಿಡಿ ಕಾರುತ್ತಿದ್ದಾರೆ. ಇದಕ್ಕೆಲ್ಲ ನಿರ್ಗಮಿತ ಕೋಚ್ ರಾಹುಲ್ ದ್ರಾವಿಡ್ ಕಡೆಗೆ ಫ್ಯಾನ್ಸ್​ ಸೇರಿದಂತೆ ಹಲವರು ಬೊಟ್ಟು ಮಾಡಿದ್ದಾರೆ.

ಇದನ್ನೂ ಓದಿ: ರಕ್ಷ್‌ ನಿರ್ಮಾಣದಲ್ಲಿ ಹೊಸ ಧಾರಾವಾಹಿ.. ಎಂಟ್ರಿಯಾಗ್ತಿದೆ ದೃಷ್ಟಿಬೊಟ್ಟು ಸೀರಿಯಲ್, ಹೀರೋ ಯಾರು?

ಶುಭ್​ಮನ್​​​ ಬೆಂಬಲಕ್ಕೆ ನಿಂತಿದ್ರಾ ರಾಹುಲ್ ದ್ರಾವಿಡ್..?

ಇಂಥದ್ದೊಂದು ಪ್ರಶ್ನೆಗೆ ಕಾರಣ.. ಜಿಂಬಾಬ್ವೆ ಎದುರಿನ ಸರಣಿಗೂ ಮುನ್ನ ಟಿ20 ಫಾರ್ಮೆಟ್​ನಲ್ಲಿ ಶುಭ್​​ಮನ್​​ ಗಿಲ್ ನೀಡಿದ್ದ ಪ್ರದರ್ಶನ. ಯಾಕಂದ್ರೆ, ಜಿಂಬಾಬ್ವೆ ಸರಣಿಗೂ ಶುಭ್​ಮನ್, ಟಿ20 ಕ್ರಿಕೆಟ್​ನಲ್ಲಿ ಶುಭ್​ಮನ್​​ ಅಟ್ಟರ್ ಫ್ಲಾಫ್​ ಪರ್ಫಾಮೆನ್ಸ್​ ನೀಡಿದ್ದರು. ಹೀಗಾದ್ರೂ ಟಿ20ಯಲ್ಲಿ ಶುಭ್​ಮನ್ ಗಿಲ್, ಖಾಯಂ ಆಟಗಾರನಾಗಿದ್ದರು. ಇದಕ್ಕೆಲ್ಲ ಕಾರಣ ಮಾಜಿ ಕೋಚ್ ರಾಹುಲ್ ದ್ರಾವಿಡ್​​​​​​​​​ ಅನ್ನೋದು ಹಲವರ ವಾದ.

ಕೋಚ್ ಆಗಿ ದ್ರಾವಿಡ್, ಯುವ ಆಟಗಾರರ ಬೆನ್ನಿಗೆ ನಿಂತಿದ್ದಾರೆ. ತಮ್ಮ ಕಾಲಾವಧಿಯಲ್ಲಿ ಯಂಗ್ ಪ್ಲೇಯರ್ಸ್ ಒತ್ತಡಕ್ಕೆ ಸಿಲುಕದಂತೆ ನೋಡಿಕೊಂಡಿದ್ದಾರೆ ನಿಜ. ಆದ್ರೆ, ದ್ರಾವಿಡ್​ರಿಂದಲೇ ಶುಭ್​ಮನ್ ಗಿಲ್​​ ನಾಯಕರಾದ್ರು. ಇದರಿಂದ ರತುರಾಜ್​ಗೆ ಅನ್ಯಾಯವಾಯ್ತು ಅನ್ನೋದು ನಿಜಕ್ಕೂ ಒಪ್ಪುವಂತದ್ದು ಅಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘ಕ್ಯಾಪ್ಟನ್​ ಆಗೋ ಅರ್ಹತೆ ಇಲ್ಲ, ಹೇಗೆ ಮಾಡಬೇಕಂತನೂ ಗೊತ್ತಿಲ್ಲ’.. ಶುಭ್​ಮನ್​ ಗಿಲ್​ ಬಗ್ಗೆ ಸ್ಫೋಟಕ ಹೇಳಿಕೆ

https://newsfirstlive.com/wp-content/uploads/2024/07/SHUBMAN_GILL.jpg

Load More