newsfirstkannada.com

ಭಾರೀ ಮಳೆ-ಗಾಳಿ.. ಅಪಾಯದ ಮಟ್ಟ ಮೀರಿದ ಕಾವೇರಿ.. ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ

Share :

Published July 19, 2024 at 8:07am

    ನಿರಂತರ ಮಳೆ ಜೊತೆ ಜೊತೆಗೆ ಬೀಸುತ್ತಿರುವ ಭಾರೀ ಗಾಳಿ

    ಸೂಕ್ತವಾದ, ಸುರಕ್ಷಿತ ಸ್ಥಳಗಳಿಗೆ ತೆರಳಲು ಜನರಿಗೆ ಸೂಚನೆ

    ಧಾರಾಕಾರ ಮಳೆ ಹಿನ್ನೆಲೆ ಇಂದು ಜಿಲ್ಲೆಯಲ್ಲಿ ರೆಡ್ ಅಲರ್ಟ್

ಕೊಡಗು: ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಜೊತೆಗೆ ಗಾಳಿ ಕೂಡ ಬೀಸುತ್ತಿರುವ ಕಾರಣ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಇದನ್ನೂ ಓದಿ: ಹೃದಯ ವಿದ್ರಾವಕ ಘಟನೆ.. ನಿರಂತರ ಮಳೆಗೆ ಮನೆ ಕುಸಿದು ಅವಳಿ ಮಕ್ಕಳು, ಓರ್ವ ಮಹಿಳೆ ಸಾವು

ಕೊಡಗಿನಾದ್ಯಂತ ವರುಣಾರ್ಭಟ ಜೋರಾಗಿದ್ದು ಇದರ ಜೊತೆಗೆ ಗಾಳಿಯು ಭಾರೀ ವೇಗದಲ್ಲಿ ಬೀಸುತ್ತಿದೆ. ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಸೂಕ್ತವಾದ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಈಗಾಗಲೇ ಜಿಲ್ಲಾಡಳಿತ ಮನವಿ ಮಾಡಿದೆ.

ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲೂ ಭಾರೀ ಮಳೆ.. ಧರೆಗುರುಳಿದ ಮರ.. ಎರಡು ಬೈಕ್​ಗಳು, ಕಾರು ಜಖಂ..!

ಬ್ರಹ್ಮಗಿರಿ ತಪ್ಪಲಿನಲ್ಲೂ ಮಳೆ ಜೋರಾಗಿ ಸುರಿಯುತ್ತಿರುವ ಕಾರಣ ಭಾಗಮಂಡಲದ ತ್ರಿವೇಣಿ ಸಂಗಮ ಕೂಡ ಭರ್ತಿಯಾಗಿದೆ. ಆದರೆ ಮೇಲ್ಸೆತುವೆ ಮೇಲೆ ಸಾರ್ವಜನಿಕರು ಯಾವುದೇ ಆತಂಕವಿಲ್ಲದೇ ಓಡಾಡುತ್ತಿದ್ದಾರೆ. ವಾಹನಗಳು ಎಂದಿನಂತೆ ಜಲಿಸುತ್ತಿವೆ. ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಇಂದು ಕೂಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರೀ ಮಳೆ-ಗಾಳಿ.. ಅಪಾಯದ ಮಟ್ಟ ಮೀರಿದ ಕಾವೇರಿ.. ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ

https://newsfirstlive.com/wp-content/uploads/2024/07/Cauvery_river.jpg

Load More