newsfirstkannada.com

ಹಿಟ್ ಅಂಡ್​ ರನ್​​ಗೆ ASI ಬಲಿ.. ಅಪಘಾತದ ಹೊಡೆತಕ್ಕೆ ಅಧಿಕಾರಿಯ ತಲೆ  ನಜ್ಜುಗುಜ್ಜು..

Share :

Published July 19, 2024 at 9:32am

    ಘಟನೆ ನಡೆದ ಸ್ಥಳದ ಸುತ್ತುಮುತ್ತ ಸಿಸಿಟಿವಿ ಪರಿಶೀಲನೆ

    ಅಪರಿಚಿತ ವಾಹನ ಬೇಕಂತಲೇ ಗುದ್ದಿಕೊಂಡು ಹೋಗಿದೆಯಾ?

    ಎಎಸ್ಐ ಅಧಿಕಾರಿಯ ತಲೆ ಫುಲ್ ನಜ್ಜುಗುಜ್ಜಾಗಿದೆ​

ಕೊಪ್ಪಳ: ಹೈವೇ ಪೆಟ್ರೋಲಿಂಗ್ ಬಂದೋ ಬಸ್ತ್​ನಲ್ಲಿ ಇರುವಾಗ ಅಪರಿಚಿತ ವಾಹನವೊಂದು ಗುದ್ದಿಕೊಂಡು ಹೋದ ಪರಿಣಾಮ ಎಎಸ್​ಐ ಅಧಿಕಾರಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊಪ್ಪಳ ತಾಲೂಕಿನ ವನಬಳ್ಳಾರಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಭಾರೀ ಮಳೆ-ಗಾಳಿ.. ಅಪಾಯದ ಮಟ್ಟ ಮೀರಿದ ಕಾವೇರಿ.. ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ

ಮುನಿರಾಬಾದ್ ಪೊಲೀಸ್ ಠಾಣೆಯ ಎಎಸ್​ಐ ರಾಮಣ್ಣ (54) ಸಾವನ್ನಪ್ಪಿದವರು. ವನಬಳ್ಳಾರಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಎಸ್​ಐ ಹೈವೇನಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಅಪರಿಚಿತ ವಾಹನವೊಂದು ಅಧಿಕಾರಿಗೆ ಗುದ್ದಿಕೊಂಡು ಹೋಗಿದೆ. ಹೀಗಾಗಿ ಸ್ಥಳದಲ್ಲೇ ಅಧಿಕಾರಿ ಮೃತಪಟ್ಟಿದ್ದಾರೆ. ವಾಹನ ಗುದ್ದಿದ ರಭಸಕ್ಕೆ ಅಧಿಕಾರಿಯ ತಲೆ ನಜ್ಜುಗುಜ್ಜಾಗಿದ್ದು ಗುರುತು ಸಿಗಂತೆ ಆಗಿದೆ.

ಇದನ್ನೂ ಓದಿ: ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್.. ಬೆಳ್ಳಂಬೆಳಗ್ಗೆ ರಾಜ್ಯದ 54 ಕಡೆಗಳಲ್ಲಿ ರೇಡ್; ಎಲ್ಲೆಲ್ಲಿ?​

ಇಂದು ಬೆಳಗ್ಗೆ ಸರಿ ಸುಮಾರು 3:00 ಗಂಟೆಗೆ ಈ ಘಟನೆ ನಡೆದಿದೆ ಎನ್ನಲಾಗ್ತಿದೆ. ಘಟನಾ ಸ್ಥಳಕ್ಕೆ ಎಸ್​ಪಿ ರಾಮ್.ಎಲ್ ಅರೆಸಿದ್ದಿ ಹಾಗೂ ಸಿಪಿಐ ಸುರೇಶ್ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ನಡೆದ ಸ್ಥಳದ ಸುತ್ತುಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಿಟ್ ಅಂಡ್​ ರನ್​​ಗೆ ASI ಬಲಿ.. ಅಪಘಾತದ ಹೊಡೆತಕ್ಕೆ ಅಧಿಕಾರಿಯ ತಲೆ  ನಜ್ಜುಗುಜ್ಜು..

https://newsfirstlive.com/wp-content/uploads/2024/07/KPL_ASI_DEAD.jpg

Load More