newsfirstkannada.com

ಚಿಕ್ಕಮಗಳೂರಲ್ಲಿ 50 ಅಡಿ ಆಳದ ಪ್ರಪಾತಕ್ಕೆ ಬಿದ್ದ ಲಾರಿ.. ಚಾಲಕ ಬದುಕುಳಿದ್ದೇ ದೊಡ್ಡದು..

Share :

Published July 19, 2024 at 11:39am

Update July 19, 2024 at 11:40am

    ಕಾಫಿನಾಡಲ್ಲಿ ಲಾರಿ ಚಾಲಕ ಗ್ರೇಟ್ ಎಸ್ಕೇಪ್

    ನಿರಂತರ ಮಳೆಗೆ ಕುಸಿದ ನೆಮ್ಮಾರು ಸಮೀಪದ ರಸ್ತೆ

    ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ದುರ್ಘಟನೆ

ಚಿಕ್ಕಮಗಳೂರು: ರಾಜ್ಯದ ಕೆಲವು ಭಾಗಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಆಗುವ ಅನಾಹುತಗಳು ಅಷ್ಟಿಷ್ಟಲ್ಲ. ಗುಡ್ಡ ಕುಸಿತ, ರಸ್ತೆ ಮೇಲೆ ಮರ ಬೀಳುವ ಘಟನೆಗಳು ಹೆಚ್ಚುತ್ತಿದ್ದು ಭಾರೀ ಆತಂಕ ಶುರುವಾಗಿದೆ. ಈ ನಡುವೆ ಚಿಕ್ಕಮಗಳೂರಲ್ಲಿ ಲಾರಿ ಚಾಲಕನೊಬ್ಬ ಗ್ರೇಟ್ ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ:ಪಾಂಡ್ಯ ಹಿಂದಿಕ್ಕಿ ಸೂರ್ಯ ಪಟ್ಟ ಗಿಟ್ಟಿಸಿಕೊಂಡಿದ್ದು ಹೇಗೆ..? ಇದು ತ್ರಿಮೂರ್ತಿಗಳ ಕೃಪಾಕಟಾಕ್ಷ..!

ಲಾರಿ ಪ್ರಪಾತಕ್ಕೆ ಬಿದ್ದರೂ ಅದೃಷ್ಟವೆಂಬಂತೆ ಚಾಲಕ ಬದುಕುಳಿದಿದ್ದಾನೆ. ದುರ್ಘಟನೆಯಲ್ಲಿ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಶೃಂಗೇರಿ ನೆಮ್ಮಾರು ಬಳಿ ರಸ್ತೆ ಲಾರಿ ಪ್ರಪಾತಕ್ಕೆ ಕುಸಿದು ಬಿದ್ದಿದೆ. ನಿರಂತರ ಮಳೆಗೆ ನೆಮ್ಮಾರು ಸಮೀಪದ ರಸ್ತೆ ಕುಸಿದು ಅನಾಹುತ ಸಂಭವಿಸಿದೆ.

ಸದ್ಯ ಲಾರಿ ಚಾಲಕನನ್ನು ರಕ್ಷಣೆ ಮಾಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸುಮಾರು 50 ಅಡಿ ಆಳಕ್ಕೆ ಲಾರಿ ಬಿದ್ದಿದ್ದು, ಅದನ್ನು ಮೇಲೆತ್ತುವ ಸಾಹಸ ನಡೆಯುತ್ತಿದೆ.

ಇದನ್ನೂ ಓದಿ:ಪಾಂಡ್ಯ-ನಟಾಶಾ ಇನ್ಮುಂದೆ ಬೇರೆ ಬೇರೆ.. ಪುತ್ರ ಅಗಸ್ತ್ಯ ಯಾರ ಜೊತೆಗೆ ಇರುತ್ತಾನೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿಕ್ಕಮಗಳೂರಲ್ಲಿ 50 ಅಡಿ ಆಳದ ಪ್ರಪಾತಕ್ಕೆ ಬಿದ್ದ ಲಾರಿ.. ಚಾಲಕ ಬದುಕುಳಿದ್ದೇ ದೊಡ್ಡದು..

https://newsfirstlive.com/wp-content/uploads/2024/07/LORRY-ACCIDENT.jpg

Load More