newsfirstkannada.com

ಲಂಕಾ ಟೂರ್ನಿಗೆ ಟೀಂ ಇಂಡಿಯಾ.. ODI, T20 ಎರಡೂ ಸರಣಿಗಳಿಗೆ ಆಯ್ಕೆಯಾದ ಆಟಗಾರರು ಯಾರೆಲ್ಲ ಗೊತ್ತೇ..?

Share :

Published July 19, 2024 at 12:27pm

    ಲಂಕಾ ಪ್ರವಾಸಕ್ಕೆ ಟೀಮ್​ ಇಂಡಿಯಾ ಪ್ರಕಟ

    ಯಾರಿಗೆ ಜಾಕ್​ಪಾಟ್​..? ಯಾರಿಗೆ ಕೊಕ್​​..?

    ಏಕದಿನಕ್ಕೆ ರೋಹಿತ್, T20ಗೆ ಸೂರ್ಯ​ ನಾಯಕ

ಭಾರತೀಯ ಕ್ರಿಕೆಟ್​ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಟೀಮ್​ ಸೆಲೆಕ್ಷನ್​ ಚರ್ಚೆಗೆ ಕೊನೆಗೂ ತೆರೆ ಬಿದ್ದಿದೆ. ಅಂತೆ-ಕಂತೆಗಳಿಗೆಲ್ಲಾ ಫುಲ್​ ಸ್ಟಾಫ್​ ಬಿದ್ದಿದ್ದು, ಲಂಕಾ ಪ್ರವಾಸಕ್ಕೆ ಕೊನೆಗೂ ಟೀಮ್​ ಇಂಡಿಯಾ ಪ್ರಕಟಗೊಂಡಿದೆ.

ಸಾಕಷ್ಟು ಕುತೂಹಲ ಹುಟ್ಟುಹಾಕಿದ್ದ ಮುಂಬರೋ ಶ್ರೀಲಂಕಾ ಪ್ರವಾಸಕ್ಕೆ ಟೀಮ್​ ಇಂಡಿಯಾ ಅನೌನ್ಸ್​ ಆಗಿದೆ. ಸಾಕಷ್ಟು ಸರ್ಕಸ್​ ನಡೆಸಿದ ಬಿಸಿಸಿಐ ಬಾಸ್​ಗಳು ಹಾಗೂ ಸೆಲೆಕ್ಟರ್ಸ್​ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದ್ದಾರೆ. ಮುಂಬರೋ ಐಸಿಸಿ ಟ್ರೋಫಿಗಳನ್ನ ಗಮನದಲ್ಲಿರಿಸಿಕೊಂಡು ಏಕದಿನ ಹಾಗೂ ಟಿ20ಗೆ ಸಪರೇಟ್​ ಆಟಗಾರರ ತಂಡವನ್ನ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ:ಚಿಕ್ಕಮಗಳೂರಲ್ಲಿ 50 ಅಡಿ ಆಳದ ಪ್ರಪಾತಕ್ಕೆ ಬಿದ್ದ ಲಾರಿ.. ಚಾಲಕ ಬದುಕುಳಿದ್ದೇ ದೊಡ್ಡದು..

ಏಕದಿನಕ್ಕೆ ರೋಹಿತ್​ ಶರ್ಮಾ, T20ಗೆ ಸೂರ್ಯ​ ನಾಯಕ..!
ಶ್ರೀಲಂಕಾ ಪ್ರವಾಸದ ಸೆಲೆಕ್ಷನ್​ಗೂ ಮುನ್ನ ನಾಯಕತ್ವದ ಚರ್ಚೆ ಜೋರಾಗಿ ನಡೆದಿತ್ತು. ಏಕದಿನಕ್ಕೆ ರೋಹಿತ್​ ಶರ್ಮಾ ನಾಯಕನಾಗೋದು ಕನ್​​ಫರ್ಮ್​ ಅನ್ನೋದು ಮೊದಲೇ ಗೊತ್ತಿತ್ತು. ಟಿ20 ಫಾರ್ಮ್ಯಾಟ್​ಗೆ ರೋಹಿತ್​ ನಿವೃತ್ತಿ ಹೇಳಿದ್ರಿಂದ, ಯಾರು ಕ್ಯಾಪ್ಟನ್​ ಎಂಬ ಪ್ರಶ್ನೆ ಹುಟ್ಟಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದ್ದು, ಸೂರ್ಯಕುಮಾರ್​ ಯಾದವ್​​ ಟೀಮ್​ ಇಂಡಿಯಾದ ಟಿ20 ತಂಡದ ನಾಯಕನ ಪಟ್ಟವೇರಿದ್ದಾರೆ.

ಜಸ್​ಪ್ರಿತ್​ ಬೂಮ್ರಾಗೆ ರೆಸ್ಟ್​, ಶ್ರೇಯಸ್​ ಕಮ್​ಬ್ಯಾಕ್​
ಟೀಮ್​ ಇಂಡಿಯಾ ಮೂರು ಫಾರ್ಮೆಟ್​ನ ಸೂಪರ್​ ಸ್ಟಾರ್​ ವೇಗಿ ಜಸ್​ಪ್ರಿತ್​ ಬೂಮ್ರಾಗೆ ಪ್ರವಾಸದಿಂದ ರೆಸ್ಟ್​ ನೀಡಲಾಗಿದೆ. ಬೂಮ್ರಾ ಬದಲು ಯುವ ಹರ್ಷಿತ್​ ರಾಣಾಗೆ ಸ್ಥಾನ ಕಲ್ಪಿಸಲಾಗಿದೆ. ಕೆಲ ದಿನಗಳಿಂದ ತಂಡದಿಂದ ಹೊರಬಿದ್ದಿದ್ದ ಶ್ರೇಯಸ್ ಅಯ್ಯರ್,​​ ಏಕದಿನ ಮಾದರಿಗೆ ಕಮ್​​ಬ್ಯಾಕ್​​ ಮಾಡಿದ್ದಾರೆ. ಒಟ್ಟಾರೆ 15 ಆಟಗಾರರ ಬಲಿಷ್ಠ ತಂಡವನ್ನ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ:ಪಾಂಡ್ಯ-ನಟಾಶಾ ಇನ್ಮುಂದೆ ಬೇರೆ ಬೇರೆ.. ಪುತ್ರ ಅಗಸ್ತ್ಯ ಯಾರ ಜೊತೆಗೆ ಇರುತ್ತಾನೆ..?

ಏಕದಿನ ಸರಣಿಗೆ ಟೀಮ್​ ಇಂಡಿಯಾ
ರೋಹಿತ್​ ಶರ್ಮಾ (ನಾಯಕ), ಶುಭ್​ಮನ್​ ಗಿಲ್​ (ಉಪ ನಾಯಕ), ವಿರಾಟ್​ ಕೊಹ್ಲಿ, ಕೆ.ಎಲ್​ ರಾಹುಲ್ (WK)​, ರಿಷಭ್​ ಪಂತ್​ (WK), ಶ್ರೇಯಸ್​ ಅಯ್ಯರ್​, ರಿಯಾನ್​ ಪರಾಗ್​, ಶಿವಂ ದುಬೆ, ವಾಷಿಂಗ್ಟನ್​ ಸುಂದರ್​, ಅಕ್ಷರ್​ ಪಟೇಲ್​, ಕುಲ್​ದೀಪ್​ ಯಾದವ್​, ಖಲೀಲ್​ ಅಹ್ಮದ್​, ಮೊಹಮ್ಮದ್​ ಸಿರಾಜ್​, ಆರ್ಷ್​ದೀಪ್​ ಸಿಂಗ್​, ಹರ್ಷಿತ್​ ರಾಣಾ

ಚುಟುಕು ಫಾರ್ಮೆಟ್​ಗೆ ಯಂಗ್​ ಇಂಡಿಯಾ..!
ಜುಲೈ 27ರಿಂದ ಆರಂಭವಾಗಲಿರೋ ಟಿ20 ಸರಣಿಗೂ ತಂಡವನ್ನ ಆಯ್ಕೆ ಮಾಡಲಾಗಿದೆ. 2026ರ ಟಿ20 ವಿಶ್ವಕಪ್​ ಟೂರ್ನಿಯನ್ನ ಟಾರ್ಗೆಟ್​ ಮಾಡಿರುವ ನಯಾ ಕೋಚ್​ ಗಂಭೀರ್​ ಹಾಗೂ ಸೆಲೆಕ್ಷನ್​ ಕಮಿಟಿ ಚೇರ್ಮನ್​ ಅಜಿತ್​ ಅಗರ್ಕರ್​​ ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದಾರೆ. ಸೂರ್ಯಕುಮಾರ್​ ಯಾದವ್​ ನೇತೃತ್ವದಲ್ಲಿ 15 ಯುವ ಆಟಗಾರರ ತಂಡವನ್ನ ಚುಟುಕು ಫಾರ್ಮೆಟ್​​ಗೆ ಸೆಲೆಕ್ಟ್​ ಮಾಡಲಾಗಿದೆ.

T20 ಸರಣಿಗೆ ಟೀಮ್​ ಇಂಡಿಯಾ: ಸೂರ್ಯಕುಮಾರ್​ (ನಾಯಕ), ಶುಭ್​ಮನ್​ ಗಿಲ್ (ಉಪ ನಾಯಕ)​, ಯಶಸ್ವಿ ಜೈಸ್ವಾಲ್​, ರಿಂಕು ಸಿಂಗ್​, ರಿಯಾನ್​ ಪರಾಗ್​, ರಿಷಭ್​ ಪಂತ್​ (WK), ಸಂಜು ಸ್ಯಾಮ್ಸನ್​ (WK), ಹಾರ್ದಿಕ್​ ಪಾಂಡ್ಯ, ಶಿವಂ ದುಬೆ, ಅಕ್ಷರ್​ ಪಟೇಲ್​, ವಾಷಿಂಗ್ಟನ್​ ಸುಂದರ್​, ರವಿ ಬಿಷ್ನೋಯ್​, ಆರ್ಷ್​ದೀಪ್​ ಸಿಂಗ್​, ಖಲೀಲ್​ ಅಹ್ಮದ್, ಮೊಹಮ್ಮದ್​ ಸಿರಾಜ್​

ODI ಮತ್ತು ಟಿ20 ಎರಡೂ ಪಂದ್ಯ ಆಡುವ ಆಟಗಾರರು!
ಶುಬ್ಮನ್ ಗಿಲ್, ರಿಷಬ್ ಪಂತ್, ರಿಯಾನ್ ಪರಾಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ಖಲೀಲ್​ ಅಹ್ಮದ್, ಮೊಹ್ಮದ್ ಸಿರಾಜ್, ಆರ್ಷ್​ದೀಪ್​ ಸಿಂಗ್ ಸೇರಿ ಒಟ್ಟು 9 ಆಟಗಾರರು ಏಕದಿನ ಸರಣಿ ಹಾಗೂ ಟಿ-20 ಸರಣಿಗಳಲ್ಲಿ ಆಡಲಿದ್ದಾರೆ. ಒಟ್ಟಿನಲ್ಲಿ ಸಿಂಹಳೀಯರನ್ನ ಬೇಟೆಗೆ ಸಾಕಷ್ಟು ಲೆಕ್ಕಾಚಾರ ಹಾಕಿ ಸೆಲೆಕ್ಷನ್​ ಕಮಿಟಿ ಬಲಿಷ್ಠ ತಂಡವನ್ನೆ ಸೆಲೆಕ್ಟ್​ ಮಾಡಿದೆ. ಆನ್​​ಫೀಲ್ಡ್​ನಲ್ಲಿ ಆಟಗಾರರ ಪರ್ಫಾಮೆನ್ಸ್​ ಹೇಗಿರುತ್ತೆ ಅನ್ನೋದಷ್ಟೇ ಸದ್ಯದ ಕುತೂಹಲವಾಗಿದೆ. ಇದಕ್ಕೆ ಜುಲೈ 27ರಿಂದ ಆರಂಭವಾಗಲಿರೋ ಸರಣಿ ಉತ್ತರ ಕೊಡಲಿದೆ.

ಇದನ್ನೂ ಓದಿ:ಪಾಂಡ್ಯ ಹಿಂದಿಕ್ಕಿ ಸೂರ್ಯ ಪಟ್ಟ ಗಿಟ್ಟಿಸಿಕೊಂಡಿದ್ದು ಹೇಗೆ..? ಇದು ತ್ರಿಮೂರ್ತಿಗಳ ಕೃಪಾಕಟಾಕ್ಷ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಲಂಕಾ ಟೂರ್ನಿಗೆ ಟೀಂ ಇಂಡಿಯಾ.. ODI, T20 ಎರಡೂ ಸರಣಿಗಳಿಗೆ ಆಯ್ಕೆಯಾದ ಆಟಗಾರರು ಯಾರೆಲ್ಲ ಗೊತ್ತೇ..?

https://newsfirstlive.com/wp-content/uploads/2024/07/SURYAKUMAR-YADAV-2.jpg

Load More