newsfirstkannada.com

ಮಳೆ, ಪ್ರವಾಹ, ಸಂಕಷ್ಟ.. ಶಾಲಾ-ಕಾಲೇಜುಗಳಿಗೆ ರಜೆ.. ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ

Share :

Published July 20, 2024 at 6:52am

    ಒಂದು ವಾರದ ನಿರಂತರ ಮಳೆಯಿಂದ ಉಡುಪಿ ತತ್ತರ

    ಕುಸಿಯುತ್ತಿರುವ ಗುಡ್ಡ, ರಸ್ತೆ ಸಂಚಾರಕ್ಕೆ ಅಡ್ಡಿ, ಸಂಕಷ್ಟವೋ ಸಂಕಷ್ಟ

    ಕೊಡಗಿನಲ್ಲೂ ಭಾರೀ ಗಾಳಿ ಮಳೆಯ ಅಬ್ಬರ.. ತುಂಬಿ ಹರಿಯುತ್ತಿರುವ ನದಿಗಳು

ರೆಡ್​ ಅಲರ್ಟ್​. ರಾಜ್ಯದಾದ್ಯಂತ ಮಳೆರಾಯನ ಸವಾರಿಗೆ ಗುಡ್ಡ ಕುಸಿತ. ಮನೆ ಕುಸಿತ. ನೀರುಪಾಲು. ಸಾವು ನೋವುಗಳು ಒಂದರ ನಂತರ ಒಂದು ಅವಘಡಗಳು ನಡೆಯುತ್ತಲೇ ಇದೆ. ಆದರೆ ಎಲ್ಲೆಲ್ಲಿ ಏನೇನು​ ಆಗಿದೆ ಅನ್ನೋ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಕಡಲಬ್ಬರಕ್ಕೆ ತೆಂಗಿನ ಮರ ನೀರುಪಾಲು, ಹೆಚ್ಚಿದ ಆತಂಕ

ಉಡುಪಿ ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ನಿರಂತರ ಮಳೆ ಸುರಿಯುತ್ತಿದೆ. ಜೂನ್ ಆರಂಭದಲ್ಲಿ ಬಿತ್ತನೆ ಬೇಸಾಯ ಮಾಡಿದ ಗದ್ದೆಗಳೆಲ್ಲಾ ಮಳೆ ನೀರಲ್ಲಿ ಜಲಾವೃತವಾಗಿದೆ. ಮಳೆಯ ಅಬ್ಬರ ಜೊತೆ ಕಡಲ ತೀರದಲ್ಲಿ ಗಾಳಿಯ ತೀವ್ರತೆಯೂ ಹೆಚ್ಚಾಗಿದೆ. ನಾವುಂದದಲ್ಲಿ ಉಕ್ಕೇರಿ ಹರಿಯುತ್ತಿರುವ ಕಡಲಬ್ಬರಕ್ಕೆ ತೆಂಗಿನ ಮರ ನೀರುಪಾಲಾಗಿದ್ದು, ತಡೆಗೋಡೆಗಳು ಕುಸಿಯುವ ಭೀತಿ ಎದುರಾಗಿದೆ. ಉಡುಪಿಯಲ್ಲಿ ಇಂದು ಸಹ ರೆಡ್ ಅಲರ್ಟ್ ಸೂಚಿಸಲಾಗಿದ್ದು ಮಾಡಲಾಗಿದ್ದು, ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಪದವಿ, ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜುಗಳು ಎಂದಿನಂತೆ ಇರಲಿದೆ ಎಂದು ಡಿಸಿ ಆದೇಶಿಸಿದ್ದಾರೆ.

ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ 766Eನಲ್ಲಿ ಗುಡ್ಡ ಕುಸಿತ

ಇನ್ನೂ ಗುಡ್ಡ ಕುಸಿತ ಅಂದ್ರೆ ನೆನಪಾಗೋದು ಉತ್ತರ ಕನ್ನಡ ಎಂಬಂತಾಗಿದೆ. ನಿನ್ನೆ ಕೂಡ ಶಿರಸಿ – ಕುಮಟಾ ರಾಷ್ಟ್ರೀಯ ಹೆದ್ದಾರಿಯ ರಾಗಿಹೊಸಳ್ಳಿ ಬಳಿ ಗುಡ್ಡಕುಸಿತವಾಗಿದ್ದು, ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ ಕಳೆದ 4 ದಿನಗಳಿಂದ ಬಂದ್ ಆಗಿದೆ. ಹೆದ್ದಾರಿಯ ಅಲ್ಲಲ್ಲಿ ಗುಡ್ಡ ಮತ್ತೆ ಕುಸಿಯುತ್ತಿದ್ದು ಸಂಚಾರ ದುಸ್ತರವಾಗಿದೆ. ಶಿರೂರು ಗುಡ್ಡ ಕುಸಿತದ ಸ್ಥಳಕ್ಕೆ ಐಜಿಪಿ ಅಮಿತ್​ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇವತ್ತು ಸಹ ರೆಡ್​ ಅಲರ್ಟ್​ ಇರೋ ಕಾರಣ, ಜಿಲ್ಲೆಯಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ವ್ಯಾಪಕ ಮಳೆ ಹಿನ್ನೆಲೆ ಮನೆ ಗೋಡೆ ಕುಸಿದು ಮಹಿಳೆ ಸಾವು

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಕಗ್ಗುಂಡಿ ಗ್ರಾಮದಲ್ಲಿ ವ್ಯಾಪಕ ಮಳೆಯಾಗಿದ್ದು, ಶಿಥಲಗೊಂಡಿದ್ದ ಗೋಡೆ ಕುಸಿದು ಮಗುವಿನ ಜೊತೆ ಮಲಗಿದ್ದಾಗ ಹೇಮಲತಾ ಎಂಬ ಮಹಿಳೆ ಮೃತ ಪಟ್ಟಿದ್ದಾಳೆ. ಗೋಡೆ ಬೀಳುವುದನ್ನ ಕಂಡು ತಾಯಿ ಹೇಮಲತಾ ಮಗುವನ್ನ ಹೊರಕ್ಕೆ ತಳ್ಳಿದ್ದಾಳೆ. ಅದೃಷ್ಟವಶಾತ್ ಕಂದಮ್ಮ ಪ್ರಾಣಾಪಾಯದಿಂದ ಪಾರಾಗಿದೆ.

ಶಿರಾಡಿಘಾಟ್ ಸಂಚಾರ ಬಂದ್ ಆದೇಶ ಹಿಂಪಡೆದ ಜಿಲ್ಲಾಡಳಿತ

ಹಾಸನ ಜಿಲ್ಲೆಯ ಶಿರಾಡಿಘಾಟ್ ಸಂಚಾರ ಬಂದ್ ಆದೇಶ ಜಿಲ್ಲಾಡಳಿತ ಹಿಂಪಡೆದಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮಂಗಳೂರು-ಬೆಂಗಳೂರು ನಡುವೆ ವಾಹನ ಸಂಚಾರ ಸಂಪೂರ್ಣ ನಿರ್ಬಂಧದಿಂದ ದೊಡ್ಡ ಸಮಸ್ಯೆ ಹಿನ್ನೆಲೆಯಲ್ಲಿ ನಿರ್ಬಂಧಿತ ನಿಯಮಗಳಡಿ ಸಂಚಾರಕ್ಕೆ ಅವಕಾಶ ನೀಡಿ ಹೊಸ ಆದೇಶ ಹೊರಡಿಸಲಾಗಿದೆ. ಇನ್ನೂ ಹಾಸನದ ಸಕಲೇಶಪುರ, ಆಲೂರು, ಬೇಲೂರು, ಹಾಸನ, ಹೊಳೆನರಸೀಪುರ ಮತ್ತು ಅರಕಲಗೂಡು ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಿಗೂ ರೆಡ್ ಅಲರ್ಟ್ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹವಾಮಾನ ಇಲಾಖೆ ರೆಡ್ ಅಲರ್ಟ್ ಸೂಚಿಸಿದ್ದು, ಅಂಗನವಾಡಿಯಿಂದ ಪದವಿಪೂರ್ವ ತರಗತಿವರೆಗೆ ರಜೆ ಘೋಷಣೆ ಮಾಡಲಾಗಿದೆ. ಅತ್ತ ಕೊಡಗಿನಲ್ಲಿ‌ ಭಾರೀ ಗಾಳಿ ಸಮೇತ ಮಳೆ ಅಬ್ಬರ ಮುಂದುವರೆದಿದ್ದು, ರೆಡ್ ಅಲರ್ಟ್ ನೀಡಲಾಗಿದೆ. ಜಿಲ್ಲೆಯ ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳನ್ನ ಹೊರತು ಪಡಿಸಿ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

ಒಟ್ಟಾರೆ, ರಾಜ್ಯದಾದ್ಯಂತ ಮಳೆರಾಯನ ಅಟಾಟೋಪ ಮುಂದುವರೆದಿದೆ. ರಾಜ್ಯದ ಒಂದೆರಡು ಜಲಾಶಯಗಳು ಬಿಟ್ರೆ ಬೇರಲ್ಲಾ ನದಿಗಳು, ಡ್ಯಾಂಗಳು, ಹಳ್ಳ ಕೊಳ್ಳಗಳು ಫುಲ್​ ಆಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಳೆ, ಪ್ರವಾಹ, ಸಂಕಷ್ಟ.. ಶಾಲಾ-ಕಾಲೇಜುಗಳಿಗೆ ರಜೆ.. ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ

https://newsfirstlive.com/wp-content/uploads/2024/07/Udupi-rain.jpg

Load More