newsfirstkannada.com

‘ವೈಯಕ್ತಿಕ ಗಲಾಟೆಗಳಿಗಿಂತ ದೇಶವೇ ಫಸ್ಟ್​’.. ಸಾಮರಸ್ಯ ಸಂದೇಶ ಸಾರಿದ ಗಂಭೀರ್- ವಿರಾಟ್​ ಕೊಹ್ಲಿ!

Share :

Published July 20, 2024 at 4:15pm

    ಟೀಮ್ ಇಂಡಿಯಾ ಇಬ್ಭಾಗವಾಗೋ ಭಯ ಕಾಡಿತ್ತಾ ಬಿಸಿಸಿಐಗೆ.?

    3 ಬಾರಿ ಐಪಿಎಲ್​ ವೇಳೆ ಇಬ್ಬರೂ ಆನ್​ಫೀಲ್ಡ್​ನಲ್ಲೇ ಕಿತ್ತಾಡಿದ್ದರು

    ಆ ಒಂದೇ ಒಂದು ಸಭೆಯಲ್ಲಿ ಇಬ್ಬರ ನಡುವೆ ನಡೆದ ಚರ್ಚೆ ಏನು?

ಶ್ರೀಲಂಕಾ ಎದುರಿನ ಪ್ರವಾಸಕ್ಕೆ ಟೀಮ್​ ಅನೌನ್ಸ್​ ಆಗೋದ್ರೊಂದಿಗೆ ಬಿಸಿಸಿಐ ಬಾಸ್​ಗಳಿಗೆ ಬಿಗ್​ ರಿಲೀಫ್​ ಸಿಕ್ಕಿದೆ. ಕೋಚ್​ ಗೌತಮ್ ಗಂಭೀರ್​, ಕಿಂಗ್​ ಕೊಹ್ಲಿ. ಈ ಇಬ್ಬರನ್ನ ಹೇಗಪ್ಪಾ ನಿಭಾಯಿಸೋದು ಅನ್ನೋ ಟೆನ್ಶನ್ ಇದೀಗ​​ ದೂರವಾಗಿದೆ. ವೈಮನಸ್ಸು, ಮನಸ್ತಾಪಕ್ಕಿಂತ ದೇಶವೇ ಮುಖ್ಯ ಅನ್ನೋ ಸಂದೇಶವನ್ನ ಕಿಂಗ್​ ಕೊಹ್ಲಿ ಸಾರಿದ್ದಾರೆ. ಆ ಒಂದು ಮೀಟಿಂಗ್​ ಈ ಬದಲಾವಣೆ ಹಿಂದಿನ ಸೀಕ್ರೆಟ್​​. ಆ ಮಿಸ್ಟ್ರಿ ಮೀಟಿಂಗ್​​ನ ಕಥೆಯ ವಿವರ ಇಲ್ಲಿದೆ.

ಟೀಮ್​ ಇಂಡಿಯಾ ಹೆಡ್​ ಕೋಚ್​ ಆಗಿ ಗಂಭೀರ್​​ ಆಯ್ಕೆಗೂ ಮುನ್ನವೇ ಬಿಸಿಸಿಐ ವಲಯದಲ್ಲಿ ತೀವ್ರ ಆತಂಕ ಕಾಡಿತ್ತು. ಸ್ವಲ್ಪ ಯಡವಟ್ಟಾದ್ರೂ, ಡ್ರೆಸ್ಸಿಂಗ್​ ರೂಮ್​ ವಾತಾವರಣ ಹಾಳಾಗುವ ಆತಂಕ ಶುರುವಾಗಿತ್ತು. ಜೂನಿಯರ್ಸ್​​, ಸೀನಿಯರ್ಸ್​ ಎನ್ನದೇ ಒಗ್ಗಟ್ಟಿನ ಸಂದೇಶ ಸಾರ್ತಿರೋ ಟೀಮ್​ ಇಂಡಿಯಾ ಇಬ್ಭಾಗವಾಗೋ ಭಯ ಕಾಡಿತ್ತು. ಗೌತಮ್​​ ಗಂಭೀರ್​ -ವಿರಾಟ್​​ ಕೊಹ್ಲಿ ನಡುವೆ ಇದ್ದ ವೈಮನಸ್ಸು ಇದಕ್ಕೆಲ್ಲ ಕಾರಣವಾಗಿತ್ತು.

ಒಂದಲ್ಲ.. ಮೂರು ಬಾರಿ ಆನ್​ಫೀಲ್ಡ್​ನಲ್ಲೇ ಕಿತ್ತಾಟ.!

ಗೌತಮ್​ ಗಂಭೀರ್​ -ವಿರಾಟ್​ ಕೊಹ್ಲಿ ಆರಂಭದಲ್ಲಿ ಭಾಯಿ- ಭಾಯಿಯಾಗೇ ಇದ್ರು. ಆದ್ರೆ, ಐಪಿಎಲ್​ನಲ್ಲಿ ಮೇಲಿಂದ ಮೇಲೆ ನಡೆದ ಘಟನೆಗಳು ಇಬ್ಬರ ನಡುವೆ ಬಿಕ್ಕಟ್ಟು ಸೃಷ್ಟಿ ಮಾಡಿತ್ತು. ಒಂದಲ್ಲ.. ಎರಡಲ್ಲ.. ಬರೋಬ್ಬರಿ 3 ಬಾರಿ ಐಪಿಎಲ್​ ವೇಳೆ ಇಬ್ಬರೂ ಆನ್​ಫೀಲ್ಡ್​ನಲ್ಲೇ ಕಿತ್ತಾಡಿಕೊಂಡಿದ್ರು. ಇಬ್ಬರ ನಡುವಿನ ಜಗಳ ಹೊಡೆದಾಡೋ ಮಟ್ಟಕ್ಕೆ ತಾರಕಕ್ಕೇರಿದ್ದೂ ಇದೇ. ಅಕ್ಷರಶಃ.. ಇಬ್ಬರು ಹಾವು-ಮುಂಗುಸಿ ತರ ಕಿತ್ತಾಡಿದ್ರು.

ಈ ಕಿತ್ತಾಟಗಳ ಕಾರಣದಿಂದಲೇ ಗೌತಮ್​​ ಗಂಭೀರ್​ನ ಕೋಚ್​ ಆಗಿ ನೇಮಿಸೋ ಮುಂಚೆ ಬಿಸಿಸಿಐ ವಲಯದಲ್ಲಿ ಆತಂಕ ಕಾಡಿತ್ತು. ಕ್ರಿಕೆಟ್ ಫ್ಯಾನ್ಸ್​ ಈ ಬಗ್ಗೆ ಪ್ರಶ್ನೆ ಎತ್ತಿದ್ರು. ಇದೀಗ ಗೌತಮ್​​ ಗಂಭೀರ್​ ಹೆಡ್​ ಕೋಚ್​​ ಆಗಿ ಆಯ್ಕೆಯಾಗಿದ್ದಾಗಿದೆ. ಲಂಕಾ ಸರಣಿಯಿಂದ ರೆಸ್ಟ್​ ಬೇಕು ಎಂದಿದ್ದ ಕೊಹ್ಲಿಯನ್ನ ಕೂಡ ತಂಡಕ್ಕೆ ಮಾಡಿದ್ದಾಗಿದೆ. ಆತಂಕವೆಲ್ಲ ದೂರವಾಗಿ ಬಿಸಿಸಿಐ ಬಾಸ್​ಗಳು ನಿರಾಳರಾದಂತೆ ಕಾಣ್ತಿದ್ದಾರೆ. ಇದಕ್ಕೆಲ್ಲ ಕಾರಣ ಆ ಒಂದು ಮೀಟಿಂಗ್​.

ಒಂದು ಮೀಟಿಂಗ್.. ಆಂತರಿಕ ಕಲಹಕ್ಕೆ ಫುಲ್​ಸ್ಟಾಫ್​.!

ಟೀಮ್​ ಇಂಡಿಯಾ ಬಾರ್ಬೊಡಸ್​​ನಲ್ಲಿ ವಿಶ್ವಕಪ್​ ಗೆಲ್ಲೊದ್ರಿಂದಿಗೆ ರಾಹುಲ್​ ದ್ರಾವಿಡ್​ ಅಧಿಕಾರವಧಿ ಅಂತ್ಯ ಕಾಣ್ತು. ಅದ್ರ ಬೆನ್ನಲ್ಲೇ, ಅದೇ ಬಾರ್ಬೊಡಸ್​​ನಲ್ಲಿ ಒಂದು ಹೈವೋಲ್ಟೆಜ್​ ಸಭೆ ನಡೀತು. ಬಿಸಿಸಿಐ ಸೆಕ್ರೆಟರಿ ಜಯ್​​ ಶಾ ಸೇರಿದಂತೆ ಬಿಸಿಸಿಐನ ಪ್ರಮುಖರು ಹಾಗೂ ಕೊಹ್ಲಿ ನಡುವೆ ನಡೆದ ಸಭೆ ಅದಾಗಿತ್ತು. ಆ ಸಭೆಯಲ್ಲೇ ನಡೆದಿದ್ದು ಗೌತಮ್​ ಗಂಭೀರ್​​ ಆಯ್ಕೆ ಬಗೆಗಿನ ಚರ್ಚೆ.

ದೇಶಕ್ಕಾಗಿ ವೈಮನಸ್ಸು ದೂರ ಮಾಡಿದ ವಿರಾಟ್ ಕೊಹ್ಲಿ

ಬಾರ್ಬೊಡಸ್​​​ನಲ್ಲೇ ಹೆಡ್ ​ಕೋಚ್​ ಸ್ಥಾನಕ್ಕೆ ಗೌತಮ್​ ಗಂಭೀರ್​​ ನೇಮಕದ ಬಗ್ಗೆ ಬಿಸಿಸಿಐ ಬಾಸ್​ಗಳು ಕೊಹ್ಲಿ ಜೊತೆಗೆ ಚರ್ಚೆಸಿದ್ರಂತೆ. ಇಬ್ಬರ ನಡುವಿನ ವೈಮನಸ್ಸು ತಂಡದ ವಾತಾವರಣ ಹಾಳು ಮಾಡಬಾರದು ಅನ್ನೋದು ಆ ಸಭೆಯ ಉದ್ದೇಶವಾಗಿತ್ತು. ಅಲ್ಲಿ ಮಾತನಾಡಿದ್ದ ಕೊಹ್ಲಿ, ನಮ್ಮಿಬ್ಬರ ನಡುವಿನ ವೈಯಕ್ತಿಕ ಘಟನೆಗಳು ತಂಡಕ್ಕೆ ಯಾವುದೇ ರೀತಿಯಲ್ಲಿ ಸಮಸ್ಯೆ ಉಂಟು ಮಾಡಲ್ಲ. ದೇಶದ ಹಿತವೇ ಮುಖ್ಯ, ತಂಡಕ್ಕಾಗಿ ಈ ಹಿಂದಿನ ವೈಮನಸ್ಸನ್ನ ದೂರ ಮಾಡಲು ಸಿದ್ಧ ಎಂದು ಹೇಳಿದ್ರಂತೆ. ಕೊಹ್ಲಿ ಕಾಂಪ್ರಮೈಸ್​ ಆಗೋ ಮಾತು ಆಡಿದ ಮೇಲೆ ಗಂಭೀರ್​ ಮುಂದಿನ ಹೆಡ್​ ಕೋಚ್​ ಅನ್ನೋ ಅಫಿಶೀಯಲ್​ ಅನೌನ್ಸ್​ಮೆಂಟ್​ ಆಗಿದ್ದು.

ಕೊಟ್ಟ ಮಾತಿನಂತೆ ನಡೆದುಕೊಂಡ ಕೊಹ್ಲಿ.!

ಮೀಟಿಂಗ್​ನಲ್ಲಿ ದೇಶದ ಹಿತವೇ ಮುಖ್ಯ ಎಂದು ಹೇಳಿದ ಮಾತಿನಂತೆ ಇದೀಗ ಕೊಹ್ಲಿ ನಡೆದುಕೊಂಡಿದ್ದಾರೆ. ಶ್ರೀಲಂಕಾ ಪ್ರವಾಸದ ಏಕದಿನ ಸರಣಿಯಿಂದ​ ವಿರಾಟ್​ ಕೊಹ್ಲಿ ವಿಶ್ರಾಂತಿ ಬಯಸಿದ್ರು. ಆದ್ರೆ, ನಯಾ ಕೋಚ್ ಗಂಭೀರ್​ ಚಾಂಪಿಯನ್ಸ್​​ ಟ್ರೋಫಿಗೆ ಸಿದ್ಧತೆಯ ದೃಷ್ಟಿಯಿಂದ ವಿಶ್ರಾಂತಿ ನೀಡೋಕೆ ಸಾಧ್ಯವಿಲ್ಲ ಅಂತಾ ಹೇಳಿದ್ರು. ಗಂಭೀರ್​ ಮಾತಿಗೆ ಒಪ್ಪಿಗೆ ಸೂಚಿಸಿರೋ ಕೊಹ್ಲಿ ಏಕದಿನ ಸರಣಿಯಾಡಲು ಯೆಸ್​ ಅಂದಿದ್ದಾರೆ.

ಕೊಟ್ಟ ಮಾತಿನಂತೆ ನಡೆದುಕೊಂಡಿರೋ ಕೊಹ್ಲಿ, ತಂಡದ ಆಯ್ಕೆ ವಿಚಾರದಲ್ಲಿ ಗಂಭೀರ್​ ಮಾತಿಗೆ ಬೆಲೆ ಕೊಟ್ಟಿದ್ದಾರೆ. ತಂಡದ ಒಳತಿಗಾಗಿ ವೈಮನಸ್ಸು ತೊಡೆದು ಹಾಕಿ ಸಾಮರಸ್ಯದ ಸಂದೇಶ ಸಾರಿದ್ದಾರೆ. ಮುಂದೆಯು ಡೆಲ್ಲಿ ಬಾಯ್ಸ್​ ನಡುವಿನ ಬಾಂಧವ್ಯ ಹೀಗೆ ಇರಲಿ ಅನ್ನೋದು ಫ್ಯಾನ್ಸ್​ ಆಶಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘ವೈಯಕ್ತಿಕ ಗಲಾಟೆಗಳಿಗಿಂತ ದೇಶವೇ ಫಸ್ಟ್​’.. ಸಾಮರಸ್ಯ ಸಂದೇಶ ಸಾರಿದ ಗಂಭೀರ್- ವಿರಾಟ್​ ಕೊಹ್ಲಿ!

https://newsfirstlive.com/wp-content/uploads/2024/07/VIRAT_KOHLI_GAMBHIR.jpg

Load More