newsfirstkannada.com

ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ.. 1000 ಭಾರತೀಯ ವಿದ್ಯಾರ್ಥಿಗಳ ರಕ್ಷಣೆಯೇ ರೋಚಕ

Share :

Published July 20, 2024 at 6:38pm

Update July 20, 2024 at 7:46pm

    ದೇಶದ ಹಲವು ಪ್ರದೇಶಗಳಲ್ಲಿ ಕರ್ಫ್ಯೂ, ವಿಮಾನಗಳು ಕ್ಯಾನ್ಸಲ್​

    ಬಾಂಗ್ಲಾದಿಂದ ಸುರಕ್ಷಿತವಾಗಿ ವಾಪಸ್ ಆಗ್ತಾರಾ ವಿದ್ಯಾರ್ಥಿಗಳು

    ಫುಲ್ ಆತಂಕದಲ್ಲಿ ದಿನ ಕಳೆಯುತ್ತಿರುವ ಭಾರತದ ಸ್ಟೂಡೆಂಟ್ಸ್​

ನವದೆಹಲಿ: ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರುದ್ಧದ ಹಿಂಸಾಚಾರ ಮುಂದುವರೆದಿದ್ದು, ಈವರೆಗೆ 105 ಜನ ಮೃತಪಟ್ಟಿದ್ದು ನೂರಾರು ಮಂದಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಭಾರತದಿಂದ ಉನ್ನತ ವ್ಯಾಸಂಗಕ್ಕಾಗಿ ತೆರಳಿದ್ದ 1,000 ಸ್ಟೂಡೆಂಟ್​ ಹಿಂದಿರುಗಿದ್ದು ಇನ್ನೂ 4,000 ವಿದ್ಯಾರ್ಥಿಗಳು ಅಲ್ಲೇ ಉಳಿದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮರಕ್ಕೆ ಗುದ್ದಿದ ಸರ್ಕಾರಿ ಬಸ್.. ಡ್ರೈವರ್​ನ 2 ಕಾಲು ಕಟ್​, ನಾಲ್ವರ ಸ್ಥಿತಿ ಚಿಂತಾಜನಕ

ಭಾರತೀಯ ವಿದ್ಯಾರ್ಥಿಗಳನ್ನು ತವರಿಗೆ ಕರೆದುಕೊಂಡು ಬರಲು ವಿದೇಶಾಂಗ ಸಚಿವಾಲಯ ಎಲ್ಲ ರೀತಿಯ ಸಹಾಯ ಮಾಡುತ್ತಿದೆ. ನಾಗರಿಕ ವಿಮಾನಯಾನ, ಭೂ ಬಂದರು ಮತ್ತು ಗಡಿ ಭದ್ರತಾ ಪಡೆ (BSF)ಗಳು ಭಾರತ-ಬಾಂಗ್ಲಾ ಗಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಖಚಿತ ಪಡಿಸಿಕೊಂಡು ದೇಶದೊಳಗೆ ಬಿಡುತ್ತಿದ್ದಾರೆ. ವಿವಿಧ ಭೂ ಬಂದರುಗಳಿಂದ ಈಗಾಗಲೇ 778 ವಿದ್ಯಾರ್ಥಿಗಳು ತವರಿಗೆ ಆಗಮಿಸಿದ್ದಾರೆ. ಇನ್ನು ಢಾಕಾ ಮತ್ತು ಚಿತ್ತಗಾಂಗ್ ವಿಮಾನ ನಿಲ್ದಾಣದಿಂದ ಎಂದಿನಂತೆ ಬರುವ ವಿಮಾನಗಳಲ್ಲಿ 200 ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ನಿರ್ದೇಶಕ ವಿನೋದ್ ದೋಂಡಾಲೆ ಸಾವಿಗೆ ಟಿ.ಎನ್ ಸೀತಾರಾಮ್ ಸಂತಾಪ; ಹೇಳಿದ್ದೇನು?

ಸದ್ಯ ಬಾಂಗ್ಲಾದೇಶದೆಲ್ಲೆಡೆ ಇರುವ ವಿಶ್ವವಿದ್ಯಾಲಯಗಳಲ್ಲಿ ಉಳಿದುಕೊಂಡ ಇನ್ನು 4000 ವಿದ್ಯಾರ್ಥಿಗಳೊಂದಿಗೆ ಭಾರತದ ಹೈ ಕಮಿಷನರ್ ಅವರು ನಿರಂತರ ಸಂಪರ್ಕದಲ್ಲಿದ್ದಾರೆ. ಅಲ್ಲದೇ ಮನವಿಯ ಮೇರೆಗೆ ನೇಪಾಳ ಹಾಗೂ ಭೂತಾನ್​ ರಾಷ್ಟ್ರಗಳ ವಿದ್ಯಾರ್ಥಿಗಳನ್ನು ಭಾರತದ ಮೂಲಕ ತಮ್ಮ ದೇಶಕ್ಕೆ ತೆರಳು ಅನುಮತಿ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ‘ವೈಯಕ್ತಿಕ ಗಲಾಟೆಗಳಿಗಿಂತ ದೇಶವೇ ಫಸ್ಟ್​’.. ಸಾಮರಸ್ಯ ಸಂದೇಶ ಸಾರಿದ ಗಂಭೀರ್- ವಿರಾಟ್​ ಕೊಹ್ಲಿ!

ಬಾಂಗ್ಲಾದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಮಾನ ಟಿಕೆಟ್​ಗಳನ್ನು ಬುಕ್ ಮಾಡಿದ್ದಾರೆ. ಆದರೆ ಆ ಪ್ರದೇಶಗಳಲ್ಲಿ ಕರ್ಫ್ಯೂ ಇರುವುದರಿಂದ ಯಾರು ಕೂಡ ಏರ್​ಪೋರ್ಟ್​ಗೆ ಬರಲು ಆಗುತ್ತಿಲ್ಲ. ಬಾಂಗ್ಲಾದಿಂದ ತೆರಳುವಂತ ಸಾಕಷ್ಟು ವಿಮಾನಗಳನ್ನು ಕ್ಯಾನ್ಸಲ್ ಮಾಡಲಾಗಿದೆ. ಆದರೆ ವಿವಿಗಳ ಹಾಸ್ಟೆಲ್​ಗಳಲ್ಲಿ ಇರುವ ವಿದ್ಯಾರ್ಥಿಗಳು ಸದ್ಯಕ್ಕೆ ಸೇಫ್ ಆಗಿದ್ದಾರೆ. ಅವರು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಆಗುತ್ತಾರೆ ಎಂದು ತಿಳಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ.. 1000 ಭಾರತೀಯ ವಿದ್ಯಾರ್ಥಿಗಳ ರಕ್ಷಣೆಯೇ ರೋಚಕ

https://newsfirstlive.com/wp-content/uploads/2024/07/BANGLADESH_1.jpg

Load More