newsfirstkannada.com

IT ಕಂಪನಿ ಉದ್ಯೋಗಿಗಳು ಓದಲೇಬೇಕಾದ ಸ್ಟೋರಿ​.. ಇನ್ಮುಂದೆ 14 ಗಂಟೆ ಕೆಲಸ ಮಾಡೋದು ಫಿಕ್ಸ್​?

Share :

Published July 21, 2024 at 10:50am

Update July 21, 2024 at 1:52pm

    ಐಟಿ- ಬಿಟಿ ಕಂಪನಿಗಳ ಒತ್ತಡಕ್ಕೆ ಮಣಿಯಿತಾ ರಾಜ್ಯ ಸರ್ಕಾರ?

    ಕಾರ್ಮಿಕ ಇಲಾಖೆಯಿಂದಲೇ ಕಾನೂನು ಜಾರಿಗೆ ಸಿದ್ಧತೆ ನಡೀತ್ತಿದೆ

    IT ನೌಕರರ ಕೆಲಸದ ಸಮಯ ವಿಸ್ತರಣೆ ಆಗೋದು ಕನ್​​ಫರ್ಮ್​?

ಬೆಂಗಳೂರು: ಸಿಲಿಕಾನ್​ ಸಿಟಿಯ ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ 20 ಲಕ್ಷ ಉದ್ಯೋಗಿಗಳಿಗೆ ಬಿಗ್ ಶಾಕ್ ಆಗೋ ಸುದ್ದಿಯೊಂದು ಹೊರ ಬಿದ್ದಿದೆ. ಇನ್ಮುಂದೆ ಐಟಿ-ಬಿಟಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಕೆಲಸದ ಸಮಯ ವಿಸ್ತರಣೆಯಾಗಲಿದೆ.

ಇದನ್ನೂ ಓದಿ: ತುಂಗಾಭದ್ರ ಡ್ಯಾಂ ಭರ್ತಿಗೆ ಕೆಲವೇ ಅಡಿಗಳು ಬಾಕಿ.. 3 ವಾರದಲ್ಲಿ ಹರಿದು ಬಂದಿರೋ ನೀರು ಎಷ್ಟು?

ಕೆಲಸದ ಅವಧಿ 9 ಗಂಟೆ ಬದಲಿಗೆ 14 ಗಂಟೆಗಳ ಕಾಲ ಉದ್ಯೋಗಿಗಳು ಕೆಲಸ ಮಾಡುವ ಕಾನೂನು ತರಲು ಸರ್ಕಾರದ ಮೇಲೆ ಐಟಿ-ಬಿಟಿ ಕಂಪನಿಗಳು ಒತ್ತಡ ಹಾಕಿವೆ. ಈ ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿದಿದೆಯಾ ಎಂಬ ಪ್ರಶ್ನೆ ಮೂಡಿದೆ. ಏಕೆಂದರೆ ಕಾರ್ಮಿಕ ಇಲಾಖೆ ಮೂಲಕವೇ ಕಾನೂನು ಜಾರಿ ಮಾಡಲು ಸಿದ್ಧತೆ ನಡೆಯುತ್ತಿದೆ. ಸಂಬಳದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ಆದರೆ ಕೆಲಸದ ಅವಧಿಯನ್ನು ಮಾತ್ರ ಹೆಚ್ಚು ಮಾಡುತ್ತಾರೆ.

ಇದನ್ನೂ ಓದಿ: ಕನ್ವರ್ ಯಾತ್ರೆಗೆ ಯೋಗಿ ಸರ್ಕಾರದ ರೂಲ್ಸ್​ ಏನು..? ಬಿಟೌನ್ ಬ್ಯೂಟಿ ಕಂಗನಾ- ಸೋನ್ ಸೂದ್ ಮಧ್ಯ ವಾರ್

ಐಟಿ ಕಂಪನಿಗಳಲ್ಲಿ ಉದ್ಯೋಗಿಗಳ ಕೆಲಸದ ಸಮಯ ವಿಸ್ತರಣೆ ಮಾಡುವುದಕ್ಕೆ ಕಾರ್ಮಿಕ ಇಲಾಖೆ ಬಹುತೇಕವಾಗಿ ಒಪ್ಪಿಗೆ ನೀಡಿದಂತೆ ಆಗಿದೆ. ಈ ವರೆಗೆ ಕೇವಲ 9 ಗಂಟೆ ಮಾತ್ರ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಇನ್ಮುಂದೆ 14 ಗಂಟೆ ಕೆಲಸ ಮಾಡಬೇಕಂತೆ. ಐಟಿ-ಬಿಟಿ ಕಂಪನಿಗಳ ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿದಿದೆಯಾ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: KRS ಒಳಹರಿವು ಭಾರೀ ಹೆಚ್ಚಳ.. ಅಪಾಯದ ಮಟ್ಟ ಮೀರಿದ ಕಾವೇರಿಯಲ್ಲಿ ಕೊಚ್ಚಿ ಹೋದ ಯುವಕ

ಇನ್ನು ಐಟಿ ಉದ್ಯೋಗಿಗಳ ಅಸೋಸಿಯೇಷನ್ ಜೊತೆಗೆ ಕಾರ್ಮಿಕ ಇಲಾಖೆ ಸಭೆ ನಡೆಸಿದೆ. ಈ ಸಭೆಯಲ್ಲಿ ಈ ಕಾನೂನಿಗೆ ಐಟಿ ನೌಕರರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. 14 ಗಂಟೆ ಕೆಲಸ ಮಾಡುವುದುದರಿಂದ ಮಾನಸಿಕ ಒತ್ತಡ ಹಾಗೂ ಹಿಂಸೆಗೆ ಒಳಗಾಗುತ್ತೇವೆ. ಹೀಗಾಗಿ ಸರ್ಕಾರ ಕಾನೂನು ತರಬಾರದು ಎಂದು ಪಟ್ಟು ಹಿಡಿದಿದ್ದಾರೆ. ಈಗಾಗಲೇ ಈ ಬಗ್ಗೆ ಸರ್ಕಾರ, ಕಾರ್ಮಿಕ‌ ಇಲಾಖೆಗೆ ಪತ್ರ ಬರೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IT ಕಂಪನಿ ಉದ್ಯೋಗಿಗಳು ಓದಲೇಬೇಕಾದ ಸ್ಟೋರಿ​.. ಇನ್ಮುಂದೆ 14 ಗಂಟೆ ಕೆಲಸ ಮಾಡೋದು ಫಿಕ್ಸ್​?

https://newsfirstlive.com/wp-content/uploads/2024/07/IT_EMPLYEES_2.jpg

Load More