newsfirstkannada.com

ನಟ ದರ್ಶನ್​ ಗ್ಯಾಂಗ್​ನಿಂದ ಕೊಲೆ ಕೇಸ್​​.. ಪೊಲೀಸರಿಗೆ ಮೊದಲೇ ಸಿಕ್ಕಿತ್ತು ಸ್ಫೋಟಕ ಸುಳಿವು!

Share :

Published July 22, 2024 at 6:08am

    ಪೊಲೀಸ್​​ ಅಧಿಕಾರಿಗಳ ತನಿಖೆಯಲ್ಲಿ ಬಗೆದಷ್ಟು ರಹಸ್ಯ ಬಯಲು

    ಪೊಲೀಸರ ಮುಂದೆ ಸರೆಂಡರ್ ಆಗಿದ್ದ ಕಾರ್ತಿಕ್, ರಾಘವೇಂದ್ರ, ನಿಖಿಲ್

    ಸರೆಂಡರ್ ಮೊದಲೇ ಸುಳಿವು ಪತ್ತೆ ಮಾಡಿದ್ದ ಇನ್ಸ್​ಪೆಕ್ಟರ್ ಗಿರೀಶ್ ನಾಯ್ಕ್

ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್​ ಮಿಸ್ಟ್ರಿ ಬಗೆದಷ್ಟು ಕುತೂಹಲ ಹೆಚ್ಚಿಸುತ್ತಿದೆ. ಪೊಲೀಸರ ತನಿಖೆಯಲ್ಲಿ ಹೊಸ ಹೊಸ ರಹಸ್ಯಗಳು ಬಯಲಾಗ್ತಿವೆ. ಆರೋಪಿಗಳು ಸರೆಂಡರ್​ ಆಗುವ ಮೊದಲೇ, ಪೊಲೀಸರಿಗೆ ಸುಳಿವು ಸಿಕ್ಕಿತ್ತಂತೆ. ಅಷ್ಟೇ ಅಲ್ಲ ರೇಣುಕಾಸ್ವಾಮಿ ಶವವನ್ನು ಸಾಗಿಸಿದ್ದು ಒಂದು ಟೀಂ ಅಲ್ಲ. ಬದಲಾಗಿ ಎರಡು ಟೀಂ ಅನ್ನೋ ಸ್ಫೋಟಕ ವಿಷ್ಯವೂ ಬೆಳಕಿಗೆ ಬಂದಿದೆ.

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಅಂಡ್​ ಗ್ಯಾಂಗ್​ ಪರಪ್ಪನ ಅಗ್ರಹಾರ ಸೇರಿದೆ. ಇತ್ತ ಪೊಲೀಸರು ಆರೋಪಿಗಳಿಗೆ ಸೂಕ್ತ ಶಿಕ್ಷೆ ಕೊಡಿಸಲು ಖಡಕ್​ ತನಿಖೆ ಮಾಡ್ತಿದ್ದಾರೆ. ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಬಗೆದಷ್ಟು ಡಿ-ಗ್ಯಾಂಗ್​ನ ರಹಸ್ಯಗಳು ಬಯಲಾಗುತ್ತಲೇ ಇವೆ. ರೇಣುಕಾಸ್ವಾಮಿ ಹತ್ಯೆ ಬಳಿಕ ಪ್ರಕರಣ ಮುಚ್ಚಿ ಹಾಕಲು ಡಿ ಗ್ಯಾಂಗ್​ ಹೇಗೆಲ್ಲಾ ಖತರ್ನಾಕ್​ ಪ್ಲಾನ್​ ಮಾಡಿತ್ತು ಅನ್ನೋ ವಿಷ್ಯ ತನಿಖೆಯಲ್ಲಿ ಬಯಲಾಗಿದೆ.

ಸರೆಂಡರ್​ಗೆ ಮುಂಚೆಯೇ ಪೊಲೀಸರಿಗೆ ಸಿಕ್ಕಿತ್ತಂತೆ ಸುಳಿವು

ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾಸ್ವಾಮಿ ಹತ್ಯೆ ಬಳಿಕ ಆತನ ಮೃತದೇಹವನ್ನು ತಂದು ಸುಮನಹಳ್ಳಿ ಬ್ರಿಡ್ಜ್​ ಬಳಿ ರಾಜಕಾಲುವೆ ಬಳಿ ಎಸೆದಿದ್ದರು. ಈ ಕೇಸ್​ನ ದಿಕ್ಕು ತಪ್ಪಿಸಲು ಮೂವರನ್ನು ಪೊಲೀಸರ ಮುಂದೆ ಸರೆಂಡರ್​ ಮಾಡಿಸಿದ್ರು. ಇದೀಗ ಪೊಲೀಸರ ತನಿಖೆಯಲ್ಲಿ ಸ್ಫೋಟಕ ಅಂಶವೊಂದು ಬಯಲಾಗಿದೆ. ಆ ಮೂವರು ಸರೆಂಡರ್​ ಆಗಿರದಿದ್ರೆ, ಮೊದಲು ವಿನಯ್​ ಅರೆಸ್ಟ್​ ಆಗ್ಬೇಕಿತ್ತು ಅನ್ನೋ ವಿಷ್ಯ ಬೆಳಕಿಗೆ ಬಂದಿದೆ.

ವಿನಯ್ ಜಸ್ಟ್ ಮಿಸ್

ರೇಣುಕಾಸ್ವಾಮಿ ಕೊಲೆ ಬಳಿಕ ಮೂವರು ಆರೋಪಿಗಳು ಸರೆಂಡರ್ ಆಗಿದ್ದರು. ಜೂನ್ 10ರಂದು ಕಾರ್ತಿಕ್, ರಘು, ನಿಖಿಲ್ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಬಂದು ನಾವೇ ಕೊಲೆ ಮಾಡಿದ್ದಾಗಿ ಶರಣಾಗಿದ್ದರು. ಆದ್ರೆ ಇದಕ್ಕೂ ಮೊದಲೇ ಪೊಲೀಸರು ಆರೋಪಿಗಳ ಸುಳಿವು ಪತ್ತೆ ಹಚ್ಚಿದ್ರಂತೆ. ಶವ ಎಸೆದ ಜಾಗದಲ್ಲಿ CCTV, ಟವರ್​ಡಂಪ್ ಚೆಕ್ ಮಾಡಿದ್ದರು. ಈ ವೇಳೆ ಶವ ತಂದಿದ್ದ ಕಾರಿನ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಸಿಸಿಟಿವಿಯಲ್ಲಿ ಕಂಡಿದ್ದ ರೆಡ್​ ಕಲರ್ ಜೀಪ್​ನ ಜಾಡು ಹಿಡಿದು ಆ ಕಾರಿನ ಮಾಲೀಕ ಯಾರು? ಯಾವ ಏರಿಯಾ ಅನ್ನೋದ್ನ ಪತ್ತೆ ಮಾಡಿದ್ರು. ಇನ್ನೇನು ವಿನಯ್​ನ ವಶಕ್ಕೆ ಪಡೀಬೇಕು ಎನ್ನುವಷ್ಟರಲ್ಲಿ ಆರೋಪಿಗಳು ಶರಣಾಗಿದ್ರು. ಒಂದ್ವೇಳೆ ಮೂವರು ಶರಣಾಗದಿದ್ರೆ ಮೊದಲು ಲಾಕ್ ಆಗ್ತಿದ್ದವನೇ ಆರೋಪಿ ವಿನಯ್.

ಇದನ್ನೂ ಓದಿ: ಸಖತ್ತಾಗಿದೆ.. ಸೂಪರ್​ ಆಗಿದೆ! ಸೋಷಿಯಲ್​ ಮೀಡಿಯಾದಲ್ಲಿ ಮ್ಯಾಜಿಕ್ ಮಾಡ್ತಿದೆ ‘ದ್ವಾಪರ‘ ಸಾಂಗ್!

ರೇಣುಕಾಸ್ವಾಮಿ ಶವ ಎಸೆಯಲು ಬಂದಿದ್ದು ಎರಡು ಟೀಮ್

ಇನ್ನು, ಪೊಲೀಸರ ತನಿಖೆಯಲ್ಲಿ ಮತ್ತಷ್ಟು ಸ್ಫೋಟಕ ಅಂಶಗಳು ಬಯಲಾಗಿವೆ. ರೇಣುಕಾಸ್ವಾಮಿ ಶವ ಎಸೆದಿದ್ದು ಒಂದೇ ಟೀಮ್ ಎನ್ನಲಾಗಿತ್ತು. ಆದ್ರೀಗ ಶವ ಎಸೆಯೋಕೆ 2 ಟೀಮ್ ಹೋಗಿತ್ತು ಅನ್ನೋದು ತನಿಖೆ ವೇಳೆ ಬಯಲಾಗಿದೆ.

ರೇಣುಕಾ ಶವ ಎಸೆದಿದ್ದೇಗೆ?

ರೇಣುಕಾಸ್ವಾಮಿ ಶವ ಎಸೆಯಲು ಎರಡು ಟೀಮ್​ಗಳು ಹೋಗಿದ್ವು. ಅದರಲ್ಲಿ 1 ಟೀಮ್ ಸರೆಂಡರ್ ಆಗಿದ್ದು, ಮತ್ತೊಂದು ಟೀಂ ಫಾಲೋ ಮಾಡಿದ್ದು. ಸ್ಕಾರ್ಪಿಯೋ ಕಾರಲ್ಲಿ ಕಪ್ಪೆ, ನಿಖಿಲ್, ರಾಘವೇಂದ್ರ ಬಾಡಿ ಸಾಗಿಸ್ತಿದ್ರು ಮತ್ತೊಂದು ರೆಡ್ ಜೀಪ್​​ನಲ್ಲಿ ವಿನಯ್, ಪ್ರದೂಷ್, ನಾಗರಾಜ್ ಸ್ಕಾರ್ಪಿಯೋ ಕಾರನ್ನು ಫಾಲೋ ಮಾಡಿದ್ರು. ಸುಮ್ಮನಹಳ್ಳಿ ರಸ್ತೆಯಲ್ಲಿ ವಿನಯ್ ಆ್ಯಂಡ್ ಟೀಮ್ ನಿಂತು, ಶವ ಎಲ್ಲಿ ಹಾಕ್ತಾರೆ ಅಂತ ನೋಡುತ್ತಿತ್ತು. ಶವ ಎಸೆಯೋ ತನಕ ವಿನಯ್ ಟೀಮ್ ಅಲ್ಲೇ ಇದ್ದು ಬಳಿ ವಾಪಸ್ಸಾಗಿತ್ತು. ಹೀಗೆ ಎರಡು ಟೀಂ ಕೆಲಸ ಮಾಡಿದ್ವು ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ.

ರೇಣುಕಾಸ್ವಾಮಿ-ಪವಿತ್ರಾಗೌಡ ನಡುವಿನ ಮೆಸೇಜ್​ಗಾಗಿ ಶೋಧ

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿರುವ ಪೊಲೀಸರಿಗೆ ರೇಣುಕಾಸ್ವಾಮಿ ಮೊಬೈಲ್​ ಇನ್ನೂ ಪತ್ತೆ ಆಗಿಲ್ಲ. ನಕಲಿ ಸಿಮ್ ಖರೀದಿಸಿ ಇನ್​ಸ್ಟಾಗ್ರಾಂ ಖಾತೆ ರಿಟ್ರೀವ್​ಗೆ ಪ್ರಯತ್ನ ಮಾಡ್ತಿದ್ದಾರೆ. ರೇಣುಕಾಸ್ವಾಮಿ ಹತ್ಯೆಯ ಬಳಿಕ ಆತನ ಮೊಬೈಲ್​ ಅನ್ನು ಸುಮ್ಮನಹಳ್ಳಿ ರಾಜಕಾಲುವೆಗೆ ಬಿಸಾಡಿದ್ದರು. ಇದುವರೆಗೂ ರೇಣುಕಾಸ್ವಾಮಿಯ ಮೊಬೈಲ್​ ಮಾತ್ರ ಪತ್ತೆ ಆಗಿಲ್ಲ. ಹೀಗಾಗಿ ನಕಲಿ ಸಿಮ್ ಖರೀದಿಸಿ ಇನ್​ಸ್ಟಾಗ್ರಾಂ ಖಾತೆ ರಿಟ್ರೀವ್​ಗೆ ಪ್ರಯತ್ನ ಮಾಡ್ತಿದ್ದಾರೆ. ಸದ್ಯ ರೇಣುಕಾಸ್ವಾಮಿ ಪತ್ನಿಯ ಹೆಸರಲ್ಲಿ ಹೊಸ ಸಿಮ್ ಖರೀದಿಸಿದ್ದು, ಇನ್​ಸ್ಟಾಗ್ರಾಂ ಸಂಸ್ಥೆಗೆ ಪತ್ರ ಬರೆದು ಮಾಹಿತಿ ಕೇಳಿದ್ದಾರೆ. ಸಿಬಿಐ ಮೂಲಕ ಇಂಟರ್​ಪೋಲ್ ಸಹಾಯದಿಂದ ಇನ್​ಸ್ಟಾಗ್ರಾಂ ಸಂಸ್ಥೆಗೆ ಪತ್ರ ಬರೆದಿದ್ದಾರೆ. ಆದ್ರೆ ಆದರೆ ಇದುವರೆಗೂ ಇನ್​ಸ್ಟಾಗ್ರಾಂ ಸಂಸ್ಥೆಯಿಂದ ಯಾವುದೇ ರಿಪ್ಲೈ ಬಂದಿಲ್ಲ. ಒಂದ್ವೇಳೆ ಮೆಸೇಜ್ ಮಾಡಿದ್ದ ಅಕೌಂಟ್ ಡಿಟೇಲ್ಸ್ ಸಿಕ್ಕಲ್ಲಿ ಇಡೀ ಪ್ರಕರಣಕ್ಕೆ ಮತ್ತಷ್ಟು ತಿರುವು ಸಿಗಲಿದೆ. ಇವೆಲ್ಲವೂ ಕೇಸ್​ನಲ್ಲಿ ಮೇಜರ್ ಎವಿಡೆನ್ಸ್ ಆಗಿ ಸಲ್ಲಿಸಲಿಕ್ಕೆ ಪೊಲೀಸರು ಕೂಡ ಸಿದ್ಧರಾಗಿದ್ದಾರೆ. ಒಟ್ಟಾರೆ, ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಎಲ್ಲ ಆಯಾಮದಲ್ಲೂ ತನಿಖೆ ನಡೆಸ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ ದರ್ಶನ್​ ಗ್ಯಾಂಗ್​ನಿಂದ ಕೊಲೆ ಕೇಸ್​​.. ಪೊಲೀಸರಿಗೆ ಮೊದಲೇ ಸಿಕ್ಕಿತ್ತು ಸ್ಫೋಟಕ ಸುಳಿವು!

https://newsfirstlive.com/wp-content/uploads/2024/06/DARSHAN_GANG-1.jpg

Load More