newsfirstkannada.com

ಬಚ್ಚಿಟ್ಟ ಪ್ರೀತಿಯನ್ನ ಇಂದು ಬಿಚ್ಚಿಡಲಿದ್ದಾರೆ ತರುಣ್​ ಸುಧೀರ್​.. ನಿರ್ದೇಶಕನ ಬಾಳಲ್ಲಿ ಬೆಳಕಿನ ಕವಿತೆ ಓದಲಿದ್ದಾರೆ ಈ ನಟಿ!

Share :

Published July 22, 2024 at 7:28am

    ಕುತೂಹಲ ಮೂಡಿಸಿದ ತರುಣ್​ ಸುಧೀರ್​ ಪೋಸ್ಟರ್​!

    ಬಾಳ ಸಂಗಾತಿ ಯಾರೆಂಬ ಪ್ರಶ್ನೆಗೆ ಇಂದು ಉತ್ತರಿಸಲಿದ್ದಾರೆ

    ಮದುವೆ ದಿನಾಂಕ ಇಂದು ಅಧಿಕೃತವಾಗಿ ಘೋಷಣೆಯಾಗೋ ಸಾಧ್ಯತೆ

ಚಂದನವನದಲ್ಲಿ ಕುತೂಹಲಕ್ಕೆ ಕಾರಣವಾಗಿದ್ದ ತುರುಣ್​ ಸುಧೀರ್​ ಮತ್ತು ಸೋನಲ್​ ಮೊಂಥೆರೋ ಮದುವೆಯಾಗ್ತಾರೆ ಅನ್ನೋ ಗಾಳಿ ಸುದ್ದಿಗೆ ಇಂದು ಸ್ಪಷ್ಟನೆ ಸಿಗಲಿದೆ. ತಮ್ಮ ರಿಯಲ್​ ಜೀವನದ ಹಿರೋಯಿನ್​ ಬಗ್ಗೆ ಇಂದು ಬೆಳಗ್ಗೆ 11 ಗಂಟೆ 08 ನಿಮಿಷಕ್ಕೆ ತರುಣ್​ ಸುಧೀರ್​ ಮಾಹಿತಿ ನೀಡಲಿದ್ದಾರೆ.

ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತೆ. ಒಂದು ಗಂಡು ಒಂದು ಹೆಣ್ಣು ಅನ್ನೋದು ಹಣೆಬರದಲ್ಲೇ ಬರೆದಿರುತ್ತೆ. ಆದ್ರೆ ಆ ಹೆಣ್ಣು ಯಾರು ಅನ್ನೋ ಹುಡುಕಾಟ ಕೆಲದಿನ ಯಕ್ಷ ಪ್ರಶ್ನೆಯಾಗೇ ಉಳಿದಿರುತ್ತೆ. ಸದ್ಯ ಚಂದನವನದ ಖ್ಯಾತ ನಿರ್ದೇಶಕ ತರುಣ್​ ಸುಧೀರ್​ ಬಾಳಲ್ಲೂ ಯಕ್ಷಪ್ರಶ್ನೆಯಾಗೇ ಉಳಿದಿದ್ದ ಬಾಳ ಸಂಗಾತಿ ಯಾರೆಂಬ ಪ್ರಶ್ನೆಗೆ ಬೆಳಕಿನ ಕವಿತೆಯೊಂದರ ಉತ್ತರ ಸಿಕ್ಕಿದೆ.

ನಿರ್ದೇಶಕ ತರುಣ್​ ಸುಧೀರ್​ ಬಾಳಲ್ಲಿಂದು ಬೆಳಕಿನ ಕವಿತೆ!

ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಹಾಗೂ ಸೋನಲ್‌ ಮೊಂಥೆರೋ ವಿವಾಹದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡಿದ್ವು. ಇದೀಗ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ತರುಣ್​ ವಿಶೇಷ ಪೋಸ್ಟರ್‌ವೊಂದನ್ನ ಹಂಚಿಕೊಂಡಿದ್ದು, ಈ ಪೋಸ್ಟರ್‌ ಭಾರೀ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ದನಗಳ ಮೈ ತೊಳೆಯಲು ಹೋಗಿ ನೀರಲ್ಲಿ ಕೊಚ್ಚಿ ಹೋದ ಯುವಕ.. 3 ದಿನಗಳ ಬಳಿಕ ಶವ ಪತ್ತೆ 

‘ನನ್ನ ಜೀವನದ ಸಿನಿಮಾದಲ್ಲಿ ಇವರೇ ಹೀರೋಯಿನ್’!

ನಿರ್ದೇಶಕ ತರುಣ್​ ಸುಧೀರ್​ ತಮ್ಮ ಟ್ವಿಟರ್ ಖಾತೆಯಲ್ಲಿ ‘ನಿರ್ದೇಶಕ, ತನ್ನ ಜೀವನದ ಹಿರೋಹಿನ್‌ ಅನ್ನು ಕಂಡುಕೊಂಡಿದ್ದಾರೆ’ ಎಂಬ ಪೋಸ್ಟ್ ಒಂದನ್ನ ಹಂಚಿಕೊಂಡಿದ್ದಾರೆ. ಈ ಪೋಸ್ಟ್​ನಲ್ಲಿ ಹಿರೋಹಿನ್‌ ಮತ್ತು ಡೈರೆಕ್ಟರ್ ಎಂದು ಹೆಸರು ಇರುವ ಎರಡು ಚೇರ್‌ಗಳಿವೆ. ಈ ಬಗ್ಗೆ ಅಧಿಕೃತ ಮಾಹಿತಿಯನ್ನ ಇಂದು ಬೆಳಗ್ಗೆ 11 ಗಂಟೆ 08 ನಿಮಿಷಕ್ಕೆ ತಿಳಿಸಲಾಗುವುದು ಎಂದು ಈ ಪೋಸ್ಟರ್‌ನಲ್ಲಿ ತರುಣ್​ ಬರೆದುಕೊಂಡಿದ್ದಾರೆ.. ಅಷ್ಟೇ ಅಲ್ಲದೆ, ತರುಣ್ ಸುಧೀರ್‌ ಹಂಚಿಕೊಂಡ ರೀತಿಯಲ್ಲೇ ಸೋನಲ್ ಸಹ ಇನ್ಸ್​ಟಾಗ್ರಾಮ್​ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ‘ಕೊನೆಗೂ ನಾಯಕಿ ತನ್ನ ಜೀವನದ ನಿರ್ದೇಶಕನನ್ನು ಕಂಡುಕೊಂಡಳು’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕರುನಾಡಲ್ಲಿ ಹಲವೆಡೆ ಜಲಧಾರೆ, ಇಂದು ಶಾಲೆ- ಕಾಲೇಜುಗಳಿಗೆ ರಜೆ

ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾದಲ್ಲಿ ಸೋನಲ್ ತನು ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಆಗಿನಿಂದ ಇಬ್ಬರ ನಡುವೆ ಉತ್ತಮ ಒಡನಾಟವಿತ್ತು. ಹಾಗೆಯೇ ದಿನ ಕಳೆಯುತ್ತಾ ಈ ಸ್ನೇಹ ಪ್ರೀತಿಯಾಗಿ ಇಬ್ಬರ ಬಾಳಲ್ಲಿ ಬೆಳಕಿನ ಕವಿತೆ ಬರೆದಿತ್ತು. ಸದ್ಯ ಅದೇ ಪ್ರೀತಿ ಸಪ್ತಪದಿಯ ಹಾದಿ ಹಿಡಿದಿದ್ದು ಇಬ್ಬರೂ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿವೆ.

ಇದನ್ನೂ ಓದಿ: ಇಂದಿನಿಂದ ಮುಂಗಾರು ಅಧಿವೇಶನ.. ಪ್ರಧಾನಿ ಮೋದಿಯನ್ನು ಕಟ್ಟಿ ಹಾಕಲು ರಾಹುಲ್​ ಗಾಂಧಿ ಪ್ಲಾನ್​

ಒಟ್ಟಿನಲ್ಲಿ ತರುಣ್ ಸುಧೀರ್ ಹಾಗೂ ಸೋನಲ್ ಮದುವೆ ದಿನಾಂಕ ಇಂದು ಅಧಿಕೃತವಾಗಿ ಘೋಷಣೆಯಾಗೋ ಸಾಧ್ಯತೆ ಇದೆ. ತರುಣ್​ ಬಾಳಲ್ಲಿ ಸೋನಲ್ ಬೆಳಕಿನ ಕವಿತೆ ಬಾರೆಯೋ ದಿನ ಯಾವತ್ತೂ, ಸ್ಯಾಂಡಲ್​ವುಡ್​ನ ಈ ಕ್ಯೂಟ್​ ಜೋಡಿ ಸಪ್ತಪದಿ ತುಳಿಯೋದು ಯಾವತ್ತೂ ಅನ್ನೋ ಕುತೂಹಲಕ್ಕೆ ಇಂದು ಬೆಳಗ್ಗೆ 11 ಗಂಟೆ 8 ನಿಮಿಷಕ್ಕೆ ಉತ್ತರ ಸಿಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಚ್ಚಿಟ್ಟ ಪ್ರೀತಿಯನ್ನ ಇಂದು ಬಿಚ್ಚಿಡಲಿದ್ದಾರೆ ತರುಣ್​ ಸುಧೀರ್​.. ನಿರ್ದೇಶಕನ ಬಾಳಲ್ಲಿ ಬೆಳಕಿನ ಕವಿತೆ ಓದಲಿದ್ದಾರೆ ಈ ನಟಿ!

https://newsfirstlive.com/wp-content/uploads/2024/07/Sonal-Montero.jpg

Load More