newsfirstkannada.com

ಇಂಗ್ಲೆಂಡ್​-ಆಸ್ಟ್ರೇಲಿಯಾ ಕ್ರಿಕೆಟ್​​​ ಆಟಗಾರ್ತಿಯರ ನಡುವೆ ಲವ್​! ಉಂಗುರ ಬದಲಾಯಿಸಿಕೊಂಡ ಸಲಿಂಗಿ ಜೋಡಿ

Share :

Published July 23, 2024 at 9:07am

    ಇದು ಗಡಿಯನ್ನು, ಭಾಷೆಯನ್ನು ಮೀರಿದ ಸಲಿಂಗಿ ಪ್ರೀತಿ

    ಮಹಿಳಾ ಕ್ರಿಕೆಟ್​​ ಆಟಗಾರ್ತಿಯರ ನಡುವೆ ಪ್ಯಾರ್​​​

    ನಿಶ್ಚಿತಾರ್ಥ ಮಾಡಿಕೊಂಡ್ರು, ಉಂಗುರ ಬದಲಾಯಿಸಿಕೊಂಡ್ರು

ಪ್ರೀತಿಗೆ ಕಣ್ಣಿಲ್ಲ. ಪ್ರೀತಿಗೆ ಭಾಷೆಯಿಲ್ಲ. ಪ್ರೀತಿ ಗಡಿಯನ್ನು ಮೀರಿದ ಬಂಧ. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಆದರೀಗ ಮತ್ತೊಂದು ಉದಾಹರಣೆ ಎಂಬಂತೆ ಇಂಗ್ಲೆಂಡ್​​ ಮತ್ತು ಆಸ್ಟ್ರೇಲಿಯಾ ಮಹಿಳಾ ಸ್ಟಾರ್​ ಕ್ರಿಕೆಟಿಗರಿಬ್ಬರು ಪ್ರೀತಿಯ ಮೂಲಕ ಒಂದಾಗಿದ್ದಾರೆ. ಈ ಕುರಿತಾದ ಕುತೂಹಲಕಾರಿಯಾದ ಸ್ಟೋರಿ ಇಲ್ಲಿದೆ.

ಅಂದಹಾಗೆಯೇ ಇದು ಸಲಿಂಗಿ ಪ್ರೀತಿ. ಇಂಗ್ಲೆಂಡ್​ ವಿಕೆಟ್​ ಕೀಪರ್​ ಆಮಿ ಜೋನ್ಸ್​ ಮತ್ತು ಆಸ್ಟ್ರೇಲಿಯಾದ ಕ್ರಿಕೆಟ್​​​ ಆಟಗಾರ್ತಿ ಪೈಪಾ ಕ್ಲಿಯರಿ ನಡುವೆ ಹುಟ್ಟಿಕೊಂಡ ಪ್ರೀತಿಯಿದು. ಸದ್ಯ ಇವರಿಬ್ಬರ ನಡುವಿನ ಪ್ರೀತಿ ಎರಡು ದೇಶಗಳ ಸಂಬಂಧವನ್ನು ಬೆಸೆದಿದೆ. ಅದರಲ್ಲೂ ಗಡಿಯಾಚೆಗಿನ ಸಂಬಂಧವನ್ನು ಮೀರಿಸಿದೆ.

ಇದನ್ನೂ ಓದಿ: ಇಂದು ಮೋದಿ 3.0 ಸರ್ಕಾರದ ಮೊದಲ ಬಜೆಟ್‌.. ಪೆಟ್ರೋಲ್​-ಡೀಸೆಲ್​ ಬೆಲೆ ಕಡಿಮೆಯಾಗುತ್ತಾ? ಎಷ್ಟಿದೆ?

ಪ್ರೀತಿಸುತ್ತಿದ್ದ ಆಮಿ ಜೋನ್ಸ್​ ಮತ್ತು ಪೈಪಾ ಕ್ಲಿಯರಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಉಂಗುರಗಳನ್ನು ಬದಲಾಯಿಸಿಕೊಂಡು ನಾನು-ನೀನು ಜೋಡಿ ಎಂದು ಹೇಳಿಕೊಂಡಿದ್ದಾರೆ. ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಈ ವಿಚಾರವನ್ನು ಘೋಷಿಸಿದ್ದಾರೆ.

View this post on Instagram

A post shared by Amy Jones (@amyjones313)

ಇನ್​​ಸ್ಟಾಗ್ರಾಂನಲ್ಲಿ ಇಂಗ್ಲೆಂಡ್​ನ ವಿಕೆಟ್​​ ಕೀಪರ್​ ಆಮಿ ಜೋನ್ಸ್​ ಮತ್ತು ಆಸ್ಟ್ರೇಲಿಯಾದ ಕ್ರಿಕೆಟ್​​​ ಆಟಗಾರ್ತಿ ಪೈಪಾ ಕ್ಲಿಯರಿ ಪೋಸ್ಟ್​ ಹಂಚಿಕೊಂಡಿದ್ದಾರೆ. ಷಾಂಪೇನ್​​ ತುಂಬಿದ ಗ್ಲಾಸ್​ ಹಿಡಿದುಕೊಂಡು ‘‘ಚಿಯರ್ಸ್​ ಟು ಫಾರೆವರ್​​’’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:  ಸೋನಲ್​ ಮೂಲತಃ ಎಲ್ಲಿಯವ್ರು? ತರುಣ್​ಗೆ ಲವ್​ ಆಗಿದ್ದೇಗೆ? ಸಖತ್​ ಆಗಿದೆ ಈ ಸ್ಟೋರಿ

ಆಮಿ ಜೋನ್ಸ್ ಯಾರು? ಹಿನ್ನೆಲೆ ಏನು?

ಆಮಿ ಜೋನ್ಸ್ 2019 ರಲ್ಲಿ ಇಂಗ್ಲೆಂಡ್​ನ ಕ್ರಿಕೆಟ್​ ಆಟಗಾರ್ತಿ. ಜೂನ್ 13, 1993 ರಂದು ವೆಸ್ಟ್ ಮಿಡ್ಲ್ಯಾಂಡ್ಸ್​ನಲ್ಲಿ ಜನಿಸಿದರು. 31 ವರ್ಷ ವಯಸ್ಸಿನ ಅವರು ಇಂಗ್ಲೆಂಡ್​​ ತಂಡದ ಮಹಿಳಾ ಟೆಸ್ಟ್ ಮತ್ತು ODI ಪಂದ್ಯಗಳಲ್ಲಿ ಆಡುತ್ತಾ ಬಂದಿದ್ದಾರೆ. ಇಲ್ಲಿಯವರೆಗೆ 6 ಟೆಸ್ಟ್ ಮತ್ತು 91 ODI ಪಂದ್ಯಗಳನ್ನು ಆಡಿದ್ದಾರೆ. ಎರಡು ಆಟಗಳಲ್ಲಿ 116 ಮತ್ತು 1951 ರನ್ ಗಳಿಸಿದ್ದಾರೆ. 31 ವರ್ಷ ವಯಸ್ಸಿನವರು .

ಇದನ್ನೂ ಓದಿ: Big Boss ಮೇಲೆ ಬೀಳುತ್ತಾ ಕೇಸ್​.. ಅರ್ಮಾನ್​ ಮಲಿಕ್​ ದಂಪತಿ ಮೇಲೆ ಭಾರೀ ಆಕ್ರೋಶ ಕಾರಣವೇನು?

ಆಮಿಯವರು ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಪರ್ತ್ ಸ್ಕಾರ್ಚರ್ಸ್‌ಗಾಗಿ ಆಡುತ್ತಿರುವಾಗ ಆಸ್ಟ್ರೇಲಿಯಾದ ಪೈಪಾ ಕ್ಲಿಯರಿ ಅವರನ್ನು ಭೇಟಿಯಾದರು. ಇವರ ಭೇಟಿ ಕೊನೆಗೆ ಸ್ನೇಹಕ್ಕೆ ತಿರುಗಿತು. ನಂತರ ಪ್ರೀತಿಯಾಯ್ತು.

ಪೈಪಾ ಕ್ಲಿಯರಿ ಹಿನ್ನೆಲೆ ಏನು?

ಪೈಪಾ ಕ್ಲಿಯರಿ ಜುಲೈ 17, 1996 ರಲ್ಲಿ ಜನಿಸಿದರು. ಆಮಿಗಿಂತ 3 ವರ್ಷ ಚಿಕ್ಕವರು. ಈಗಾಗಲೇ ಪೈಪಾರವರು ಸ್ಕಾರ್ಚರ್ಸ್ ಮತ್ತು ವೆಸ್ಟರ್ನ್ ಆಸ್ಟ್ರೇಲಿಯಾ ವುಮೆನ್‌ ತಂಡಗಳಿಗಾಗಿ ಆಡಿದ್ದಾರೆ. ಇವರು ಬಲಗೈ ಮಧ್ಯಮ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂಗ್ಲೆಂಡ್​-ಆಸ್ಟ್ರೇಲಿಯಾ ಕ್ರಿಕೆಟ್​​​ ಆಟಗಾರ್ತಿಯರ ನಡುವೆ ಲವ್​! ಉಂಗುರ ಬದಲಾಯಿಸಿಕೊಂಡ ಸಲಿಂಗಿ ಜೋಡಿ

https://newsfirstlive.com/wp-content/uploads/2024/07/ENG-AUST.jpg

Load More