newsfirstkannada.com

ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ ಫಿಟ್​ನೆಸ್ ಇಲ್ಲದಿದ್ರೆ ಗೇಟ್​ಪಾಸ್​.. ಗಂಭೀರ್ ಗುಟುರು!​

Share :

Published July 23, 2024 at 11:35am

    ಸೂಪರ್​​ ಸ್ಟಾರ್​​ಗಳ ಭವಿಷ್ಯದ ಬಗ್ಗೆ ಗಂಭೀರ್ ಏನ್ ಹೇಳಿದರು?

    ಏಕದಿನ ವಿಶ್ವಕಪ್​ ಡೋರ್​ ಓಪನ್​, ಆದರೆ ಷರತ್ತುಗಳು ಅನ್ವಯ

    ವಿರಾಟ್ ಓಕೆ, ರೋಹಿತ್​ ಶರ್ಮಾ ಮುಂದಿದೆ ಬಿಗ್ ಚಾಲೆಂಜ್

ಚಾಂಪಿಯನ್ಸ್​ ಟ್ರೋಫಿಯ ಬಳಿಕ ವಿರಾಟ್​​ ಕೊಹ್ಲಿ- ರೋಹಿತ್​ ಶರ್ಮಾರ ಭವಿಷ್ಯ ಏನು.? ಅನ್ನೋ ಚರ್ಚೆ ಜೋರಾಗಿ ನಡೆದಿತ್ತು. ಮುಂದಿನ ವರ್ಷ ನಡೆಯೋ ಪ್ರತಿಷ್ಠಿತ ಟೂರ್ನಿ ಬಳಿಕ ಕೋಚ್​ ಗೌತಮ್​ ಗಂಭೀರ್​ ಏಕದಿನ ಫಾರ್ಮೆಟ್​ನಿಂದ ಇವ್ರನ್ನ ಸೈಡ್​​ಲೈನ್​ ಮಾಡ್ತಾರೆ ಎಂಬ ಸುದ್ದಿ ಹಲ್​ಚಲ್​ ಸೃಷ್ಟಿಸಿತ್ತು. ಈ ಅನುಮಾನಕ್ಕೆ ಗಂಭೀರ್ ತೆರೆ ಎಳೆದಿದ್ದಾರೆ. ಸೂಪರ್​ ಸ್ಟಾರ್​​ ಜೋಡಿಗೆ ಗುಡ್​ನ್ಯೂಸ್​ ನೀಡಿರೋ ಗುರು ಗಂಭೀರ್, ಷರತ್ತುಗಳು ಅನ್ವಯ ಎಂದಿದ್ದಾರೆ.

ಇದನ್ನೂ ಓದಿ: ಸಾಲಗಾರರ ಕಾಟ.. ಡೆತ್​ನೋಟ್​ನಲ್ಲಿ​ ಹೆಸರುಗಳನ್ನ ಬರೆದಿಟ್ಟು ವ್ಯಕ್ತಿ ನಾಪತ್ತೆ

ಶ್ರೀಲಂಕಾ ಫ್ಲೈಟ್​​ ಹತ್ತೋ ಮುನ್ನ ನೂತನ ಹೆಡ್​ ಕೋಚ್​ ಗೌತಮ್​ ಗಂಭೀರ್​, ಮೊದಲ ಪ್ರೆಸ್​ ಮೀಟ್​ ಮಾಡಿದ್ದಾರೆ. ಸೆಲೆಕ್ಷನ್​ ಕಮಿಟಿ ಚೇರ್​ಮನ್​ ಅಜಿತ್​ ಅಗರ್ಕರ್​ ಜೊತೆಗೆ ನಡೆಸಿದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಟೀಮ್​ ಸೆಲೆಕ್ಷನ್​​ ಬಗ್ಗೆ ಹುಟ್ಟಿದ್ದ ಡೌಟ್​​ಗಳಿಗೆ ಕ್ಲೀಯರ್​ ಕಟ್​ ಆನ್ಸರ್​​ ಕೊಟ್ಟಿದ್ದಾರೆ. ಇದ್ರ ಜೊತೆಗೆ ಟೀಮ್​ ಇಂಡಿಯಾ ಸೂಪರ್​ ಸ್ಟಾರ್​ ಜೋಡಿ ರೋಹಿತ್​ ಶರ್ಮಾ- ವಿರಾಟ್​ ಕೊಹ್ಲಿ ಭವಿಷ್ಯದ ಬಗ್ಗೆ ಬಿಗ್​ ಹಿಂಟ್​ ಕೊಟ್ಟಿದ್ದಾರೆ. ಜೊತೆಗೆ ಬಿಗ್​ ಟಾಸ್ಕ್​ ಕೂಡ ನೀಡಿದ್ದಾರೆ.

ಇದನ್ನೂ ಓದಿ: RCB ಫ್ಯಾನ್ಸ್​ಗೆ ಶಾಕಿಂಗ್ ನ್ಯೂಸ್​.. ಐಪಿಎಲ್​​ನ ಈ ಟೀಮ್​ಗೆ ರಾಹುಲ್​ ದ್ರಾವಿಡ್​ ಹೆಡ್​ ಕೋಚ್?

ವಿರಾಟ್ ಕೊಹ್ಲಿ- ರೋಹಿತ್​ ಕಥೆ ಏನು.. ಸೂಪರ್​​ ಸ್ಟಾರ್​​ಗಳ ಭವಿಷ್ಯದ ಬಗ್ಗೆ ಗಂಭೀರ್​​ ಮಾತು.!

T20 ವಿಶ್ವಕಪ್​​ ಗೆದ್ದ ಬೆನ್ನಲ್ಲೇ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ T20 ಫಾರ್ಮೆಟ್​​ಗೆ ಗುಡ್​ ಬೈ ಹೇಳಿದ್ರು. ಸದ್ಯ ಏಕದಿನ, ಟೆಸ್ಟ್​ಗೆ ಮಾತ್ರ​ ಸೀಮಿತವಾಗಿರೋ ಈ ಸೂಪರ್​ ಸ್ಟಾರ್​ ಜೋಡಿಯ ಭವಿಷ್ಯ ಗಂಭೀರ್​ ಕೋಚ್​ ಹುದ್ದೆಗೇರ್ತಿದ್ದಂತೆ ಅಲುಗಾಡಲು ಆರಂಭಿಸಿತ್ತು. ಏಕದಿನ ವಿಶ್ವಕಪ್​ಗೆ ಯುವ ತಂಡ ಕಟ್ಟೋ ಲೆಕ್ಕಾಚಾರದಲ್ಲಿರೋ ಗಂಭೀರ್​, ಮುಂಬರೋ ಚಾಂಪಿಯನ್ಸ್​​ ಟ್ರೋಫಿ ಅಂತ್ಯದ ಬಳಿಕ ಕೊಹ್ಲಿ ಹಾಗೂ ರೋಹಿತ್​ಗೆ ಏಕದಿನದಿಂದಲೂ ಗೇಟ್​ಪಾಸ್​ ನೀಡ್ತಾರೆ ಎನ್ನಲಾಗಿತ್ತು. ಈ ಅಂತೆ-ಕಂತೆಗಳಿಗೆ ಸ್ವತಃ ಗಂಭೀರ್​ ತೆರೆ ಎಳೆದಿದ್ದಾರೆ.

ವಿರಾಟ್​​ ಕೊಹ್ಲಿ & ರೋಹಿತ್ ಶರ್ಮಾ ಭವಿಷ್ಯ ಸೇಫ್​.!

2027ರ ಏಕದಿನ ವಿಶ್ವಕಪ್​ ಟಾರ್ಗೆಟ್​​ ಮಾಡಿರೊ ಗಂಭೀರ್​, ಯಂಗ್​ ಟೀಮ್​ ಕಟ್ತಾರೆ ಎನ್ನಲಾಗಿತ್ತು. ಕೋಚ್​ ಆದ ಬಳಿಕ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲೇ, ಗಂಭೀರ್​ ಈ ಅನುಮಾನದ ಪ್ರಶ್ನೆಗೆ ಕ್ಲೀಯರ್​ ಕಟ್​ ಆನ್ಸರ್​ ಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರೋ ನೂತನ ಕೋಚ್​ ಗೌತಮ್​ ಗಂಭೀರ್​, ರೋಹಿತ್- ವಿರಾಟ್ ಗುಡ್​ ನ್ಯೂಸ್​ ಕೊಟ್ಟಿದ್ದಾರೆ. ಚಾಂಪಿಯನ್ಸ್​ ಟ್ರೋಫಿ ಬಳಿಕವೂ ಇವರಿಬ್ಬರೂ ತಂಡದಲ್ಲಿ ಇರಲಿದ್ದಾರೆ. 2027ರ ವಿಶ್ವಕಪ್​ ತಂಡದ ಡೋರ್​ ಕೂಡ ಓಪನ್​ ಇದೆ ಎಂದಿದ್ದಾರೆ.

ಅವರಿಬ್ಬರು ಬಿಗ್ ಸ್ಟೇಜ್​ನಲ್ಲಿ ಏನು ಮಾಡಬಲ್ಲರು ಎಂಬುದನ್ನ T20 ವಿಶ್ವಕಪ್, ಏಕದಿನ ವಿಶ್ವಕಪ್​ನಲ್ಲಿ​ ತೋರಿಸಿ ಕೊಟ್ಟಿದ್ದಾರೆ. ಇವರಿಬ್ಬರಲ್ಲಿ ಇನ್ನೂ ಹೆಚ್ಚಿನ ಕ್ರಿಕೆಟ್​ ಬಾಕಿ ಉಳಿದಿದೆ ಅನ್ನೋದು ನನಗೆ ತಿಳಿದಿದೆ. ಮುಖ್ಯವಾಗಿ ಚಾಂಪಿಯನ್ಸ್​ ಟ್ರೋಫಿ, ಆಸ್ಟ್ರೇಲಿಯಾ ಪ್ರವಾಸ ನಮ್ಮ ಮುಂದೆಯಿದೆ. ಫಿಟ್​ನೆಸ್ ಉಳಿಸಿಕೊಂಡರೆ, 2027ರ ಏಕದಿನ ವಿಶ್ವಕಪ್​ನಲ್ಲೂ ಕಾಣಿಸಿಕೊಳ್ಳಬಹುದು.

ಗೌತಮ್ ಗಂಭೀರ್, ಹೆಡ್ ಕೋಚ್

ODI ವಿಶ್ವಕಪ್​​ ಡೋರ್​​ ಓಪನ್​, ಷರತ್ತು ಅನ್ವಯ.!

ಗೌತಮ್​ ಗಂಭೀರ್​ ಪ್ರೆಸ್​ಮೀಟ್​ನಲ್ಲಿ ವಿರಾಟ್​​ ಕೊಹ್ಲಿ, ರೋಹಿತ್​ ಶರ್ಮಾಗೆ 2027ರವರೆಗೂ ಟೀಮ್​ ಇಂಡಿಯಾದ ಡೋರ್​ ಓಪನ್​ ಇದೆ ಅನ್ನೋ ಡೈರೆಕ್ಟ್​ ಮೆಸೇಜ್​​ ರವಾನಿಸಿದ್ದಾರೆ. ಅದ್ರ ಜೊತೆಗೆ ಷರತ್ತುಗಳು ಅನ್ವಯ ಅನ್ನೋದನ್ನೂ ಕ್ಲೀಯರ್​ ಆಗಿ ತಿಳಿಸಿದ್ದಾರೆ. ಮುಂದಿನ 3 ವರ್ಷಗಳ ಕಾಲ ಫಿಟ್​ನೆಸ್​, ಉಳಿಸಿಕೊಂಡ್ರೆ ಮಾತ್ರ ಚಾನ್ಸ್​ ಸಿಗೋದು ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.

ನೋ ರೆಸ್ಟ್​, ಫಾರ್ಮ್​ನಲ್ಲಿದ್ರೆ ಮಾತ್ರ ಚಾನ್ಸ್​.!

T20 ಫಾರ್ಮೆಟ್​ಗೆ ಗುಡ್​ ಬೈ ಹೇಳಿರುವ ರೋಹಿತ್​ ಹಾಗೂ ವಿರಾಟ್​ ಸದ್ಯ ಟೆಸ್ಟ್​ ಹಾಗೂ ಏಕದಿನಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಕೇವಲ 2 ಫಾರ್ಮೆಟ್​​ಗಳಲ್ಲಿ ಮಾತ್ರ ಕಣಕ್ಕಿಳಿಯೋದ್ರಿಂದ ಇವರಿಬ್ಬರಿಗೆ ಮುಂದೆ ವಿಶ್ರಾಂತಿ ನೀಡಲ್ಲ ಅನ್ನೋ ನಿರ್ಧಾರವನ್ನೂ ಗಂಭೀರ್​ ತಳೆದಿದ್ದಾರೆ. ಐಸಿಸಿ ಟೂರ್ನಿಗಳಿಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿರೋದ್ರಿಂದ ರೆಸ್ಟ್​ ನೀಡೋದು ಕಷ್ಟದ ಕೆಲಸ ಕೂಡ ಹೌದು. ಮುಂಬರೋ ಎಲ್ಲ ಸರಣಿಗಳಲ್ಲೂ ಆಡಿ, ಫಿಟ್​ನೆಸ್​​, ಫಾರ್ಮ್​ ಎರಡನ್ನೂ ಉಳಿಸಿಕೊಂಡ್ರೆ ಮಾತ್ರ, ಇಬ್ಬರಿಗೆ ಏಕದಿನ ವಿಶ್ವಕಪ್​ ಆಡೋ ಚಾನ್ಸ್​ ಸಿಗಲಿದೆ.

ಇದನ್ನೂ ಓದಿ: ವಾಲ್ಮೀಕಿ ಹಗರಣದ ತನಿಖೆಗೆ ಬಿಗ್ ಟ್ವಿಸ್ಟ್.. ಸಿಎಂ ಸಿದ್ದರಾಮಯ್ಯ ಮೇನ್​ ಟಾರ್ಗೆಟ್​; FIR ದಾಖಲು

ಕೊಹ್ಲಿ ಓಕೆ.. ರೋಹಿತ್​ ಶರ್ಮಾಗಿದೆ ಬಿಗ್​ ಟಾಸ್ಕ್​.!

2027 ಏಕದಿನ ವಿಶ್ವಕಪ್​ ವೇಳೆಗೆ ರೋಹಿತ್​ ಶರ್ಮಾ ವಯಸ್ಸು, 40ರ ಗಡಿ ದಾಟಲಿದೆ. ಕೊಹ್ಲಿಯ ವಯಸ್ಸು 38 ಆಗಿರಲಿದೆ. ಫಿಟ್​ನೆಸ್​ ಬಗ್ಗೆ ಹೆಚ್ಚು ಕಾಳಜಿವಹಿಸೋ​ ಕೊಹ್ಲಿಗೆ, ಇಂಜುರಿ ಫ್ರಿ ಆಗಿರೋದು ದೊಡ್ಡ ಟಾಸ್ಕ್​ ಏನಾಗಲ್ಲ. ಆದ್ರೆ, ರೋಹಿತ್​ಗೆ ಬಿಗ್​ ಟಾಸ್ಕ್​ ಇದೆ. ಏಕದಿನ ವಿಶ್ವಕಪ್​ ಆಡೋ ಕನಸು ನನಸಾಗಬೇಕಂದ್ರೆ, ಫಿಟ್​ನೆಸ್​ ವಿಚಾರದಲ್ಲಿ ರೋಹಿತ್​ ಶರ್ಮಾ ಎಚ್ಚೆತ್ತುಕೊಳ್ಳಬೇಕು.

ಇದನ್ನೂ ಓದಿ: ಮಳೆ ಆರ್ಭಟ; ಮತ್ತೆ ಗುಡ್ಡ ಕುಸಿಯೋ ಆತಂಕ.. ಕೃಷ್ಣೆಗೆ ಭಾಗಿನ ಅರ್ಪಿಸಲು ಹೋಗಿ ಯುವಕ ನೀರು ಪಾಲು

ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಇಬ್ಬರಿಗೂ ಏಕದಿನ ವಿಶ್ವಕಪ್​ ಗೆದ್ದು ವಿದಾಯ ಹೇಳುವ ಕನಸಿದೆ. ನೂತನ ಹೆಡ್​ ಕೋಚ್​ ಗೌತಮ್​ ಗಂಭೀರ್​ ಆ ಕನಸನ್ನ ನನಸು ಮಾಡಿಕೊಳ್ಳಲು ಅವಕಾಶವನ್ನೂ ನೀಡಿದ್ದಾರೆ. ಆದ್ರೆ, ಗಂಭೀರ್​ ಹಾಕಿರೋ ಷರತ್ತುಗಳನ್ನ ಗೆಲ್ಲಬೇಕಿದೆ. ಆ ಕಠಿಣ ಸವಾಲನ್ನ ಸೂಪರ್​ ಸ್ಟಾರ್​ ಜೋಡಿ ಮೀರಿ ನಿಲ್ಲುತ್ತಾ ಅನ್ನೋದೆ ಸದ್ಯದ ಕುತೂಹಲವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ ಫಿಟ್​ನೆಸ್ ಇಲ್ಲದಿದ್ರೆ ಗೇಟ್​ಪಾಸ್​.. ಗಂಭೀರ್ ಗುಟುರು!​

https://newsfirstlive.com/wp-content/uploads/2024/07/kohli-5.jpg

Load More