newsfirstkannada.com

ವಾಲ್ಮೀಕಿ ಹಗರಣಕ್ಕೆ ಸ್ಫೋಟಕ ಟ್ವಿಸ್ಟ್; ಇ.ಡಿ ಅಧಿಕಾರಿಗಳ ವಿರುದ್ಧವೇ ತನಿಖೆಗೆ ಸಿಎಂ ಪಟ್ಟು; ಏನಿದರ ಪ್ಲಾನ್?

Share :

Published July 23, 2024 at 9:14pm

    ತನಿಖೆ ನಡೆಸುತ್ತಿರುವ ಇ.ಡಿ ಅಧಿಕಾರಿಗಳ ವಿರುದ್ಧವೇ FIR ದಾಖಲು

    ಸಿಎಂ, ನಾಗೇಂದ್ರ ಹೆಸರೇಳುವಂತೆ ಇ.ಡಿ ಒತ್ತಡ ಆರೋಪ ನಿಜಾನಾ?

    ಕೇಂದ್ರದ ಇ.ಡಿ ಅಸ್ತ್ರಕ್ಕೆ ಕಾನೂನು ಸಮರ ಸಾರಿದ ಕಾಂಗ್ರೆಸ್ ಸರ್ಕಾರ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅತಿ ಹೆಚ್ಚು ಸದ್ದು ಮಾಡಿರುವ ವಾಲ್ಮೀಕಿ ಬಹುಕೋಟಿ ಹಗರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ಜಾರಿ ನಿರ್ದೇಶನಾಲಯದ (E.D) ಅಧಿಕಾರಿಗಳ ವಿರುದ್ಧವೇ ಕಿರುಕುಳ ಆರೋಪ ಕೇಳಿ ಬಂದಿದ್ದು, ದೂರು ಕೂಡ ದಾಖಲಾಗಿ ಎಫ್‌ಐಆರ್ ಆಗಿದೆ. ಈ ನಡುವೆ ಕೇಂದ್ರದ ಇ.ಡಿ ಅಸ್ತ್ರಕ್ಕೆ ರಾಜ್ಯ ಸರ್ಕಾರ ಪ್ರತಿಭಟನೆಯ ಮೂಲಕ ನೇರ ಸಂಘರ್ಷಕ್ಕಿಳಿದಿದೆ.

ಇದನ್ನೂ ಓದಿ: ‘ಮೋದಿ ಪ್ರಧಾನಿ ಪಟ್ಟ ಉಳಿಸಿಕೊಳ್ಳಲು ಬಜೆಟ್‌ನಲ್ಲಿ ಸರ್ಕಸ್‌’- ಸಿಎಂ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ 

ವಾಲ್ಮೀಕಿ ಅಂತಾ ಹೆಸರಿಟ್ಟುಕೊಂಡು ಜನರ ಕಲ್ಯಾಣಕ್ಕಾಗಿ ಇಟ್ಟಿದ್ದ ನೂರಾರು ಕೋಟಿ ಹಣ ನುಂಗಿದ್ದಾರೆ ಎನ್ನಲಾಗಿರುವ ಹಗರಣ ಕಾಂಗ್ರೆಸ್‌ ಸರ್ಕಾರವನ್ನು ತಲೆ ತಗ್ಗಿಸುವಂತೆ ಮಾಡಿದೆ. ಹಗರಣದ ತನಿಖೆಯನ್ನು ಸರ್ಕಾರ ಎಸ್‌ಐಟಿಗೆ ಕೈಗೆ ಕೊಟ್ಟಿತ್ತು. ನಂತರ ಸಿಬಿಐ ಕೂಡ ಎಂಟ್ರಿ ಕೊಡಿತ್ತು. ಎರಡು ತನಿಖೆ ಸಂಸ್ಥೆಗಳ ಮಾತ್ರವಲ್ಲದೇ ಇ.ಡಿ ಕೂಡ ಚಾರ್ಜ್‌ ತಗೊಂಡಿದೆ. ಆದ್ರೀಗ ಇ.ಡಿ ಅಧಿಕಾರಿಗಳ ವಿರುದ್ಧವೇ ಈಟಿ ತಿವಿಯೋಕೆ ರಾಜ್ಯ ಸರ್ಕಾರಕ್ಕೆ ಅಸ್ತ್ರ ಸಿಕ್ಕಿದೆ.

ಇ.ಡಿ ಅಧಿಕಾರಿಗಳ ವಿರುದ್ಧ ದೂರು.. ಎಫ್‌ಐಆರ್ ದಾಖಲು
ಅಧಿಕಾರಿಗೆ ಸಿಎಂ, ನಾಗೇಂದ್ರ ಹೆಸರೇಳುವಂತೆ ಇ.ಡಿ ಒತ್ತಡ
ವಾಲ್ಮೀಕಿ ನಿಗಮ ಹಗರಣದಲ್ಲಿ ಇದುವರೆಗೂ ಹಲವು ಜನರನ್ನ ಬಂಧಿಸಲಾಗಿದೆ. ಇದೀಗ ಪ್ರಕರಣ ಮತ್ತೊಂದು ಆಯಾಮ ಪಡೆದುಕೊಂಡಿದ್ದು, ಸಿಎಂರನ್ನ ಕೇಸ್‌ನಲ್ಲಿ ಸಿಲುಕಿಸಲು ಸಂಚು ರೂಪಿಸಲಾಗ್ತಿದೆ ಎಂಬ ಆರೋಪ ಇ.ಡಿ ಹೊತ್ತಿಕೊಂಡಿದೆ. ಸಿಎಂ ಹಾಗೂ ನಾಗೇಂದ್ರ ಅವ್ರ ನಿರ್ದೇಶನದಂತೆ ಹಣ ಟ್ರಾನ್ಸ್‌ಫರ್ ಮಾಡಿರೋದಾಗಿ ಒಪ್ಪಿಕೊಳ್ಳುವಂತೆ ಇ.ಡಿ ಅಧಿಕಾರಿಗಳು ಒತ್ತಡ-ಬೆದರಿಕೆ ಹಾಕಿದ್ದಾರಂತೆ. ಹೀಗಾಗಿ ಇ.ಡಿ ಅಧಿಕಾರಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಅಧಿಕಾರಿ ಕಲ್ಲೇಶಪ್ಪ ದೂರು ಕೊಟ್ಟಿದ್ದು ಎಫ್‌ಐಆರ್‌ ದಾಖಲಾಗಿದೆ.

ಇ.ಡಿ ವಿರುದ್ಧ ಗಾಂಧಿ ಪ್ರತಿಮೆ ಮುಂದೆ ಕಾಂಗ್ರೆಸ್ ಪ್ರತಿಭಟನೆ
ಇ.ಡಿ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದ್ದೇ ತಡ ರಾಜ್ಯ ಸರ್ಕಾರಕ್ಕೆ ಬಿಜೆಪಿ ವಿರುದ್ಧ ಅಸ್ತ್ರ ಸಿಕ್ಕಂತಾಗಿದೆ. ಇವತ್ತು ಅಧಿವೇಶನಕ್ಕೆ ಹಾಜರಾಗೋಕು ಮುನ್ನವೇ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್‌ ಪ್ರತಿಭಟಿಸಿದೆ. ಮೋದಿ, ಇ.ಡಿ ವಿರುದ್ಧ ಪೋಸ್ಟರ್‌ ಹಿಡಿದು ಇ.ಡಿ ರೌಡಿ ಅಂತ ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರಹಾಕಿದೆ. ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಕಾಂಗ್ರೆಸ್‌ ಸಚಿವರು-ಶಾಸಕರು ಸೇರಿ ಹಲವರು ಭಾಗಿಯಾಗಿದ್ದರು.

ಇದನ್ನೂ ಓದಿ: Budget2024: ಬಿಹಾರ, ಆಂಧ್ರಕ್ಕೆ ಬಂಪರ್ ಗಿಫ್ಟ್‌; ಮೋದಿ ಬಜೆಟ್‌ನಲ್ಲಿ ಎರಡು ರಾಜ್ಯಗಳಿಗೆ ಸಿಕ್ಕಿದ್ದೆಷ್ಟು?

ತನಿಖೆ ಮಾಡಬೇಕು ಅಂತ ಬಂದಿದ್ದ ಇ.ಡಿ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿರೋದಂತು ಸತ್ಯ. ಹಗರಣದಲ್ಲಿ ಸಿದ್ದರಾಮಯ್ಯ-ನಾಗೇಂದ್ರ ಹೆಸರನ್ನು ಹೇಳುವಂತೆ ಇ.ಡಿ ಒತ್ತಾಯ ಮಾಡ್ತಾ ಅನ್ನೋದು ಸಮಗ್ರವಾದ ತನಿಖೆ ನಂತರವೇ ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾಲ್ಮೀಕಿ ಹಗರಣಕ್ಕೆ ಸ್ಫೋಟಕ ಟ್ವಿಸ್ಟ್; ಇ.ಡಿ ಅಧಿಕಾರಿಗಳ ವಿರುದ್ಧವೇ ತನಿಖೆಗೆ ಸಿಎಂ ಪಟ್ಟು; ಏನಿದರ ಪ್ಲಾನ್?

https://newsfirstlive.com/wp-content/uploads/2024/05/NAGENDRA_CM_SIDDU.jpg

Load More