newsfirstkannada.com

ರಾಹುಲ್ ದ್ರಾವಿಡ್​​ IPLಗೆ ರಿಟರ್ನ್​.. KKRಗೆ ಬಿಗ್ ಶಾಕ್.. ಈ ತಂಡದ ನೂತನ ಕೋಚ್​..!

Share :

Published July 24, 2024 at 9:38am

    IPLನಲ್ಲಿ ರಾಹುಲ್​ ದ್ರಾವಿಡ್ ದರ್ಬಾರ್​​ ಶುರು..!

    ದಿ ವಾಲ್​​ ಜೊತೆ ಫ್ರಾಂಚೈಸಿ ಮಾತುಕತೆ ಅಂತಿಮ

    ಶೀಘ್ರದಲ್ಲೆ ಹೆಡ್​ಕೋಚ್ ಆಗಿ ಅಧಿಕೃತ ಘೋಷಣೆ

ಟೀಮ್ ಇಂಡಿಯಾ ಹೆಡ್​ಕೋಚ್​ ಹುದ್ದೆಗೆ ಗುಡ್​ಬೈ ಹೇಳಿದ ರಾಹುಲ್​ ದ್ರಾವಿಡ್​ ಮತ್ತೆ ಕೋಚ್​ ಹುದ್ದೆಗೇರಲು ಸಜ್ಜಾಗಿದ್ದಾರೆ. ಐಪಿಎಲ್​ನಲ್ಲಿ ದಿ ವಾಲ್​ರನ್ನ ಮತ್ತೆ ನೀವು ಕಣ್ತುಂಬಿಕೊಳ್ಳಬಹುದು. ದ್ರಾವಿಡ್ ಫ್ರಾಂಚೈಸಿಯೊಂದರ​​ ಹೆಡ್​​ಕೋಚ್​​​ ಆಗೋದು ಬಹುತೇಕ ಫೈನಲ್ ಆಗಿದೆ.

2025 ರ ಐಪಿಎಲ್​​ ಟೂರ್ನಿಗೆ ಇನ್ನು ಸಾಕಷ್ಟು ಸಮಯವಿದೆ. ಈಗಿನಿಂದಲೇ ಮಿಲಿಯನ್ ಡಾಲರ್ ಟೂರ್ನಿಗೆ ಸಂಬಂಧಿಸಿದ ಸುದ್ದಿಗಳು ಸಖತ್​​​​​ ಸದ್ದು ಮಾಡ್ತಿವೆ. ಮೆಗಾ ಆಕ್ಷನ್​​ಗೂ ಮೊದಲೇ ಆಟಗಾರರ ರಿಟೇನ್​​-ರಿಲೀಸ್​​​ ಲೆಕ್ಕಾಚಾರಗಳು ಆರಂಭವಾಗಿವೆ. ಇದ್ರ ನಡುವೆ ಟೀಮ್ ಇಂಡಿಯಾದ ಮಾಜಿ ಹೆಡ್​​​​ಕೋಚ್​​ ರಾಹುಲ್​​ ಕುರಿತ ಬಿಗ್​​ ಅಪ್​ಡೇಟ್ ನ್ಯೂಸ್​​​​​​​​​​​​​​​​ ಹೊರ ಬಿದ್ದಿದೆ.

ಇದನ್ನೂ ಓದಿ:ಮದುವೆಯಾದ ಮೇಲೂ ಮಾಜಿ ಪ್ರೇಯಸಿ ಜೊತೆ ಸಂಬಂಧ.. ಪತ್ನಿ ವಿರೋಧಿಸಿದಾಗ ಈ ಹೆಜ್ಜೆ ಇಟ್ಟ..!

ಕೆಕೆಆರ್​​​​ಗೆ ಶಾಕ್​​​..!
ಟಿ20 ವಿಶ್ವಕಪ್​ ಗೆಲುವಿನೊಂದಿಗೆ ಲೆಜೆಂಡ್ರಿ ರಾಹುಲ್​​ ದ್ರಾವಿಡ್​ ಅವರ ಟೀಮ್ ಇಂಡಿಯಾ ಜೊತೆಗಿನ ಕೋಚ್​​​​ ಅವಧಿ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ದ್ರಾವಿಡ್​​​ ಐಪಿಎಲ್​ ಕೋಚ್​ ಆಗ್ತಾರೆ ಅನ್ನೋ ರೂಮರ್ಸ್​ ಹಬ್ಬಿತ್ತು. ಇದೀಗ ಆ ರೂಮರ್ಸ್​ ನಿಜವಾಗಿದೆ. ವಿಶ್ವಕ್ರಿಕೆಟ್​ನ ಸಾರ್ವಕಾಲಿಕ ಬ್ಯಾಟ್ಸ್​​ಮನ್ ಮತ್ತೆ ಐಪಿಎಲ್​​ನತ್ತ ಮುಖ ಮಾಡಿದ್ದು, ರಾಜಸ್ಥಾನ ರಾಯಲ್ಸ್​ ತಂಡದ ಹೆಡ್​ಕೋಚ್​​ ಆಗಿ ದರ್ಬಾರ್ ನಡೆಸೋದು ಬಹುತೇಕ ಫೈನಲ್​ ಆಗಿದೆ.

ಕಲರ್​​ಫುಲ್ ಟೂರ್ನಿಯಲ್ಲಿ ದ್ರಾವಿಡ್​​ ಕೋಚಿಂಗ್ ಮ್ಯಾಜಿಕ್​​​ ಮತ್ತೆ ಶುರುವಾಗಲಿದೆ. ದಿ ವಾಲ್​ರನ್ನ ಕೋಚ್ ಆಗಿ ನೇಮಿಸಿಕೊಳ್ಳಲು ಹಲವು ಫ್ರಾಂಚೈಸಿಗಳು ಬೆನ್ನು ಬಿದ್ದಿದ್ವು. ಆ ಪೈಕಿ ಕೊಲ್ಕತ್ತಾ ನೈಟ್​ ರೈಡರ್ಸ್​ ಮುಂಚೂಣಿಯಲ್ಲಿತ್ತು. ಆದ್ರೀಗ ಕೆಕೆಆರ್​​​ಗೆ ಶಾಕ್ ಕೊಟ್ಟಿರೋ ರಾಹುಲ್​ ದ್ರಾವಿಡ್​​​ ಮರಳಿ ರಾಜಸ್ಥಾನ ರಾಯಲ್ಸ್ ಸೇರಿಕೊಳ್ಳಲು ಮುಂದಾಗಿದ್ದಾರೆ.

ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ಶೂಟೌಟ್.. ಚಿಕ್ಕಪ್ಪನಿಂದಲೇ ಅಣ್ಣನ ಮಗನ ಬರ್ಬರ ಕೊಲೆ

ಮಾತುಕತೆ ಫೈನಲ್​​..
ಟೀಮ್ ಇಂಡಿಯಾ ಮಾಜಿ ಕೋಚ್​ ದ್ರಾವಿಡ್​​ ರಾಜಸ್ಥಾನ ತಂಡ ಸೇರ್ಪಡೆಗೊಳ್ಳುವ ವಿಚಾರವಾಗಿ ಮಾತುಕತೆ ಫೈನಲ್ ಆಗಿದೆ. ದಿ ವಾಲ್ ಕೂಡ ರಾಜಸ್ಥಾನ ಪರ ಹೆಡ್​ಕೋಚ್​ ಆಗಿ ಕಾರ್ಯ ನಿರ್ವಹಿಸಲು ಒಪ್ಪಿದ್ದಾರೆ. ಅಧಿಕೃತ ಘೋಷಣೆಯಷ್ಟೇ ಬಾಕಿ ಇದ್ದು, ಶೀಘ್ರದಲ್ಲೇ ಈ ಬಗ್ಗೆ ಮಾಹಿತಿ ಹೊರಬೀಳಲಿದೆ ಎಂದು ವರದಿಯಾಗಿದೆ.

ರಾಜಸ್ಥಾನದ ಜೊತೆ ದ್ರಾವಿಡ್​ ಸುದೀರ್ಘ ಸಂಬಂಧ..!

ರಾಹುಲ್​ ದ್ರಾವಿಡ್​​​ ರಾಜಸ್ಥಾನದ ಕೋಚ್ ಆಗೋದು ಬಹುತೇಕ ಫಿಕ್ಸ್ ಎಂದು ಹೇಳಲಾಗ್ತಿದೆ. ಅದು ನಿಜವಾಗಿದ್ದೆ ಆದ್ರೆ ದಿ ವಾಲ್​​​ ಒಂಬತ್ತು ವರ್ಷಗಳ ನಂತರ ಗೂಡಿಗೆ ಮರಳಿದಂತಾಗಲಿದೆ. ದ್ರಾವಿಡ್​​ ರಾಜಸ್ಥಾನ ಫ್ರಾಂಚೈಸಿ ಜೊತೆ ಸುದೀರ್ಘ ಸಂಬಂಧ ಹೊಂದಿದ್ದಾರೆ. 2011ರಲ್ಲಿ ಆರ್​ಸಿಬಿ ತಂಡ ತೊರೆದು ರಾಜಸ್ಥಾನ ಸೇರಿಕೊಂಡಿದ್ರು. ನಾಯಕನಾಗಿ 2013 ರಲ್ಲಿ ತಂಡವನ್ನ ಪ್ಲೇ ಆಫ್ ಗೇರಿಸಿದ್ರು. ಬಳಿಕ 2014 ಹಾಗೂ 2015 ರಲ್ಲಿ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು.

ಸಂಗಾಕ್ಕರ ಕಥೆ ಏನು..?
ದ್ರಾವಿಡ್ ರಾಜಸ್ಥಾನ ಹೆಡ್​​​​​ಕೋಚ್ ಆದ್ರೆ ಫ್ರಾಂಚೈಸಿಗೆ ದೊಡ್ಡ ಬಲ ಬರುವುದು ನಿಜ. ಆದ್ರೆ ಕುಮಾರ್ ಸಂಗಾಕ್ಕರ ಕತೆ ಏನು ಎಂಬ ಪ್ರಶ್ನೆ ಎದ್ದಿದೆ. ಯಾಕಂದ್ರೆ 2021 ರಿಂದ ಸಂಗಾಕ್ಕರ ರಾಜಸ್ಥಾನ ತಂಡದ ಹೆಡ್​ಕೋಚ್ ಹಾಗೂ ಡೈರೆಕ್ಟರ್​​ ಆಫ್​​​ ಕ್ರಿಕೆಟ್ ಆಗಿದ್ದಾರೆ. ದ್ರಾವಿಡ್​ ಆಗಮಿಸಿದ್ರೆ ಸಂಗಾಕ್ಕರ ಹೆಡ್​ ಕೋಚ್​ ಹುದ್ದೆಯನ್ನ ತ್ಯಜಿಸೋ ಸಾಧ್ಯತೆ ಇದೆ. ಫ್ರಾಂಚೈಸಿಯ ವಿಶ್ವದ ಹಲವು ಲೀಗ್​ಗಳಲ್ಲಿ ತಂಡವನ್ನ ಹೊಂದಿರೋದ್ರಿಂದ, ಸಂಗಾಕ್ಕರ​ ಡೈರೆಕ್ಟರ್​​ ಆಫ್​​​ ಕ್ರಿಕೆಟ್ ಆಗಿ ಮುಂದುವರಿಯಲಿದ್ದಾರೆ.

ಇದನ್ನೂ ಓದಿ:ಪ್ರೀತಿಗೆ ಅಡ್ಡಿ ಆಗಲಿಲ್ಲ ವಯಸ್ಸು.. ಅಳಿಯನ ವರ್ಷ ತಿಳಿದು ದಂಗಾದ ಪೋಷಕರು.. ಠಾಣೆಯಲ್ಲಿ ಹೈಡ್ರಾಮಾ

ಒಟ್ಟಿನಲ್ಲಿ ಚಾಂಪಿಯನ್​ ಕೋಚ್​ ದ್ರಾವಿಡ್​​​ ಟೀಮ್ ಇಂಡಿಯಾ ಬಳಿಕ ಐಪಿಎಲ್​​ನಲ್ಲಿ ಹೊಸ ಇನ್ನಿಂಗ್ಸ್​​ ಆರಂಭಿಸಲು ಸಜ್ಜಾಗಿದ್ದಾರೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ನಿರ್ಧಾರ ಹೊರಬೀಳೋ ಸಾಧ್ಯತೆಯಿದ್ದು ಕನ್ನಡದ ಕಲಿಗೆ ಆಲ್​​ ದಿ ಬೆಸ್ಟ್​.!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರಾಹುಲ್ ದ್ರಾವಿಡ್​​ IPLಗೆ ರಿಟರ್ನ್​.. KKRಗೆ ಬಿಗ್ ಶಾಕ್.. ಈ ತಂಡದ ನೂತನ ಕೋಚ್​..!

https://newsfirstlive.com/wp-content/uploads/2023/06/Rahul-Dravid.jpg

Load More