newsfirstkannada.com

Breaking: ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ವಿಮಾನ ಪತನ.. ಭಾರೀ ಸಾವು ನೋವಿನ ಆತಂಕ..

Share :

Published July 24, 2024 at 12:19pm

Update July 24, 2024 at 12:20pm

    ಐವರ ಮೃತದೇಹ ಪತ್ತೆ ಮಾಡಿದ ಭದ್ರತಾ ಸಿಬ್ಬಂದಿ

    ವಿಮಾನದಲ್ಲಿ ಒಟ್ಟು 19 ಮಂದಿ ಪ್ರಯಾಣಿಕರು ಇದ್ದರು

    ಪತನಗೊಳ್ಳುತ್ತಿದ್ದಂತೆಯೇ ಹೊತ್ತಿ ಉರಿದ ವಿಮಾನ

ನೇಪಾಳದ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ಪತನಗೊಂಡಿದೆ. ವಿಮಾನದಲ್ಲಿ ಒಟ್ಟು 19 ಪ್ರಯಾಣಿಕರಿದ್ದರು, ಅವರಲ್ಲಿ ಐವರ ಮೃತದೇಹವನ್ನು ಪತ್ತೆ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ಶೌರ್ಯ ಏರ್​ಲೈನ್ಸ್​ನ CRJ-200 ಸಂಖ್ಯೆಯ ವಿಮಾನವು ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗ್ತಿದ್ದಂತೆಯೇ ಪತನಗೊಂಡಿದೆ. ಕಠ್ಮಂಡುವಿನಿಂದ ಪೋಖರಗೆ ಹೋಗುತ್ತಿತ್ತು. ವಿಮಾನದಲ್ಲಿದ್ದವರೆಲ್ಲ ಏರ್​ಲೈನ್​ಗೆ ಸಂಬಂಧಿಸಿದ ಟೆಕ್ನಿಕಲ್ ಸ್ಟಾಫ್ ಆಗಿದ್ದರು ಎನ್ನಲಾಗಿದೆ.

ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ, ವಿಮಾನ ದುರಂತದಲ್ಲಿ ಒಟ್ಟು 19 ಮಂದಿ ಸಿಲುಕಿದ್ದಾರೆ. ಅವರಲ್ಲಿ ಐವರ ಮೃತದೇಹ ಪತ್ತೆಯಾಗಿದೆ. ಇನ್ನುಳಿದವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಈ ಮಧ್ಯೆ ವಿಮಾನ ಪತನಗೊಳ್ಳುತ್ತಿದ್ದಂತೆಯೇ ಬೆಂಕಿ ಹೊತ್ತಿಕೊಂಡು ಉರಿದಿದೆ. ಕೆಲವರು ಬೆಂಕಿಯ ಕೆನ್ನಾಲಿಗೆಗೆ ಸಜೀವ ದಹನಗೊಂಡಿರುವ ಅನುಮಾನ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ವಿಮಾನ ಪತನ.. ಭಾರೀ ಸಾವು ನೋವಿನ ಆತಂಕ..

https://newsfirstlive.com/wp-content/uploads/2024/07/PLANE-1.jpg

Load More