newsfirstkannada.com

ನೆಹ್ರಾಗೆ ಗೇಟ್​ಪಾಸ್​..! ಗುಜರಾತ್ ಟೈಟನ್ಸ್​ಗೆ ಯುವರಾಜ್​​ ಸಿಂಗ್ ಎಂಟ್ರಿ..!

Share :

Published July 24, 2024 at 1:01pm

Update July 25, 2024 at 6:28am

    ಆಶಿಶ್​ ನೆಹ್ರಾಗೆ ಗುಜರಾತ್ ಟೈಟನ್ಸ್​​ ಗೇಟ್​ಪಾಸ್.​.?

    ನೆಹ್ರಾ, ಸೋಲಂಕಿಗೆ ಟಾಟಾ, ಸಿಕ್ಸರ್​ ಕಿಂಗ್​ಗೆ ಹಾಯ್.​.?

    2024ರಲ್ಲಿ ಕ್ಯಾಪ್ಟನ್ ಪಾಂಡ್ಯರನ್ನೇ ಕೈಬಿಟ್ಟಿದ್ದ GT

ವಿಶ್ವ ಕ್ರಿಕೆಟ್​ ಸೂಪರ್​ ಸ್ಟಾರ್​, ಸ್ಫೋಟಕ ಆಲ್​​ರೌಂಡರ್​ ಯುವರಾಜ್​ ಸಿಂಗ್​ ಐಪಿಎಲ್​ ಅಖಾಡಕ್ಕೆ ಕಮ್​​ಬ್ಯಾಕ್​ ಮಾಡ್ತಿದ್ದಾರೆ. ಆಟಗಾರನಾಗಿ ಫ್ಯಾನ್ಸ್​ಗೆ ಜಬರ್ದಸ್ತ್​ ಎಂಟರ್​​ಟೈನ್​ಮೆಂಟ್​ ನೀಡಿದ ಯುವರಾಜ್​, ಮುಂದಿನ ಸೀಸನ್​ನಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇಂಡಿಯನ್​ ಪ್ರೀಮಿಯರ್​ ಲೀಗ್​ನ ಫ್ರಾಂಚೈಸಿಗಳ ವಲಯದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗ್ತಿದೆ. ಡಿಸೆಂಬರ್​ನಲ್ಲಿ ನಡೆಯೋ ಮೆಗಾ ಆಕ್ಷನ್​ಗೆ ಸಿದ್ಧತೆ ಆರಂಭಿಸಿರೋ ಫ್ರಾಂಚೈಸಿಗಳು ಮೇಜರ್​ ಸರ್ಜರಿ ಮಾಡ್ತಿದೆ. ಸೂಪರ್​ ಸ್ಟಾರ್​ ಆಟಗಾರರೇ ಒಂದು ಫ್ರಾಂಚೈಸಿ ತೊರೆದು ಇನ್ನೊಂದು ಫ್ರಾಂಚೈಸಿ ಸೇರುವ ಸುದ್ದಿಗಳು ಸದ್ದು ಮಾಡ್ತಿವೆ. ಕೋಚಿಂಗ್​ ಸ್ಟಾಫ್​ ಬದಲಾವಣೆಯ ವಿಚಾರದಲ್ಲೂ ಶಾಕಿಂಗ್​ ಸುದ್ದಿ ಹೊರಬಿಳ್ತಿವೆ.

ಇದನ್ನೂ ಓದಿ:Breaking: ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ವಿಮಾನ ಪತನ.. ಭಾರೀ ಸಾವು ನೋವಿನ ಆತಂಕ..

ಆಶಿಶ್​ ನೆಹ್ರಾಗೆ ಗುಜರಾತ್ ಟೈಟನ್ಸ್​​ ಗೇಟ್​ಪಾಸ್​
ಗುಜರಾತ್​ ಟೈಟನ್ಸ್​.. ಐಪಿಎಲ್​ನಲ್ಲಿ ಅತಿ ವೇಗವಾಗಿ ಸಕ್ಸಸ್​ ಕಂಡ ಫ್ರಾಂಚೈಸಿ. ಮೊದಲ ಸೀಸನ್​​ನಲ್ಲೇ ಚಾಂಪಿಯನ್​, ಸೆಕೆಂಡ್​ ಸೀಸನ್​ನಲ್ಲಿ ರನ್ನರ್​​ಅಪ್​.. ಅದ್ಧೂರಿ ಆರಂಭ ಪಡೆದ ಈ ಗುಜರಾತ್​ ಕಳೆದ ಸೀಸನ್​ನಲ್ಲಿ 8ನೇ ಸ್ಥಾನಕ್ಕೆ ಕುಸಿದಿತ್ತು. ಇದೀಗ ಮುಂದಿನ ಸೀಸನ್​ಗೆ ಸಿದ್ಧತೆ ಆರಂಭಿಸಿರೋ ಗುಜರಾತ್​ ಮೇಜರ್​ ಸರ್ಜರಿಗೆ ಕೈ ಹಾಕಿದೆ. ತಂಡದ ಯಶಸ್ಸಿನ ಸೂತ್ರದಾರ, ಹೆಡ್​ಕೋಚ್ ಆಶಿಶ್​ ನೆಹ್ರಾಗೇ ಕೊಕ್​ ಕೊಡಲು ಸಜ್ಜಾಗಿದೆ.

ನೆಹ್ರಾ, ಸೋಲಂಕಿಗೆ ಗುಡ್​ ಬೈ, ಸಿಕ್ಸರ್​ ಕಿಂಗ್​ಗೆ ಹಾಯ್
ಹೆಡ್​ ಕೋಚ್​ ಹುದ್ದೆಯಲ್ಲಿದ್ದ ಆಶಿಶ್​ ನೆಹ್ರಾ ಮಾತ್ರವಲ್ಲ. ಆರಂಭದಿಂದ ತಂಡ ಕಟ್ಟಿ ಬೆಳೆಸಿದ ಡೈರೆಕ್ಟರ್​​ ವಿಕ್ರಮ್​ ಸೋಲಂಕಿಗೂ ಫ್ರಾಂಚೈಸಿ ಶಾಕ್​ ನೀಡಲು ಸಜ್ಜಾಗಿದೆ. ವಿಕ್ರಂ ಸೋಲಂಕಿಗೆ ಟೈಟನ್ಸ್​ ಫ್ರಾಂಚೈಸಿ ಮುಂದಿನ ಸೀಸನ್​ಗೂ ಮುನ್ನ ಟಾಟಾ ಮಾಡಲಿದೆ. ಇವರಿಬ್ಬರ ಜಾಗಕ್ಕೆ, ವಿಶ್ವ ಟಿ20 ಕ್ರಿಕೆಟ್ ಕಂಡ ಸೂಪರ್​ ಸ್ಟಾರ್​ ಆಟಗಾರನನ್ನ ಕರೆ ತರಲು ಫ್ರಾಂಚೈಸಿ ಮುಂದಾಗಿದೆ. ಅಂದ್ಹಾಗೆ ಆ ಸೂಪರ್​ ಸ್ಟಾರ್​ ಬೇರಾರೂ ಅಲ್ಲ.. ಒನ್​ ಅಂಡ್ ಓನ್ಲೀ ಯುವರಾಜ್​ ಸಿಂಗ್​..!

ಇದನ್ನೂ ಓದಿ:ರಾಹುಲ್ ದ್ರಾವಿಡ್​​ IPLಗೆ ರಿಟರ್ನ್​.. KKRಗೆ ಬಿಗ್ ಶಾಕ್.. ಈ ತಂಡದ ನೂತನ ಕೋಚ್​..!

ಯುವರಾಜ್​ ಸಿಂಗ್​ಗೆ ಗುಜರಾತ್​ ಟೈಟನ್ಸ್​ ಗಾಳ..!
ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ, ಲೆಜೆಂಡ್​ ಯುವರಾಜ್​ ಸಿಂಗ್​ಗೆ ಸದ್ಯ ಗುಜರಾಥ್​ ಟೈಟನ್ಸ್​ ಗಾಳ ಹಾಕಿದೆ ಎಂಬ ಸುದ್ದಿ ಸದ್ಯ ಹೊರಬಿದ್ದಿದೆ. ಈಗಾಗಲೇ ಫ್ರಾಂಚೈಸಿ ಯುವರಾಜ್​ ಸಿಂಗ್​ ಜೊತೆಗೆ ಈ ಬಗ್ಗೆ ಚರ್ಚೆ ನಡೆಸಿದೆ. ಇದಕ್ಕೆ ಯುವರಾಜ್​ ಕೂಡ ಪಾಸಿಟಿವ್​ ರಿಪ್ಲೇ ಕೊಟ್ಟಿದ್ದಾರೆ. ಅಂತಿಮ ನಿರ್ಧಾರ ತಿಳಿಸಿಲ್ಲ. ಯುವಿಯ ಫೈನಲ್​ ಡಿಶಿಷನ್​ಗೆ ಫ್ರಾಂಚೈಸಿ ಕಾಯ್ತಿದೆ ಎನ್ನಲಾಗ್ತಿದೆ.

ಯುವಿ ಮೇಲ್ಯಾಕೆ ಗುಜರಾತ್​ ಟೈಟನ್ಸ್​ ಕಣ್ಣು..?
ಯುವರಾಜ್​ ಸಿಂಗ್​ ಟೀಮ್​ ಇಂಡಿಯಾ ಮಾತ್ರವಲ್ಲ. ವಿಶ್ವ ಕ್ರಿಕೆಟ್​​ ಕಂಡ ಸ್ಫೋಟಕ ಆಲ್​​ರೌಂಡರ್​. ಟಿ20 ವಿಶ್ವಕಪ್​, ಏಕದಿನ ವಿಶ್ವಕಪ್​​, ಚಾಂಪಿಯನ್ಸ್​ ಟ್ರೋಫಿ ಮೂರು ಐಸಿಸಿ ಟ್ರೋಫಿಗಳನ್ನ ಗೆದ್ದ ಆಟಗಾರ. 2007ರ ಚುಟುಕು ವಿಶ್ವಕಪ್​​ನಲ್ಲಿ ಓವರ್​​ 6ಕ್ಕೆ 6 ಎಸೆತಗಳನ್ನ ಸಿಕ್ಸರ್​ಗಟ್ಟಿ ದಾಖಲೆ ಬರೆದಿದ್ರು. 2011ರ ವಿಶ್ವಕಪ್​ನಲ್ಲಿ ಆಲ್​​ರೌಂಡ್​ ಆಟದಿಂದ ಮಿಂಚಿ ಸರಣಿ ಶ್ರೇಷ್ಟ ಪ್ರಶಸ್ತಿ ಗೆದ್ದಿದ್ರು. 2013ರ ಚಾಂಪಿಯನ್ಸ್​ ಟ್ರೋಫಿಯಲ್ಲೂ ಸಾಲಿಡ್​ ಪರ್ಫಾಮೆನ್ಸ್​ ನೀಡಿ ಮಿಂಚಿದ್ರು. ಅಪಾರ ಅನುಭವ ಹೊಂದಿರೋದ್ರಿಂದಲೇ ಗುಜರಾತ್ ಯುವಿಗೆ​ ಗಾಳ ಹಾಕಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅಪಾರ ಅನುಭವ ಹೊಂದಿರುವ ಯುವರಾಜ್​ ಸಿಂಗ್​, ಐಪಿಎಲ್​ನ ಆಳ-ಅಗಲದ ಬಗ್ಗೆಯೂ ಪಕ್ಕಾ ಮಾಹಿತಿ ಇದೆ. ಆಟಗಾರನಾಗಿ 132 IPL ಪಂದ್ಯ ಆಡಿದ್ದಾರೆ. ಮಾನಸಿಕ ಆರೋಗ್ಯ ಹಾಗೂ ಒತ್ತಡದ ವಿಚಾರಕ್ಕೆ ಬಂದರೆ ಸ್ವತಃ ಯುವರಾಜ್​ ಸಿಂಗ್​ ಎಲ್ಲವನ್ನೂ ಫೇಸ್​ ಮಾಡಿ ಗೆದ್ದಿದ್ದಾರೆ. ಕ್ಯಾನ್ಸರ್​​ ಮಹಮಾರಿಯೊಂದಿಗೆ ಹೋರಾಡ್ತಾ ಇದ್ದರೂ ಮೈದಾನಕ್ಕಿಳಿದು ಘರ್ಜಿಸಿದ್ರು. ಯುವಿಯ ಈ ಛಲದ ಹೋರಾಟವೇ ಯುವ ಆಟಗಾರರಿಗೆ ಸ್ಫೂರ್ತಿಯ ಪಾಠ ಆಗಲಿದೆ.

ಗಿಲ್​​​ ಪಳಗಿದ್ದೇ ಯುವಿ ಗರಡಿಯಲ್ಲಿ.!
ಗುಜರಾತ್​ ಟೈಟನ್ಸ್​ ತಂಡದ ನಾಯಕ ಶುಭ್​​ಮನ್​ ಗಿಲ್​ ಪಳಗಿದ್ದೇ ಯುವರಾಜ್​ ಸಿಂಗ್​ ಗರಡಿಯಲ್ಲಿ. ಶುಭ್​ಮನ್​ ಗಿಲ್,​ ಯುವರಾಜ್​ ಸಿಂಗ್​ ತಿದ್ದಿ ತೀಡಿ ಬೆಳೆಸಿದ ಹುಡುಗ. ಇವರಿಬ್ಬರ ನಡುವೆ ಉತ್ತಮವಾದ ಭಾಂದವ್ಯ ಇದೆ. ಕ್ಯಾಪ್ಟನ್-ಕೋಚ್​ ಸಮನ್ವಯತೆ ಡ್ರೆಸ್ಸಿಂಗ್​ ರೂಮ್​ ವಾತಾವರಣವನ್ನು ಉತ್ತಮಗೊಳಿಸಲಿದೆ. ಇದೂ ಕೂಡ ಗುಜರಾತ್​​ ಯುವಿಗೆ ಗಾಳ ಹಾಕಿರೋದಕ್ಕೆ ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ:ಮದುವೆಯಾದ ಮೇಲೂ ಮಾಜಿ ಪ್ರೇಯಸಿ ಜೊತೆ ಸಂಬಂಧ.. ಪತ್ನಿ ವಿರೋಧಿಸಿದಾಗ ಈ ಹೆಜ್ಜೆ ಇಟ್ಟ..!

ಯುವರಾಜ್​ ಸಿಂಗ್ ವೈಟ್​ಬಾಲ್​ ಫಾರ್ಮೆಟ್​ ಕಂಡ ಒನ್​ ಆಫ್​ ಗ್ರೇಟೆಸ್ಟ್ AND ಪರ್ಫೆಕ್ಟ್​​ ಆಲ್​​ರೌಂಡರ್​. ಬ್ಯಾಟಿಂಗ್​, ಬೌಲಿಂಗ್​ ಮಾತ್ರವಲ್ಲ. ಫೀಲ್ಡಿಂಗ್​ ಮೂರು ವಿಭಾಗದಲ್ಲೂ ಮಿಂಚು ಹರಿಸಿದ ಕ್ರಿಕೆಟಿಗ. ಇಂತಹ ಶ್ರೇಷ್ಟ ಆಲ್​​ರೌಂಡರ್ ಗುಜರಾತ್ ಟೈಟನ್ಸ್​ ಸೇರಿದ್ರೆ ತಂಡಕ್ಕೆ ಲಾಭವೇ ಹೊರತು ನಷ್ಟ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ನೆಹ್ರಾಗೆ ಗೇಟ್​ಪಾಸ್​..! ಗುಜರಾತ್ ಟೈಟನ್ಸ್​ಗೆ ಯುವರಾಜ್​​ ಸಿಂಗ್ ಎಂಟ್ರಿ..!

https://newsfirstlive.com/wp-content/uploads/2024/07/NEHRA.jpg

Load More