newsfirstkannada.com

ಶಿರೂರು ಗುಡ್ಡ ಕುಸಿತ: 8 ಶವ ಹೊರಕ್ಕೆ, ಪತ್ತೆಯಾಗದ ಇನ್ನೂ ಮೂರು ಜನ

Share :

Published July 25, 2024 at 6:22am

    ಗುಡ್ಡ ಕುಸಿತ ದುರಂತ.. ಪತ್ತೆಯಾಗದ ಮೂವರ ಮೃತದೇಹ

    ಗೋಕಾಕ್​​ನಿಂದ ಪೊಕ್​​ಲೈನ್ ತರಿಸಿದ ಶಾಸಕ ಸತೀಶ್ ಸೈಲ್

    ಗುಡ್ಡ ಕುಸಿತದ ಸ್ಥಳಕ್ಕೆ ಲಾರಿ ಬಂದಿದ್ದ ಸಿಸಿಟಿವಿ ದೃಶ್ಯ ಲಭ್ಯ

ಉತ್ತರ ಕನ್ನಡದ ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಮಣ್ಣಿನಡಿ ಸಿಲುಕಿದ್ದ 8 ಜನರ ಶವ ಹೊರತೆಗೆಯಲಾಗಿದೆ. ಉಳಿದ ಮೂವರ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.. ಅತ್ತ ದುರಂತದಲ್ಲಿ ನಾಪತ್ತೆಯಾದ ಕೇರಳದ ಲಾರಿ ಚಾಲಕ ಅರ್ಜುನ್ ಕುಟುಂಬ ಹೆಬಿಯಾಸ್ ಕಾರ್ಪಸ್ ಹಾಕಲು ತಯಾರಿ ನಡೆಸಿದೆ.

ಇದನ್ನೂ ಓದಿ: BREAKING: ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆ; ಚಾಲಕನ ಸುಳಿವು?

ವಿಧಾನಸಭೆ ಅಧಿವೇಶನ ಶುರುವಾದ್ರೂ ಕಲಾಪಕ್ಕೆ ತೆರಳದೇ ಗುಡ್ಡ ಕುಸಿತದ ಜಾಗದಲ್ಲೇ ಬೀಡುಬಿಟ್ಟಿರುವ ಶಾಸಕ ಸತೀಶ್​​ ಸೈಲ್​​​, ಮಣ್ಣು ತೆರವು ಕಾರ್ಯಚರಣೆಗಾಗಿ ಗೋಕಾಕ್​​ನಿಂದ ಮಣ್ಣು ತೆಗೆಯುವ ಪೋಕ್​​ ಲೈನ್​ ತರಿಸಿದ್ದಾರೆ.. ಜೊತೆಗೆ ನೌಕಾಳದ ಹೆಲಿಕಾಪ್ಟರ್​​ ಮೂಲಕ ಕಾರ್ಯಾಚರಣೆ ಮಾಡಲಾಗುವುದು ನಾಳೇಯೆ ಲಾರಿಯನ್ನು ಪತ್ತೆ ಹಚ್ಚುತ್ತೇವೆ ಅಂತ ಭರವಸೆ ನೀಡಿದ್ದಾರೆ.ಇತ್ತ ಕೇರಳ ಮೂಲದ ಲಾರಿ ಚಾಲಕ ಅರ್ಜನ್​​ ಪತ್ತೆಗಾಗಿ ಕಾರ್ಯಚರಣೆ ಭರದಿಂದ ಸಾಗಿದೆ.. ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಲಾರಿ, ಗುಡ್ಡ ಕುಸಿತ ಸ್ಥಳಕ್ಕೆ ಬಂದಿರುವ ದೃಶ್ಯ ಲಭ್ಯವಾಗಿದ್ದು, ಜೋಯಿಡಾದಿಂದ ಜುಲೈ 15ರ ಸಂಜೆ ಲಾರಿ ಹೊರಟಿತ್ತು. ಆದ್ರೆ ದುರಾದೃಷ್ಟವಶಾತ್​​ ಬೆಳಿಗ್ಗೆ 8.45ಕ್ಕೆ ಶಿರೂರು ಗುಡ್ಡ ಕುಸಿದಿದ್ದು, ಲಾರಿ ಮಣ್ಣಿನ ಜೊತೆ ನದಿಗೆ ಬಿದ್ದಿದೆ.ಇನ್ನು ಇದೇ ವೇಳೆ ಅರ್ಜುನ್ ಇನ್ನೂ ಪತ್ತೆಯಾಗಿಲ್ಲ ಅಂತ ವ್ಯಕ್ತಿಯೋರ್ವ ಹೈಕೋರ್ಟ್ನಲ್ಲಿ ಪಿಐಎಲ್ ಹಾಕಿದ್ದಾರೆ ಅಂತ ಹೇಳಲಾಗಿದೆ. ಜೊತೆಗೆ ಅರ್ಜುನ್ ಕುಟುಂಬದಿಂದ ಹೆಬಿಯಾಸ್ ಕಾರ್ಪಸ್ ಹಾಕಲು ತಯಾರಿ ಮಾಡಲಾಗಿದೆ ಅನ್ನೋ ಮಾಹಿತಿ ಕೂಡ ಲಭ್ಯವಾಗಿದೆ.

ಮೊಬೈಲ್​ನಲ್ಲಿ ಸೆರಯಾಯ್ತು ಗುಡ್ಡ ಕುಸಿತದ ಭೀಕರ ದೃಶ್ಯ

ಗುಡ್ಡ ಕುಸಿತದ ವೇಳೆ ಯುವಕನೊಬ್ಬ ಮಾಡಿದ್ದ ವಿಡಿಯೋ ಈಗ ಎಲ್ಲೇಡೆ ಹರಿದಾಡ್ತಿದೆ.. ಗುಡ್ಡ ಕುಸಿತದಿಂದ ಮಣ್ಣು ಗಂಗಾವಳಿ ನದಿಗೆ ಬಿದ್ದಿತ್ತು. ಪರಿಣಾಮ ನದಿಯ ಪಕ್ಕದಲ್ಲೇ ಇದ್ದ ಉರುವಳೆ ಗ್ರಾಮಕ್ಕೆ ಪ್ರವಾಹದ ರೀತಿ ನೀರು ನುಗ್ಗಿತ್ತು.. ನೀರು ನುಗ್ಗಿದ ವೇಳೆ ಜನರು ದಿಕ್ಕಾಪಾಲಾಗಿ ಓಡಿಹೋಗಿರೋ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಶಾಲಾ ವಾಹನ.. ನಾಲ್ವರು ವಿದ್ಯಾರ್ಥಿಗಳು ಗಂಭೀರ

ಮಂಗಳೂರು ಹೊರವಲಯದಲ್ಲೂ ಗುಡ್ಡ ಕುಸಿತದ ಭೀತಿ

ಅತ್ತ ಮಂಗಳೂರು ಹೊರವಲಯದಲ್ಲೂ ಗುಡ್ಡ ಕುಸಿತದ ಭೀತಿ ಎದುರಾಗಿದೆ… ಮಂಗಳೂರು – ಸೋಲಾಪುರ್​​​​ ಹೆದ್ದಾರಿ ಭಾರೀ ಮಳೆಯಿಂದಾಗಿ ಗುಡ್ಡ ಕುಸಿಯುವ ಆತಂಕ ಎದುರಾಗಿದ್ದು, ಕೆತ್ತಿಕ್ಕಲ್ ಕೆತ್ತಿಕ್ಕಲ್ ಗುಡ್ಡದ ಮೇಲಿರುವ ನಾಲ್ಕು ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಸ್ಥರು ಜೀವ ಭಯದಿಂದಲೇ ದಿನ ದೂಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿರೂರು ಗುಡ್ಡ ಕುಸಿತ: 8 ಶವ ಹೊರಕ್ಕೆ, ಪತ್ತೆಯಾಗದ ಇನ್ನೂ ಮೂರು ಜನ

https://newsfirstlive.com/wp-content/uploads/2024/07/Shiruru-Landslide-1.jpg

Load More