newsfirstkannada.com

IAS ಕೋಚಿಂಗ್​ ಸೆಂಟರ್​ಗೆ ಮಳೆ ನೀರು ನುಗ್ಗಿ ದುರಂತ.. ಮೂವರು ವಿದ್ಯಾರ್ಥಿಗಳು ಸಾವು

Share :

Published July 28, 2024 at 7:17am

    ಭೂ-ಕುಸಿತದಿಂದ 15ಕ್ಕೂ ಹೆಚ್ಚು ಮನೆಗಳು ಸೇರಿ ಶಾಲೆಗೂ ಹಾನಿ

    ದೇಶದ ಎಲ್ಲೆಡೆ ಅವಾಂತರಗಳಿಗೆ ಕಾರಣವಾಗ್ತಿರೋ ಮಳೆರಾಯ

    ಭಾರೀ ಮಳೆಯಿಂದ ಜನರಿಗೆ ಮತ್ತೆ ಸಂಕಷ್ಟ ಎದುರಾಗೋ ಭೀತಿ!

ದೆಹಲಿಯಲ್ಲಿ ಐಎಎಸ್​ ಅಧಿಕಾರಿಯಾಗುವ ಕನಸು ಹೊತ್ತಿದ್ದ ಮೂವರು ವಿದ್ಯಾರ್ಥಿಗಳನ್ನ ವರುಣ ಬಲಿ ಪಡೆದಿದ್ದಾನೆ. ದೇವಭೂಮಿ ಉತ್ತರಾಖಂಡದಲ್ಲಿ ಭಾರೀ ಮಳೆಯಿಂದಾಗಿ ಭೂ ಕುಸಿತದ ಸರಣಿ ಮುಂದುವರಿದೆ. ಅತ್ತ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು ಜನ ಕಂಗಾಲಾಗಿದ್ದಾರೆ.

ಮೂವರು ವಿದ್ಯಾರ್ಥಿಗಳನ್ನ ಬಲಿಪಡೆದ ದೆಹಲಿ ಮಳೆ

ಮಳೆರಾಯ ಸೃಷ್ಟಿಸಿದ ಅವಾಂತರಕ್ಕೆ ಜನರು ಕಂಗಾಲಾಗಿದ್ದಾರೆ. ಖ್ಯಾತ UPSC ಕೋಚಿಂಗ್​ ಸೆಂಟರ್​ ಒಂದರ ನೆಲಮಳಿಗೆಗೆ ಏಕಾಏಕಿ ಮಳೆ ನೀರು ಲಗ್ಗೆ ಇಟ್ಟ ಪರಿಣಾಮ ಮೂವರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. 30 ವಿದ್ಯಾರ್ಥಿಗಳು ಕೊಂಚದರಲ್ಲೇ ಪ್ರಾಣ ಉಳಿಸಿಕೊಂಡಿದ್ದಾರೆ. ರಾಜೇಂದ್ರ ನಗರದ UPSC ಕೋಚಿಂಗ್​ ಸೆಂಟರ್​ಗೆ ಮಳೆ ನೀರು ನುಗ್ಗಿದ ರಭಸಕ್ಕೆ ನೆಲಮಹಡಿಯಲ್ಲಿದ್ದ  ಐಎಎಸ್​ ತರಬೇತಿ ಪಡೆಯುತ್ತಿದ್ದ ಮೂವರು ವಿದ್ಯಾರ್ಥಿಗಳು ಜೀವಂತ ಜಲಸಮಾಧಿ ಆಗಿದ್ದಾರೆ. ಮೂವರ ಪೈಕಿ ಒಬ್ಬರ ಮೃತದೇಹ ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದಾರೆ. ಇನ್ನೂ ಇಬ್ಬರು ನಾಪತ್ತೆಯಾಗಿದ್ದು, ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: ‘ಕ್ಯಾಪ್ಟನ್ ಅಲ್ಲ, ಲೀಡರ್​​ನಂತೆ ಕಾಣಿಸಿದ್ದಾರೆ’.. ರೋಹಿತ್ ಶರ್ಮಾ ಬಗ್ಗೆ ಸೂರ್ಯಕುಮಾರ್ ಅಚ್ಚರಿ ಹೇಳಿಕೆ!

ಉತ್ತರಾಖಂಡ್​ನ ಟಿಂಗರ್ ಗ್ರಾಮದಲ್ಲಿ ಭಾರೀ ಭೂಕುಸಿತ

ಮಧ್ಯಪ್ರದೇಶದಲ್ಲೂ ಮಳೆ ಅಬ್ಬರ ಮುಂದುವರೆದಿದ್ದು ರೈಸನ್​ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಭೋಪಾಲ್​ನಲ್ಲೂ ನಿರಂತರ ಮಳೆಯಾಗ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ರಾಜಸ್ಥಾನದ ಅಜ್ಮೀರ್​ನಲ್ಲಿ ನಿರಂತರವಾಗಿ ಜಿಟಿ ಜಿಟಿ ಮಳೆಯಾಗ್ತಿದೆ. ಉತ್ತರಾಖಂಡದ ಟಿಂಗರ್ ಗ್ರಾಮದಲ್ಲಿ ಭಾರೀ ಭೂಕುಸಿತ ಉಂಟಾಗಿದೆ. ಟಿಂಗರ್ ಗ್ರಾಮದಲ್ಲಿರೋ ಬುಧ ಕೇದಾರ್ ಕಣಿವೆ ಬಳಿ ಘಟನೆ ಸಂಭವಿಸಿದೆ. ಭೂಕುಸಿತದಿಂದಾಗಿ ಸುಮಾರು 15ಕ್ಕೂ ಹೆಚ್ಚು ಮನೆಗಳು ಸೇರಿದಂತೆ ಶಾಲೆಗೆ ಹಾನಿಯಾಗಿದೆ. ಘಟನೆ ವೇಳೆ ಟೋಲಿ ಗ್ರಾಮದಲ್ಲಿ ತಾಯಿ ಮತ್ತು ಮಗಳು ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

ಇದನ್ನೂ ಓದಿ: ರಾತ್ರಿ ರಾಡ್​ನಿಂದ ಬೀಗ ಹೊಡೆದು ಮನೆಗೆ ನುಗ್ಗಿದ್ದ ಕಳ್ಳ.. ತಾನೇ 20 ರೂಪಾಯಿ ಇಟ್ಟು ಹೋದ!

ಎಲ್ಲೆಡೆ ಅವಾಂತರಗಳಿಗೆ ಕಾರಣವಾಗ್ತಿರೋ ಮಳೆರಾಯ ಉತ್ತರ ಭಾರತವನ್ನ ಕಾಡಿ ಕಂಗೆಡಿಸುತ್ತಿದ್ದಾನೆ. ವರುಣಾರ್ಭಟ ಹೀಗೆ ಮುಂದುವರೆದರೆ ಉತ್ತರ ಭಾರತದ ಜನತೆಗೆ ಮತ್ತಷ್ಟು ಸಂಕಷ್ಟಗಳು ಎದುರಾಗೋ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IAS ಕೋಚಿಂಗ್​ ಸೆಂಟರ್​ಗೆ ಮಳೆ ನೀರು ನುಗ್ಗಿ ದುರಂತ.. ಮೂವರು ವಿದ್ಯಾರ್ಥಿಗಳು ಸಾವು

https://newsfirstlive.com/wp-content/uploads/2024/07/DELHI_STUDENT.jpg

Load More