newsfirstkannada.com

ಒನ್​ ನೇಷನ್.. ಒನ್ ರೇಟ್.. ಇನ್ಮುಂದೆ ಎಲ್ಲಾ ‘ಚಿನ್ನ’ಪ್ರಿಯರಿಗೂ ಸಮಾನ ಬೆಲೆ..!

Share :

Published July 28, 2024 at 3:10pm

    ಬಂಗಾರ ಖರೀದಿ ಮಾಡೋರಿಗೆ ಈ ಪಾಲಿಸಿ ಒಳ್ಳೆಯದಾ?

    ಕೇಂದ್ರ ಸರ್ಕಾರದ ಜೊತೆ ಚಿನ್ನದ ವ್ಯಾಪಾರಿಗಳು ಮಾತುಕತೆ

    ಇಡೀ ರಾಷ್ಟ್ರದಲ್ಲಿ ಯಾವಾಗಿನಿಂದ ಈ ಪಾಲಿಸಿ ಜಾರಿ ಆಗುತ್ತೆ?

ನವದೆಹಲಿ: ಒನ್​ ನೇಷನ್​ ಒನ್ ರೇಟ್ ಪಾಲಿಸಿ ಅಡಿ ಮುಂದಿನ 6 ತಿಂಗಳಲ್ಲಿ ಚಿನ್ನದ ಬೆಲೆ ಭಾರತದೆಲ್ಲೆಡೆ ಒಂದೇ ದರ ಇರುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಶಿರೂರು ಗುಡ್ಡದಲ್ಲಿ ಮನಕಲಕುವ ಘಟನೆ.. ಊಟನೂ ತಿನ್ನದೇ ಮಾಲೀಕಗಾಗಿ ಕಾಯುತ್ತಿವೆ ನಾಯಿಗಳು

ಇನ್ಮುಂದೆ ದೇಶದಾದ್ಯಂತ ಬಂಗಾರಕ್ಕೆ ಒಂದೇ ಬೆಲೆ ಇರಲಿದೆ. ಈ ಸಂಬಂಧ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಚಿನ್ನದ ಉದ್ಯಮವು ಒಂದು ರಾಷ್ಟ್ರ, ಒಂದು ದರ ನೀತಿಯನ್ನು ಪ್ರತಿಪಾದಿಸುತ್ತಿದೆ. ಈ ಕುರಿತು ಎಲ್ಲ ಮಧ್ಯಸ್ಥಗಾರರು ಆಸಕ್ತಿಯನ್ನು ತೋರಿಸಿದ್ದಾರೆ. ಇನ್ನೇನಿದ್ರೂ ಸರ್ಕಾರದ ಜೊತೆ ಮಾತುಕತೆ ಅಂತಿಮ ಆಗಬೇಕಿದೆ ಎಂದು ಸ್ವರ್ಣ ಶಿಲ್ಪ ಬಚಾವೋ ಸಮಿತಿಯ ಅಧ್ಯಕ್ಷ ಸಮರ್ ದೇ ಹೇಳಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾದಲ್ಲಿ ಕೇಳಿ ಬಂದ ಅಪಸ್ವರ.. ತಂಡದ ನಾಯಕನ ಸ್ಥಾನಕ್ಕಾಗಿ ಬೂಮ್ರಾ ಓಪನ್ ಚಾಲೆಂಜ್!

ಚಿನ್ನದ ಉದ್ಯಮವು ದೇಶದಾದ್ಯಂತ ಒಂದೇ ಬೆಲೆ ಇರುವುದು ಉತ್ತಮ ಎನ್ನಲಾಗ್ತಿದೆ. ಮುಂದಿನ ತಿಂಗಳು ಅಂದರೆ ಆಗಸ್ಟ್​​ನಿಂದ ಪಶ್ಚಿಮ ಬಂಗಾಳ ಸೇರಿದಂತೆ ಪೂರ್ವದ ರಾಜ್ಯಗಳಲ್ಲಿ ಏಕೀಕೃತ ಬೆಲೆ ಜಾರಿಗೆ ಬರಲಿದೆ. ಬಳಿಕ ಮುಂದಿನ 6 ತಿಂಗಳಲ್ಲಿ ಇಡೀ ರಾಷ್ಟ್ರದಲ್ಲಿ ಚಿನ್ನದ ಬೆಲೆ ಒಂದೇ ಇರುತ್ತದೆ. ಆಯಾಯ ಪ್ರದೇಶಕ್ಕೆ ಬೇರೆ ಬೇರೆ ಬೆಲೆ ಇರುವುದಿಲ್ಲ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರವು ಇತ್ತಿಚೇಗಷ್ಟೇ ಬಜೆಟ್​​ನಲ್ಲಿ ಚಿನ್ನದ ಮೇಲಿನ ಕಸ್ಟಮ್ಸ್ ಡ್ಯೂಟಿಯನ್ನ ಕಡಿಮೆ ಮಾಡಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒನ್​ ನೇಷನ್.. ಒನ್ ರೇಟ್.. ಇನ್ಮುಂದೆ ಎಲ್ಲಾ ‘ಚಿನ್ನ’ಪ್ರಿಯರಿಗೂ ಸಮಾನ ಬೆಲೆ..!

https://newsfirstlive.com/wp-content/uploads/2023/08/GOLD_RATE-1-1.jpg

Load More