newsfirstkannada.com

IPL 2025; ಶಾರುಖ್​​ ಖಾನ್- ಪಂಜಾಬ್​ ತಂಡದ ಓನರ್ ಮಧ್ಯೆ ಭಾರೀ ಗಲಾಟೆ.. ಯಾಕೆ ಗೊತ್ತಾ?

Share :

Published August 1, 2024 at 3:29pm

Update August 1, 2024 at 3:32pm

    ಶಾರುಕ್​ ಖಾನ್ ಪರ ಬ್ಯಾಟ್ ಬೀಸಿರುವ SRHನ ಕಾವ್ಯ ಮಾರನ್

    ಶಾರುಖ್​ ಖಾನ್​- ಪಂಜಾಬ್​ ಟೀಮ್ ಮಾಲೀಕನ ಮಧ್ಯೆ ವಾರ್

    2025ರ ಹರಾಜಿಗೂ ಮೊದಲು IPL​ನಲ್ಲಿ ಅಪಸ್ವರ ಕೇಳಿ ಬಂದಿತಾ?

ಕೊಲ್ಕತ್ತಾ ನೈಟ್ ರೈಡರ್ಸ್ ಮಾಲೀಕ, ಬಾಲಿವುಡ್​ ಸೂಪರ್ ಸ್ಟಾರ್​ ಶಾರುಖ್​ ಖಾನ್ ಹಾಗೂ ಪಂಜಾಬ್ ಕಿಂಗ್ಸ್ ಸಹ-ಮಾಲೀಕ ನೆಸ್ ವಾಡಿಯಾ ನಡುವೆ ತೀವ್ರ ವಾಗ್ವಾದ ನಡೆದಿದೆ. ಮುಂದಿನ ಐಪಿಎಲ್​ನಲ್ಲಿ ಹೆಚ್ಚಿನ ಪ್ಲೇಯರ್​ಗಳನ್ನು ತಂಡದಲ್ಲಿ ಇಟ್ಟುಕೊಳ್ಳಬಾರದು ಎಂಬುದರ ಕುರಿತು ನಡೆದ ಚರ್ಚೆಯ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಒಂದೊಂದು ಪೋಸ್ಟ್​​ಗೂ ಒಂದೊಂದು ದೇಶದಲ್ಲಿ ಇರ್ತಾರಾ ದೀಪಿಕಾ ದಾಸ್​.. ಬ್ಯೂಟಿ ಈಗ ಹೋಗಿದ್ದೇಲ್ಲಿಗೆ? 

ಮುಂಬೈನಲ್ಲಿರುವ ಬಿಸಿಸಿಐನ ಪ್ರಧಾನ ಕಚೇರಿಯಲ್ಲಿ ಐಪಿಎಲ್​ನ ತಂಡದ ಓನರ್​ಗಳ ಸಭೆಯನ್ನು ಏರ್ಪಡಿಸಲಾಗಿತ್ತು. 2025ರ ಐಪಿಎಲ್​ ಆಕ್ಷನ್​ ಸಂಬಂಧ ಸಭೆ ಆಯೋಜನೆ ಮಾಡಲಾಗಿತ್ತು. ಈ ಸಭೆಯಲ್ಲಿ ಐಪಿಎಲ್​​ನ ಎಲ್ಲ ತಂಡಗಳ ಮಾಲೀಕರು ಭಾಗವಹಿಸಿದ್ದರು. ಸಭೆಯಲ್ಲಿ ಫ್ರಾಂಚೈಸಿಗಳು ಹೆಚ್ಚಿನ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬಾರದು ಎಂದು ಪಂಜಾಬ್ ಕಿಂಗ್ಸ್ ಸೇರಿದಂತೆ ಕೆಲ ಫ್ರಾಂಚೈಸಿಗಳು ಹೇಳಿದ್ದವು. ಆದರೆ ಇದಕ್ಕೆ ಶಾರುಖ್ ಖಾನ್​ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಕೇರಳ ಭೂಕುಸಿತ, 300 ಜನ ಸಾವನ್ನಪ್ಪಿದ್ದಾರಾ..? ಬೆಚ್ಚಿ ಬೀಳಿಸೋ ಸತ್ಯ ಬಿಚ್ಚಿಟ್ಟ ಸ್ಥಳೀಯ ನಿವಾಸಿ

ಹೀಗಾಗಿಯೇ ಸಭೆಯಲ್ಲಿ ಪಂಜಾಬ್ ಕಿಂಗ್ಸ್ ಮಾಲೀಕ ನೆಸ್ ವಾಡಿಯಾ ಹಾಗೂ ಶಾರುಖ್ ಮಧ್ಯೆ ಭಾರೀ ವಾದ- ವಿವಾದ ನಡೆದಿದೆ. ಅಲ್ಲದೇ ಶಾರುಖ್​ ಖಾನ್​ ಪರವಾಗಿಯೇ ಹೈದರಾಬಾದ್​ ತಂಡದ ಓನರ್​ ಕಾವ್ಯ ಮಾರನ್ ಕೂಡ ಬ್ಯಾಟ್​ ಬೀಸಿದ್ದಾರೆ.​ ಹೆಚ್ಚಿನ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಬಿಸಿಸಿಐಗೆ ಕೊಲ್ಕತ್ತಾ ನೈಟ್ ರೈಡರ್ಸ್ ಪ್ರಾಂಚೈಸಿ ಮನವಿ ಮಾಡಿದೆ. ಆದರೆ ಇದಕ್ಕೆ ಪಂಜಾಬ್ ಸೇರಿದಂತೆ ಒಂದೆರಡು ಟೀಮ್​ಗಳು ಆಕ್ಷೇಪ ವ್ಯಕ್ತಪಡಿಸಿವೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ಲೇಯರ್ಸ್​ ಅನ್ನು ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಬಾರದು ಎಂದು ವಿರೋಧ ವ್ಯಕ್ತಪಡಿಸಿವೆ. ಈ ಸಂಬಂಧ ಬಿಸಿಸಿಐ ಯಾವ ತೀರ್ಮಾನಕ್ಕೆ ಬರುತ್ತದೆ ಎಂದು ಇನ್ನು ಸ್ಪಷ್ಟವಾಗಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IPL 2025; ಶಾರುಖ್​​ ಖಾನ್- ಪಂಜಾಬ್​ ತಂಡದ ಓನರ್ ಮಧ್ಯೆ ಭಾರೀ ಗಲಾಟೆ.. ಯಾಕೆ ಗೊತ್ತಾ?

https://newsfirstlive.com/wp-content/uploads/2024/08/IPL_2025.jpg

Load More