newsfirstkannada.com

KL ರಾಹುಲ್​- ಪಂತ್​ ಮಧ್ಯೆ ವಿಕೆಟ್​ ಕೀಪರ್​ ಸ್ಥಾನಕ್ಕಾಗಿ ಬಿಗ್ ಫೈಟ್​.. ಯಾರಿಗೆ ಸಿಗುತ್ತೆ ಚಾನ್ಸ್​? 

Share :

Published August 1, 2024 at 4:19pm

    ಶ್ರೇಯಸ್​ ಅಯ್ಯರ್​ ಹೊರಗಿಟ್ಟರೇ ಇಬ್ಬರಿಗೂ ಅವಕಾಶ ಸಿಗುತ್ತಾ?

    ಶ್ರೀಲಂಕಾ-ಭಾರತದ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ

    ರಾಹುಲ್​- ಪಂತ್ ತಂಡದಲ್ಲಿ ಆಡಿಸಿದ್ರೆ ಕೀಪರ್ ಯಾರು ಮಾಡ್ತಾರೆ?

ಶ್ರೀಲಂಕಾ ವಿರುದ್ಧದ ಟಿ20 ಸರಣಿ ಗೆದ್ದುಕೊಂಡಿರುವ ಟೀಮ್ ಇಂಡಿಯಾ 3 ಪಂದ್ಯಗಳ ಏಕದಿನ ಸರಣಿಯನ್ನು ಆಗಸ್ಟ್​ 2 ಅಂದರೆ ನಾಳೆಯಿಂದ ಆಡಲಿದೆ. ಈಗಾಗಲೇ ಶ್ರೀಲಂಕಾದಲ್ಲಿ ಬೀಡು ಬಿಟ್ಟಿರುವ ಭಾರತದ ಆಟಗಾರರು ಪ್ರಾಕ್ಟೀಸ್​ ಮಾಡುತ್ತಿದ್ದಾರೆ. ಇದರ ಜೊತೆಗೆ ವಿಕೆಟ್ ಕೀಪರ್ ಆಗಿ ಕನ್ನಡಿಗ ಕೆ.ಎಲ್​ ರಾಹುಲ್ ಹಾಗೂ ರಿಷಬ್ ಪಂತ್​ ಈ ಇಬ್ಬರಲ್ಲಿ ಯಾರನ್ನು ತಂಡದಲ್ಲಿ ಆಡಿಸಬೇಕು ಎಂಬುದು ಕೋಚ್ ಗೌತಮ್ ಗಂಭೀರ್​ಗೆ ಬಿಗ್ ಚಾಲೆಂಜ್ ಆಗಿದೆ.

ಇದನ್ನೂ ಓದಿ: IPL 2025; ಶಾರುಕ್​ ಖಾನ್- ಪಂಜಾಬ್​ ತಂಡದ ಓನರ್ ಮಧ್ಯೆ ಭಾರೀ ಗಲಾಟೆ.. ಯಾಕೆ ಗೊತ್ತಾ?

ಭಾರತ ತಂಡದ ವಿಕೆಟ್​ ಕೀಪರ್​ ಆಗಿ ಸದ್ಯ ಕೆ.ಎಲ್ ರಾಹುಲ್ ಹಾಗೂ ರಿಷಬ್​ ಪಂತ್ ಇಬ್ಬರ ಮಧ್ಯೆಯು ಬಿಗ್ ಫೈಟ್ ಇದೆ. ಕಾರು ಆಕ್ಸಿಡೆಂಟ್ ಬಳಿಕ ವಾಪಸ್ ಆಗಿದ್ದ ರಿಷಬ್​ ಪಂತ್​ ಐಪಿಎಲ್​ನಲ್ಲಿ ಒಳ್ಳೆಯ ಪ್ರದರ್ಶನ ನೀಡಿದ್ದರು. ಅಲ್ಲದೇ ರಾಹುಲ್ ಕೂಡ ಕ್ಯಾಪ್ಟನ್​ ಹುದ್ದೆ ಜೊತೆ ಜೊತೆಗೆ ವಿಕೆಟ್​ ಕೀಪರ್, ಬ್ಯಾಟಿಂಗ್​ ಎರಡರಲ್ಲೂ ಯಶಸ್ವಿಯಾಗಿದ್ದಾರೆ. ಒಂದು ವೇಳೆ ಇಬ್ಬರನ್ನೂ ತಂಡದಲ್ಲಿ ಆಡಿಸಿದರೆ ಶ್ರೇಯಸ್ ಅಯ್ಯರ್​ ಬೆಂಚ್​ ಕಾಯಿಸಬೇಕಾಗುತ್ತದೆ. ಆದರೆ ಶ್ರೀಲಂಕಾದ ಜೊತೆ ನಡೆಯುವ ಏಕದಿನ ಪಂದ್ಯಕ್ಕೆ ಯಾರಿಗೆ ಅದೃಷ್ಟ ಕುಲಾಯಿಸಿತ್ತೆ ಎಂಬುದು ಕುತೂಹಲವಾಗಿದೆ.

ಇದನ್ನೂ ಓದಿ: ಕೇರಳ ಭೂಕುಸಿತ, 300 ಜನ ಸಾವನ್ನಪ್ಪಿದ್ದಾರಾ..? ಬೆಚ್ಚಿ ಬೀಳಿಸೋ ಸತ್ಯ ಬಿಚ್ಚಿಟ್ಟ ಸ್ಥಳೀಯ ನಿವಾಸಿ

ಕನ್ನಡಿಗ ರಾಹುಲ್ ಅವರು ಕಳೆದ ವರ್ಷ ನಡೆದ 21 ಏಕದಿನ ಪಂದ್ಯಗಳಲ್ಲಿ 834 ರನ್​ಗಳನ್ನು ಗಳಿಸಿ 69.50 ಸರಾಸರಿ ಹೊಂದಿದ್ದಾರೆ. ಇದರಲ್ಲಿ 2 ಭರ್ಜರಿ ಶತಕಗಳನ್ನು ರಾಹುಲ್ ಸಿಡಿಸಿದ್ದರು ಎನ್ನುವುದು ವಿಶೇಷ. ಇದೇ ವರ್ಷದ ಆರಂಭದಲ್ಲಿ ಸೌತ್ ಆಫ್ರಿಕಾ ವಿರುದ್ಧ ನಡೆದ ಒನ್​ಡೇ ಪಂದ್ಯದ ವೇಳೆ ರಾಹುಲ್​ ನಾಯಕನಾಗಿಯು ಭಾರತ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಕೋಚ್ ಗೌತಮ್ ಗಂಭೀರ್,​ ನಾಯಕ ರೋಹಿತ್ ಶರ್ಮಾ ಇಬ್ಬರು ಚರ್ಚೆ ಮಾಡಿ ಯಾವ ನಿರ್ಧಾರ ತೆಗೆದುಕೊಳ್ತಾರೆ ಎಂಬುದು ಪಂದ್ಯದ ವೇಳೆ ಗೊತ್ತಾಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

KL ರಾಹುಲ್​- ಪಂತ್​ ಮಧ್ಯೆ ವಿಕೆಟ್​ ಕೀಪರ್​ ಸ್ಥಾನಕ್ಕಾಗಿ ಬಿಗ್ ಫೈಟ್​.. ಯಾರಿಗೆ ಸಿಗುತ್ತೆ ಚಾನ್ಸ್​? 

https://newsfirstlive.com/wp-content/uploads/2024/08/RAHUL_PANT.jpg

Load More