newsfirstkannada.com

ಈ ಸ್ಟೇಡಿಯಂನಲ್ಲಿ ಕೊಹ್ಲಿ​ ಬ್ಯಾಟಿಂಗ್ ಇತಿಹಾಸ ಏನ್ ಹೇಳುತ್ತೆ.. ಕನ್ನಡಿಗ ರಾಹುಲ್​ಗೆ ಚಾನ್ಸ್​ ಕೊಡ್ತಾರಾ ಗಂಭೀರ್?

Share :

Published August 2, 2024 at 12:32pm

    ಫಸ್ಟ್​ ಟಾಸ್ಕ್​ನಲ್ಲಿ​​​​​​​ ಗೆದ್ದು ಬೀಗಿದ ಹೆಡ್​ಕೋಚ್​ ಗೌತಮ್ ಗಂಭೀರ್

    ಕುಲ್ದೀಪ್​ ಯಾದವ್-​ ವಾಷಿಂಗ್ಟನ್ ಸುಂದರ್ ನಡುವೆ ಬಿಗ್ ರೇಸ್

    ಟಿ20​ಗೆ ಗುಡ್​​ಬೈ ಹೇಳಿದ ಬಳಿಕ ರೋಹಿತ್, ಕೊಹ್ಲಿಗೆ ಫಸ್ಟ್ ಪಂದ್ಯ

ಯಂಗ್​​​ಇಂಡಿಯಾ ಟಿ20 ಸರಣಿ ಕ್ಲೀನ್​ಸ್ವೀಪ್ ಸಾಧಿಸಿದ್ದಾಗಿದೆ. ಎರಡು ದಿನಗಳ ವಿಶ್ರಾಂತಿ ಬಳಿಕ ಇಂಡಿಯನ್ ಟೈಗರ್ಸ್ ಮತ್ತೊಂದು ಅಸೈನ್​ಮೆಂಟ್​​ ಸಜ್ಜಾಗಿದ್ದಾರೆ. ಇಂದಿನಿಂದ ಇಂಡೋ-ಲಂಕಾ ಒನ್​ಡೇ ಸರಣಿ ಆರಂಭಗೊಳ್ಳಲಿದ್ದು, ರೋಹಿತ್​​ ಶರ್ಮಾ ಪಡೆ ಶುಭಾರಂಭದ ನಿರೀಕ್ಷೆಯಲ್ಲಿದೆ. ಆದ್ರೆ, ಪ್ಲೇಯಿಂಗ್​​​- 11 ಆಯ್ಕೆಯೇ ದೊಡ್ಡ ಕಗ್ಗಂಟಾಗಿದೆ.

ಏಕದಿನ ಬ್ಯಾಟಲ್​​ಗೆ ರೋಹಿತ್ ಶರ್ಮಾ​​​​​​​ & ಗ್ಯಾಂಗ್​​ ರೆಡಿ..!

ಟಿ20 ಸರಣಿ ವೈಟ್​ವಾಶ್​ ಬಳಿಕ ಟೀಮ್ ಇಂಡಿಯಾ ಒನ್ಡೇ ಬ್ಯಾಟಲ್​ಗೆ ಸಜ್ಜಾಗಿದೆ. ಕೊಲಂಬೋದಲ್ಲಿ ಭಾರತ-ಲಂಕಾ ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಟಿ20 ಸ್ಟ್ರೈಲ್​​ನಲ್ಲೆ ಲಂಕಾವನ್ನ ದಹನ ಮಾಡಲು ಮೆನ್​ ಇನ್ ಬ್ಲೂ ಪಡೆ ಸಜ್ಜಾಗಿದೆ. ಮೊದಲ ಟಾಸ್ಕ್​ನಲ್ಲಿ​​​​​​​ ಗೆದ್ದು ಬೀಗಿರುವ ಹೆಡ್​ಕೋಚ್​ ಗೌತಮ್ ಗಂಭೀರ್​​, ಕ್ಯಾಪ್ಟನ್​​​ ರೋಹಿತ್​ ಶರ್ಮಾ ಜೊತೆಗೂಡಿ ಗೆಲುವಿನ ಓಟವನ್ನ​​​ ಮುಂದುವರಿಸುವ ಲೆಕ್ಕಾಚಾರದಲ್ಲಿದ್ದಾರೆ.

ಇದನ್ನೂ ಓದಿ: ವಯನಾಡು ದುರಂತ: ಜೀವ ಪಣಕ್ಕಿಟ್ಟು ಪ್ರಾಣ ಉಳಿಸಿದ ವೃದ್ಧ; ಹಸೂಗೂಸುಗಳಿಗೆ ಹಾಲುಣಿಸಿದ ತಾಯಿ!

ನಾವು ಇಲ್ಲಿ ಮೂರು ಪಂದ್ಯಗಳನ್ನ ಆಡುತ್ತೇವೆ. ಇಲ್ಲಿಂದ ಏನಾದ್ರು ತೆಗೆದುಕೊಂಡು ಹೋಗುವ ಗುರಿ ಇದೆ. ಅದಕ್ಕಾಗಿ ಏಕದಿನ ಕ್ರಿಕೆಟ್​ನಲ್ಲಿ ಏನಾದ್ರು ಸಾಧನೆ ಮಾಡಬೇಕು ಎಂದು ಬಯಸುತ್ತೇವೆ.

ರೋಹಿತ್​​ ಶರ್ಮಾ, ಕ್ಯಾಪ್ಟನ್

ರಾಹುಲ್​​ VS ಪಂತ್​​​..ಯಾರಿಗೆ ವಿಕೆಟ್ ಕೀಪಿಂಗ್ ಹೊಣೆ..?

ಇಂದಿನ ಪಂದ್ಯಕ್ಕೂ ಮುನ್ನ ವಿಕೆಟ್ ಕೀಪರ್ ಆಯ್ಕೆನೇ ಟೀಮ್ ಮ್ಯಾನೇಜ್​ಮೆಂಟ್​ಗೆ ಟೆನ್ಷನ್ ತಂದೊಡ್ಡಿದೆ. ಒಂದು ಸ್ಥಾನಕ್ಕಾಗಿ ರಿಷಬ್​ ಪಂತ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಮಧ್ಯೆ ಫೈಟ್ ಏರ್ಪಟ್ಟಿದೆ.

ರಿಷಬ್​​ ಪಂತ್ ಹಾಗೂ ಕೆಎಲ್ ರಾಹುಲ್​​​ ಆಯ್ಕೆ ನಿಜಕ್ಕೂ ಕಷ್ಟದ ಕೆಲಸ. ಇಬ್ಬರೂ ಕ್ವಾಲಿಟಿ ಆಟಗಾರರು. ತಂಡದ ಆಯ್ಕೆ ಆಗಲಿ ಅಥವಾ ಆಟಗಾರರ ಆಯ್ಕೆ ಆಗಲಿ ಸುಲಭವಿಲ್ಲ. ಇಬ್ಬರು ಮ್ಯಾಚ್ ವಿನ್ನರ್ಸ್​.

ರೋಹಿತ್​​ ಶರ್ಮಾ, ಕ್ಯಾಪ್ಟನ್

ಯಂಗ್​​ಗನ್​​​ ರಿಯಾನ್​ ಪರಾಗ್​ಗೆ ಡೆಬ್ಯು ಭಾಗ್ಯ ಸಿಗುತ್ತಾ..?

ಟಿ20 ಸರಣಿಯಲ್ಲಿ ಇಂಪ್ರೆಸ್​ ಮಾಡಿರುವ ರಿಯಾನ್​ ಪರಾಗ್​ ಏಕದಿನಕ್ಕೆ ಪದಾರ್ಪಣೆ ಮಾಡುವ ಕನಸು ಕಾಣ್ತಿದ್ದಾರೆ. 6ನೇ ಸ್ಲಾಟ್​ನಲ್ಲಿ ಪರಾಗ್ ಆಡಿಸಿದ್ರೆ ಬ್ಯಾಟಿಂಗ್​​​, ಜೊತೆ ಬೌಲಿಂಗ್ ಆಪ್ಷನ್​ ಕೂಡ ಸಿಗಲಿದೆ. ಆದ್ರೆ ಪರಾಗ್​​​ರನ್ನ ಹಿಂದಿಕ್ಕಿ ಸ್ಥಾನ ಆಕ್ರಮಿಸಲು ಶಿವಂ ದುಬೆ ಕೂಡ ಎದುರು ನೋಡ್ತಿದ್ದಾರೆ. ಕೊಲಂಬೋ ಸ್ಪಿನ್ ಫ್ರೆಂಡ್ಲಿ ಪಿಚ್​ ಆಗಿರೋದ್ರಿಂದ ಪರಾಗ್​​​ ಡೆಬ್ಯು ಮಾಡುವ ಸಾಧ್ಯತೆ ಹೆಚ್ಚಿದೆ.

ಸುಂದರ್​ VS ಕುಲ್​ದೀಪ್.. ಅಕ್ಷರ್​ ಜೊತೆಗಾರ ಯಾರು.?

ಕೊಲಂಬೋದಲ್ಲಿ ಸ್ಪಿನ್ ಆಲ್​ರೌಂಡರ್​ ಅಕ್ಷರ್ ಪಟೇಲ್ ಆಡುವುದು ಕನ್ಫರ್ಮ್​ ಆಗಿದೆ. ಆದ್ರೆ ಅವರಿಗೆ ಜೊತೆಯಾರ ಯಾರು ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ. 2ನೇ ಸ್ಪಿನ್ನರ್​​​​​​​​​​​​​ ಸ್ಥಾನಕ್ಕೆ ಕುಲ್ದೀಪ್​ ಯಾದವ್​ ಹಾಗೂ ವಾಷಿಂಗ್ಟನ್ ಸುಂದರ್ ನಡುವೆ ರೇಸ್ ಏರ್ಪಟ್ಟಿದೆ. ಕುಲ್​​ದೀಪ್​​​ ಸ್ಟ್ರಾಂಗ್​ ಕಂಟೆಂಡರ್​​ ಅನ್ನಿಸಿದ್ರೂ, ಸುಂದರ್​​​​​ ಆಲ್​ರೌಂಡರ್ ಆಟವನ್ನ ಕಡೆಗಣಿಸುವಂತಿಲ್ಲ.

ಕಿಂಗ್ ಕೊಹ್ಲಿ – ರೋಹಿತ್ ಶರ್ಮಾ ಕೇಂದ್ರಬಿಂದು..!

ಕಿಂಗ್ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ಇಂದಿನ ಪಂದ್ಯದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ. ಟಿ20 ಕ್ರಿಕೆಟ್​ಗೆ ಗುಡ್​​ಬೈ ಹೇಳಿದ ಬಳಿಕ ದಿಗ್ಗಜರು ಮೊದಲ ಒನ್ಡೇ ಸರಣಿ ಆಡುತ್ತಿದ್ದಾರೆ. ಮ್ಯಾಚ್ ವಿನ್ನರ್​ಗಳು ಹೇಗೆ ಘರ್ಜಿಸ್ತಾರೆ ಅನ್ನೋ ಕುತೂಹಲವಿದೆ. ಇಬ್ಬರು ಸಿಡಿದೆದ್ರೆ ಲಂಕಾ ಸಂಹಾರ ಆಗೋದು ಪಕ್ಕಾ.

ನಾವು ಹೊಸದನ್ನ ಮಾಡಲು ಯೋಚಿಸುತ್ತಿದ್ದೇವೆ. ಪ್ಲಾನ್ ಹೇಗೆ ವರ್ಕ್​ ಆಗುತ್ತೆ ಅನ್ನೋದನ್ನ ನೋಡಬೇಕು.

ರೋಹಿತ್​​ ಶರ್ಮಾ, ಕ್ಯಾಪ್ಟನ್

ಕೊಲಂಬೋ ಕೊಹ್ಲಿ ಫೇವರಿಟ್ ಗ್ರೌಂಡ್​​.. ರನ್​​ ಪ್ರಹಾರ ಫಿಕ್ಸ್​​..!

ಹೇಳಿ ಕೇಳಿ ಕೊಲಂಬೋ ಮೈದಾನ ಕಿಂಗ್ ಕೊಹ್ಲಿಯ ಫೇವರಿಟ್​ ಗ್ರೌಂಡ್​​​. ಇಲ್ಲಿ ರನ್ ಹೊಳೆಯನ್ನೆ ಹರಿಸಿದ್ದಾರೆ. ಆಡಿದ 10 ಪಂದ್ಯಗಳಲ್ಲಿ 3 ಶತಕ ಸಹಿತ ಬರೋಬ್ಬರಿ 522 ರನ್​ ಕೊಳ್ಳೆ ಹೊಡೆದಿದ್ದಾರೆ. ಜೊತೆಗೆ ಶ್ರೀಲಂಕಾ ವಿರುದ್ಧ ಏಕದಿನದಲ್ಲಿ 2,594 ರನ್ ಸಿಡಿಸಿದ್ದಾರೆ.

ಇದನ್ನೂ ಓದಿ:  ಕಮಲ್ ಹಾಸನ್ ಸಹೋದರ, ನಟಿ ಸುಹಾಸಿನಿ ತಂದೆ ಆಸ್ಪತ್ರೆಗೆ ದಾಖಲು.. ಚಾರುಹಾಸನ್​ಗೆ ಏನಾಯಿತು..?

ಇಂಡೋ-ಲಂಕಾ ಮೊದಲ ಬ್ಯಾಟಲ್​ಗೆ ಮಳೆ ಆತಂಕವೂ ಇದೆ. ಕಳೆದೆರಡು ದಿನಗಳಿಂದ ಕೊಲಂಬೋದಲ್ಲಿ ಮಳೆ ಸುರಿದಿದೆ. ಆದ್ರೆ, ಪಂದ್ಯ ರದ್ದಾಗುವಷ್ಟು ಮಳೆ ಆಗಲ್ಲ ಎಂದು ವರದಿಯಾಗಿದೆ. ಹೀಗಾಗಿ ಫ್ಯಾನ್ಸ್​ ಪಂದ್ಯವನ್ನ ಕಣ್ತುಂಬಿಕೊಳ್ಳಬಹುದು. ಮೊದಲ ಒನ್ಡೆ ವಾರ್​​​ನಲ್ಲಿ ರೋಹಿತ್​​​ ಪಡೆ ಗೆದ್ದು ಶುಭಾರಂಭ ಮಾಡುತ್ತಾ? ಇಲ್ಲ ಆ ಕನಸಿಗೆ ಲಂಕಾ ಅಡ್ಡಗಾಲು ಹಾಕುತ್ತಾ ಅನ್ನೋದನ್ನ ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಈ ಸ್ಟೇಡಿಯಂನಲ್ಲಿ ಕೊಹ್ಲಿ​ ಬ್ಯಾಟಿಂಗ್ ಇತಿಹಾಸ ಏನ್ ಹೇಳುತ್ತೆ.. ಕನ್ನಡಿಗ ರಾಹುಲ್​ಗೆ ಚಾನ್ಸ್​ ಕೊಡ್ತಾರಾ ಗಂಭೀರ್?

https://newsfirstlive.com/wp-content/uploads/2024/08/KL_RAHUL_NEW.jpg

Load More