ಮನೆಯಲ್ಲಿ ಬೈಯುತ್ತಿದ್ದ ಅಪ್ಪನನ್ನೇ ಜೈಲಿಗೆ ಕಳುಹಿಸಿದ 10 ವರ್ಷದ ಮಗ; ಅಸಲಿಗೆ ಆಗಿದ್ದೇನು?

author-image
admin
Updated On
ಮನೆಯಲ್ಲಿ ಬೈಯುತ್ತಿದ್ದ ಅಪ್ಪನನ್ನೇ ಜೈಲಿಗೆ ಕಳುಹಿಸಿದ 10 ವರ್ಷದ ಮಗ; ಅಸಲಿಗೆ ಆಗಿದ್ದೇನು?
Advertisment
  • ಈಗಿನ ಕಾಲದಲ್ಲಿ ಪೋಷಕರು ಮಕ್ಕಳನ್ನ ಸಾಕೋದು ಬಹಳ ಕಷ್ಟ
  • ಅಪ್ಪ ಹೇಳಿದ ಕೆಲಸ ಮಾಡೋಕೆ ಮನೆಯಲ್ಲಿ ಮಗ ಒಪ್ಪಲೇ ಇಲ್ಲ
  • ಅಪ್ಪನಿಗೆ ಸರಿಯಾಗಿ ಪಾಠ ಕಲಿಸಬೇಕು ಅಂತ ಮಾಡಿದ್ದೇನು ಗೊತ್ತಾ?

ಈಗಿನ ಕಾಲದಲ್ಲಿ ಪೋಷಕರು, ಮಕ್ಕಳನ್ನ ಸಾಕೋದು ಬಹಳ ಕಷ್ಟ. ಅದ್ರಲ್ಲೂ ಮನೆಯನ್ನ ಕ್ಲೀನ್ ಮಾಡು. ಬರೀ ಆಟ ಆಡ್ತಾನೆ ಇರ್ತೀಯಾ. ಮೊಬೈಲ್​​ನ ಯಾವಾಗ್ಲೂ ಕೈಯಲ್ಲೇ ಇಡ್ಕೊಂಡ್ ಇರ್ತೀಯಾ ಅಂತ ಪೋಷಕರು ಮಕ್ಕಳನ್ನ ಬೈತಾರೆ. ಕೆಲವೊಂದು ಸರಿ ಹೇಳಿದ್ ಮಾತ್ ಕೇಳಿಲ್ಲ ಅಂದ್ರೆ ಆಗಾಗ ಏಟು ಕೂಡ ಸರಿಯಾಗಿ ಬೀಳ್ತಾ ಇರುತ್ತೆ. ಹೀಗೆ ಮಾಡ್ತಿದ್ರೆ ಟೀಚರ್​ಗೆ ಹೇಳ್ತೀನಿ ಅಂತ ಗದರುತ್ತಾ ಇರ್ತಾರೆ. ಯಾವಾಗ ಕೆಲಸ ಮಾಡಿಲ್ಲ ಅಂತ ಅಪ್ಪ ಗದರಿದ್ನೋ, ಆಗಲೇ ನೋಡಿ ಮಗ ಮಾಡಬಾರದ ಕೆಲಸ ಮಾಡಿ, ಅಪ್ಪನನ್ನೇ ಜೈಲಿಗೆ ಹಾಕಿಸಿದ ಘಟನೆ ಚೀನಾದಲ್ಲಿ ನಡೆದಿದೆ.

ಈ ಘಟನೆ ನಡೆದಿರೋದು ಚೀನಾದ ಯೋಂಗ್ನಿಂಗ್ ಕೌಂಟಿ ಅನ್ನೋ ಪ್ರದೇಶದಲ್ಲಿ. ಅಪ್ಪ ಹೇಳಿದ, ಮನೆ ಕೆಲಸ ಮಾಡೋಕೆ 10 ವರ್ಷದ ಮಗ ಒಪ್ಪಲಿಲ್ಲ. ನಾನೇ ಹೇಳಿದ.. ಕೆಲಸವನ್ನ ಮಾಡಿಲ್ಲ ಅಂತ ಮಗನನ್ನ ಅಪ್ಪ, ಕೋಪಗೊಂಡು ಗದರಿದ್ದಾನೆ. ಯಾವಾಗ ಅಪ್ಪ ನನಗೆ ಬೈದ ಅಂತ ಕೋಪಗೊಂಡು ಮಾತಿಗೆ ಮಾತು ಕೊಟ್ಟು, ವಾದ ಮಾಡೋಕೆ ಶುರು ಮಾಡಿದ್ದಾನೆ. ಆದ್ರೂ ನನ್ನ ಅಪ್ಪನಿಗೆ ಸರಿಯಾಗಿ ಪಾಠ ಕಲಿಸಬೇಕು ಅಂತ ಕೆಲಸ ಮಾಡೋದನ್ನ ಬಿಟ್ಟು, ಇದ್ದಕ್ಕಿದ್ದ ಹಾಗೇ, ಆ ಹುಡುಗ, ಮನೆ ಹತ್ತಿರವಿದ್ದ ಅಂಗಡಿಗೆ ಹೋಗಿದ್ದಾನೆ. ಅಂಗಡಿಗೆ ಹೋಗಿ, ಫೋನ್ ಕಾಯಿನ್ ಬಾಕ್ಸ್​​ನಿಂದ ಕರೆ ಮಾಡಿದ್ದಾನೆ.

publive-image

5ನೇ ಕ್ಲಾಸ್ ಓದುತ್ತಿದ್ದ ಆ ಬಾಲಕ, ಅಂಗಡಿಯ ಫೋನ್​ ಕಾಯಿನ್ಸ್ ಬಾಕ್ಸ್​ನಿಂದ ಕಾಲ್ ಮಾಡಿದ್ದು, ಬೇರೆ ಯಾರಿಗೂ ಅಲ್ಲ. ಪೊಲೀಸರಿಗೆ. ಹೌದು.. ನನ್ನ ಅಪ್ಪ, ಮನೆಯಲ್ಲಿ ಯಾರಿಗೂ ಗೊತ್ತಾಗದ ಹಾಗೇ, ಅಫೀಮು ಇಟ್ಟುಕೊಂಡಿದ್ದಾನೆ ಅಂತ ಪೊಲೀಸರಿಗೆ ಕಾಲ್ ಮಾಡಿ ಹೇಳಿದ್ದಾನೆ. ಯಾವಾಗ ಮನೆ ಮಗನೇ, ಅಪ್ಪನ ವಿರುದ್ಧ ಕಾಲ್​ನಲ್ಲಿ ದೂರು ಕೊಟ್ಟನೋ, ಆಗ ಪೊಲೀಸರು ಮನೆಗೆ ಬಂದಿದ್ದಾರೆ. ದಿಢೀರ್ ಅಂತ ಮನೆಗೆ ಪೊಲೀಸರು ಬಂದ್ರೋ, ಆಗಲೇ ಅಪ್ಪ ಹಾಗೂ ಅವನ ಅಮ್ಮನಿಗೆ ಗಾಬರಿಯಾಗಿದೆ. ಆದ್ರೆ, ಏನಕ್ಕೆ ಪೊಲೀಸರು ಬಂದಿರೋದು ಅನ್ನೋ ವಿಷ್ಯ ಮಾತ್ರ, ಆ 10 ವರ್ಷದ ಬಾಲಕನಿಗೆ ಗೊತ್ತಿದೆ. ಅದ್ರಿಂದ ಯಾವುದೇ ಭಯನೇ ಇಲ್ಲದೇ ನಿಂತು ಕೊಂಡಿರ್ತಾನೆ.

ಇದನ್ನೂ ಓದಿ: 20 ವರ್ಷದ ಬಳಿಕ ಟ್ರೋಲ್ ಆದ ಮತ್ತೊಂದು ಸಾಂಗ್‌; ಚೀ ಚೀ ಚೀ ರೇ ನುನೇ ಚೀ ಅಂದ್ರೆ ಏನು? 

ಆಗ ಪೊಲೀಸರು, ಮನೆ ಎಲ್ಲವನ್ನು ಹುಡುಕಿದಾಗ, ಬಾಲ್ಕನಿಯಲ್ಲಿ 8 ಒಣಗಿದ ಗಾಂಜಾ ಬೀಜಗಳು ಪತ್ತೆಯಾಗಿದೆ. ಆದ್ರೆ ಆ ಹುಡುಗನ ತಂದೆ ಹೇಳೋ ಹಾಗೇ, ನಾನು ಮೆಡಿಸನ್​ಗೋಸ್ಕರ ಬೀಜಗಳನ್ನ ಇಟ್ಟುಕೊಂಡಿದ್ದೇ ಅಂತ ಒಪ್ಪಿಕೊಂಡಿದ್ದಾನೆ. ಅಫೀಮು ಸೇರಿಕೊಂಡು, ಇನ್ನಿತರ ಡ್ರಗ್ಸ್​​ಗಳನ್ನ ಇಟ್ಟುಕೊಳ್ಳೋದು ಕಾನೂನು ಬಾಹೀರ. ಅದ್ರಲ್ಲೂ ಕ್ರಿಮಿನಲ್​ ಕೇಸ್​ಗೆ ಕಾರಣವಾಗುತ್ತೆ ಅಂತ ಚೀನಾ ದೇಶ ಹೇಳುತ್ತೆ. ಅದ್ರಂತೆ, ಪೊಲೀಸರು ವ್ಯಕ್ತಿಯ ಹೇಳಿಕೆಗಳನ್ನ ಹೆಚ್ಚಾಗಿ ಗಮನಕ್ಕೆ ತೆಗೆದುಕೊಳ್ಳದೇ, ಈ ಗಾಂಜಾ ಕೇಸ್​ ಅನ್ನ ಮಾದಕ ದ್ರವ್ಯ ವಿರೋಧಿ ವಿಭಾಗಕ್ಕೆ ಟ್ರಾನ್ಸ್​ಫರ್ ಮಾಡಿದ್ದಾರೆ.

ಕೆಲ ವರದಿಗಳ ಪ್ರಕಾರ, ಆ 10 ವರ್ಷದ ಬಾಲಕನ ಭವಿಷ್ಯದ ಹಿನ್ನೆಲೆಯಲ್ಲಿ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದ್ರೂ, ಮನೆ ಕೆಲಸ ಮಾಡಿಲ್ಲ ಅಂತ ಅಪ್ಪನನ್ನೇ, ಪೊಲೀಸರಿಗೆ ಸಿಕ್ಕಾಕ್ಸಿ.. ಡ್ರಗ್ಸ್​​ ಕೇಸ್​​ನಲ್ಲಿ ಜೈಲಿಗೆ ಹಾಕ್ಸಿದ್ದಾರೆ. ಅಷ್ಟಕ್ಕೂ ಅಪ್ಪ ಏನ್ ಬೈದಿರಬಹುದು ಅನ್ನೋದನ್ನ ಇಲ್ಲಿ ವಿಚಾರ ಮಾಡ್ಬೋದು. ಆದ್ರೂ, ಮಕ್ಕಳ ಮುಂದೆ ಇನ್ಮುಂದೆ, ಪೋಷಕರು ಏನೇ ಮಾಡಬೇಕಾದ್ರೂ ಸ್ವಲ್ಪ ಎಚ್ಚೆತ್ತುಕೊಂಡು ಮಾಡಿದ್ರೇ ಒಳ್ಳೇದು. ಕೆಟ್ಟದ್ದು ಏನಾದ್ರೂ ಮಕ್ಕಳ ಮುಂದೆ ಮಾಡಿದ್ರೆ, ಲಾಕ್ ಆಗಬೇಕಾಗುತ್ತೆ ಅನ್ನೋದು ಈ ಸ್ಟೋರಿಯಿಂದ ತಿಳಿದುಕೊಳ್ಳಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment