/newsfirstlive-kannada/media/post_attachments/wp-content/uploads/2024/04/MONKEY-1.jpg)
ಉತ್ತರ ಪ್ರದೇಶದ ಬಸ್ತಿಯ ವಿಕಾಸ್ ಕಾಲೋನಿಯ 13 ವರ್ಷದ ಬಾಲಕಿ ತನ್ನನ್ನು ಹಾಗೂ 15 ತಿಂಗಳ ಸೊಸೆಯನ್ನು ಮಂಗಗಳಿಂದ ರಕ್ಷಿಸಿಕೊಳ್ಳಲು ಮಾಡಿದ ಸ್ಮಾರ್ಟ್ ಐಡಿಯಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಅಷ್ಟಕ್ಕೂ ಅಲ್ಲಿ ಆಗಿದ್ದೇನು..?
13 ವರ್ಷದ ಅಂಕಿತ 15 ತಿಂಗಳದ ಸೊಸೆಯ ಜೊತೆ ಸೋಫಾ ಮೇಲೆ ಆಟವಾಡುತ್ತ ಕೂತಿದ್ದಳು. ಮನೆಯ ಇತರೆ ಸದಸ್ಯರು ಬೇರೊಂದು ರೂಮಿನಲ್ಲಿದ್ದರು. ಇದೇ ವೇಳೆ ಮಂಗವೊಂದು ಮನೆಯೊಳಗೆ ಎಂಟ್ರಿ ನೀಡಿದೆ. ಮನೆಯೊಳಗೆ ನುಗ್ಗಿದ ಮಂಗ, ಆತಂಕದ ವಾತಾವರಣ ಸೃಷ್ಟಿಸಿತ್ತು.
ಇದನ್ನೂ ಓದಿ: ಫೀಲ್ಡಿಂಗ್ಗೆ ಅಡ್ಡಿಪಡಿಸಿದ ಜಡೇಜಾ; ರನೌಟ್ಗೆ ಅಪೀಲ್ ಮಾಡದೇ ವಿವಾದಕ್ಕೆ ಸಿಲುಕಿಕೊಂಡ ಕಮ್ಮಿನ್ಸ್..!
ಗಾಬರಿಯಾದ ಅಂಕಿತಾ, ಮಂಗ ತಮ್ಮತ್ತ ಬರುತ್ತದೆ ಎಂದು ಹೆದರಿದ್ದಾಳೆ. ಕೊನೆಗೆ ಆಕೆಯ ಕಣ್ಣಿಗೆ ಅಲ್ಲೇ ಇದ್ದ ಅಲೆಕ್ಸಾ ಕಾಣಿಸಿದೆ. ಕೂಡಲೇ, ಆಕೆ ಅಲೆಕ್ಸಾಗೆ ಮಂಗ ದಾಳಿ ಮಾಡುತ್ತಿದೆ, ಕಾಪಾಡುವಂತೆ ಕೇಳಿಕೊಂಡಿದೆ. ಆಗ ಅಲೆಕ್ಸಾ ನಾಯಿ ಬೊಗಳಿದಂತೆ ಕೂಗಲು ಶುರುಮಾಡಿದೆ. ಇದರಿಂದ ಗಾಬರಿಯಾದ ಮಂಗ ಬಾಲ್ಕನಿಯಿಂದ ಓಡಿ ಹೋಗಿದೆ.
ಅಲೆಕ್ಸಾಗೆ ಹೇಳಿದರೆ ನಾಯಿಯಂತೆಯೂ ಕೂಗುತ್ತದೆ ಎಂಬುವುದನ್ನು ಅರಿತಿದ್ದ ಅಂಕಿತಾ, ಕೂಡಲೇ ಅಲೆಕ್ಸಾಗೆ ಮನವಿ ಮಾಡಿಕೊಂಡಿದೆ. ಪರಿಣಾಮ, ಮಂಗನ ದಾಳಿಯಿಂದ ತಾನು ಮತ್ತು ಒಂದು ವರ್ಷದ ಮಗು ಪಾರಾಗಿದೆ. ಅಲೆಕ್ಸಾ ಡಿವೈಸ್ನಿಂದ ಇಬ್ಬರು ಮಕ್ಕಳು ಬದುಕಿದ್ದಾರೆ. ಮಂಗ ಮನೆಗೆ ಎಂಟ್ರಿ ನೀಡಿದಾಗ ನಾವು ಇನ್ನೊಂದು ಕೋಣೆಯಲ್ಲಿ ಇದ್ದೇವೆ. ಅಲೆಕ್ಸಾ ನಾಯಿಯಂತೆ ಬೊಗಳಲು ಶುರುಮಾಡಿದಾಗ ಹೆದರಿ ಮಂಗ ಓಡಿದೆ. ಅಲೆಕ್ಸಾದಿಂದ ನಮಗೆ ಉಪಯೋಗ ಆಗಿದೆ ಎಂದು ಅಂಕಿತಾ ತಾಯಿ ಶ್ರಿಪಾ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ