/newsfirstlive-kannada/media/post_attachments/wp-content/uploads/2024/11/Soup.jpg)
ಇತ್ತೀಚೆಗೆ ದಕ್ಷಿಣ ಕನ್ನಡದ ಕಾರ್ಕಳದಲ್ಲಿ ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ತಾಳಿ ಕಟ್ಟಿದ ಪತಿಗೆ ಸ್ಲೋ ಪಾಯಿಜನ್​ ನೀಡಿ ಕೊಲೆ ಮಾಡಿರುವ ಘಟನೆ ಅಚ್ಚರಿಗೆ ಕಾರಣವಾಗಿತ್ತು. ಕೊನೆಗೆ ಅಣ್ಣನೇ ತನ್ನ ತಂಗಿಯ ಮುಖವಾಡವನ್ನು ಬಯಲು ಮಾಡಿದ್ದನು. ಆದರೀಗ ಅಂತಹದ್ದೇ ಘಟನೆಯನ್ನು ಹೋಲುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಅದೇನೆಂದರೆ ಮಾಜಿ ಗೆಳೆಯನ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ 16 ವರ್ಷದ ಬಾಲಕಿ ಐವರನ್ನು ಬಲಿಕೊಟ್ಟ ಘಟನೆ ಬೆಳಕಿಗೆ ಬಂದಿದೆ.
ಅಂದಹಾಗೆಯೇ ಇದು ನೈಜೀರಿಯಾದಲ್ಲಿ ನಡೆದಿದೆ. ಅಲ್ಲಿನ ಎಡೋ ಸ್ಟೇಟ್​​ನಲ್ಲಿ ಅಕ್ಟೋಬರ್​​ 26, 2024ರಂದು ವಿಷಪೂರಿತ ಸೂಪ್​ ಸೇವಿಸಿದ ಉಜೈರುವಿನ ಅಫಾಶಿಯೋ ಸಮುದಾಯದ ಐವರು ಪ್ರಾಣ ಕಳೆದುಕೊಂಡಿದ್ದಾರೆ.
16 ವರ್ಷದ ಬಾಲಕಿ ತನ್ನ ಮಾಜಿ ಗೆಳೆಯನನ್ನು ಕೊಲ್ಲುವ ಉದ್ದೇಶದಿಂದ ಕಾಳು ಮೆಣಸಿನ ಸೂಪ್​ನಲ್ಲಿ ವಿಷ ಬೆರೆಸಿದ್ದಾಳೆ. ನಂತರ ಅದನ್ನು ಬಾಲಕಿ ತನ್ನ ಮಾಜಿ ಗೆಳೆಯ, ಆತನ ಗೆಳತಿ ಮತ್ತು ಸ್ನೇಹಿತರಿಗೆ ನೀಡಿದ್ದಾಳೆ. ಪರಿಣಾಮ ಐವರು ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿರುವವರನ್ನು 19 ವರ್ಷದ ಇಮ್ಯಾನೆಯೆಲ್​​ ಎಲೋಜಿ, ಆತನ ಗೆಳತಿ ಅದಾ ಸ್ಯಾಮ್ಯುಯೆಲ್​ ಮತ್ತು ಸ್ನೇಹಿತರಾದ ನೂರುದ್ದೀನ್​​, ಸ್ಯಾಮ್ಯುಯೆಲ್​​​ ಅಯೆಗ್ವಾಲೊ, ಜೆಫ್ರಿ ಅಯೆಗ್ವಾಲೊ ಸೇರಿದ್ದಾರೆ.
/newsfirstlive-kannada/media/post_attachments/wp-content/uploads/2024/11/Soup-murder.jpg)
ಇಮ್ಯಾನುಯೆಲ್ ತಂದೆ ತನ್ನ ಮಗನನ್ನು ಬೆಳಗ್ಗಿನಿಂದ ಹುಡುಕಾಡಿದಾಗ ಅಪಾರ್ಟ್​ಮೆಂಟ್​​ನಲ್ಲಿ ಐವರು ಶವವಾಗಿ ಸಿಕ್ಕಿದ್ದಾರೆ. ಇಮ್ಯಾನುಯೆಲ್​ ಮತ್ತು ಅದಾ ಹಾಸಿಗೆ ಮೇಲೆ ಹೆಣವಾಗಿ ಸಿಕ್ಕರೆ, ಉಯಳಿದವರು ಕೋಣೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ದಾವಣಗೆರೆಯಲ್ಲೊಂದು ವಿಚಿತ್ರ ಗ್ರಾಮ.. ಇವರು ದೀಪಾವಳಿ ವಿರೋಧಿಗಳಲ್ಲ.. ಆದ್ರೂ ಹಬ್ಬವನ್ನು ಆಚರಿಸಲ್ಲ! ಯಾಕೆ?
ಘಟನೆ ಸಂಬಂಧ 16 ವರ್ಷದ ಬಾಲಕಿಯ ಕೈ ಚಳಕದಿಂದ ಈ ಸಾವು ಸಂಭವಿಸಿದೆ ಎಂದು ಪೊಲೀಸರಿಗೆ ಗೊತ್ತಾಗಿದೆ. ಆಕೆಯನ್ನು ಅರೆಸ್ಟ್​ ಮಾಡಿ ವಿಚಾರಣೆ ನಡೆಸಿದ ಬಳಿಕ ಬಾಲಕಿಯೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಮಾಜಿ ಗೆಳೆಯನನ್ನು ಮಾತ್ರ ಕೊಲೆ ಮಾಡಲು ಬಾಲಕಿ ಹೊಂಚು ಹಾಕಿದ್ದಳು. ಆದರೆ ವಿಷ ಬೆರೆಸಿದ ಸೂಪ್​ ಅನ್ನು ಎಲ್ಲರೂ ಸೇವಿಸಿದ್ದ ಕಾರಣ ಐವರೂ ಸಹ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us