/newsfirstlive-kannada/media/post_attachments/wp-content/uploads/2025/04/hubali.jpg)
ಹುಬ್ಬಳ್ಳಿ: ಔಷಧಿ ಕೊರತೆಯಿಂದಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿದೆ ಎಂಬ ಆರೋಪ ಕೇಳಿ ಬಂದಿದೆ. ಪ್ರತಿಷ್ಠಿತ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಔಷಧಿ ಕೊರತೆ ಇದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಕಳೆದ ತಿಂಗಳು ನ್ಯೂಸ್ಫಸ್ಟ್ ವರದಿಯನ್ನ ಬಿತ್ತರಿಸಿತ್ತು. ವರದಿಯಿಂದ ಎಚ್ಚೆತ್ತುಕೊಳ್ಳದ ಕಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಅವಘಡ ಸಂಭವಿಸಿದೆ.
ಇದನ್ನೂ ಓದಿ: ಮಧ್ಯರಾತ್ರಿಯಿಂದಲೇ ಲಾರಿ ಮಾಲೀಕರ ಸ್ಟ್ರೈಕ್.. ಅಗತ್ಯ ಸೇವೆಗಳ ಪೂರೈಕೆಯಲ್ಲಿ ಭಾರೀ ವ್ಯತ್ಯಯ..!
ಔಷಧಿ ಕೊರತೆಯಿಂದಾಗಿ ಬಶೀರ್ ಅಹ್ಮದ್ ಬಳ್ಳಾರಿ ಹಾಗೂ ನಿಕ್ಕತ್ ಬಳ್ಳಾರಿ ದಂಪತಿಯ ಎರಡೂವರೆ ವರ್ಷದ ಮಗು ಸಾವನ್ನಪ್ಪಿದೆ ಎಂದು ಹೇಳಲಾಗಿತ್ತಿದೆ. ದಂಪತಿ ಹಳೆ ಹುಬ್ಬಳ್ಳಿಯ ಆನಂದನಗರದಲ್ಲಿ ವಾಸವಾಗಿದ್ದರು. ಪಿಟ್ಸ್ ಹಿನ್ನೆಲೆ ಕಳೆದ 16 ದಿನಗಳಿಂದ ಕಿಮ್ಸ್ನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗಿತ್ತು.
ಇಂದು ಬೆಳಿಗ್ಗೆ ಮಗುವಿನ ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂದು ವೈದ್ಯರು ತಿಳಿಸಿದ್ದರಂತೆ. ಆದರೆ ಸಂಜೆ 7 ಗಂಟೆಗೆ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರಿಗೆ ಮಾಹಿತಿ ಕೊಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಕುಟುಂಬಸ್ಥರು ಔಷಧಿಗಾಗಿ ಪರದಾಟ ನಡೆಸುತ್ತಿದ್ದರಂತೆ. ಆದ್ರೆ, ಔಷಧಿ ವಿಭಾಗದ ಸಿಬ್ಬಂದಿಯೂ ನೋ ಸ್ಟಾಕ್ ಅಂತ ಬರೆದು ಕೊಡುತ್ತಿದ್ದರಂತೆ. ಐಸಿಯುನ ವೆಂಟಿಲೇಟರ್ನಲ್ಲಿಟ್ಟು ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಹೈ ಡೋಸ್ನಿಂದ ಮಗು ಕೋಮಾಗೆ ಹೋಗಿತ್ತು ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಹೊರಗಡೆ ಬರೆದು ಕೊಡುವ ಔಷಧಿಗಳು ಕೂಡ ಸಾಕಷ್ಟು ದುಬಾರಿಯಾಗಿದೆ. ಬಡ ಜನರಿಗೆ ಅಷ್ಟು ದುಡ್ಡು ಖರ್ಚು ಮಾಡಿ ಔಷಧಿ ತೆಗೆದುಕೊಳ್ಳುವ ಶಕ್ತಿ ಎಲ್ಲಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ