ಜಸ್ಟ್‌ 13.50 ಸೆಕೆಂಡ್.. ಮೆಮೊರಿ ಚಾಂಪಿಯನ್​ಶಿಪ್ ಗೆದ್ದ ಭಾರತೀಯ ವಿದ್ಯಾರ್ಥಿ; ಇವನ ನೆನಪಿನ ಶಕ್ತಿ ಅದ್ಭುತ!

author-image
Gopal Kulkarni
Updated On
ಜಸ್ಟ್‌ 13.50 ಸೆಕೆಂಡ್.. ಮೆಮೊರಿ ಚಾಂಪಿಯನ್​ಶಿಪ್ ಗೆದ್ದ ಭಾರತೀಯ ವಿದ್ಯಾರ್ಥಿ; ಇವನ ನೆನಪಿನ ಶಕ್ತಿ ಅದ್ಭುತ!
Advertisment
  • ಮೆಮೊರಿ ಲೀಗ್ ವಿಶ್ವ ಚಾಂಪಿಯನ್​ಶಿಪ್ ಗೆದ್ದ ಭಾರತೀಯ ವಿಶ್ವ
  • ಕೇವಲ 13.50 ಸೆಕೆಂಡ್​ಗಳಲ್ಲಿ 80 ಅಂಕಿಗಳನ್ನು ರಿಕಾಲ್ ಮಾಡಿದ ವಿಶ್ವ
  • ಈ ಒಂದು ಸಾಧನೆಗಾಗಿ 20 ವರ್ಷದ ವಿದ್ಯಾರ್ಥಿಯ ಸಿದ್ಧತೆ ಹೇಗಿತ್ತು ಗೊತ್ತಾ?

20 ವರ್ಷ ಭಾರತೀಯ ವಿದ್ಯಾರ್ಥಿಯೊಬ್ಬ ಈಗ ವಿಶ್ವದ ಗಮನ ಸೆಳೆಯುವಂತ ಸಾಧನೆ ಮಾಡಿದ್ದಾರೆ. ಮೆಮೊರಿ ಲೀಗ್​ ವಿಶ್ವ ಚಾಂಪಿಯನ್​​ಶಿಪ್​ನಲ್ಲಿ, ಆನ್​​ಲೈನ್ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ನೆನಪಿನ ಶಕ್ತಿಯ ಸವಾಲನ್ನು ಗೆದ್ದು ಜಾಗತಿಕವಾಗಿ ಮಾಧ್ಯಮಗಳ ಹೆಡ್​ಲೈನ್ ಆಗಿದ್ದಾನೆ.

ಪಾಂಡಿಚೆರಿಯ ವಿನಯನಗರದ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿ ವಿಶ್ವ ರಾಜಕುಮಾರ್ ಈ ಒಂದು ಸಾಧನೆಯನ್ನು ಮಾಡಿದ್ದಾನೆ. 13.50 ಸೆಕೆಂಡ್​ಗಳಲ್ಲಿ 80 ಱಂಡಮ್ ಡಿಜಿಟ್​ ನಂಬರ್​ಗಳನ್ನು ನೆನಪಿಸಿಕೊಳ್ಳುವ ಮೂಲಕ ಅಲ್ಲಿದ್ದ ಉಳಿದ ಸ್ಪರ್ಧಿಗಳು ಬೆಕ್ಕಸ ಬೆರಗಾಗುವಂತೆ ಮಾಡಿದ್ದಾನೆ. ಇದೊಂದು ಅಸಮಾನ್ಯ ನೆನಪಿನ ವೇಗ ಎಂದೆ ಬಣ್ಣಿಸಲಾಗುತ್ತದೆ. ಒಂದು ಸೆಕೆಂಡ್​​ಗೆ ಆರು ಡಿಜಿಟ್​ ನಂಬರ್​​ಗಳನ್ನು ಜ್ಞಾಪಕಮಾಡಿಕೊಂಡು ಹೇಳಿರುವುದು ಇದೊಂದು ಅಸಮಾನ್ಯ ಸಾಧನೆ ಎಂದು ಹೇಳಲಾಗುತ್ತಿದೆ.

ಮೆಮೊರಿ ಲೀಗ್​​ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ಹಲವು ವಿಚಾರಗಳನ್ನು ನೆನಪಿಸಿಕೊಳ್ಳುವ ಸವಾಲುಗಳನ್ನು ನೀಡಲಾಗುತ್ತದೆ. ನಂಬರ್, ಶಬ್ದ ಹಾಗೂ ಚಿತ್ರಗಳು ಅದರಲ್ಲಿ ಅತ್ಯಂತ ಸವಾಲಿನ ಜ್ಞಾಪಕಶಕ್ತಿಯ ಸ್ಪರ್ಧೆ ಎಂದರೆ ಸ್ಕ್ರೀನ್​ನಲ್ಲಿ ಮೂಡಿ ಥಟ್ಟನೇ ಮಾಯವಾಗುವುವ ನಂಬರ್​ಗಳನ್ನು ನೆನಪಿಟ್ಟುಕೊಂಡು ಹೇಳುವುದು

ಅವರು ಜ್ಞಾಪಿಸಿಕೊಂಡು ಹೇಳಿದ ನಂಬರ್​ ಉತ್ತರ ಸರಿಯಿದೆಯಾ ಎಂಬದುನ್ನು ಒಂದು ಶೀಟ್​ನಲ್ಲಿ ಶೇಕಡಾ 100 ರಷ್ಟು ಸರಿ ಇದೆ ಎಂದು ಉಲ್ಲೇಖಿಸಿವುದು. ಈ ಸ್ಪರ್ಧೆಯಲ್ಲಿ ಕೇವಲ ರಾಜಕುಮಾರ್ ಮಾತ್ರ ಈ ಒಂದು ಸವಾಲನ್ನು ಪಾರು ಮಾಡಿಲ್ಲ. ಅನೇಕರು ಈ ಸಾಧನೆ ಮಾಡಿದ್ದರು. ಆದರೆ ಇನ್ನುಳಿದ ಸುತ್ತುಗಳಾದ 30 ಚಿತ್ರಗಳನ್ನು ಹಾಗೂ ಕೇವಲ 8.40 ಸೆಕೆಂಡ್​ಗಳಲ್ಲಿ ಜ್ಞಾಪಕದಲ್ಲಿಟ್ಟು ನೀಡಿದ ಉತ್ತರ ಅಸಮಾನ್ಯವಾಗಿತ್ತು. ಈ ಎರಡು ಸುತ್ತುಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ವಿಶ್ವ ರಾಜಕುಮಾರ್ ಅವರಿಗೆ ಮೆಮೊರಿ ಲೀಗ್ ವಿಶ್ವಚಾಂಪಿಯನ್​ಶಿಪ್​ನ ಚಾಂಪಿಯನ್ ಎಂದು ಘೋಷಣೆ ಮಾಡಲಾಯ್ತು.

ರಾಜಕುಮಾರ್ ತಮ್ಮ ಜ್ಞಾಪಕ ಶಕ್ತಿಯನ್ನು ಚುರುಕುಗೊಳಿಸಲು ತಮ್ಮನ್ನು ತಾವು ಅದ್ಭುತವಾಗಿ ಟ್ರೇನ್ ಮಡಿಕೊಂಡಿದ್ದರು. ಪ್ರಾಚೀನ ಕಾಲದ ರೋಮನ್​​ರ ಡೇಟಿಂಗ್ ಮೆತೆಡ್​ನ್ನು ಅವರು ಅನುಸರಿಸಿದರು. ಈ ಒಂದು ಟೆಕ್ನಿಕ್​, ಒಂದು ನಿರ್ದಿಷ್ಟ ಪ್ರದೇಶಗಳ ಸಣ್ಣ ಸಣ್ಣ ಚುಣುಕಗಳ ಮಾಹಿತಿಯನ್ನು ಕಲೆ ಹಾಕಿ ನೆನಪಿನಲ್ಲಿಟ್ಟುಕೊಳ್ಳುವದನ್ನು ಒಳಗೊಂಡಿರುತ್ತದೆ. ಮನೆಯಲ್ಲಿರುವ ರೂಮ್ಸ್​ಗಳು ಎಷ್ಟು, ಅಲ್ಲಿರುವ ಚಿತ್ರಗಳು, ಕಿಟಕಿಯಲ್ಲಿರುವ ಸರಳುಗಳು ಹೀಗೆ ಮಾನಸಿಕವಾಗಿ ಅವುಗಳನ್ನು ಪುನಃ ಜ್ಞಾಪಿಸಿಕೊಂಡು ನೆನಪಿನಲ್ಲಿಟ್ಟುಕೊಳ್ಳುವ ರೀತಿ ತಮ್ಮನ್ನು ತಾವು ತರಬೇತಿಗೊಳಪಡಿಸಿಕೊಂಡಿದ್ದರು ವಿಶ್ವ ರಾಜಕುಮಾರ್​. ಇದು ಮಾತ್ರವಲ್ಲ ಚಿಕ್ಕ ಕಥೆಗಳಲ್ಲಿ ಎಷ್ಟು ಶಬ್ದಗಳಿವೆ ಹಾಗೂ ಎಷ್ಟು ವಿಧದ ಶಬ್ದಗಳಿವೆ ಎಂಬುದನ್ನು ಕೂಡ ವಿಶ್ವ ನೆನಪಿನಲ್ಲಿಕೊಟ್ಟುಕೊಳ್ಳುವ ಕಲೆಯನ್ನು ಕರಗತಮಾಡಿಕೊಂಡಿದ್ದುರು.

ಸದ್ಯ ಮೆಮೊರಿ ಲೀಗ್ ವಿಶ್ವ ಚಾಂಪಿಯನ್​ಶಿಪ್ ಗೆದ್ದಿರುವ ರಾಜಕುಮಾರ್​, ಮುಂದೆ ತಾವೇ ಒಂದು ಮೆಮೊರಿ ಟ್ರೇನಿಂಗ್ ಸಂಸ್ಥೆಯನ್ನು ತೆರೆಯುವ ಕನಸು ಕಂಡಿದ್ದಾರೆ. ಉಳಿದ ಪ್ರತಿಭಾವಂತರಿಗೂ ಕೂಡ ಇಂತಹ ವಿದ್ಯೆಯನ್ನು ಹೇಳಿಕೊಡಲು ಆಸೆಯನ್ನಿಟ್ಟುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment