newsfirstkannada.com

ನಾಪತ್ತೆ ಆಗಿದ್ದ ಮಾಡೆಲ್ ಸಾವು, ಒಂದು ವರ್ಷದಿಂದ ಶವಾಗಾರದಲ್ಲೇ ಬಿದ್ದಿದ್ದ ಮೃತದೇಹ

Share :

Published April 27, 2024 at 12:37pm

    ಕುಟುಂಬ ನಿರ್ವಹಣೆಗಾಗಿ ವಿದೇಶಕ್ಕೆ ಹೋದ ಮಾಡೆಲ್ ಕತೆ

    ಗಲ್ಫ್​ ಬಾಯ್​ಫ್ರೆಂಡ್ ಜೊತೆ ಸುತ್ತಾಡಿ ನಿಗೂಢವಾಗಿ ಸಾವನ್ನಪ್ಪಿದ್ದಾಳೆ

    ಕುಟುಂಬಸ್ಥರಿಗೆ ಭಾರೀ ಅನುಮಾನ, ತನಿಖೆಗೆ ಆಗ್ರಹಿಸಿದ್ದಾರೆ

ಕಳೆದ ಒಂದು ವರ್ಷದ ಹಿಂದೆ ಪಶ್ಚಿಮ ಏಷ್ಯಾದ ಬಹ್ರೇನ್​ನಲ್ಲಿ ನಾಪತ್ತೆಯಾಗಿದ್ದ ಥೈಲೆಂಡ್​ನ 31 ಮಾಡೆಲ್ ಶವಾಗಾರದಲ್ಲಿ ಪತ್ತೆಯಾಗಿದ್ದಾರೆ. ಅವರು ಕುಟುಂಬಸ್ಥರು ಸಾವಿನ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ ಎಂದು ಇಂಗ್ಲೆಂಡ್​ ಪತ್ರಿಕೆ ಡೇಲಿ ಮಿರರ್ ವರದಿ ಮಾಡಿದೆ.

ಕೈಕನ್ ಕೆನ್ಹಾಕಮ್ ಅವರು ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಕೆಲಸದಲ್ಲಿ ಅಷ್ಟೊಂದು ಬೇಡಿಕೆ ಬಾರದ ಕಾರಣ ಮಾಡೆಲ್ ಬದುಕಿಗೆ ಗುಡ್​ಬೈ ಹೇಳಿದ್ದರು. ಕೊನೆಗೆ ಕುಟುಂಬ ನಿರ್ವಹಣೆಗಾಗಿ ಥೈಲೆಂಡ್​ನಿಂದ ಬಹ್ರೇನ್​ಗೆ ಶಿಫ್ಟ್​ ಆಗಿ ರೆಸ್ಟೋರೆಂಟ್​ನಲ್ಲಿ ಕೆಲಸ ಮಾಡುತ್ತಿದ್ದಳು.

ಇದನ್ನೂ ಓದಿ:ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆ ಎಚ್ಚರಿಕೆ, ಬೆಂಗಳೂರಿಗೂ ಗುಡ್​ನ್ಯೂಸ್..!

ಕೆಲಸ ಮಾಡುತ್ತಿದ್ದಂತಹ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಕುಟುಂಬಕ್ಕೆ ತನ್ನ ಇರುವಿಕೆಯ ಬಗ್ಗೆ ಅಪ್​ಡೇಟ್ ನೀಡುತ್ತಿದ್ದಳು. ಬಹ್ರೇನ್​ನಲ್ಲಿರುವ ಸ್ನೇಹಿತನನ್ನು ಭೇಟಿಯಾಗಿದ್ದೆ. ಅವನ ಜೊತೆ ವಾಸಿಸುತ್ತಿದ್ದೇನೆ ಅನ್ನೋದ್ರ ಬಗ್ಗೆ ನಿತ್ಯವೂ ಮಾಹಿತಿ ನೀಡುತ್ತಿದ್ದಳು. ಏಪ್ರಿಲ್ 2023ರಂದು ಇದ್ದಕ್ಕಿಂದತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕೋದನ್ನು ನಿಲ್ಲಿಸಿಬಟ್ಟಿದ್ದಳು.

ಇದು ಕುಟುಂಬಸ್ಥರಿಗೆ ಗೊತ್ತಾಗಿದೆ. ಫೋನ್ ಮಾಡಿ ಸಂಪರ್ಕ ಸಾಧಿಸುವ ಪ್ರಯತ್ನ ಮಾಡಿದ್ದಾರೆ. ಅದು ಸಾಧ್ಯವಾಗಲಿಲ್ಲ. ಕೊನೆಗೆ ಆಕೆಯ ಕುಟುಂಬ ಬಹ್ರೇನ್​​ನಲ್ಲಿರುವ ಥೈ ರಾಯಭಾರಿ ಕಚೇರಿ ಸಂಪರ್ಕ ಮಾಡುತ್ತಾರೆ. ಆದರೆ ಆಕೆಯ ಬಗ್ಗೆ ಎಲ್ಲಿಯೂ ಮಾಹಿತಿ ಸಿಕ್ಕಿರಲಿಲ್ಲ.
ಏಪ್ರಿಲ್ 18 ರಂದು ಬಹ್ರೇನ್​ನಲ್ಲಿರುವ ಥೈಲೆಂಡ್ ರಾಯಭಾರಿ ಕುಟುಂಬಕ್ಕೆ ಮಾಹಿತಿ ನೀಡಿದೆ. ಮನಮ್​​ನಲ್ಲರಿವ ಸಲ್ಮಾನಿಯಾ ಮೆಡಿಕಲ್ ಕಾಂಪ್ಲೆಕ್ಸ್​ನ ಶವಾಗಾರದಲ್ಲಿ ಅಪರಿಚಿತ ಮಹಿಳೆಯ ಮೃತದೇಹವನ್ನು ಸಂಗ್ರಹಿಸಿಡಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಮೃತದೇಹ ಅಲ್ಲೆಯೇ ಇದೆ ಎಂದು ತಿಳಿಸಿದೆ.

ಇದನ್ನೂ ಓದಿ:ಸ್ವಂತ ಮಗನ ಕೊಲ್ಲಲು 75 ಲಕ್ಷಕ್ಕೆ ಸುಪಾರಿ ಕೊಟ್ಟ ಅಪ್ಪ, ಗುಂಡಿನ ದಾಳಿಯಲ್ಲಿ ಬಚಾವ್ ಆಗಿದ್ದೇ ದೊಡ್ಡದು

ಕೈಕನ್​​ ಕಾಲಿನ ಮೇಲಿದ್ದ ಟ್ಯಾಟೂ ನೋಡಿ ಕುಟುಂಬಸ್ಥರು ಹೌದೆಂದು ದೃಢಪಡಿಸಿದ್ದಾರೆ. ಮದ್ಯ ಸೇವನೆಯಿಂದ ಲಂಗ್​ ಮತ್ತು ಹಾರ್ಟ್​ ಫೆಲ್ಯೂರ್​ ಆಗಿ ಸಾವನ್ನಪ್ಪಿದ್ದಾಳೆ ಎಂದು ವರದಿಗಳು ಹೇಳಿವೆ. ಆದರೆ ಕೈಕನ್ ಕುಟುಂಬವು, ಏನೋ ಮೋಸ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ:ಗ್ರೀನ್ ಇನ್​ಸ್ಟಾ ಪೋಸ್ಟ್​ಗೆ ಹಿಂದಿಯಲ್ಲಿ ಕಮೆಂಟ್​​ ಮಾಡಿದ ವಿಲ್​ ಜಾಕ್ಸ್.. ಅಂಥದ್ದು ಏನ್ ಮಾಡಿದ್ರು?​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಪತ್ತೆ ಆಗಿದ್ದ ಮಾಡೆಲ್ ಸಾವು, ಒಂದು ವರ್ಷದಿಂದ ಶವಾಗಾರದಲ್ಲೇ ಬಿದ್ದಿದ್ದ ಮೃತದೇಹ

https://newsfirstlive.com/wp-content/uploads/2024/04/Kaikan-Kaennakam.jpg

Load More