/newsfirstlive-kannada/media/post_attachments/wp-content/uploads/2025/07/Sushmita-3.jpg)
ಇತ್ತೀಚೆಗೆ ಪತ್ನಿಯೇ ತನ್ನ ಗಂಡನ ಮುಗಿಸುತ್ತಿರುವ ಘಟನೆಗಳು ಸಾಲು ಸಾಲು ಬೆಳಕಿಗೆ ಬರುತ್ತಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಇಂಥದ್ದೇ ಮತ್ತೊಂದು ಘಟನೆ ನಡೆದಿದೆ. ಮಹಿಳೆ ತನ್ನ ಭಾವನ ಜೊತೆಗೆ ಸೇರಿ ಪತಿಗೆ ಮೂಹೂರ್ತ ಇಟ್ಟಿದ್ದಾಳೆ.
ಬಾವನ ಜೊತೆ ಲವ್ವಿಡವ್ವಿ.. ಪತಿಗೆ ಮುಹೂರ್ತ ಇಟ್ಟ ಪತ್ನಿ
ಅದು ಜುಲೈ 13.. ನೈಋತ್ಯ ದೆಹಲಿಯ ನಿವಾಸಿ.. 35 ವರ್ಷದ ಕರಣ್ ದೇವ್ ಅನುಮಾನಸ್ಪದ ರೀತಿಯಲ್ಲಿ ಜೀವಕಳೆದುಕೊಂಡಿದ್ದ. ಕರೆಂಟ್ ಶಾಕ್ನಿಂದ ಕರಣ್ ಮೃತಪಟ್ಟಿದ್ದಾನೆ ಎಂದು ಪತ್ನಿ ಸುಶ್ಮಿತಾ ಕುಟುಂಬಸ್ಥರನ್ನು ನಂಬಿಸಿದ್ಲು.. ಈಕೆಯ ಮಾತನ್ನು ನಂಬಿದ್ದ ಮನೆಯವರು, ಮರಣೋತ್ತರ ಪರೀಕ್ಷೆಯೇನು ಬೇಡ ಎಂದು ಸುಮ್ಮನಾಗಿದ್ರು. ಆದ್ರೆ ಮರುದಿನ ಕರಣ್ ದೇವ್ ಅಸಹಜ ನಿಧನದ ಹಿಂದಿನ ರಹಸ್ಯ ಬಯಲಾಗಿದೆ.
ಇದನ್ನೂ ಓದಿ: ಇಡೀ ದೇಶದಲ್ಲೇ ಒಂದೇ ಒಂದು ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು..?
ಇನ್ಸ್ಟಾಗ್ರಾಮ್ ಚಾಟ್ನಲ್ಲಿ ರಿವೀಲ್ ಆಯ್ತು ರಹಸ್ಯ
ಅನುಮಾನ ವ್ಯಕ್ತಪಡಿಸಿದ್ದ ಪೊಲೀಸ್ರು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದರು. ಆದ್ರೆ ಮರು ದಿನ ಮೃತ ಕರಣ್ ಸಹೋದರ ಪೊಲೀಸರಿಗೆ ತಂದು ನೀಡಿದ ಸಾಕ್ಷ್ಯದಿಂದ ಸುಶ್ಮಿತಾಳ ಕಳ್ಳಾಟ ಬಯಲಾಗಿದೆ.. ಸುಶ್ಮಿತಾಳ ಫೋನ್‌ನಲ್ಲಿ ರಾಹುಲ್ ಹಾಗೂ ಸುಶ್ಮಿತಾ ಅವರ ಚಾಟಿಂಗ್ ಶಾಕ್.. ಬೆಚ್ಚಿಬೀಳಿಸಿದೆ.
ಇದನ್ನೂ ಓದಿ: ಆಧಾರ್ ಕಾರ್ಡ್ನಲ್ಲಿ ಎಷ್ಟು ವರ್ಷಗಳ ನಂತರ ಮಕ್ಕಳ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸಬೇಕು?
ಸುಷ್ಮಿತಾ: ಮೆಡಿಸಿನ್ ತೆಗೆದುಕೊಂಡು ತುಂಬಾ ಹೊತ್ತಾಯ್ತು, ಆತ ಪ್ರಾಣ ಬಿಡಲು ಇನ್ನೆಷ್ಟು ಸಮಯ ಬೇಕು ಅಂತಾ ಒಂದ್ಸಲ ಚೆಕ್ ಮಾಡು, ಅವ್ನು ಊಟ ಮಾಡಿ ಮೂರು ಗಂಟೆ ಆಗ್ತಾ ಬಂತು, ವಾಮಿಂಟ್ ಮಾಡಿಲ್ಲ ಏನೂ ಮಾಡಿಲ್ಲ, ಅವನಿನ್ನು ಉಸಿರಾಡುತ್ತಿದ್ದಾನೆ, ನಾವು ಏನ್ ಮಾಡ್ಬೇಕು, ಏನಾದರೂ ಸಲಹೆ ಕೊಡು..
ರಾಹುಲ್: ನಿಂಗೆ ಏನು ಮಾಡ್ಬೇಕು ಅಂತಾ ತಿಳಿಯಲಿಲ್ಲಾ ಅಂದ್ರೆ ಕರೆಂಟ್ ಶಾಕ್ ಕೊಡು.
ಸುಷ್ಮಿತಾ: ಶಾಕ್ ಕೊಡೊದಕ್ಕೆ ಅವನನ್ನ ಹೇಗೆ ಕಟ್ಟಿಹಾಕಬೇಕು?
ರಾಹುಲ್: ಟೇಪ್ನಲ್ಲಿ
ಸುಷ್ಮಿತಾ: ಅವ್ನು ತುಂಬಾ ನಿಧಾನವಾಗಿ ಉಸಿರಾಡುತ್ತಿದ್ದಾನೆ.
ರಾಹುಲ್: ನಿನ್ನ ಹತ್ತಿರ ಇರೋ ಎಲ್ಲಾ ಮಾತ್ರೆಗಳನ್ನ ಅವನಿಗೆ ತಿನಿಸು
ಸುಷ್ಮಿತಾ: ನನಗೆ ಅವನ ಬಾಯಿ ತೆರೆಯಲು ಆಗ್ತಿಲ್ಲ. ನಾನು ನೀರು ಹಾಕಬಹುದಷ್ಟೇ, ಆದರೆ ಮಾತ್ರೆ ಕೊಡಲು ಸಾಧ್ಯವಿಲ್ಲ. ನೀನು ಇಲ್ಲಿಗೆ ಬಾ, ನಾವಿಬ್ರು ಒಟ್ಟಿಗೆ ಮಾತ್ರೆಗಳನ್ನ ತಿನ್ನಿಸಲು ಟ್ರೈ ಮಾಡೋಣ..
ಹೀಗೆ ಸುಶ್ಮಿತಾ.. ಮತ್ತು ಆಕೆಯ ಭಾವ ಕಮ್ ಪ್ರಿಯಕರ ರಾಹುಲ್ ಇಬ್ಬರೂ ಸೇರಿ ಕರಣ್ನನ್ನು ಮುಗಿಸಿದ್ದಾರೆ.ಇನ್ನು ಸುಶ್ಮಿತಾಳ ಅಸಲಿ ಮುಖವಾಡ ಬಯಲಾಗ್ತಿದ್ದಂತೆ, ಪೊಲೀಸರು ಸುಶ್ಮಿತಾ ಮತ್ತು ರಾಹುಲ್ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆ. ಒಟ್ಟಾರೆ. ಇತ್ತೀಚಿಗೆ ದೇಶದಲ್ಲಿ ನಡೆಯುತ್ತಿರುವ ಸಾಲು ಸಾಲು ಗಂಡಂದಿರ ಕೊಲೆ ಪ್ರಕರಣ ಮದುವೆಯಾದ ಗಂಡಸರನ್ನ ಬೆಚ್ಚಿ ಬೀಳುವಂತೆ ಮಾಡಿದೆ.
ಇದನ್ನೂ ಓದಿ: YSRCP ಸಂಸದ ಮಿಧುನ್ ರೆಡ್ಡಿ ಬಂಧನ.. ಆಂಧ್ರದಲ್ಲಿ ಭಾರೀ ಹೈಡ್ರಾಮಾ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ